ಕನಸಿನಲ್ಲಿ ಯಾವುದಾದರೂ ಕಟ್ಟ ಕನಸುಗಳು (Bad Dream) ಬಿದ್ರೆ ಅಥವಾ ಸಾವಿನ ಕನಸುಗಳು ಬಿದ್ರೆ ನಾವು ನಿದ್ರೆಯಿಂದ ಎಚ್ಚರಗೊಳ್ಳುತ್ತೇವೆ. ಅಯ್ಯೋ ಇದು ಎಂದಿಗೂ ನಿಜ ಆಗೋದು ಬೇಡ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ. ಆದರೆ ಈ ರೀತಿಯ ಭಯಾನಕ (Fear) ಘಟನೆಗಳು ನಿಜ ಜೀವನದಲ್ಲಿ ಅದೆಷ್ಟೋ ಜನರಿಗೆ, ಸಾಕಷ್ಟು ಬಾರಿ ಸಂಭವಿಸಿರುತ್ತದೆ. ಅದನ್ನು ಇನ್ನೊಬ್ಬರಿಗೆ ವಿವರಣೆ ಮಾಡಲೂ ಅಸಾಧ್ಯ ಆಗುವಷ್ಟು ಭಯಾನಕವಾಗಿರುತ್ತದೆ. ಇದೀಗ ಮತ್ತೊಂದು ಸುದ್ಧಿ ವೈರಲ್ (Viral) ಆಗ್ತಾ ಇದೆ. ಇದನ್ನು ಕೇಳ್ತಾ ಇದ್ರೆ ಸ್ನಾನಕ್ಕೆ ಹೋಗೋದೇ ಬೇಡ ಅಂತ ಅನಿಸುತ್ತೆ. ಇದು ಕಾಮಿಡಿ ಮಾಡುವ ವಿಚಾರನೇ ಅಲ್ಲ. ಕೇಳಿದ್ರೆ ನಿಜಕ್ಕೂ ಶಾಕ್ (Shock) ಆಗ್ತೀರ!
ಬಾಲಿವುಡ್ನಲ್ಲಿ ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶನದಲ್ಲಿ 2016ರಲ್ಲಿ "Trapped" ಅಂತ ಒಂದು ಸಿನಿಮಾ ತೆರೆಗೆ ಬಂದಿತ್ತು. ಇದರಲ್ಲಿ ಓರ್ವ ವ್ಯಕ್ತಿ ಒಂದು ದೊಡ್ಡ ಅಪಾರ್ಟ್ಮೆಂಟ್ನಲ್ಲಿ ತುಂಬ ದಿನಗಳ ಕಾಲ ಸಿಕ್ಕಿಹಾಕಿಕೊಂಡು ಹೇಗೆಲ್ಲಾ ಒದ್ದಾಡುತ್ತಾನೆ ಎಂಬುದೇ ಕಥೆ. ಇದನ್ನು ನೋಡಿದ ಅದೆಷ್ಟೋ ಜನರು ದೊಡ್ಡ ದೊಡ್ಡ ಅಪಾರ್ಟ್ಮೆಂಟ್ಗೆ ಹೋಗಲು ಮತ್ತು ಲಿಫ್ಟ್ನಲ್ಲಿ ಓಡಾಡಲು ಭಯಪಡುತ್ತಾ ಇದ್ದರು. ಇದೀಗ ಇಂತದ್ದೇ ಘಟನೆ ಸಿಂಗಾಪುರದಲ್ಲಿ ನಡೆದಿದೆ.
ಏನಿದು ಘಟನೆ?
ಈ ಘಟನೆ ಚೀನಾದ ಮಹಿಳೆಗೆ ಸಂಭವಿಸಿದೆ. ಮಹಿಳೆಯ ಹೆಸರು ಯಾಂಗ್ ಎಂದು ಹೇಳಲಾಗಿದ್ದು, ಸಿಂಗಾಪುರದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದಳು. ಮಹಿಳೆಯು ಬಾತ್ ರೂಮ್ಗೆ ಹೋದಾಗ ಆಕೆಗೆ ಈ ಘಟನೆ ನಡೆದಿದೆ. ಈ ವೇಳೆ ಮಹಿಳೆ ತನ್ನ ಫೋನ್ ಅನ್ನು ಹೊರಗಡೆಯೇ ಇಟ್ಟು ಹೋಗಿದ್ದಾರೆ.
ಸ್ನಾನದ ಗೃಹದ ಬಾಗಿಲನ್ನು ಜೋರಾಗಿ ಆ ಮಹಿಳೆ ಹಾಕಿಕೊಂಡಿದ್ದಾಳೆ. ಆಗ ನಡೆದದ್ದೇ ಒಂದು ಅವಗಢ! ಜೋರಾಗಿ ಹಾಕಿ ಕಾರಣದಿಂದಾಗಿ ಬಾಗಿಲನ ಲಾಕ್ ಕಿತ್ತು ಆಕೆಯ ಕೈಗೆ ಬಂದಿದೆ. ಹಾಗೇಯೆ ಬಾಗಿಲು ಕೂಡ ಫುಲ್ ಲಾಕ್ ಆಗಿದೆ. ಸ್ನಾನಗೃಹದ ಬಾಗಿಲು ತೆರೆಯದ ಕಾರಣ ಮಹಿಳೆ ಜೋರಾಗಿ ಕಿರುಚಾಡುತ್ತಲೇ ಇದ್ದಳು. ಅವಳೂ ಜೋರಾಗಿ ಅಳಲು ಶುರು ಮಾಡಿದಳು, ಆದರೆ ಅವಳ ಧ್ವನಿ ಕೇಳುವವರೇ ಇರಲಿಲ್ಲ, ಮನೆಯಲ್ಲಿ ಕೂಡ ಯಾರೂ ಇರಲಿಲ್ಲ.
ಇದನ್ನೂ ಓದಿ: ಕಾಳಗಕ್ಕೆ ರೆಡಿಯಾಗಿದ್ದ ಹುಂಜಗಳು ಲಾಕ್, ಟ್ರೀಟ್ಮೆಂಟ್ಗೆ ಅಂತ 5 ಸಾವಿರ ಖರ್ಚು ಮಾಡಿದ ಖಾಕಿ ಪಡೆ!
ಮಹಿಳೆ ಬಾತ್ರೂಮ್ನಲ್ಲಿ ಎಲ್ಲಾ ವಸ್ತುಗಳನ್ನು ಎಸೆದರೂ, ಅದನ್ನು ಯಾರೂ ಗಮನಿಸಲಿಲ್ಲ. ಮೊದಲ ಮತ್ತು ಎರಡನೇ ದಿನ ಕಳೆದರೂ ಮಹಿಳೆ ಅಲ್ಲಿಂದ ಹೊರಬರಲು ಸಾಧ್ಯವಾಗಲಿಲ್ಲ. ಹಸಿವು ಮತ್ತು ಬಾಯಾರಿಕೆಯಿಂದ ಅವಳು ಸಾಯುವ ರೀತಿ ಆಗಿದ್ದಳು. ಯಾರೂ ಕೂಡ ಆಕೆಯನ್ನು ಗಮನಿಸಲೇ ಇಲ್ಲ. ಸತತ 4 ದಿನಗಳ ಕಾಲ ಬಾತ್ರೂಮ್ ನಲ್ಲಿಯೇ ಇದ್ದಳು ಈ ಮಹಿಳೆ.
ನಾಲ್ಕು ದಿನಗಳ ಕಾಲ ಮಹಿಳೆ ಬಾತ್ ರೂಂನಲ್ಲಿ ನೀರು ಕುಡಿದು ಬದುಕಿದ್ದಾಳೆ. ನಾಲ್ಕನೇ ದಿನ, ಮಹಿಳೆಯ ಪೋಷಕರು ಅವಳನ್ನು ಹುಡುಕಿಕೊಂಡು ಬಂದಿದ್ದಾರೆ. ಯಾಕಂದರೆ ಆಕೆ 4 ದಿನಗಳ ಕಾಲ ಒಂದೂ ಕಾಲ್ ಮಾಡಿಲ್ಲ ಮತ್ತು ಅವರು ಮಾಡಿದ ಕಾಲ್ನ್ನು ಕೂಡ ತೆಗೆಯಲಿಲ್ಲ. ಹಾಗಾಗಿ ಅವರಿಗೆ ಅನುಮಾನ ಬಂದಿತ್ತು. ಇದಾದ ಬಳಿಕ ಸಿಂಗಾಪುರದಲ್ಲಿ ನೆಲೆಸಿರುವ ತಮ್ಮ ಸಂಬಂಧಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಸಂಬಂಧಿಕರು ಮಹಿಳೆಯ ಮನೆಗೆ ಬಂದು ಪೊಲೀಸರಿಗೆ ಕರೆ ಮಾಡಿ ಬಾಗಿಲು ಒಡೆದು ಮಹಿಳೆಯನ್ನು ಹೊರಗೆ ಕರೆದೊಯ್ದಿದ್ದಾರೆ. ಇದಾದ ಬಳಿಕ ಮಹಿಳೆ ಹೊರಗೆ ಬಂದ ಕೂಡಲೇ ನಡೆದ ಘಟನೆಯನ್ನೆಲ್ಲ ವಿವರಿಸಿದ್ದಾಳೆ. ಸದ್ಯದ ಆಕೆಯ ಪರಿಸ್ಥಿತಿ ಹದಗೆಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ