Viral Video: ಗ್ರಾಹಕರನ್ನು ವಿಚಿತ್ರವಾಗಿ ಕರೆದ ಕಲ್ಲಂಗಡಿ ವ್ಯಾಪಾರಿಯ ವಿಡಿಯೋ ವೈರಲ್

ಈ ವಿಡಿಯೋ ನೋಡಿದ ನೆಟ್ಟಿಗರು ಈ ಕಲ್ಲಂಗಡಿ ವ್ಯಾಪಾರಿ ಗ್ರಾಹಕರನ್ನು ಕರೆಯುತ್ತಿದ್ದಾನೆಯೇ ಅಥವಾ ಹೆದರಿಸುತ್ತಿದ್ದಾನೆಯೇ? ಇದೊಂದು ಹಾಸ್ಯ ಅನ್ನೋದಕ್ಕಿಂತ ವಿಚಿತ್ರ ವಿಡಿಯೋ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಕಲ್ಲಂಗಡಿ ವ್ಯಾಪಾರಿ

ಕಲ್ಲಂಗಡಿ ವ್ಯಾಪಾರಿ

  • Share this:
ವಿಶೇಷವಾಗಿ ಕಡಲೆಕಾಯಿ ಬೀಜ (ಶೇಂಗಾ) ಮಾರುವ ಭುವನ್ ಬದ್ಯಾಕರ್ (Kachcha Badam Fame Bhuban Badyakar) ಇಂದು ಎಲ್ಲರಿಗೂ ಪರಿಚಯ. ಭುವನ್ ಬದ್ಯಾಕರ್ ಕಚ್ಚಾ ಬದಾಮ್ ಗೆ ಸ್ಟಾರ್ ನಟರಿಂದ ಹಿಡಿದು ಸಾಮಾನ್ಯ ಮಕ್ಕಳು ಸಹ ರೀಲ್ಸ್ (Reels) ಮಾಡಿದ್ದಾರೆ. ಇತ್ತೀಚೆಗೆ ಬಾಲಿವುಡ್ ಸ್ಟಾರ್ ಗಳಾದ ಮಾಧುರಿ ದೀಕ್ಷಿತ್ (Madhuri Dixit) ಮತ್ತು ರಿತೇಶ್ ದೇಶಮುಖ್ (Riteish Deshmukh) ಸಹ ಕಚ್ಚಾ ಬದಾಮ್ ಗೆ ಜೊತೆಯಾಗಿ ನಿಂತು ರೀಲ್ ಮಾಡಿದ್ರು. ಭುವನ್ ಬದ್ಯಾಕರ್ ರೀತಿಯಲ್ಲಿ ಹಲವು ಮಾರಾಟಗಾರರ ವಿಡಿಯೋ(Videos)ಗಳು ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗಿವೆ. ಇತ್ತೀಚೆಗೆ ಮಜ್ಜಿಗೆ, ದ್ರಾಕ್ಷಿ, ಸೀಬೆ ಹಣ್ಣು ಮಾರುವ ವ್ಯಾಪಾರಿಗಳ ವಿಡಿಯೋ (Fruit Sellers Videos) ನೆಟ್ಟಿಗರನ್ನು ಸೆಳೆದಿದ್ದವು. ಇವರ ಗ್ರಾಹಕರನ್ನು ಕರೆಯುವ ಜಿಂಗಲ್ ಕೇಳುಗರಿಗೆ ಇಷ್ಟವಾಗಿತ್ತು. ಆದ್ರೆ ಕಳೆದ ಎರಡ್ಮೂರು ದಿನಗಳಿಂದ ಕಲ್ಲಂಗಡಿ ವ್ಯಾಪಾರಿಯ ವಿಡಿಯೋ (Watermen seller Funny Video) ಹರಿದಾಡುತ್ತಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಈ ಕಲ್ಲಂಗಡಿ ವ್ಯಾಪಾರಿ ಗ್ರಾಹಕರನ್ನು ಕರೆಯುತ್ತಿದ್ದಾನೆಯೇ ಅಥವಾ ಹೆದರಿಸುತ್ತಿದ್ದಾನೆಯೇ? ಇದೊಂದು ಹಾಸ್ಯ ಅನ್ನೋದಕ್ಕಿಂತ ವಿಚಿತ್ರ ವಿಡಿಯೋ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಈ ಕಲ್ಲಂಗಡಿ ವ್ಯಾಪಾರಿ ಜನರನ್ನು ನಗಿಸಲು ತನ್ನ ಮುಖದ ಭಾವವನ್ನು ವಿಚಿತ್ರವಾಗಿ ತೋರಿಸಿದ್ದಾನೆ. ಈ ವ್ಯಾಪಾರಿ ಕಲ್ಲಂಗಡಿ ಮಾರಾಟ ಮಾಡುವ ಪರಿಯನ್ನು ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋವನ್ನು giedde ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. "Garmio ke lalam lal tarbuzzz" ಎಂಬ ಶೀರ್ಷಿಕೆ ಬರೆದು ಇನ್ ಸ್ಟಾದಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋಗೆ ಆರು ಸಾವಿರಕ್ಕೂಅಧಿಕ ಲೈಕ್ಸ್ ಬಂದಿವೆ.
View this post on Instagram


A post shared by GiDDa CoMpAnY (@giedde)


ಏನಿದು ವೈರಲ್ ವಿಡಿಯೋ..?

ರಸ್ತೆ ಬದಿ ಕಲ್ಲಂಗಡಿ ಮಾರುತ್ತಿರುವ ವ್ಯಕ್ತಿ ಹಣ್ಣನ್ನು ಎರಡು ಭಾಗಗಳಾಗಿ ಕತ್ತರಿಸುತ್ತಾನೆ. ನಂತರ ಎರಡೂ ತುಂಡುಗಳನ್ನು ಕೈಯಲ್ಲಿ ಹಿಡಿದುಕೊಂಡು ವಿಚಿತ್ರವಾಗಿ ಕೂಗುತ್ತಾ, ಒಂದು ಬಗೆಯಲ್ಲಿ ಕಣ್ಣು ಮತ್ತು ಮುಖ ಭಾವ ಬದಲಿಸುತ್ತಾ ಚೀರುತ್ತಾನೆ. ಈತನ ಮಾರಾಟ ಶೈಲಿ ಕಂಡು ಪಕ್ಕದಲ್ಲಿ ನಿಂತಿರುವ ಯುವಕ ನಗುತ್ತಿರೋದನ್ನು ಸಹ ವಿಡಿಯೋದಲ್ಲಿ ಗಮನಿಸಬಹುದು.

ಇದನ್ನೂ ಓದಿ:  Viral Video: ಕೇಳಿದ್ದು ಮೀನಿನ ಖಾದ್ಯ, ಕೊಟ್ಟಿದ್ದು ಜೀವಂತ ಮೀನು: ವೈರಲ್ ಆಗ್ತಿರೋ ವಿಡಿಯೋ ನೋಡಿ

ದ್ರಾಕ್ಷಿ ಮಾರಾಟಗಾರನ ವಿಡಿಯೋ ನೋಡಿ

ಈ ದ್ರಾಕ್ಷಿ ಮಾರಾಟಗಾರ (grapes Seller) ಗ್ರಾಹಕರನ್ನು (Customer)  ತಮ್ಮದೇ ಶೈಲಿಯಲ್ಲಿ ಕರೆದಿದ್ದಾರೆ. ಅಂದ್ರೆ ಪ್ರಾಸವಾಗಿ ಪದಗಳನ್ನು ಜೋಡಿ ಕ್ಷಣಾರ್ಧದಲ್ಲಿ ದ್ರಾಕ್ಷಿ ಖರೀದಿಸಿ ಎಂದು ಹೇಳುತ್ತಾರೆ. ಗ್ರಾಹಕರನ್ನು ಕರೆಯುವ ಇವರ ಶೈಲಿ ನೆಟ್ಟಿಗರಿಗೆ ಇಷ್ವವಾಗಿದ್ದು ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?

ರಸ್ತೆ ಬದಿ ನಿಲ್ಲಿಸಲಾಗಿರುವ ಬಂಡಿಯ ಮೇಲೆ ಓರ್ವ ವ್ಯಕ್ತಿ ದ್ರಾಕ್ಷಿ ಹಾಕಿಕೊಂಡಿದ್ದಾನೆ. ಕೈಯಲ್ಲಿ ಟೀ ಕಪ್ ಹಿಡಿದು ಜಿಂಗಲ್ ಹಾಡುತ್ತಾ ಗ್ರಾಹಕರಿಗೆ ದ್ರಾಕ್ಷಿ ಖರೀದಿಸುವಂತೆ ಹೇಳಿದ್ದಾರೆ. ಈ ಮಾರಾಟಗಾರ ಲೇಲೋ 15 ರೂಪಾಯಿಗೆ 12 ದ್ರಾಕ್ಷಿ ಎಂದು ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ನೆಟ್ಟಿಗರಿಗೆ ಇಷ್ಟವಾಯ್ತು ಇವರ ಧ್ವನಿ

ವ್ಯಕ್ತಿಯ ಪದಗಳ ಉಚ್ಛಾರಣೆ ಅಸ್ಪಷ್ಟವಾಗಿದ್ದರೂ ಕೇಳುಗರಿಗೆ ಅವರ ಧ್ವನಿ ಇಷ್ವವಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ರೂಪದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  Viral Video; ನ್ಯೂಯಾರ್ಕ್ ಬೀದಿಯಲ್ಲಿ ಲೆಹೆಂಗ ಧರಿಸಿ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿದ ಯುವಕ; ಯಾರು ಈ ಡ್ಯಾನ್ಸರ್?

ಇವರು ಒಬ್ಬ ಅತ್ಯುತ್ತಮ ದ್ರಾಕ್ಷಿ ಮಾರಾಟಗಾರ. ಇದು ಸಹ ಕಚ್ಚಾ ಬದಾಮ್ ರೀತಿಯಲ್ಲಿ ವೈರಲ್ ಆಗಲಿದೆ ಎಂದು ಕಮೆಂಟ್ ಮಾಡಿದ್ದಾರೆ. ಒಂದಿಷ್ಟು ಜನ ನಗುತ್ತಿರುವ, ಸೂಪರ್ ಮತ್ತು ಚಪ್ಪಾಳೆ ಹೊಡೆಯುತ್ತಿರುವ ಎಮೋಜಿಗಳನ್ನು ಹಾಕುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ
Published by:Mahmadrafik K
First published: