ಗಂಡನಿಗೆ ಲಾಟರಿ ಟಿಕೆಟ್ ನೀಡಿ ತಾನು ಗರ್ಭಿಣಿಯೆಂದ ಹೆಂಡತಿ!: ವೈರಲ್ ಆಯ್ತು ವಿಡಿಯೋ

Viral Video: ತಾನು ಗರ್ಭಿಣಿಯಾಗಿದ್ದೇನೆ ಎಂದು ಗಂಡನಿಗೆ ವಿಭಿನ್ನವಾಗಿ ತಿಳಿಸಲು ಯೋಚಿಸಿದ ಅಮೆರಿಕದ ಮಹಿಳೆ ಅದಕ್ಕಾಗಿ ಗಂಡನಿಗೆ ಲಾಟರಿ ಟಿಕೆಟ್ ನೀಡಿದಳು. ಅದನ್ನು ಸ್ಕ್ರಾಚ್ ಮಾಡಿದ ಗಂಡ ಸಂತೋಷದಿಂದ ಕುಣಿದಾಡಿದ್ದಾನೆ. ಆ ವಿಡಿಯೋ ಈಗ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಅಮೆರಿಕದ ಅರಿಜೋನಾದ ಮಹಿಳೆಯೊಬ್ಬರು ತಾನು ಗರ್ಭಿಣಿಯಾಗಿರುವ ವಿಷಯವನ್ನು ಸೃಜನಶೀಲ ವಿಧಾನದಲ್ಲಿ ಪತಿಗೆ ತಿಳಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಾರದ ಆರಂಭದಲ್ಲಿ ಹೇಲಿ ಬೇಜ್ ಎಂಬುವರು ಯೂಟ್ಯೂಬ್‌ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದರು. ಅದರಲ್ಲಿ ತಾನು ಗರ್ಭಿಣಿಯಾಗಿರುವ ವಿಷಯ ತಿಳಿದುಕೊಂಡ ಅವರು ಖುಷಿಯಲ್ಲಿ ತೇಲಾಡಿದ್ದಾರೆ. ಈ ವಿಷಯವನ್ನು ಪತಿಗೆ ತಿಳಿಸಬೇಕು, ಅದಕ್ಕೆ ಕ್ರಿಯೇಟಿವ್ ಆಗಿ ಏನಾದರೂ ಮಾಡಬೇಕೆಂದು ನಿರ್ಧರಿಸಿದ್ದಾರೆ. ಬಳಿಕ ಲಾಟರಿ ಟಿಕೆಟ್ ಅನ್ನು ಸ್ಕ್ರ್ಯಾಚ್ ಮಾಡಿಸುವ ಮೂಲಕ ಪತಿ ರಿಕ್‌ಗೆ ಸಂತೋಷದ ವಿಷಯ ತಿಳಿಸಿ ಖುಷಿಪಟ್ಟಿದ್ದಾರೆ.

  ಈ ವಿಡಿಯೋ ಕ್ಲಿಪ್ ನ ಪ್ರಾರಂಭದಲ್ಲಿ ಹೇಲಿ ಅವರು ತಾನು ಗರ್ಭಿಣಿಯಾಗಿರುವ ಬಗ್ಗೆ ತಿಳಿದುಕೊಳ್ಳುತ್ತಾರೆ. ಮೊಬೈಲ್ ಕ್ಯಾಮರಾ ಆನ್ ಮಾಡಿ ವೀಕ್ಷಕರೊಂದಿಗೆ ಈ ಖುಷಿಯ ಸುದ್ದಿಯನ್ನು ಹಂಚಿಕೊಳ್ಳುತ್ತಾರೆ. ಅತ್ಯಂತ ಉತ್ಸಾಹದಿಂದ ತನ್ನ ಮನೆಯೊಳಗಿನ ಕೋಣೆಗೆ ಓಡಿಹೋಗುತ್ತಾಳೆ. ವಿಶೇಷ ರೀತಿಯಲ್ಲಿ ಪತಿ ರಿಕ್ಗೆ ಈ ವಿಷಯ ತಿಳಿಸುತ್ತೇನೆ ಎಂದು ಹೇಲಿ ಹೇಳುತ್ತಾರೆ.

  ಅಡುಗೆ ಮನೆಯಲ್ಲಿ ಕುಳಿತು ತನ್ನ ಪತಿಯನ್ನು ಕರೆಯುವ ಹೇಲಿ ಅವರು ರಿಕ್‌ಗೆ ಲಾಟರಿ ಟಿಕೆಟ್ ಸ್ಕ್ರ್ಯಾಚ್ ಮಾಡುವಂತೆ ಹೇಳುತ್ತಾರೆ. ನಿನಗೆ ಏನಾದರೂ ದೊಡ್ಡ ಬಹುಮಾನ ಬರಬಹುದು ಸರಿಯಾಗಿ ಸ್ಕ್ರ್ಯಾಚ್ ಮಾಡಿ ನೋಡು ಎನ್ನುತ್ತಾರೆ. ಅದರಂತೆ ರಿಕ್ ಒಂದು ನಾಣ್ಯ ತೆಗೆದುಕೊಂಡು ಲಾಟರಿ ಟಿಕೆಟ್ ಸ್ಕ್ರ್ಯಾಚ್ ಮಾಡಲು ಪ್ರಾರಂಭಿಸುತ್ತಾರೆ. ಬಳಿಕ ತನಗೆ 3 ಚಿನ್ನದ ಬಾರ್ ಗಳು ದೊರೆತಿವೆ ಎಂದು ಹೇಳುವ ರಿಕ್ ಬಹುಮಾನವಾಗಿ ಮಗು ಸಿಕ್ಕಿದೆ ಎನ್ನುತ್ತಾರೆ. ಕೂಡಲೇ ಅವರಿಗೆ ಪತ್ನಿ ಗರ್ಭಿಣಿಯಾಗಿದ್ದಾಳೆಂಬ ವಿಷಯ ಹೊಳೆಯುತ್ತದೆ. ಬಳಿಕ ರಿಕ್ ತನ್ನ ಪತ್ನಿಯನ್ನು ತಬ್ಬಿಕೊಳ್ಳಲು ಎದ್ದು ನಿಂತು ಸಂಭ್ರಮದಿಂದ ಕಿರುಚಾಡುತ್ತಾರೆ.  ಗರ್ಭಿಣಿಯಾಗಿರುವ ವಿಷಯ ತಿಳಿಸಲು ಪತ್ನಿ ಹೇಲಿ ಮಾಡಿದ ವಿಶೇಷ ಉಪಾಯದ ಬಗ್ಗೆ ರಿಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 15 ರಂದು ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೋ ಹಂಚಿಕೊಳ್ಳುವ ಮುನ್ನ ಹೇಲಿ ಪ್ರೇಮಿಗಳ ದಿನದಂದು ಪತಿ ಮತ್ತು ಪುತ್ರಿಯ ಜೊತೆಗೆ ಫೋಟೋ ತೆಗೆಸಿಕೊಂಡು ತಾನು ಗರ್ಭಿಣಿಯಾಗಿರುವ ಬಗ್ಗೆ ಸುಳಿವು ನೀಡಿದ್ದರು.

  ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಈ ಫೋಟೋದಲ್ಲಿ ಹೃದಯದ ಆಕಾರದ ಬಲೂನುಗಳೊಂದಿಗೆ ರಿಕ್ ಮತ್ತು ಹೇಲಿ ತಮ್ಮ 2 ವರ್ಷದ ಪುತ್ರಿ ಹ್ಯಾಜೆಲ್ ಜೊತೆಗೆ ಪೋಸು ನೀಡಿದ್ದರು. ‘ಗುಲಾಬಿಗಳು ಕೆಂಪು ಬಣ್ಣದ್ದಾಗಿವೆ, ಹೇ, ನಮಗೆ ಮತ್ತೊಂದು? ನಮ್ಮ ಪಾರ್ಟಿಗೆ ಮತ್ತೊಬ್ಬ ಸದಸ್ಯ ಸೇರ್ಪಡೆಯಾಗಲಿದ್ದಾನೆ’ ಎಂದು ಬರೆದುಕೊಂಡಿದ್ದರು. ಮತ್ತೊಂದು ಪೋಸ್ಟ್ ನಲ್ಲಿ ತಮ್ಮ ಗರ್ಭಾವಸ್ಥೆಯ ವಿವರಗಳನ್ನು ಹೇಲಿ ತಿಳಿಸಿದ್ದಾರೆ. ‘ಕಳೆದ ಭಾನುವಾರ ನನಗೆ 10 ವಾರಗಳು ತುಂಬಿದವು’ ಎಂದು ಬರೆದುಕೊಂಡಿದ್ದಾರೆ.

  ತನ್ನ ಪುತ್ರಿ ಹ್ಯಾಜೆಲ್ ದೊಡ್ಡ ಸಹೋದರಿಯಾಗುವ ಉತ್ಸಾಹದಲ್ಲಿದ್ದಾಳೆ. ನಿನಗೆ ತಮ್ಮ ಹುಟ್ಟುತ್ತಾನೋ ಇಲ್ಲವೋ ತಂಗಿ ಹುಟ್ಟುತ್ತಾಳೋ ಎಂದು ಪ್ರತಿದಿನವೂ ನಾನು ಆಕೆಯನ್ನು ಕೇಳುತ್ತೇನೆ. ಶೇ.80ರಷ್ಟು ಬಾರಿ ಆಕೆ ತನೆಗೆ ತಂಗಿಯೇ ಹುಟ್ಟುತ್ತಾಳೆ ಎಂದು ಹೇಳಿದ್ದಾಳೆ. ಏನಾದರೂ ಆಗಬಹುದು… ಇನ್ನು ಕೆಲವು ಸಮಯದಲ್ಲಿ ಎಲ್ಲವೂ ತಿಳಿಯುತ್ತದೆ. ಆಗ ನೀನು ದೊಡ್ಡವಳಾಗುತ್ತಿಯಾ ಎಂದು ಹೇಲಿ ತಮ್ಮ ಪುತ್ರಿಗೆ ತಿಳಿಸಿದ್ದಾರೆ.
  Published by:Sushma Chakre
  First published: