• Home
  • »
  • News
  • »
  • trend
  • »
  • Viral Video: ನಾಡ ಪಿಸ್ತೂಲ್​ನಿಂದ ಕೇಕ್ ಕತ್ತರಿಸಿ ಜೈಲು ಪಾಲಾದ ಗ್ರಾಮದ ಮುಖ್ಯಸ್ಥ-ಇದೆಲ್ಲಾ ಬೇಕಿತ್ತಾ?

Viral Video: ನಾಡ ಪಿಸ್ತೂಲ್​ನಿಂದ ಕೇಕ್ ಕತ್ತರಿಸಿ ಜೈಲು ಪಾಲಾದ ಗ್ರಾಮದ ಮುಖ್ಯಸ್ಥ-ಇದೆಲ್ಲಾ ಬೇಕಿತ್ತಾ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ತಮ್ಮ ಜನ್ಮದಿನದ ಕೇಕ್ ಅನ್ನು ಕತ್ತರಿಸಲು ಆಡುಮಾತಿನಲ್ಲಿ "ತಮಂಚಾ" ಎಂದು ಕರೆಯಲ್ಪಡುವ ನಾಡ ಪಿಸ್ತೂಲ್ ಅನ್ನು ಬಳಸಿದ್ದಾರೆ.

  • Share this:

ಕೆಲವರು ತಮ್ಮ ಹುಟ್ಟುಹಬ್ಬಕ್ಕೆ(Birthday), ಮದುವೆಗೆ ಮತ್ತು ಇನ್ನಿತರೆ ತಮ್ಮ ಸಂತೋಷದ ದಿನಗಳನ್ನು ತುಂಬಾನೇ ಜೋಶ್ ನಿಂದ ಆಚರಿಸಿಕೊಳ್ಳಲು ಹೋಗಿ ಅತಿಯಾದ ಉತ್ಸಾಹದಲ್ಲಿ ಎಡವಟ್ಟು ಮಾಡಿಕೊಂಡಿರುವುದನ್ನು ನಾವು ಅನೇಕ ಸಂದರ್ಭಗಳಲ್ಲಿ ನೋಡಿರುತ್ತೇವೆ. ಇಂತಹ ಎಡವಟ್ಟುಗಳಲ್ಲಿ ಈ ಅಕ್ರಮವಾಗಿ ಇಟ್ಟುಕೊಂಡಿರುವ ಆಯುಧಗಳಿಂದಲೇ(Weapons) ತುಂಬಾ ಎಡವಟ್ಟುಗಳಾಗುತ್ತವೆ ಅಂತ ಹೇಳಬಹುದು. ಕೆಲವರು ಈ ಮದುವೆ ಮೆರವಣಿಗೆಯಲ್ಲಿ ಕುದುರೆಯ(Horse) ಮೇಲೆ ಕುಳಿತು ಗಾಳಿಯಲ್ಲಿ ತಮ್ಮ ಬಳಿ ಇರುವಂತಹ ಪಿಸ್ತೂಲಿನಿಂದ ಗುಂಡು ಹಾರಿಸಿರುವುದನ್ನು ನಾವೆಲ್ಲಾ ಟಿವಿ ನ್ಯೂಸ್ ಗಳಲ್ಲಿ ನೋಡಿರುತ್ತೇವೆ.


ಕೆಲವೊಮ್ಮೆ ಈ ಚಿಕ್ಕಪುಟ್ಟ ಊರುಗಳಲ್ಲಿ ಇರುವ ಜನರು ತಮ್ಮ ನೆಚ್ಚಿನ ನಾಯಕನ ಅಥವಾ ಮುಖ್ಯಸ್ಥನ ಹುಟ್ಟುಹಬ್ಬವನ್ನು ತುಂಬಾನೇ ಅದ್ದೂರಿಯಾಗಿ ಆಚರಿಸಲು ಏನೆಲ್ಲಾ ಮಾಡುತ್ತಾರೆ ಅನ್ನೋದು ನಮಗೆ ಗೊತ್ತೇ ಇದೆ. ಇಲ್ಲಿಯೂ ಸಹ ಇಂತಹದೇ ಒಂದು ಎಡವಟ್ಟು ಮಾಡಿಕೊಂಡಿದ್ದಾರೆ ನೋಡಿ ಈ ಒಂದು ಗ್ರಾಮದ ಮುಖ್ಯಸ್ಥ.


ಹೇಗೆಲ್ಲಾ ಕೇಕ್ ಕತ್ತರಿಸಿದ್ದಾರೆ ನೋಡಿ ಈ ಊರಿನ ಮುಖ್ಯಸ್ಥ?


ತನ್ನ ಹುಟ್ಟುಹಬ್ಬದ ಆಚರಣೆಯನ್ನು ಫೇಸ್‌ಬುಕ್ ಲೈವ್ ನಲ್ಲಿ ಸ್ಟ್ರೀಮ್ ಮಾಡಿದ ಗ್ರಾಮದ ಮುಖ್ಯಸ್ಥರೊಬ್ಬರು ತಮ್ಮ ಬಳಿ ಇದ್ದಂತಹ ಅಕ್ರಮ ಪಿಸ್ತೂಲ್ ನಿಂದ ಹುಟ್ಟುಹಬ್ಬದ ಕೇಕ್ ಅನ್ನು ಕತ್ತರಿಸಿದ ಆರೋಪದ ಮೇಲೆ ಬುಧವಾರ ಜೈಲಿಗೆ ಹೋದರು.


ಮಧ್ಯಪ್ರದೇಶ ರಾಜ್ಯದ ಭಿಂಡ್ ಜಿಲ್ಲೆಯ ಗೋನಾ ಪಂಚಾಯತ್ ನ ಸರಪಂಚ್ ರಾಜು ಭಡೋರಿಯಾ ಅವರು ವಿಶಿಷ್ಟವಾದ ಚಂಬಲ್ ಶೈಲಿಯ ಆಚರಣೆಯನ್ನು ತಮ್ಮ ಹುಟ್ಟುಹಬ್ಬದಂದು ಅನುಕರಣೆ ಮಾಡಲು ಹೋಗಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ಅವರು ತಮ್ಮ ಜನ್ಮದಿನದ ಕೇಕ್ ಅನ್ನು ಕತ್ತರಿಸಲು ಆಡುಮಾತಿನಲ್ಲಿ "ತಮಂಚಾ" ಎಂದು ಕರೆಯಲ್ಪಡುವ ನಾಡ ಪಿಸ್ತೂಲ್ ಅನ್ನು ಬಳಸಿದ್ದಾರೆ.


ಇದನ್ನೂ ಓದಿ: Viral Video: ‘ದಿಲ್ ತೋ ಪಾಗಲ್ ಹೈ’ ಎಂದು ಶಾರುಖ್ ಹಾಡಿಗೆ ಹೆಜ್ಜೆ ಹಾಕಿದ ವಿದೇಶಿ ಹುಡುಗರು! ಸಖತ್​ ಆಗಿದೆ ವಿಡಿಯೋ


ಪಿಸ್ತೂಲ್ ನಿಂದ ಕೇಕ್ ಕತ್ತರಿಸಿ ಜೈಲು ಪಾಲಾದ ರಾಜು


ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೋ ಜೋರಾಗಿ ಹರಿದಾಡಿ ವೈರಲ್ ಆದ ಸ್ವಲ್ಪ ಸಮಯದ ನಂತರ, ಪೊಲೀಸರು ಕಾರ್ಯಪ್ರವೃತ್ತರಾಗಿ ಈ ವಿಲಕ್ಷಣ ಫೇಸ್‌ಬುಕ್ ಲೈವ್ ನ ಘಟನೆಯಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಅಪರಾಧವನ್ನು ದಾಖಲಿಸಲಾಗಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅರವಿಂದ್ ಶಾ ಅವರು ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.


ಅಷ್ಟೇ ಅಲ್ಲದೆ ಅಕ್ರಮ ಆಯುಧ ಮತ್ತು ಗ್ರಾಮದ ಮುಖ್ಯಸ್ಥರ ಬಳಿ ಪತ್ತೆಯಾದ ಎರಡು ಕಾಟ್ರಿಡ್ಜ್ ಗಳನ್ನು ಸಹ ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


ಈ ರೀತಿಯ ಘಟನೆ ನಡೆದಿರೋದು ಮೊದಲೇನಲ್ಲ..


2021 ರ ಜನವರಿಯಲ್ಲಿ ನಡೆದ ಇದೇ ರೀತಿಯ ಒಂದು ಘಟನೆಯಲ್ಲಿ, ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಇಬ್ಬರು ಪುರುಷರು ನಾಡ ಪಿಸ್ತೂಲ್ ನಿಂದ ತಮ್ಮ ಹುಟ್ಟುಹಬ್ಬದ ಕೇಕ್ ಕತ್ತರಿಸಿದ ನಂತರ ಅವಾಂತರಕ್ಕೆ ಸಿಲುಕಿದ್ದರು. ಆರೋಪಿಗಳನ್ನು ಶಹನವಾಜ್ ಮತ್ತು ಶಕೀಬ್ ಎಂದು ಗುರುತಿಸಲಾಗಿದ್ದು, ಅವರ ಸ್ನೇಹಿತರು 20 ಸೆಕೆಂಡುಗಳ ವೀಡಿಯೋದಲ್ಲಿ ಅವರನ್ನು ಈ ಕೆಲಸಕ್ಕೆ ಹುರಿದುಂಬಿಸಿದ್ದನ್ನು ನೋಡಬಹುದಾಗಿತ್ತು.


ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಅಕ್ರಮ ಪಿಸ್ತೂಲಿನಿಂದ ಹುಟ್ಟುಹಬ್ಬದ ಕೇಕ್ ಕತ್ತರಿಸುವುದನ್ನು ತೋರಿಸುವ ವೈರಲ್ ವೀಡಿಯೋಗೆ ಸಂಬಂಧಿಸಿದಂತೆ, ಹಾಪುರ್ ನಗರ ಪೊಲೀಸ್ ಠಾಣೆ ತ್ವರಿತ ಕ್ರಮ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿತ್ತು. ಅವರ ಬಳಿಯಿಂದ ಕೇಕ್ ಕತ್ತರಿಸಲು ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಾಪುರ್ ಪೊಲೀಸರು ನಂತರ ಟ್ವೀಟ್ ಮಾಡಿ ತಿಳಿಸಿದ್ದಾರೆ.


ಇದನ್ನೂ ಓದಿ: Groom Busy in Work: ಮದುವೆ ದಿನವೂ ಲ್ಯಾಪ್ ಟಾಪ್ ಹಿಡಿದು ಕೆಲಸ ಮಾಡಿದ ವರ!


ಹೀಗೆ ಜನರು ಕೆಲವೊಮ್ಮೆ ಸಂಭ್ರಮಾಚರಣೆಯನ್ನು ತುಂಬಾ ವಿಭಿನ್ನವಾಗಿ ಮತ್ತು ಅತಿ ಉತ್ಸಾಹದಲ್ಲಿ ಆಚರಿಸಿಕೊಳ್ಳಲು ಹೋಗಿ, ಕಾನೂನಿನ ನಿಯಮಗಳನ್ನು ಗಾಳಿಗೆ ತೂರುವುದರಿಂದ ಈ ರೀತಿಯ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾರೆ ಅಂತ ಹೇಳಬಹುದು.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು