Kitchen Hacks: ಹ್ಯಾಂಡ್ ಮಿಕ್ಸರ್‌ ಬಳಸಿ ಕ್ಷಣಾರ್ಧದಲ್ಲಿ ಕೋಳಿ ಮಾಂಸ ಚೂರು ಚೂರು ಮಾಡಿದ ಬ್ಲಾಗರ್​! ವೈರಲ್‌ ವಿಡಿಯೋ ನೋಡಿ

Viral Video: ಟ್ಯಾಕೋಸ್ ಮತ್ತು ಸೂಪ್‍ಗಳಂತಹ ತಿನಿಸುಗಳನ್ನು ತಯಾರಿಸಲು, ಸೂಕ್ತವಾದ ರೀತಿಯಲ್ಲಿ ಕೋಳಿ ಮಾಂಸವನ್ನು ಹ್ಯಾಂಡ್ ಮಿಕ್ಸರ್ ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡುತ್ತದೆ.

Chiken

Chiken

  • Share this:

ಕೋಳಿ ಮಾಂಸವನ್ನು ಚೂರು ಚೂರಾಗಿ ಮಾಡುವುದು ಹೆಚ್ಚು ಸಮಯ ಹಿಡಿಯುವ ಮತ್ತು ಬೋರು ಹೊಡೆಯುವ ಕೆಲಸ. ಆದರೆ ಅದನ್ನು ಸುಲಭಗೊಳಿಸುವ ವಿಧಾನವೊಂದು ಟಿಕ್‍ಟಾಕ್‍ನಲ್ಲಿ ಹರಿದಾಡುತ್ತಿದೆ. ಅದಕ್ಕೆ ಬೇಕಾಗಿರುವುದು ಬಹುಶ: ನಿಮ್ಮ ಅಡುಗೆ ಮನೆಯಲ್ಲಿಯೇ ಇರುವಂತಹ ವಸ್ತು. @raising.wildlings_ ವಿಡಿಯೋ ಪೋಸ್ಟ್ ಮಾಡಿದ ಐದು ದಿನಗಳಲ್ಲಿಯೇ ಸುಮಾರು 26 ಮಿಲಿಯನ್ ವೀಕ್ಷಣೆಗಳನ್ನು ಕಂಡಿದ್ದು, 4 ಮಿಲಿಯನ್ ಮೆಚ್ಚುಗೆಗಳನ್ನು ಪಡೆದಿದೆ.


ಈ ವಿಡಿಯೋದಲ್ಲಿ ಬ್ಲಾಗರ್ ಶೆನೆಲ್ ಕ್ರೂಗರ್, ಹ್ಯಾಂಡ್ ಮಿಕ್ಸರ್ ಬಳಸಿ ಕೆಲವೇ ಸೆಕೆಂಡ್‍ಗಳಲ್ಲಿ ಕೋಳಿ ಮಾಂಸವನ್ನು ಹೇಗೆ ಚೂರು ಚೂರಾಗಿ ಕತ್ತರಿಸುವುದು ಎಂಬುದನ್ನು ತೋರಿಸಿದ್ದಾರೆ. “ದ ಬೆಸ್ಟ್ ಹ್ಯಾಕ್ ಆಫ್ ಮೈ ಅಡಲ್ಟ್ ಲೈಫ್” ಎಂಬ ಶೀರ್ಷಿಕೆಯನ್ನು ಅದಕ್ಕೆ ನೀಡಿದ್ದಾರೆ.


ಟ್ಯಾಕೋಸ್ ಮತ್ತು ಸೂಪ್‍ಗಳಂತಹ ತಿನಿಸುಗಳನ್ನು ತಯಾರಿಸಲು, ಸೂಕ್ತವಾದ ರೀತಿಯಲ್ಲಿ ಕೋಳಿ ಮಾಂಸವನ್ನು ಹ್ಯಾಂಡ್ ಮಿಕ್ಸರ್ ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡುತ್ತದೆ.


“ಚಿಕನ್ ಸ್ಟಾಕ್‍ ಜೊತೆಗೆ ಕೋಳಿ ಮಾಂಸವನ್ನು 20 ನಿಮಿಷ ಬೇಯಿಸಿದೆ. ಬಳಿಕ ಕೋಳಿ ಮಾಂಸವನ್ನು ಮೂರು ತಿನಿಸುಗಳಿಗಾಗಿ ಭಾಗ ಮಾಡುವ ಉದ್ದೇಶದಿಂದ ಅದನ್ನು ಚೂರು ಚೂರಾಗಿ ಮಾಡಲು, ಚಿಕನ್ ಸ್ಟಾಕನ್ನು ಬಸಿದು ತೆಗೆದೆ” ಎಂದು ಕ್ರೂಗರ್ ನ್ಯೂಸ್ ವೀಕ್‍ಗೆ ಹೇಳಿದ್ದಾರೆ.


“ನಾನು ಸುಮಾರು ಒಂದು ವರ್ಷದಿಂದ ಈ ವಿಧಾನವನ್ನು ಬಳಸುತ್ತಿದ್ದೇನೆ, ಅದನ್ನು ಯಾವಾಗ ಆರಂಭಿಸಿದೆ ಎನ್ನುವುದುನನಗೆ ನೆನಪಿಲ್ಲ” ಎಂದಿದ್ದಾರೆ ಅವರು.


ಈ ವಿಡಿಯೋವನ್ನು ವೀಕ್ಷಣೆ ಮಾಡಿದ ಲಕ್ಷಾಂತರ ಮಂದಿಯಲ್ಲಿ ಈ ಮೊದಲು ಕೋಳಿ ಮಾಂಸವನ್ನು ಕತ್ತರಿಸಲು ತಮ್ಮ ಸಮಯ ವ್ಯರ್ಥ ಮಾಡಿದವರು ಕೂಡ ಇದ್ದಾರೆ. “ಹಾಗಾದರೆ, ನನ್ನ ಕೋಮಲ ಕೈಗಳನ್ನು ಸುಟ್ಟುಕೊಳ್ಳುವ ಬದಲು ನಾನು ಇದನ್ನು ಮಾಡಬೇಕಿತ್ತು ಎಂದು ನೀವು ಹೇಳುತ್ತೀರಾ?” ಎಂದು ಅಂತಹ ಒಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.


“ನನಗೆ ಈಗಷ್ಟೆ ಈ ವಿಧಾನ ಏಕೆ ಗೊತ್ತಾಯಿತು? ನಾನು ಈವರೆಗೆ ಹಾಳು ಮಾಡಿದ ಅಷ್ಟೂ ಸಮಯದ ಬಗ್ಗೆ ಯೋಚಿಸುತ್ತೇನೆ” ಎಂದು ಇನ್ನೊಬ್ಬರು ಬರೆದಿದ್ದಾರೆ.


ಕೆಲವು ವೀಕ್ಷಕರು ಈ ವಿಡಿಯೋದಲ್ಲಿನ ಹ್ಯಾಕ್‍ನಲ್ಲಿ , ಕೋಳಿ ಮಾಂಸದಲ್ಲಿ ಮಸಾಲೆಯ ಕೊರತೆ ಇರುವುದೆಂದು ಭಾವಿಸಿದಾಗ, ಕ್ರೂಗರ್ ಆ ಬಗ್ಗೆ ತಮ್ಮ ಪ್ರತಿಕ್ರಿಯೆಯಲ್ಲಿ ವಿವರಣೆ ನೀಡಿದ್ದಾರೆ.


“ಇದಕ್ಕೆ ಮಸಾಲೆ ಹಾಕಿಯೇ ಇಲ್ಲ” ಎಂದು ಒಬ್ಬರು ಬಳಕೆದಾರರು ಬರೆದಿದ್ದಾರೆ.


“ನಾನು ದಕ್ಷಿಣ ಆಫ್ರಿಕಾದಲ್ಲಿ ವಾಸಿಸುತ್ತೇನೆ ಮತ್ತು ಇಲ್ಲಿ ಚಿಕನ್ ಮಾಯೋ ಸರಮೀಸ್ ತುಂಬಾ ಜನಪ್ರಿಯ. ಹಾಗಾಗಿ ಒಂದು ಭಾಗವನ್ನು ಚಿಕನ್ ಮಾಯೋಗಾಗಿ ಬಳಸಿದೆ, ಎಂಚಿಲಾಡಸ್‍ಗಾಗಿ ಮಸಾಲೆಗಳಲ್ಲಿಸ್ವಲ್ಪವೇ ಫ್ರೈ ಮಾಡಿ ಬೇಗನೆ ಹುರಿದಮತ್ತು ಹೋಮ್‍ಮೇಡ್ ಸಾಲ್ಸಾ ತಯಾರಿಸಲು ಇನ್ನೊಂದು ಭಾಗವನ್ನು ಹಾಗೂ ಕೊನೆಯ ಭಾಗವನ್ನು ತರಕಾರಿ ಸೂಪ್‍ಗೆ ಹಾಕಲು ಬಳಸಿದೆ. ಅದು ಪೂರ್ತಿಯಾಗಿ ನನ್ನ ಊಟವೆಂದು ಹೇಗೆ ಜನರು ಭಾವಿಸಿದರೆಂದು ನೋಡಿದಾಗ ಮಜವೆನಿಸಿತು - ಅದು ಪೂರ್ಣಗೊಂಡಿಲ್ಲ ಎಂಬುದು ಜನರಿಗೆ ಗೊತ್ತಾಗುವುದಿಲ್ಲ , ನಾನು ಅದನ್ನು ಬೇರೆ ಬೇರೆ ತಿನಿಸುಗಳನ್ನು ತಯಾರಿಸಲು ಬಳಸಬೇಕಿದ್ದರಿಂದ, ಅದಕ್ಕೆ ಅದನ್ನು ಚಿಕನ್ ಸ್ಟಾಕ್‍ನಲ್ಲಿ ಬೇಯಿಸಿದ್ದು ಬಿಟ್ಟರೆ ಬೇರಾವ ಮಸಾಲೆಯನ್ನೂ ಹಾಕಿಲ್ಲ” ಎಂದು ಕ್ರೂಗರ್ ವಿವರಿಸಿದ್ದಾರೆ.






“ಜಗತ್ತಿನ ಬೇರೆ ಬೇರೆ ಸಂಸ್ಕೃತಿಯ ಜನರು ಈ ಹ್ಯಾಕನ್ನು ಯಾವ ರೀತಿ ಬಳಸುತ್ತಾರೆ ಎಂಬುದರ ಬಗ್ಗೆ ಪ್ರತಿಕ್ರಿಯಿಸುತ್ತಿರುವುದನ್ನು ನೋಡಿದಾಗ ಅಚ್ಚರಿಯಾಯಿತು. ಅದರಿಂದಾಗಿ ನಾನು ಕೂಡ ಇತರ ಕೆಲವು ಖಾದ್ಯಗಳ ಬಗ್ಗೆ ಗೂಗಲ್‍ನಲ್ಲಿ ಹುಡುಕುವಂತಾಯಿತು “ ಎಂದು ಅವರು ಹೇಳಿದ್ದಾರೆ.


ಟಿಕ್‍ಟಾಕ್‍ನಲ್ಲಿ ಆಹಾರ ಸಂಬಂಧಿ ಹ್ಯಾಕ್‌ಗಳು ಸಾಕಷ್ಟಿವೆ. ಕೋಳಿ ಮಾಂಸವನ್ನು ಚೂರು ಮಾಡುವ ಹ್ಯಾಕ್ ಕೇವಲ ಹೊಸ ಹ್ಯಾಕ್ ಅಷ್ಟೆ. ಟಿಕ್‍ಟಾಕ್‍ನಲ್ಲಿ ಕಿಚನ್ ಹ್ಯಾಕ್‍ಗಳು ತುಂಬಾ ಜನಪ್ರಿಯ ಆಗುತ್ತಿವೆ.

First published: