• Home
  • »
  • News
  • »
  • trend
  • »
  • Viral Video: ಫ್ರೈಡ್ ಚಿಕನ್ ಆರ್ಡರ್ ಮಾಡಿದ್ರೆ ಫ್ರೈ ಆದ ಟವೆಲ್ ಬಂತು!; ಫುಡ್ ಡೆಲಿವರಿ ಎಡವಟ್ಟಿನ ವಿಡಿಯೋ ವೈರಲ್

Viral Video: ಫ್ರೈಡ್ ಚಿಕನ್ ಆರ್ಡರ್ ಮಾಡಿದ್ರೆ ಫ್ರೈ ಆದ ಟವೆಲ್ ಬಂತು!; ಫುಡ್ ಡೆಲಿವರಿ ಎಡವಟ್ಟಿನ ವಿಡಿಯೋ ವೈರಲ್

ಚಿಕನ್ ಬದಲಾಗಿ ಸಿಕ್ಕಿದ ಫ್ರೈಡ್ ಟವೆಲ್

ಚಿಕನ್ ಬದಲಾಗಿ ಸಿಕ್ಕಿದ ಫ್ರೈಡ್ ಟವೆಲ್

ಅಲಿಕ್ ಫೆರೇಜ್ ಎಂಬ ಮಹಿಳೆ ಡೀಪ್ ಫ್ರೈಡ್ ಚಿಕನ್ ಆರ್ಡರ್ ಮಾಡಿದ್ದಳು. ಆದರೆ, ಆಕೆ ಸೇರಿದ್ದ ಬಾಕ್ಸ್​ನಲ್ಲಿದ್ದುದು ಫ್ರೈ ಮಾಡಲಾದ ಹ್ಯಾಂಡ್ ಟವೆಲ್!

  • Share this:

ಈ ಆನ್​ಲೈನ್​ನಲ್ಲಿ ಏನನ್ನಾದರೂ ಆರ್ಡರ್ ಮಾಡುವಾಗ ಎಷ್ಟು ಎಚ್ಚರವಾಗಿದ್ದರೂ ಸಾಲದು. ಬಟ್ಟೆ, ಚಪ್ಪಲಿ, ಎಲೆಕ್ಟ್ರಾನಿಕ್ ವಸ್ತುಗಳು ಹೀಗೆ ಯಾವುದೇ ಆಗಲಿ ಸುಂದರವಾದ ಫೋಟೋ ಹಾಕಿ ಯಾಮಾರಿಸುವ ವೆಬ್​ಸೈಟ್​ಗಳು ಬೇಕಾದಷ್ಟಿವೆ. ಆದರೆ, ತಿನ್ನೂ ಊಟದಲ್ಲೂ ಇದೇ ರೀತಿ ಯಾಮಾರಿಸಿದರೆ ಹಸಿದು ಊಟ ಆರ್ಡರ್ ಮಾಡಿದವರ ಕತೆ ಏನಾಗಬೇಡ?! ಚಿಕನ್ ತಿನ್ನಬೇಕೆನಿಸಿ ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ ಮಹಿಳೆ ಡೆಲಿವರಿ ಬಾಯ್ ತಂದುಕೊಟ್ಟ ಬಾಕ್ಸ್ ತೆರೆದು ನೋಡಿದಾಗ ಶಾಕ್​ನಿಂದ ಮೂರ್ಛೆ ಹೋಗುವುದೊಂದೇ ಬಾಕಿ!


ಭಾರತದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಫೇಮಸ್ ಆಗಿರುವಂತೆ ಫಿಲಿಪ್ಪೀನ್ಸ್​ನಲ್ಲಿ ಫೇಮಸ್ ಆಗಿರುವ ಗ್ರಾಬ್ ಎಂಬ ಫಾಸ್ಟ್​ ಫುಡ್ ವೆಬ್​ಸೈಟ್​ನಲ್ಲಿ ಚಿಕನ್ ಆರ್ಡರ್ ಮಾಡಿದ್ದ ಮಹಿಳೆ ಸರಿಯಾಗೇ ಟೋಪಿ ಹಾಕಿಸಿಕೊಂಡಿದ್ದಾಳೆ. ಚಿಕನ್ ಬದಲಾಗಿ ಫ್ರೈ ಮಾಡಲಾದ ಟವೆಲ್ ಅನ್ನು ಕಳುಹಿಸಿದ ವಿಡಿಯೋವನ್ನು ಆಕೆ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾಳೆ.




ಅಲಿಕ್ ಫೆರೇಜ್ ಎಂಬ ಮಹಿಳೆ ಡೀಪ್ ಫ್ರೈಡ್ ಚಿಕನ್ ಅನ್ನು ಆರ್ಡರ್ ಮಾಡಿದ್ದಳು. ಆದರೆ, ಆಕೆ ಸೇರಿದ್ದ ಬಾಕ್ಸ್​ನಲ್ಲಿದ್ದುದು ಫ್ರೈ ಮಾಡಲಾದ ಹ್ಯಾಂಡ್ ಟವೆಲ್! ಮಧ್ಯಾಹ್ನದ ಊಟಕ್ಕೆ ಫ್ರೈಡ್ ಚಿಕನ್ ಆರ್ಡರ್ ಮಾಡಿದ್ದೆ. ಆದರೆ, ನನಗೆ ಸಿಕ್ಕಿದ್ದು ಏನೆಂದು ನೀವೇ ನೋಡಿ ಎಂದು ಆಕೆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾಳೆ.


ಇದನ್ನೂ ಓದಿ: Bangalore: ಬೆಂಗಳೂರಿನ ಪಿಜಿಗಳಿಗೆ ವಾಪಾಸ್ ಹೊರಟಿದ್ದೀರಾ?; 8 ಸಾವಿರ ಪಿಜಿಗಳೇ ಕ್ಲೋಸ್!


ಡೆಲಿವರಿ ಬಾಯ್ ಕೊಟ್ಟು ಹೋದ ಚಿಕನ್ ಅನ್ನು ಟೇಸ್ಟ್ ಮಾಡಲು ಕಚ್ಚಿದಾಗ ಅದು ತುಂಬ ಗಟ್ಟಿಯಾಗಿತ್ತು. ಹಾಗಾಗಿ, ಕೈಯಿಂದ ಚಿಕನ್ ತುಂಡನ್ನು ಬಿಡಿಸಿ ನೋಡಿದೆ. ಅದರೊಳಗೆ ಹ್ಯಾಂಡ್ ಟವೆಲ್ ಇತ್ತು! ಹ್ಯಾಂಡ್ ಟವೆಲ್ ಅನ್ನು ಹಿಟ್ಟಿನಲ್ಲಿ ಅದ್ದಿ ರೋಸ್ಟ್ ಮಾಡಿ ಕಳುಹಿಸಲಾಗಿತ್ತು. ಡೀಪ್ ಫ್ರೈ ಆದ ಚಿಕನ್ ಬದಲಾಗಿ ಡೀಪ್ ಫ್ರೈ ಆಗಿರುವ ಟವೆಲ್ ಕಳುಹಿಸಲಾಗಿತ್ತು. ಇದರಿಂದ ನನಗೆ ಬಹಳ ಕೋಪ ಉಂಟಾಯಿತು. ಇದು ಆಕಸ್ಮಿಕವಾಗಿದ್ದು ಎಂದು ನಾನು ನಂಬಲು ತಯಾರಿಲ್ಲ. ಕಿಚನ್ ಒಳಗೆ ಆಕಸ್ಮಿಕವಾಗಿ ಟವೆಲ್ ಬಂದರೂ ಅದನ್ನು ಹೀಗೆ ಆಕಸ್ಮಿಕವಾಗಿ ಫ್ರೈ ಮಾಡಿ ಕಳುಹಿಸಲು ಸಾಧ್ಯವೇ? ಇದು ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯ ಎಂದು ಅಲಿಕ್ ಫೆರೇಜ್ ಫುಡ್ ಡೆಲಿವರಿ ಕಂಪನಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾಳೆ.




ಈ ಫ್ರೈಡ್ ಟವೆಲ್ ವಿಡಿಯೋ 27 ಲಕ್ಷ ಬಾರಿ ವೀಕ್ಷಿಸಲ್ಪಟ್ಟಿದೆ. ಈ ಘಟನೆಗೆ ಆ ಫುಡ್ ಡೆಲಿವರಿ ಕಂಪನಿ ಕ್ಷಮೆಯನ್ನೂ ಕೇಳಿದೆ.

Published by:Sushma Chakre
First published: