ವಿಚಿತ್ರ ಹೆಸರಿನ ಈ ಊರ ಜನರನ್ನು ಕರೆಯಲು 'ಸೀಟಿ' ಹೊಡೆಯಲೇಬೇಕು!

news18
Updated:July 28, 2018, 8:15 PM IST
ವಿಚಿತ್ರ ಹೆಸರಿನ ಈ ಊರ ಜನರನ್ನು ಕರೆಯಲು 'ಸೀಟಿ' ಹೊಡೆಯಲೇಬೇಕು!
news18
Updated: July 28, 2018, 8:15 PM IST
-ನ್ಯೂಸ್ 18 ಕನ್ನಡ

ರಸ್ತೆ ಬದಿಯಲ್ಲಿ ನಿಂತು ಸೀಟಿ ಹೊಡೆದು ನೋಡಿ, ಅದೆಷ್ಟೊ ಮಂದಿ ರಪ್ಪನೆ ತಿರುಗಿ ನೋಡುತ್ತಾರೆ. ಸೀಟಿಗೆ ಅಥವಾ ಶಿಳ್ಳೆಗೆ ಅಷ್ಟೊಂದು ಶಕ್ತಿ ಇದ್ದರೂ ಯಾರೂ ಕೂಡ ವಿಸಿಲ್​ ಹೊಡೆದು ಕರೆಯುವುದನ್ನು ಇಷ್ಟಪಡುವುದಿಲ್ಲ. ಪುಂಡ ಪೋಕರಿಗಳು ಹೊಡೆಯುವ ಶಿಳ್ಳೆಯನ್ನು ಕೆಟ್ಟ ನಡವಳಿಕೆ ಎಂದು ನಮ್ಮ ಸಮಾಜ ಅಧಿಕೃತವಾಗಿ ತೀರ್ಮಾನಿಸಿದೆ. ಆದರೆ ನಮ್ಮ ದೇಶದ ಒಂದು ಹಳ್ಳಿ ಇಂದು ಸೀಟಿಯಿಂದ ವಿಶ್ವದ ಗಮನ ಸೆಳೆದಿದೆ ಎಂದರೆ ನಂಬುವಿರಾ?. ಹೌದು, ಈಶಾನ್ಯ ರಾಜ್ಯದ ಹಳ್ಳಿವೊಂದು 'ವಿಸ್ಲಿಂಗ್ ವಿಲೇಜ್' ಎಂದು ಪ್ರಖ್ಯಾತಿ ಪಡೆದಿದೆ.ಮೇಘಾಲಯದ ಬೆಟ್ಟ ಗುಡ್ಡ ಪ್ರದೇಶದಲ್ಲಿರುವ ಸಣ್ಣ ಗ್ರಾಮ ಕಾಂಗ್​ಥಾನ್. ಇಲ್ಲಿನ ಜನರು ಇನ್ನೊಬ್ಬರನ್ನು ಶಿಳ್ಳೆಗಳ ಮೂಲಕ ಕರೆಯುವುದು ವಿಶೇಷ. ಈ ಗ್ರಾಮದ ಜನರಿಗೆ ಎರಡು ಹೆಸರುಗಳಿರುತ್ತದೆ. ಅದರಲ್ಲಿ ಒಂದು ಸಾಮಾನ್ಯ ನಾಮವಾಗಿದ್ದರೆ, ಮತ್ತೊಂದು ಹೆಸರು ಸೀಟಿಯ ಶಬ್ದದಿಂದ ಕೂಡಿರುತ್ತದೆ.ಈ ಹಳ್ಳಿಯ ಪ್ರತಿಯೊಬ್ಬರಿಗೂ ಶಿಳ್ಳೆ ಹೆಸರಿದ್ದು, ಎಲ್ಲೇ ಇದ್ದರೂ ಈ ಟ್ಯೂನ್​ನನ್ನು ಗ್ರಹಿಸುತ್ತಾರೆ. ಹಲವು ಶಬ್ದಗಳ ಪ್ರಯೋಗಗಳನ್ನು ಮಾಡಿ ಶಿಳ್ಳೆ ಹೆಸರು ಇಡಲಾಗುತ್ತದೆ. ಆದರೆ ಇಲ್ಲಿ ವಿಚಿತ್ರ ಎನಿಸುವುದು ಒಬ್ಬೊಬ್ಬರ ವಿಸಿಲ್ ಟ್ಯೂನ್​ಗಳು. ಒಬ್ಬರಿಗೆ ನೀಡಿರುವ ಶಿಳ್ಳೆ ಹೆಸರುಗಳನ್ನು ಮತ್ತೊಬ್ಬರಿಗೆ ನೀಡಲಾಗುವುದಿಲ್ಲ ಎನ್ನುವುದೇ ಆಶ್ಚರ್ಯಕ್ಕೆ ಕಾರಣ.ತಾಯಿಯು ಬಾಲ್ಯದಲ್ಲೇ ಮಕ್ಕಳಿಗೆ ಈ ಶಿಳ್ಳೆ ಹೆಸರುಗಳನ್ನು ಇಡುತ್ತಾರೆ. ಅಲ್ಲದೆ ಮಗುವಿನೊಂದಿಗೆ ಶಿಳ್ಳೆ ಹೆಸರಿನಲ್ಲೇ ತಾಯಿ ವ್ಯವಹರಿಸುವುದರಿಂದ ಮಗು ಬಾಲ್ಯದಲ್ಲೇ ರಾಗವನ್ನು ಗುರುತಿಸಲು ಪ್ರಾರಂಭಿಸುತ್ತದೆ. ಮುಂದೆ ಅದುವೇ ವಿಸಿಲ್​ ಹೆಸರಾಗಿ ಗ್ರಾಮಸ್ಥರು ಬಳಸುತ್ತಾರೆ. ಈ ಶಿಳ್ಳೆ ರಾಗ ಎಲ್ಲೇ ಇದ್ದರೂ ಇವರು ಗುರುತಿಸುತ್ತಾರೆ. ಈ ಹಳ್ಳಿಯಲ್ಲಿ 109 ಕುಟುಂಬಗಳಿದ್ದು, ಒಟ್ಟು 627 ಜನರಿದ್ದಾರೆ. ಅಂದರೆ 627 ರೀತಿಯ ವಿಭಿನ್ನವಾದ ಶಿಳ್ಳೆ ಹೆಸರುಗಳಿವೆ. ಪಕ್ಷಿಗಳ ಶಬ್ದಗಳನ್ನು ಗ್ರಹಿಸಿ ಅದೇ ರೀತಿಯ ಟ್ಯೂನ್​ನಲ್ಲಿ ಶಿಳ್ಳೆ ಹೆಸರು ಇಡಲಾಗುತ್ತದೆ.ಸುತ್ತಲೂ ಪವರ್ತದಿಂದ ಕೂಡಿರುವ ಕಾಂಗ್​ಥಾನ್ ಗ್ರಾಮ ಕೂಡ ಇಂದು ಅಭಿವೃದ್ಧಿಯತ್ತ ಸಾಗುತ್ತಿದೆ. ದೂರದ ಊರುಗಳಿಗೆ ತೆರಳುತ್ತಿರುವ ಇಲ್ಲಿನ ನಿವಾಸಿಗಳು ನಿಧಾನಕ್ಕೆ ತಮ್ಮ ವಿಸಿಲ್ ಹೆಸರುಗಳನ್ನು ಮರೆಯಲು ಪ್ರಾರಂಭಿಸಿದ್ದಾರೆ. ಇದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಇಲ್ಲಿನ ಜನರು ತಮ್ಮ ಶಿಳ್ಳೆ ಹೆಸರುಗಳನ್ನು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಡುತ್ತಿದ್ದಾರೆ. ಕೆಲವರು ತಮ್ಮ ಹೆಸರನ್ನೇ ಮೊಬೈಲ್​ನ ರಿಂಗ್​ ಟ್ಯೂನ್​ಗಳಾಗಿ ಇಟ್ಟಿದ್ದಾರೆ. ಇನ್ನು ಮುಂದೆ ನೀವೆಲ್ಲಾದರೂ ವಿಚಿತ್ರ ಎನಿಸುವ ಶಿಳ್ಳೆಗಳ ರಿಂಗ್​ ಟ್ಯೂನ್​ಗಳನ್ನು ಕೇಳಿದರೆ ಅವರು ಕಾಂಗ್​ಥಾನ್ ಗ್ರಾಮದವರು ಎಂದು ಥಟ್ ಅಂತ ಹೇಳಬಹುದು.
First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ