ತರಕಾರಿ ಮಾರುಕಟ್ಟೆಯಲ್ಲಿ(Vegetables Market) ತಾಜಾತನದಿಂದ ಲಕಲಕ ಹೊಳೆಯುವ ಬಣ್ಣ ಬಣ್ಣದ ಸೊಪ್ಪು ತರಕಾರಿಗಳು, ನಿಜಕ್ಕೂ ತಾಜಾ ಮತ್ತು ಆರೋಗ್ಯಪೂರ್ಣ(Health) ಆಗಿರುತ್ತವೆಯೇ..? ನಿಮ್ಮ ಉತ್ತರ ಹೌದು ಎಂದಾದರೆ, ನೀವು ಮಧ್ಯ ಪ್ರದೇಶದ(Madhyapradesh) ತರಕಾರಿ ಮಾರುಕಟ್ಟೆಯೊಂದರ ವಿಡಿಯೋ ನೋಡಲೇಬೇಕು. ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ(Social Media) ಸಿಕ್ಕಾಪಟ್ಟೆ ವೈರಲ್ ಆಗಿರುವ ಆ ವಿಡಿಯೋವನ್ನು ಕಂಡು ನೆಟ್ಟಿಗರು ದಂಗಾಗಿದ್ದಾರೆ. ರಸ್ತೆ ಬದಿ ತರಕಾರಿ ವ್ಯಾಪಾರಿಯೊಬ್ಬ, ಕೊತ್ತಂಬರಿ ಸೊಪ್ಪಿನ ಕಟ್ಟುಗಳನ್ನು ಚರಂಡಿ ನೀರಿನಲ್ಲಿ ತೊಳೆಯುವ ದೃಶ್ಯ ಆ ವಿಡಿಯೋದಲ್ಲಿದೆ.
ದಾರಿಹೋಕರೊಬ್ಬರು ಆ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಆ ತರಕಾರಿ ವ್ಯಾಪಾರಿ , ಕೊತ್ತಂಬರಿ ಸೊಪ್ಪಿನ ಕಟ್ಟುಗಳನ್ನು ಗ್ರಾಹಕರ ಮುಂದೆ ಮಾರಾಟಕ್ಕೆ ಇಡುವ ಮುನ್ನ , ಅದನ್ನು ಅಲ್ಲೇ ರಸ್ತೆ ಬದಿಯಲ್ಲಿ ಸಂಗ್ರಹವಾಗಿರುವ ಚರಂಡಿ ನೀರಿನಲ್ಲಿ ತೊಳೆಯುತ್ತಿರುವ ದೃಶ್ಯವನ್ನು ನೋಡಿದ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.
सावाधान देखिए आपकी सेहत से कैसे हो रहा खिलवाड़, कंही पर ऐसी सब्जी तो नही खरीद रहे ,भोपाल के सिंधी कॉलोनी में नाली के पानी से धुक रही सब्जी @bhupendrasingho जी @CollectorBhopal @digpolicebhopal मामले पर संज्ञान लेकर उचित कार्यवाही का आग्रह है , @KamalPatelBJP @DrPRChoudhary pic.twitter.com/10Em39YxPz
— sudhirdandotiya (@sudhirdandotiya) October 26, 2021
ಇದು ಮಧ್ಯಪ್ರದೇಶದ ಭೋಪಾಲಕ್ಕೆ ಸಂಬಂಧಿಸಿದ ವಿಡಿಯೋವಾಗಿದ್ದು, ಸುಧೀರ್ ದಂಡೋತಿಯಾ ಎಂಬುವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅವರು, ಡಿಸ್ಟ್ರಿಕ್ಟ್ ಕಲೆಕ್ಟರ್ ಮತ್ತು ಪೊಲೀಸ್ ಡಿಐಜಿ ಖಾತೆಗಳು ಸೇರಿದಂತೆ ಪ್ರಮುಖ ಟ್ವಿಟ್ಟರ್ ಖಾತೆಗಳನ್ನು ಟ್ಯಾಗ್ ಮಾಡಿದ್ದಾರೆ.
ಆ ವಿಡಿಯೋದಲ್ಲಿ ತರಕಾರಿ ವ್ಯಾಪಾರಿಯೊಬ್ಬ ಕೊತ್ತಂಬರಿ ಸೊಪ್ಪನ್ನು ಚರಂಡಿ ನೀರಿನಲ್ಲಿ ತೊಳೆಯುತ್ತಿರುವ ದೃಶ್ಯವಿದೆ. ಕ್ಯಾಮರಾ ಹಿಂದಿರುವ ವ್ಯಕ್ತಿ ಹಾಗೆ ಮಾಡದಂತೆ ಅವನಿಗೆ ಹೇಳಿದರೂ, ಆತ ಕೇಳುವುದಿಲ್ಲ. ಆ ವ್ಯಕ್ತಿ ಕ್ಯಾಮರಾದ ಹಿಂದಿರುವ ವ್ಯಕ್ತಿಯ ಮಾತನ್ನು ನಿರ್ಲಕ್ಷಿಸಿ, ತನ್ನ ಕೆಲಸ ಮುಂದುವರೆಸುತ್ತಾನೆ. ಈ ವಿಡಿಯೋವನ್ನು ನೋಡಿದ ಭೋಪಾಲ್ ಜಿಲ್ಲಾಧಿಕಾರಿಯವರು, ಆ ತರಕಾರಿ ವ್ಯಾಪಾರಿ ಯಾರೆಂದು ಪತ್ತೆ ಹಚ್ಚಿ, ಈ ಪ್ರಕರಣದ ಕುರಿತು ತನಿಖೆ ನಡೆಸುವಂತೆ , ಮಹಾನಗರ ಪಾಲಿಕೆ , ಆಹಾರ ಇಲಾಖೆ ಮತ್ತು ಪೊಲೀಸರಿಗೆ ಆದೇಶ ನೀಡಿದ್ದಾರೆ.
ಇದನ್ನೂ ಓದಿ:CM ಪ್ರೇಮಾ ಖಂಡು ಭೇಟಿ ವೇಳೆ ತಮ್ಮ ರೆಜಿಮೆಂಟಲ್ ಹಾಡನ್ನು ಪ್ರದರ್ಶಿಸಿದ ಅರುಣಾಚಲದ ಯೋಧರು
ಸುಧೀರ್ ದಂಡೋತಿಯಾ ಟ್ವಿಟ್ಟರ್ ಖಾತೆಯಲ್ಲಿರುವ ಸಂದೇಶ ಹೀಗಿದೆ : ಎಚ್ಚರಿಕೆ, ನೋಡಿ ನಿಮ್ಮ ಆರೋಗ್ಯದ ಜೊತೆ ಹೇಗೆ ಆಟವಾಡುತ್ತಿದ್ದಾರೆ. ಎಲ್ಲಾದರೂ ಇಂತಹ ತರಕಾರಿಯನ್ನೇನಾದರೂ ಕೊಳ್ಳುತ್ತಿಲ್ಲವಷ್ಟೆ, ಭೋಪಾಲದ ಸಿಂಧಿ ಕಾಲೋನಿಯಲ್ಲಿ ತೊಳೆಯಲ್ಪಟ್ಟ ತರಕಾರಿ, ಈ ವಿಷಯದ ಬಗ್ಗೆ ಆವಶ್ಯಕ ತನಿಖೆ ಆಗಬೇಕೆಂದು ಆಗ್ರಹಿಸುತ್ತೇನೆ.
ಜಿಲ್ಲಾಡಳಿತ ಈ ವಿಡಿಯೋದಲ್ಲಿರುವ ಸಂಗತಿಯ ಬಗ್ಗೆ ಕ್ರಮ ಕೈಗೊಂಡಿದ್ದು, ವಿಡಿಯೋದಲ್ಲಿ ಚರಂಡಿ ನೀರಿನಲ್ಲಿ ತರಕಾರಿ ತೊಳೆಯುತ್ತಿರುವ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದೆ.
ವ್ಯಾಪಾರಿ ವಿರುದ್ಧ ಪ್ರಕರಣ ದಾಖಲು
ಆಹಾರ ಇಲಾಖೆಯು ಆ ತರಕಾರಿ ವ್ಯಾಪಾರಿಯ ಮೇಲೆ ನಗರದ ಹನುಮಾನ್ ಗಂಜ್ ಪೊಲೀಸ್ ಸ್ಟೇಶನ್ನಲ್ಲಿ ಎಫ್ಐಆರ್ ದಾಖಲಿಸಿದೆ. ಪೊಲೀಸ್ ಠಾಣೆಯ SHO (ಸ್ಟೇಶನ್ ಹೌಸ್ ಆಫೀಸರ್) ಪ್ರಕಾರ, ಈ ವಿಡಿಯೋದಲ್ಲಿರುವ ವ್ಯಕ್ತಿ ,ನಗರದ ನವ್ಬಹಾರ್ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರುತ್ತಾನೆ.
ಇದನ್ನೂ ಓದಿ: ಏರ್ ಇಂಡಿಯಾಗೆ ತಕ್ಷಣ ಎಲ್ಲಾ ಬಾಕಿಗಳನ್ನು ಕ್ಲಿಯರ್ ಮಾಡಿ- ಹಣಕಾಸು ಸಚಿವಾಲಯ ಆದೇಶ
ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿರುವುದೇನೆಂದರೆ, ಆ ವ್ಯಕ್ತಿ ತನ್ನ ಮನೆಯಿಂದ ಪರಾರಿ ಆಗಿದ್ದಾನೆ ಮತ್ತು ಆತನ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. “ಆತನ ವಿಳಾಸವನ್ನು ಪತ್ತೆ ಹಚ್ಚಲಾಗಿದೆ , ಆದರೆ ಆತ ಮನೆಯಲ್ಲಿ ಸಿಗಲಿಲ್ಲ ಮತ್ತು ಶೀಘ್ರದಲ್ಲೇ ಅವನ್ನು ಬಂಧಿಸಲಾಗುವುದು” ಎಂದು ಪೊಲೀಸರು ಹೇಳಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ