ಈ ವರ್ಷ ಅತ್ಯಧಿಕ ಲೈಕ್ಸ್​​ ಗಿಟ್ಟಿಸಿಕೊಂಡಿದ್ದು 'ಕೊಹ್ಲಿ'ಯ ಆ ಒಂದು ಫೋಟೋ

ಸಾಮಾಜಿಕ ಜಾಲತಾಣವಾದ ಇನ್​​ಸ್ಟಾಗ್ರಾಂನಲ್ಲೂ ಅತ್ಯಧಿಕ ಲೈಕ್ಸ್​​​ ಕಂಡ ಫೋಟೋಗಳ ಪೈಕಿ ವಿರಾಟ್ ಕೊಹ್ಲಿ ಫೋಟೋ ಮೊದಲನೆಯದ್ದಾಗಿದೆ

Vinay Bhat | news18
Updated:December 14, 2018, 1:06 PM IST
ಈ ವರ್ಷ ಅತ್ಯಧಿಕ ಲೈಕ್ಸ್​​ ಗಿಟ್ಟಿಸಿಕೊಂಡಿದ್ದು 'ಕೊಹ್ಲಿ'ಯ ಆ ಒಂದು ಫೋಟೋ
Image credits: Virat Kohli / Instagram
Vinay Bhat | news18
Updated: December 14, 2018, 1:06 PM IST
ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಜೋಡಿ ಮೊನ್ನೆಯಷ್ಟೆ ಆಸ್ಟ್ರೇಲಿಯಾದಲ್ಲಿ ಸರಳವಾಗಿ ತಮ್ಮ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡರು. ಇದರ ಬೆನ್ನಲ್ಲೆ ಇನ್​​ಸ್ಟಾಗ್ರಾಂ ಕೊಹ್ಲಿ ಅವರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ.

2018ರ ಫೋರ್ಬ್​​​ ಪಟ್ಟಿಯಲ್ಲಿ ಕೊಹ್ಲಿ ಈ ವರ್ಷ 228.09 ಕೋಟಿ ಆದಾಯ ಗಳಿಸಿ ಕ್ರೀಡಾ ಕ್ಷೇತ್ರದಲ್ಲೆ ಗರಿಷ್ಠ ಹಣಗಳಿಸಿದ ಸಾಲಿನಲ್ಲಿ ಮೊದಲಿಗಾರಾಗಿದ್ದರು. ಸದ್ಯ ಸಾಮಾಜಿಕ ಜಾಲತಾಣವಾದ ಇನ್​​ಸ್ಟಾಗ್ರಾಂನಲ್ಲೂ ಅತ್ಯಧಿಕ ಲೈಕ್ಸ್​​​ ಗಿಟ್ಟಿಸಿಕೊಂಡ ಫೋಟೋಗಳ ಪೈಕಿ ವಿರಾಟ್ ಕೊಹ್ಲಿ ಫೋಟೋ ಮೊದಲನೆಯದ್ದಾಗಿದೆ. ಅನುಷ್ಕಾ ಹುಟ್ಟು ಹಬ್ಬದ ದಿನ ಪತ್ನಿಗೆ ಕೇಕ್ ತಿನ್ನಿಸುತ್ತಿರುವ ಫೋಟೋವನ್ನು ಕೊಹ್ಲಿ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು, ಇದಕ್ಕೆ 36 ಲಕ್ಷಕ್ಕೂ ಅಧಿಕ ಲೈಕ್ಸ್​ಗಳು ಬಂದಿವೆ.

ಇದನ್ನೂ ಓದಿ: 2020ರ ಏಷ್ಯಾ ಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ

ವಿರಾಟ್ ಕೊಹ್ಲಿ ಹಂಚಿಕೊಂಡಿರುವ ಈ ಫೋಟೋ ಈ ವರ್ಷ ಇನ್​ಸ್ಟಾಗ್ರಾಂ ಗರಿಷ್ಠ ಲೈಕ್ಸ್​ ಪಡೆದುಕೊಂಡ ಫೋಟೋ ಆಗಿದೆ..

 


Loading...

 
View this post on Instagram
 

Happy B'day my love. The most positive and honest person I know. Love you ♥️


A post shared by Virat Kohli (@virat.kohli) on


ಇನ್ನು ಅತಿ ಹೆಚ್ಚು ಲೈಕ್ಸ್​ ಗಳಿಸಿದ 2ನೇ ಫೋಟೋ ಅನುಷ್ಕಾ ಶರ್ಮಾ ಕೊಹ್ಲಿಗೆ ಮುತ್ತು ನೀಡುತ್ತಿರುವ ಫೋಟೋ ಆಗಿದೆ. ಇದು 28 ಲಕ್ಷಕ್ಕೂ ಅಧಿಕ ಲೈಕ್ಸ್​ ಗಿಟ್ಟಿಸಿಕೊಂಡಿದೆ.

  
View this post on Instagram
 

💑


A post shared by AnushkaSharma1588 (@anushkasharma) on


3ನೇ ಫೋಟೋ ಟೀಂ ಇಂಡಿಯಾದ ಮಾಜಿ ನಾಯಕ ಎಂ. ಎಸ್. ಧೋನಿ ಅವರದ್ದಾಗಿದೆ.  ಈ ಬಾರಿ ಐಪಿಎಲ್​​ ಪ್ರಶಸ್ತಿ ಗೆದ್ದವೇಳೆ ಧೋನಿ, ಧೋನಿ ಪತ್ನಿ ಸಾಕ್ಷಿ ಹಾಗೂ ಮಗು ಜೀವಾ  ಕಪ್​ ಹಿಡಿದು ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಕ್ಕೆ 3 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿವೆ.

 
ಇನ್ನು 4ನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಅವರು ಸುನೀಲ್ ಶೆಟ್ಟಿ ಜೊತೆ ತೆಗೆದಿರುವ ಫೋಟೋ ಇದೆ

 


First published:December 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ