ಚೆನ್ನೈ: ಕ್ರಿಕೆಟಿಗ (cricketer) ವಿರಾಟ್ ಕೊಹ್ಲಿ (virat kohli) ಮತ್ತು ಪತ್ನಿ ಅನುಷ್ಕಾ (anushka) ಹೊಸ ಬ್ರ್ಯಾಂಡ್ (New brand) ಗೆ ಅಂಬಾಸಿಡರ್ (ambassidor) ಮತ್ತು ಹೂಡಿಕೆದಾರ (investor) ರಾಗಿದ್ದಾರೆ. ಪ್ರಾಣಿ-ಪಕ್ಷಿಗಳನ್ನು ಪ್ರೀತಿಸುವ ವಿರುಷ್ಕಾ ಜೋಡಿ ಹೊಸ ಸ್ಟಾರ್ಟಪ್ (new startup) ಉದ್ಯಮಕ್ಕೆ ಹೂಡಿಕೆದಾರರಾಗಿದ್ದಾರೆ. ಅಂದ ಹಾಗೆ, ವಿರುಷ್ಕಾ ಜೋಡಿ ಅದ್ಯಾವ ಉದ್ಯಮಕ್ಕೆ ಹೂಡಿಕೆದಾರರಾಗಿದ್ದಾರೆ ಅನ್ನೋದನ್ನ ಈ ಕೆಳಗೆ ನೋಡಿ. ಅದಕ್ಕೂ ಮೊದಲು ಮಾಂಸಾಹಾರ (Meat) ಸೇವನೆ ಈಗ ಅತೀ ಹೆಚ್ಚಾಗಿದೆ. ಯಾವುದೇ ಆ್ಯಪ್ ಗಳನ್ನು ತೆಗೆದು ನೋಡಿದರೂ ನಿಮಗೆ ನಾನ್ ವೆಜ್ (Nonveg) ಆಹಾರದ ಲಿಸ್ಟ್, ಫೋಟೋಗಳೇ ಕಾಣುತ್ತವೆ. ಈಗ ವೆಜ್ ಅಂಗಡಿಗಳಲ್ಲೂ ನಾನ್ ವೆಜ್ ಅಡುಗೆ ಮಾರಾಟ ಕಾಮನ್ ಆಗಿದೆ. ಆಟಗಾರರು ಅಂದಮೇಲೆ ನಾನ್ ವೆಜ್ ತಿಂದೇ ತಿಂತಾರೆ. ತಮ್ಮ ಸದೃಢ ದೇಹ ಮತ್ತು ಫಿಟ್ನೆಸ್, ಆರೋಗ್ಯಕ್ಕಾಗಿ ಎಲ್ಲಾ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಆದರೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಂಸಾಹಾರ ಸೇವನೆ ಮಾಡೋದನ್ನ ಬಿಟ್ಟು ವರ್ಷಗಳೇ ಕಳೆದಿವೆಯಂತೆ. ಪ್ರಾಣಿ ಪ್ರಿಯರಾಗಿರೋ ವಿರಾಟ್ ಕೊಹ್ಲಿ ಈಗ ಪ್ಲಾನೆಟ್ ಬೇಸ್ಡ್ ಅಂದರೆ ಸಸ್ಯಾಹಾರ ಆಧಾರಿತ ಮಾಂಸದ ಆಹಾರ ಪದಾರ್ಥಗಳ ಮಾರಾಟದ ಹೊಸ ಉದ್ಯಮಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಮತ್ತು ಹೂಡಿಕೆದಾರರಾಗಿದ್ದಾರೆ.
ಬ್ಲ್ಯೂ ಟ್ರೈಬ್ (Blue Tribe) ಸ್ಟಾರ್ಟಪ್
ಹೌದು.. ಸಸ್ಯಾಹಾರ ಆಧಾರಿತ ಮಾಂಸಾಹಾರ ಆಹಾರ ಪದಾರ್ಥ ಉತ್ಪನ್ನಗಳ ಹೊಸ ಬ್ರ್ಯಾಂಡ್ ಬ್ಲ್ಯೂ ಟ್ರೈಬ್ ಸ್ಟಾರ್ಟಪ್ ವಿರುಷ್ಕಾ ಜೋಡಿ ಹೂಡಿಕೆದಾರರು ಮತ್ತು ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ಕಂಪನಿ ಇಬ್ಬರನ್ನೂ ಸ್ವಾಗತಿಸಿದೆ.
ಸಸ್ಯಾಹಾರ ಆಧಾರಿತ ಮಾಂಸಾಹಾರ ಆಹಾರ ಪದಾರ್ಥ
ಅಂದಹಾಗೆ ಬ್ಲ್ಯೂ ಟ್ರೈಬ್ ಮಾಂಸಾಹಾರ ಸೇವನೆ ವಿಧಾನಗಳನ್ನು ಮರು ಸಂಶೋಧನೆ ನಡೆಸಲು ಮುಂದಾಗಿದೆ. ಸಸ್ಯಾಹಾರದಿಂದ ತಯಾರಾಗುವ ಮಾಂಸವನ್ನು ಜನರಿಗೆ ತಲುಪಿಸಲು ಸಿದ್ಧವಾಗಿದೆ. ಇದು ಸಸ್ಯಾಹಾರಿಗಳಿಗೆ ಅನುಕೂಲಕರವಾಗಲಿದೆ. ಸಸ್ಯಾಹಾರ ಪದಾರ್ಥಗಳಾದ ಬಟಾಣಿ, ಸೋಯಾಬೀನ್, ಬೇಳೆ ಮತ್ತು ಇತರೆ ಧಾನ್ಯಗಳು ಮತ್ತು ಇತರೆ ಸಸ್ಯಾಹಾರ ಪದಾರ್ಥಗಳಿಂದ ಮಾಂಸಾಹಾರವನ್ನು ತಯಾರಿಸಲಾಗುವುದು. ಇದು ಸಂಪೂರ್ಣ ಸಸ್ಯಾಹಾರವಾಗಿರುತ್ತದೆ. ಸಸ್ಯಾಹಾರ ಪದಾರ್ಥಗಳಿಂದ ಪ್ರೊಟಿನ್, ವಿಟಮಿನ್ ಮತ್ತು ಇತರೆ ಪೋಷಕಾಂಶ ಸತ್ವವುಳ್ಳ ಆಹಾರ ಪದಾರ್ಥಗಳ ಉತ್ಪನ್ನವನ್ನು ಬ್ಲ್ಯೂ ಟ್ರೈಬ್ ಮಾಡಲಿದೆ.
ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ ಭಾರತದ Coffeeಗೆ ಭಾರೀ ಡಿಮ್ಯಾಂಡ್..! ಹೆಚ್ಚಿದ ಬೆಲೆಯಿಂದ ಭಾರೀ ಲಾಭ
'ನಾವು ಪ್ರಾಣಿ ಪ್ರಿಯರು'
ಈ ಬಗ್ಗೆ ಮಾತನಾಡಿದ ಅನುಷ್ಕಾ ಶರ್ಮಾ, ವಿರಾಟ್ ಮತ್ತು ನಾವು ಪ್ರಾಣಿ ಪ್ರಿಯರು. ಮಾಂಸಾಹಾರ ಸೇವನೆಯಿಲ್ಲದ ಜೀವನಶೈಲಿಯನ್ನು ನಾವಿಬ್ಬರೂ ಆಯ್ಕೆ ಮಾಡಿ ವರ್ಷಗಳೇ ಕಳೆದು ಹೋಗಿವೆ. ಬ್ಲ್ಯೂ ಟ್ರೈಬ್ ಜೊತೆಗೆ ನಾವು ಹೂಡಿಕೆದಾರರು ಮತ್ತು ಅಂಬಾಸಿಡರ್ ಗಳಾಗಿದ್ದೇವೆ. ಸಸ್ಯಾಹಾರ ಸೇವನೆ ಮತ್ತು ಡಯಟ್ ನಿಂದ ಗ್ರಹಗತಿಗಳ ಮೇಲಿನ ಒತ್ತಡ ಮತ್ತು ಪ್ರಭಾವವನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಅರಿವು ನಮಗೆ ಇರಬೇಕಾಗಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಪ್ಲಾನೆಟ್ ಮತ್ತು ಜೀವನಕ್ಕೆ ಬೇಕಾದದ್ದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿ, ನಾನು ತುಂಬಾ ಆಹಾರ ಪ್ರಿಯ. ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುವ ಆಹಾರವನ್ನು ನಾವು ಸೇವಿಸಬೇಕು. ತುಂಬಾ ಜನರು ಇದನ್ನೇ ಆಲೋಚಿಸುತ್ತಾರೆ. ನಾವು ಮಾಂಸಾಹಾರ ಸೇವನೆಯನ್ನು ಕಡಿಮೆ ಮಾಡಿದ್ದಲ್ಲಿ ನಮಗೆ ಸಸ್ಯಾಹಾರ ಮಾಂಸಾಹಾರದ ಆಹಾರ ಪದಾರ್ಥವನ್ನು ರುಚಿಯಲ್ಲಿ ವ್ಯತ್ಯಾಸವಿಲ್ಲದಂತೆ ಮಾಡಿ ಕೊಡುವ ಮೂಲಕ ಪ್ಲಾನೆಟ್ ಬದಲಾವಣೆಯಲ್ಲಿ ಒತ್ತಡದ ಪ್ರಭಾವವನ್ನು ನಾವು ಕಡಿಮೆ ಮಾಡಬಹುದು.
ಬ್ಲ್ಯೂ ಟ್ರೈಬ್ ಗೇಮ್ ಚೇಂಜರ್
ಇದನ್ನು ಬ್ಲ್ಯೂ ಟ್ರೈಬ್ ಸಾಬೀತುಪಡಿಸಿ ತೋರಿಸಲಿದೆ. ಆಹಾರದಲ್ಲಿನ ಸಮತೋಲನ ಮತ್ತು ಆಹಾರದ ರುಚಿ ಗ್ರಹ ಮತ್ತು ಬಾಹ್ಯಾಕಾಶಕ್ಕೂ ಒಳ್ಳೆಯದಾಗುವಂತೆ ಇರಲಿ. ಅದಾಗ್ಯೂ ಬ್ಲ್ಯೂ ಟ್ರೈಬ್ ಗೇಮ್ ಚೇಂಜರ್ ನಂತೆ ಕೆಲಸ ಮಾಡಲಿದೆ ಎಂದಿದ್ದಾರೆ.
ಇದನ್ನೂ ಓದಿ: ಈ ವೀಕೆಂಡ್ಗೆ ಉತ್ತರ ಕನ್ನಡ ಜಿಲ್ಲೆಯ ಸಖತ್ ಸ್ಪಾಟ್ಗಳಿಗೆ ಟ್ರಿಪ್ ಪ್ಲಾನ್ ಮಾಡಿ, ಫುಲ್ ಡಿಟೇಲ್ಸ್ ಇಲ್ಲಿದೆ
ಇನ್ನು ಬ್ಲ್ಯೂ ಟ್ರೈಬ್ ಪ್ರಕಾರ, ಸಸ್ಯಾಹಾರ ಆಧಾರಿತ ಮಾಂಸವು ಪ್ರತಿ 6.9 ಕೆಜಿ ಇಂಗಾಲದ ಡೈಆಕ್ಸೈಡ್ ಬಿಡುಗಡೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. 1800 ಲೀಟರ್ ನೀರು ಮತ್ತು ಮುಗ್ಧ ಪ್ರಾಣಿಗಳ ಜೀವವನ್ನು ಉಳಿಸುತ್ತದೆ ಎಂದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ