• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ವರನಿಗೆ ಹಾರ ಹಾಕಲು ಒದ್ದಾಡಿದ ಮದುಮಗಳು; ಈ ವಿಡಿಯೋ ನೋಡಿದ್ರೆ ನಗೋದು ಗ್ಯಾರಂಟಿ!

Viral Video: ವರನಿಗೆ ಹಾರ ಹಾಕಲು ಒದ್ದಾಡಿದ ಮದುಮಗಳು; ಈ ವಿಡಿಯೋ ನೋಡಿದ್ರೆ ನಗೋದು ಗ್ಯಾರಂಟಿ!

ಮದುಮಕ್ಕಳ ಹಾರ ಸಿಕ್ಕಿಹಾಕಿಕೊಂಡ ದೃಶ್ಯ

ಮದುಮಕ್ಕಳ ಹಾರ ಸಿಕ್ಕಿಹಾಕಿಕೊಂಡ ದೃಶ್ಯ

ವಧು-ವರರು ಹಾರವನ್ನು ವಿನಿಮಯ ಮಾಡಿಕೊಳ್ಳುವ ನಗು ತರಿಸುವ ವಿಡಿಯೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.

  • Share this:

ಮೊದಲೆಲ್ಲ ಮದುವೆಯ ವಿಡಿಯೋಗಳನ್ನು ಕುಟುಂಬಸ್ಥರು ಮಾತ್ರ ನೋಡುತ್ತಿದ್ದರು. ಆದರೀಗ ಇಂಟರ್‌ನೆಟ್‌ ಯುಗ. ಎಲ್ಲವೂ ಸಾಮಾಜಿಕ ಜಾಲತಾಣದಲ್ಲೇ ಸಿಗುತ್ತದೆ. ಮದುವೆಯ ವಿಡಿಯೋಗಳಲ್ಲೇ ಅನೇಕ ತಮಾಷೆಯ ಹಾಗೂ ಮುಜುಗರನ ಸನ್ನಿವೇಶಗಳು ಒಮ್ಮೊಮ್ಮೆ ನಡೆಯುತ್ತಿರುತ್ತದೆ. ಇಂತಹ ವಿಡಿಯೋಗಳು ಸಹ ಕೆಲ ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುತ್ತದೆ. ಇದೇ ರೀತಿ, ಇತ್ತೀಚೆಗೆ ವಧು-ವರರು ಹಾರವನ್ನು ಅಥವಾ ವರಮಾಲೆಯನ್ನು ವಿನಿಮಯ ಮಾಡಿಕೊಳ್ಳುವ ನಗು ತರಿಸುವ ವಿಡಿಯೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. ವರಮಾಲೆ ವರನಿಗೆ ಸಿಕ್ಕಿಹಾಕಿಕೊಂಡು, ಇದು ಮುಜುಗರದ ಮತ್ತು ತಮಾಷೆಯ ಪರಿಸ್ಥಿತಿಗೆ ಕಾರಣವಾಯಿತು.


ಮದುವೆಯ ಸಮಾರಂಭದಲ್ಲಿ ಸ್ಟೇಜ್‌ ಮೇಲೆ ವಧು ಮತ್ತು ವರರು ಹಾರ ಬದಲಾಯಿಸಲು ವೇದಿಕೆಯಲ್ಲಿ ನಿಂತಿರುವುದನ್ನು ವಿಡಿಯೋ ತೋರಿಸುತ್ತದೆ. ವರನ ಕುತ್ತಿಗೆಗೆ ಹಾರವನ್ನು ಹಾಕಲು ವಧು ತನ್ನ ಕೈಯನ್ನು ಎತ್ತಿದ ತಕ್ಷಣ, ವರ ಸಹ ವಧುವಿಗೆ ಹಾರ ಹಾಕಲು ಹೋಗುತ್ತಾನೆ. ಅದರಿಂದ ಎರಡೂ ಹಾರಗಳು ಸಿಲುಕಿಕೊಳ್ಳುತ್ತದೆ. ಅಲ್ಲದೆ, ವರನ ತಲೆಯ ಮೇಲೆ ಸಿಲುಕಿಕೊಳ್ಳುತ್ತದೆ.






ವಧು ಆ ಹಾರಗಳನ್ನು ಬೇರ್ಪಡಿಸಲು ಪ್ರಯತ್ನಿಸುತ್ತಾಳೆ. ಅದರೆ, ವರನ ಹಾಗೆ ಆಕೆಗೂ ತಲೆ ಕೆಟ್ಟು ಹೋಗುತ್ತದೆ. ಹಾರ ತೆಗೆಯುವುದು ಗೊತ್ತಾಗುವುದೇ ಇಲ್ಲ. ಬಳಿಕ ಇಬ್ಬರು ವ್ಯಕ್ತಿಗಳು ಮಧ್ಯ ಪ್ರವೇಶಿಸಿ ಆ ಹಾರವನ್ನು ಬೇರ್ಪಡಿಸಿದ್ದಾರೆ.


ವೈರಲ್ ವಿಡಿಯೋವನ್ನು ಇಲ್ಲಿ ನೋಡಿ:


ಈ ವಿಡಿಯೋ ಬಹಳ ವೇಗವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, 3.6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 9,300ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಈ ವಿಡಿಯೋ ನೋಡಿದ ನಂತರ ನೆಟ್ಟಿಗರು ನಾನಾ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Murder News: ಪ್ರೇಯಸಿಯನ್ನು ಕೊಂದು ಅಡುಗೆಮನೆಯಲ್ಲೇ ಸಮಾಧಿ; ಪೇಂಟಿಂಗ್​ನಿಂದ ಬಯಲಾಯ್ತು ಕೊಲೆ ರಹಸ್ಯ!

ಈ ಹಿಂದೆಯೂ ಇಂತಹ ನಾನಾ ವಿಡಿಯೋಗಳು ವೈರಲ್‌ ಆಗಿವೆ. ವರಮಾಲೆ ಸಮಾರಂಭದಲ್ಲಿ ಕಪಾಳಮೋಕ್ಷ ಮಾಡುವ ವಿಡಿಯೋ ವೈರಲ್ ಆಗಿತ್ತು. ಹಾರವನ್ನು ವಿನಿಮಯ ಮಾಡಿಕೊಳ್ಳುವ ಮೊದಲು ಒಬ್ಬ ವ್ಯಕ್ತಿಯು ವರನನ್ನು ಎತ್ತುವುದನ್ನು ವಿಡಿಯೋ ತೋರಿಸಿದೆ. ಆಗ ವಧುವಿನ ಹಿಂದೆ ನಿಂತಿದ್ದ ಇನ್ನೊಬ್ಬ ವ್ಯಕ್ತಿ ಅವಳಿಗೆ ಮಾಹಿತಿ ನೀಡದೆ ವಧುವನ್ನೂ ಎತ್ತಿದ. ಹೂಮಾಲೆ ವಿನಿಮಯದ ನಂತರ ವಧು ಮತ್ತೆ ನೆಲದ ಮೇಲೆ ಕಾಲಿಟ್ಟಾಗ, ತನ್ನನ್ನು ಎತ್ತಿದ ವ್ಯಕ್ತಿಗೆ ಆಕೆ ಜೋರಾಗಿ ಕಪಾಳಕ್ಕೆ ಹೊಡೆದಳು.


ಮತ್ತೊಂದು ಘಟನೆಯಲ್ಲಿ, ಬಿಹಾರದ ವರನೊಬ್ಬ ತನ್ನ ವಧುವಿನೊಂದಿಗೆ ಹಾರವನ್ನು ವಿನಿಮಯ ಮಾಡಿಕೊಳ್ಳುವ ಮೊದಲು ಭಗವಾನ್ ರಾಮ ಸೀತೆಯ ಸ್ವಯಂವರದಲ್ಲಿ ಮಾಡಿದಂತೆ ಬಿಲ್ಲನ್ನು ಮುರಿದನು. ಸರನ್ ಜಿಲ್ಲೆಯ ಸೋನ್‌ಪುರ ಬ್ಲಾಕ್‌ನ ಸಬಲ್‌ಪುರ ಪೂರ್ವ ಪ್ರದೇಶದಲ್ಲಿ ವಿವಾಹ ವಿಧಿವಿಧಾನವನ್ನು ಆಯೋಜಿಸಲಾಗಿತ್ತು. ವರನು ಮೊದಲು ವೇದಿಕೆಯ ಮೇಲೆ ಮಡಿಸಿದ ಕೈಗಳಿಂದ ಶಿವನನ್ನು ಪ್ರಾರ್ಥಿಸಿದನು. ನಂತರ ಬಿಲ್ಲು ಎತ್ತಿದನು. ವರನು ಧನುಷ್ ಅನ್ನು ಮುರಿದ ತಕ್ಷಣ, ವಿವಾಹಕ್ಕೆ ಬಂದಿದ್ದ ಅತಿಥಿಗಳು ಶ್ಲಾಘಿಸಿದರು ಮತ್ತು ಹುರಿದುಂಬಿಸಿದರು. ಅಂತಿಮವಾಗಿ, ವರಮಾಲೆ ಸಮಾರಂಭಕ್ಕಾಗಿ ವಧುವನ್ನು ವೇದಿಕೆಯ ಮೇಲೆ ಕರೆಸಲಾಯಿತು.


top videos
    First published: