ಜಗತ್ತಿನಲ್ಲಿ (World) ಅನೇಕ ವಿಚಿತ್ರ ಮತ್ತು ವಿಶಿಷ್ಟ ಸಂಗತಿಗಳು ನಡೆಯುತ್ತಿವೆ. ಅದನ್ನು ಜನರು ನೋಡಿ ಮೋಜು ಮಸ್ತಿ ಮಾಡುತ್ತಾ ಇರುತ್ತಾರೆ. ಇದೀಗ ಒಬ್ಬರು ಪ್ರಪಂಚದಾದ್ಯಂತ ಸುದ್ದಿ ಆಗ್ತಾ ಇದ್ದಾರೆ. ಅಂತಹ ಒಂದು ಘಟನೆಯನ್ನು ನೀವು ಕೇಳಲು ಇಷ್ಟ ಪಡ್ತೀರಾ? ಈ ಸ್ಟೋರಿಯನ್ನು (Story) ಸಂಪೂರ್ಣವಾಗಿ ಓದಿ. ಹೆಣ್ಣಿಗೂ ಗಡ್ಡಕ್ಕೂ ಸಂಬಂಧವೇ ಇಲ್ಲದಿರುವಾಗ ಉದ್ದ ಗಡ್ಡ ಬಿಟ್ಟ ಮಹಿಳೆ ಇರುವುದು ಬೆಳಕಿಗೆ ಬಂದಿದೆ. 37 ವರ್ಷದ ಜೆಸ್ಸಿಕಾ ತನ್ನ ಗಡ್ಡ ಮತ್ತು ಮೀಸೆ ಬೆಳೆಸಿ ಸಖತ್ ಸುದ್ದಿಯಲ್ಲಿದ್ದಾರೆ. ವಿಶ್ವದ (World) ಅತಿ ಉದ್ದನೆಯ ಗಡ್ಡವನ್ನು ಹೊಂದಿರುವ ಮಹಿಳೆ (Women) ಎಂದು ಅವರು ಹೇಳಿಕೊಳ್ಳುತ್ತಾರೆ. ಈಗ ಗಿನ್ನಿಸ್ ಪುಸ್ತಕದಲ್ಲೂ ದಾಖಲೆ ಬರೆಯುವ ಆಸೆಯಲ್ಲಿದ್ದಾಳೆ.
ಜೆಸ್ಸಿಕಾ ಡಿ. ಜಾರ್ವಿನ್ಸ್ಕಿ ಎಂಬ 37 ವರ್ಷದ ಮಹಿಳೆ ಗಡ್ಡ ಮತ್ತು ಮೀಸೆ ಹೊಂದಿದ್ದಾರೆ. ಅವಳನ್ನು 'ಜೆಸ್ಸಾ ದಿ ಬಿಯರ್ಡೆಡ್ ಲೇಡಿ' ಎಂದು ಕರೆಯಲಾಗುತ್ತದೆ. ಅವಳ ಗಡ್ಡ 15 ಇಂಚು ಉದ್ದವಾಗಿದೆ. ವಿಶ್ವದ ಅತಿ ಉದ್ದನೆಯ ಗಡ್ಡವನ್ನು ಹೊಂದಿರುವ ಮಹಿಳೆ ಎಂದು ಅವರು ಹೇಳಿಕೊಳ್ಳುತ್ತಾರೆ. ಗಿನ್ನಿಸ್ ಪುಸ್ತಕದಲ್ಲಿ ದಾಖಲೆ ಬರೆಯುವ ಆಸೆಯೂ ಇದೆ. ಅದಕ್ಕಾಗಿ ಅವಳು ಸ್ವಲ್ಪ ಸಮಯ ಕಾಯಬೇಕಾಗಬಹುದು. ವಿವಿಯನ್ ವಿಲ್ಲಾರ್ ಗಡ್ಡ ಅವಳಿಗಿಂತ ನಾಲ್ಕೂವರೆ ಇಂಚು ಉದ್ದವಾಗಿದೆ.
ಜೆಸ್ಸಿಕಾ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮತ್ತು ಫೈಬ್ರೊಮ್ಯಾಲ್ಗಿಯಾದಿಂದ ಬಳಲುತ್ತಿದ್ದಾರೆ. ಈ ರೋಗಗಳು ಮಹಿಳೆಯರ ದೇಹದಲ್ಲಿ ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡುತ್ತವೆ. ಫೈಬ್ರೊಮ್ಯಾಲ್ಗಿಯವನ್ನು ಸಮಯಕ್ಕೆ ಮತ್ತು ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ಮೂಳೆ ಹಾನಿಗೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್ ಕೂಡ ಬರಬಹುದು. ಜೆಸ್ಸಿಗೆ ಅನೇಕ ದೈಹಿಕ ಸಮಸ್ಯೆಗಳಿವೆ.
ಇದನ್ನೂ ಓದಿ: ನೀವು ಜೊಮ್ಯಾಟೋದಲ್ಲಿ ಫುಡ್ ಆರ್ಡರ್ ಮಾಡ್ತೀರಾ? ಇನ್ನು ಮುಂದೆ ಹುಷಾರ್!
ಶಸ್ತ್ರಚಿಕಿತ್ಸೆಯೊಂದರಲ್ಲಿ ಆಕೆ ಒಂದು ಕಾಲನ್ನೂ ಕಳೆದುಕೊಂಡಿದ್ದಾಳೆ. ಗಡ್ಡ ಮತ್ತು ಮೀಸೆಯಿಂದಾಗಿ ಅವಳು ಜನರಿಂದ ವಿಚಿತ್ರ ನೋಟಗಳನ್ನು ಎದುರಿಸಿದಳು. ಅವಳಿಗೆ ಅನೇಕ ಜನರು ಕೀಟಲೆ ಮತ್ತು ಟ್ರೋಲ್ ಮಾಡುತ್ತಾರೆ. ಕೌಟುಂಬಿಕ ಹಿಂಸೆಯನ್ನೂ ಎದುರಿಸಿದ್ದಾರೆ. ಆಕೆಯೂ ಕಾರಣಾಂತರಗಳಿಂದ ಅರೇಂಜ್ಡ್ ಮ್ಯಾರೇಜ್ ಆಗಬೇಕಾಯಿತು. ಆದರೆ ಅವಳು ಯಾವುದೇ ಸಮಸ್ಯೆಗೆ, ಟ್ರೋಲ್ಗಳಿಗೆ ಕುಗ್ಗದೇ ಜೀವನ ನಡೆಸುತ್ತಿದ್ದಾರೆ. ಈಗ ಗಿನ್ನಿಸ್ ಪುಸ್ತಕದಲ್ಲಿ ದಾಖಲೆ ಬರೆಯುವ ಆಸೆಯಲ್ಲಿದ್ದಾಳೆ.
ಡೈಲಿ ಸ್ಟಾರ್ ಪ್ರಕಾರ, ಜೆಸ್ಸಿಕಾ ಪ್ರಸ್ತುತ 5 ಜನರೊಂದಿಗೆ ಬಹುಸಂಬಂಧದಲ್ಲಿದ್ದಾರೆ. ಆಕೆ ಒಬ್ಬ ವ್ಯಕ್ತಿಯನ್ನು ಕಾನೂನುಬದ್ಧವಾಗಿ ಮದುವೆಯಾಗಿದ್ದರೂ, ಅವಳು 5 ಜನರೊಂದಿಗೆ ಸಂಬಂಧ ಹೊಂದಿದ್ದಾರೆ. ಅವರ ಜೊತೆಯಲ್ಲಿ 71 ವರ್ಷದ ನಿವೃತ್ತ ಅಮೇರಿಕನ್ ಯೋಧ ಕೂಡ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ಆಕೆ ಒಬ್ಬ ಹುಡುಗನೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದಾರೆ.
ಆಕೆಯ ಪಾಲುದಾರರೊಬ್ಬರು ತಮ್ಮ ಸಂಬಂಧದ ಬಗ್ಗೆ ಹೇಳಿದರು, ನಾವು ಪರಸ್ಪರರ ಸಂಬಂಧವನ್ನು ಸಂಪೂರ್ಣ ಒಪ್ಪಿಗೆಯೊಂದಿಗೆ ಒಪ್ಪಿಕೊಂಡಿದ್ದೇವೆ. ಅದಕ್ಕಾಗಿಯೇ ನಾವು ದೀರ್ಘಕಾಲ ಸಂಬಂಧ ಹೊಂದಿದ್ದೇವೆ. ಬಹುಮುಖಿ ಸಂಬಂಧದಿಂದ ನಮ್ಮ ಬದುಕು ಸುಂದರವಾಗಿದೆ ಎಂದರು.
ಜೆಸ್ಸಿಕಾ ಅವರ ಜೀವನವು ಅನೇಕ ಏರಿಳಿತಗಳನ್ನುಕಂಡಿದ್ದರೂ, ಅವರ ಜೀವನವು ಈಗ ಸುಧಾರಿಸುತ್ತಿದೆ ಎಂದು ಅವರು ಹೇಳುತ್ತಾರೆ. ತನ್ನ 5 ಜನ ಪ್ರೇಮಿಗಳೊಂದಿಗೆ ಉತ್ತಮ ಜೀವನ ನಡೆಸುತ್ತಿದ್ದೇನೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಸಮಾಜದಲ್ಲಿ ಅದೆಂತಹ ಅವಮಾನವಾದರೂ ಕೂಡ ಜೆಸ್ಸಿಯವರು ಸಂತೋಷದಿಂದ ಬದುಕನ್ನು ನಡೆಸುತ್ತಾ ಇದ್ದಾರೆ.
ಒಟ್ಟಿನಲ್ಲಿ ಗಡ್ಡಬಿಟ್ಟ ಹೆಂಗಸಿಗೆ ಸಖತ್ ಡಿಮ್ಯಾಂಡ್ ಇದೆ ಅಂತಲೇ ಹೇಳಬಹುದು. ಈ ಫೋಟೋ ನೀವೂ ಕೂಡ ನೋಡಿ, ಏನ್ ಅನಿಸುತ್ತೆ ಅಂತ ಕಮೆಂಟ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ