HOME » NEWS » Trend » VIRAL VIDEO WOMAN PUTS STICKERS OF HER FACE ON PLAYSTATION TO TEACH CALL OF DUTY ADDICT FIANCE A LESSON STG SCT

ಪ್ಲೇ ಸ್ಟೇಷನ್‌ನಲ್ಲಿ ಸದಾ ಗೇಮ್‌ ಆಡುತ್ತಿದ್ದ ಪ್ರಿಯಕರನಿಗೆ ಪಾಠ ಕಲಿಸಿದ ಪ್ರೇಯಸಿ!

ಮದುವೆ ನಿಶ್ಚಯವಾಗಿರುವ ಹುಡುಗಿ ಜತೆ ಮಾತನಾಡುವುದನ್ನು ಬಿಟ್ಟು ಪ್ಲೇ ಸ್ಟೇಷನ್‌ನಲ್ಲಿ ಹೆಚ್ಚು ಸಮಯ ಕಳೆಯುವ ಭಾವಿ ಪತಿಗೆ 25 ವರ್ಷದ ಮಹಿಳೆ ಸ್ವೀಟಾಗೇ ಪಾಠ ಕಲಿಸಿದ್ದಾಳೆ. ಅದು ಹೇಗೆ ಅಂತೀರಾ?

news18-kannada
Updated:May 3, 2021, 2:04 PM IST
ಪ್ಲೇ ಸ್ಟೇಷನ್‌ನಲ್ಲಿ ಸದಾ ಗೇಮ್‌ ಆಡುತ್ತಿದ್ದ ಪ್ರಿಯಕರನಿಗೆ ಪಾಠ ಕಲಿಸಿದ ಪ್ರೇಯಸಿ!
ವೈರಲ್ ವಿಡಿಯೋ
  • Share this:
ಮದುವೆ ಫಿಕ್ಸ್ ಆಗಿರುವ ಹುಡುಗ - ಹುಡುಗಿಯರು ಮದುವೆಗೂ ಮುನ್ನ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಈ ಹಿನ್ನೆಲೆ ಇಬ್ಬರೂ ಫೋನ್‌ನಲ್ಲಿ ಮಾತನಾಡುವುದು, ಮೆಸೇಜ್‌ ಮಾಡುವುದು ಸಾಮಾನ್ಯ. ಆದರೆ, ಮದುವೆ ನಿಶ್ಚಯವಾಗಿರುವ ಹುಡುಗಿ ಜತೆ ಮಾತನಾಡುವುದನ್ನು ಬಿಟ್ಟು ಪ್ಲೇ ಸ್ಟೇಷನ್‌ನಲ್ಲಿ ಹೆಚ್ಚು ಸಮಯ ಕಳೆಯುವ ಭಾವಿ ಪತಿಗೆ 25 ವರ್ಷದ ಮಹಿಳೆ ಸ್ವೀಟಾಗೇ ಪಾಠ ಕಲಿಸಿದ್ದಾಳೆ. ಅದು ಹೇಗೆ ಅಂತೀರಾ? ಮುಂದೆ ಓದಿ...

ಮಹಿಳೆ ತನ್ನ ಫೋಟೋಗಳನ್ನು ಭಾವಿ ಪತಿಯ ಪ್ಲೇ ಸ್ಟೇಷನ್‌ ಮೇಲೆ ಅಂಟಿಸಿದ್ದಾಳೆ. ''ತಾನು ಯಾವಾಗಲೂ ಅವನ ಮನಸ್ಸಿನಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳಲು'' ಈ ರೀತಿ ಮಾಡಿದ್ದಾಳೆ. ವಾಷಿಂಗ್ಟನ್, ಟೈನ್ ಅಂಡ್‌ ವೇರ್‌ನ ಸಿಯೋಭನ್ ಗೈಲ್ಸ್, ತನ್ನ ನಿಶ್ಚಿತ ವರ ಸ್ಯಾಮ್ ಬ್ಯಾಡ್ಡಮ್ಸ್ (28) ದಿನವಿಡೀ ಪ್ಲೇ ಸ್ಟೇಷನ್‌ನಲ್ಲಿ ಕಾಲ್ ಆಫ್ ಡ್ಯೂಟಿ ಗೇಮ್‌ ಆಡುತ್ತಿದ್ದದ್ದಕ್ಕೆ ಬೇಸರವಾಗಿತ್ತು. ಆದ್ದರಿಂದ ಭಾವಿ ಪತಿಗೆ ತಮಾಷೆ ಮಾಡಲು ನಿರ್ಧರಿಸಿ ಅವಳು ಪ್ಲೇ ಸ್ಟೇಷನ್‌ನ ಕಂಟ್ರೋಲರ್‌ ಮತ್ತು ಕನ್ಸೋಲ್ ಅನ್ನು ವಿನೈಲ್ ಸ್ಟಿಕ್ಕರ್‌ಗಳ ತನ್ನ ಮುಖದಿಂದ ಮುಚ್ಚಿದ್ದಾಳೆ.

ಮಾರಾಟ ಸಹಾಯಕಿಯಾಗಿರುವ ಸಿಯೋಭನ್, ತನ್ನ ಭಾವಿ ಪತಿ ಯಾವಾಗಲೂ ತನ್ನ ಪ್ಲೇ ಸ್ಟೇಷನ್‌ನಲ್ಲಿರುತ್ತಾನೆ. ಅದು ಅವನ “ಹೆಮ್ಮೆ ಮತ್ತು ಸಂತೋಷ” ಮತ್ತು ''ಫಸ್ಟ್‌ ಬರ್ನ್‌'' ಎಂದು LADbible ಗೆ ವಿವರಿಸಿದ್ದಾಳೆ. ಈ ಹಿನ್ನೆಲೆ ತಾನು ಯಾವಾಗಲೂ ಅವನ ಮನಸ್ಸಿನಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು, ಇಬೇಯಿಂದ ವಿನೈಲ್ ಸ್ಟಿಕ್ಕರ್‌ಗಳನ್ನು ಆರ್ಡರ್‌ ಮಾಡಿದಳು ಮತ್ತು ಅವನ ಗೇಮಿಂಗ್ ಕೋಣೆಗೆ ಹೋಗಿ ಆತ ಇಲ್ಲದಿರುವ ಸಮಯದಲ್ಲಿ ಬೇಗನೇ ತನ್ನ ಕೆಲಸವನ್ನು ಪೂರ್ಣಗೊಳಿಸಿದಳು.

ಇದನ್ನೂ ಓದಿ: ವರದಕ್ಷಿಣೆಯಾಗಿ ರೈಲು ಕೊಡ್ತೀನಿ ಅಂದ್ರು, ನಿಲ್ಲಿಸಲು ಜಾಗವಿಲ್ಲದ್ದಕ್ಕೆ ಬೇಡ ಎಂದೆ!; ವೈರಲ್ ಆಯ್ತು ಫನ್ನಿ ವಿಡಿಯೋ

ತನ್ನ ಭಾವಿ ಪತಿ ತಾನು ಈ ಕೃತ್ಯ ಮಾಡುವ ವೇಳೆಯೇ ನೋಡಿ ತನ್ನನ್ನು ಹಿಡಿಯಬಹುದೆಂದು ಆತಂಕಗೊಂಡಿದ್ದಳು. ಈ ಹಿನ್ನೆಲೆ ಆತನ ಆಟದ ಕೋಣೆಗೆ ನುಗ್ಗಿ, ಅವನ ಪ್ಲೇ ಸ್ಟೇಷನ್‌ ಅನ್ನು ಅನ್‌ಪ್ಲಗ್‌ ಮಾಡಿ ಅದರ ಮೇಲೆ ಆ ಸ್ಟಿಕ್ಕರ್‌ಗಳನ್ನು ಸಾಧ್ಯವಾದಷ್ಟು ಬೇಗನೇ ಅಂಟಿಸಿದಳು. ಅಲ್ಲದೆ, ಆ ಫೋಟೋ ಎಷ್ಟು ಚೆನ್ನಾಗಿ ಮತ್ತು ನೈಜವಾಗಿ ಕಾಣಿಸುತ್ತಿತ್ತು ಎಂದೂ ವಿವರಿಸಿರುವ ಸಿಯೋಭನ್, ತನ್ನ ಭಾವಿ ಪತಿ ಅದನ್ನು ನೋಡಿದ ಬಳಿಕ ಫೋಟೋವನ್ನು ಕಿತ್ತೊಗೆಯುತ್ತಾರಾ ಎಂಬ ಭಯವೂ ಕಾಡುತ್ತಿತ್ತು ಎಂದೂ ಹೇಳಿಕೊಂಡಿದ್ದಾಳೆ.

ಜತೆಗೆ, ಪ್ಲೇ ಸ್ಟೇಷನ್‌ ಹಾಳು ಮಾಡಿದ್ದಾಳೆ ಅಥವಾ ಇದನ್ನು ಮಾಡಿದ್ದಕ್ಕಾಗಿ ತನಗೆ ಏನು ಮಾಡುತ್ತಾನೋ ಎಂಬ ಆತಂಕವೂ ಮಹಿಳೆಗೆ ಕಾಡುತ್ತಿತ್ತು. ಆದರೆ, ಸ್ಯಾಮ್‌ನ ಪ್ರತಿಕ್ರಿಯೆ ಇದಕ್ಕೆ ತದ್ವಿರುದ್ಧವಾಗಿತ್ತು ಮತ್ತು ಅವನು ಈ ಜೋಕ್‌ ಅನ್ನು ಒಳ್ಳೆಯ ಉತ್ಸಾಹದಿಂದಲೇ ತೆಗೆದುಕೊಂಡಿದ್ದಾನೆ.

ತಾನು ಅದನ್ನು ಉಲ್ಲಾಸದಿಂದ ಕಂಡುಕೊಂಡಿದ್ದೇನೆ ಮತ್ತು ಸಿಯೋಭನ್ ಯಾವಾಗಲೂ ಈ ರೀತಿಯ ಹಾಸ್ಯಗಳನ್ನು ಮಾಡುತ್ತಿರುವುದರಿಂದ ತಾನು ಆಶ್ಚರ್ಯಪಡಲಿಲ್ಲ ಎಂದು ದಿ ಸನ್‌ಗೆ ಹೇಳಿದ್ದಾನೆ. ಆದರೆ, ತನ್ನ ಸ್ನೇಹಿತರು ಇದನ್ನು ನೋಡಿ ಟಾರ್ಚರ್‌ ಮಾಡುತ್ತಿದ್ದಾರೆ ಹಾಗೂ ಆಡಿಕೊಂಡು ನಗುತ್ತಿದ್ದಾರೆ ಎಂದೂ ಹೇಳಿಕೊಂಡಿದ್ದಾನೆ. ಅಲ್ಲದೆ, ತನ್ನ ಬಗ್ಗೆ ನಗುವಾಗಲೂ ಅವರು ಅವಳನ್ನು ಅಭಿನಂದಿಸುತ್ತಿದ್ದಾರೆ ಎಂದೂ ಸ್ಯಾಮ್‌ ಹೇಳಿದ್ದಾನೆ.ಅವಳ ಪ್ರಯತ್ನಗಳ ಹೊರತಾಗಿಯೂ, ಸ್ಯಾಮ್ ತನ್ನ ಗೇಮಿಂಗ್ ಸಮಯವನ್ನು ಕಡಿತಗೊಳಿಸಲು ಬಯಸುವುದಿಲ್ಲ. ಆದರೆ ಈಗ ಅವನು ಸಿಯೋಭನ್ ಮುಖವನ್ನು ಯಾವಾಗಲೂ ನೋಡಬಹುದು ಮತ್ತು ಅವಳ ಮುಂದಿನ ಬರ್ತಡೇಗೆ ಅವಳನ್ನು ಭೇಟಿಯಾಗಬೇಕೆಂದು ಪ್ಲ್ಯಾನ್‌ ಮಾಡಿಕೊಂಡಿದ್ದಾನೆ. ಅವನ ಗೇಮಿಂಗ್ ಸೆಟಪ್ ಈಗ “ಅವಳು ಅವನನ್ನು ನೇರವಾಗಿ ನೋಡುತ್ತಿದ್ದಾಳೆ” ಮತ್ತು ರಿಮೋಟ್‌ನಲ್ಲಿ ‘ಯಾವಾಗಲೂ ನೋಡುವುದು’ ಎಂಬ ಪಠ್ಯವು “ಅವಳು ನಿಜವಾಗಿಯೂ ಇದ್ದಂತೆ” ಕಾಣುವಂತೆ ಮಾಡುತ್ತದೆ.

ಅವನ ಎಲ್ಲಾ ಸ್ನೇಹಿತರು ಆತನನ್ನು ಆಡಿಕೊಳ್ಳುತ್ತಿರುವುದನ್ನು ಕೇಳಿದರೆ ತನಗೆ ತಾನೇ ನಗು ಬರುತ್ತದೆ ಎಂದೂ 25 ವರ್ಷದ ಸಿಯೋಭನ್ ಗೈಲ್ಸ್ ನಗುತ್ತಲೇ ಹೇಳಿದ್ದಾಳೆ. ಜತೆಗೆ, ದಂಪತಿ ಮಗುವಿಗೆ ಪ್ರಯತ್ನಿಸುತ್ತಿದ್ದು, ಮತ್ತು ಗೇಮಿಂಗ್ ಕೋಣೆಯನ್ನು ನರ್ಸರಿಯನ್ನಾಗಿ ಪರಿವರ್ತಿಸಲಾಗುವುದು. ಈ ಹಿನ್ನೆಲೆ ಕೆಲ ತಿಂಗಳ ಕಾಲ ಅವನ ರೂಂ ಅನ್ನು ಎಂಜಾಯ್‌ ಮಾಡಲಿ. ಜತೆಗೆ ತನ್ನ ಮುಖವನ್ನು ನೋಡುತ್ತಿರಲಿ ಎಂದು ಸಿಯೋಭನ್‌ ಹೇಳಿದ್ದಾಳೆ.
First published: May 3, 2021, 2:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories