ಅಮೆರಿಕದಲ್ಲೂ ವೈರಲ್ ಆಯಿತು ಅಂಕಲ್ ಡ್ಯಾನ್ಸ್​

news18
Updated:June 3, 2018, 4:35 PM IST
ಅಮೆರಿಕದಲ್ಲೂ ವೈರಲ್ ಆಯಿತು ಅಂಕಲ್ ಡ್ಯಾನ್ಸ್​
news18
Updated: June 3, 2018, 4:35 PM IST
ನ್ಯೂಸ್ 18 ಕನ್ನಡ

ಇಂಗ್ಲಿಷ್​ನಲ್ಲಿ Dance like no one's watching ಎಂಬ ಮಾತೊಂದಿದೆ. ಇದರರ್ಥ ಯಾರೂ ನೋಡುತ್ತಿಲ್ಲವೆಂಬಂತೆ ನೃತ್ಯ ಮಾಡಿ ಎಂದು. ಒಂದೆರೆಡು ಸ್ಟೆಪ್ ಹಾಕಿ ಎಂದಾಗ ಭಯ ಅಥವಾ ನಾಚಿಕೆಯಿಂದ ಹಿಂದೆ ಸರಿಯುವವರೇ ಹೆಚ್ಚು. ತೆರೆಮರೆಯಲ್ಲಿ ಕೆಲವರು ಉತ್ತಮ ನೃತ್ಯಗಾರರಾಗಿದ್ದರೂ ನಾಚಿಕೆ ಸ್ವಭಾವದಿಂದ ಅವರ ಪ್ರತಿಭೆ ಹೊರ ಜಗತ್ತಿಗೆ ಗೊತ್ತಾಗುವುದೇ ಇಲ್ಲ. ಆದರೆ ಇದಕ್ಕೆಲ್ಲ ಅಪವಾದ ಎಂಬಂತೆ ಸಂಜೀವ್ ಶ್ರೀವಾತ್ಸವ್ ಡ್ಯಾನ್ಸ್ ಮಾಡಿ, ಸೋಷಿಯಲ್ ಮೀಡಿಯಾದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಮದುವೆ ಸಮಾರಂಭದಲ್ಲಿ ನಟ ಗೋವಿಂದ ಅಭಿನಯದ 'ಕುದ್​ಗರ್ಜ್' ಚಿತ್ರದ 'ಆಪ್ಕೆ ಆ ಜಾನೆ ಸೆ...'ಗೀತೆಗೆ ಸಂಜೀವ್ ಅವರು ಭರ್ಜರಿ ಡ್ಯಾನ್ಸ್​ ಮಾಡಿದ್ದರು. ಬೋಪಾಲ್ ಬಾಬಾ ರಿಸರ್ಚ್​ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ಸಂಜೀವ್ ಶ್ರೀವಾತ್ಸವ್ ಅವರಿಗೆ ನೃತ್ಯ ಮಾಡುವುದು ಹವ್ಯಾಸ. ಇಳಿವಯಸ್ಸಿನಲ್ಲೂ ಅವರು ಡ್ಯಾನ್ಸ್​ ಮಾಡಿರುವುದನ್ನು ನೋಡಿದರೆ Dance like no one's watching ಎಂಬ ಮಾತು ಅವರಿಗಾಗಿಯೇ ಹೇಳಿ ಮಾಡಿಸಿದಂತಿದೆ.


ಅವರ ನೃತ್ಯವು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ನ್ಯೂಸ್ 18 ಸಂಜೀವ್ ಅವರನ್ನು ಸಂಪರ್ಕಿಸಿತು. ನ್ಯೂಸ್​ 18ನಿಂದ ಕರೆ ಮಾಡಿದಾಗ ಫೋನ್ ಎತ್ತಿದ ಅವರ ಮಗ ನೀಡಿದ ಉತ್ತರ, 'ಪಪ್ಪಾ ಡ್ಯಾನ್ಸ್ ಮಾಡುತ್ತಿದ್ದಾರೆ' ಎಂದಾಗಿತ್ತು. ಇದರಲ್ಲೇ ಗೊತ್ತಾಗುತ್ತದೆ ಸಂಜೀವ್ ಶ್ರೀವಾತ್ಸವ್​ ಅವರ ಡ್ಯಾನ್ಸಿಂಗ್ ಕ್ರೇಜ್. ಸುತ್ತಮುತ್ತಲಿನ ಜನರಿಗೆ ಡಬ್ಬು ಎಂದರೆ ಚಿರಪರಿಚಿತರಾಗಿರುವ ಸಂಜೀವ್ ಶ್ರೀವಾತ್ಸವ್ ಸಮಯ ಸಿಕ್ಕಾಗೆಲ್ಲ ನೃತ್ಯಾಭ್ಯಾಸ ಮಾಡುತ್ತಾರಂತೆ.

ಆದರೆ ಅವರ ಪತ್ನಿಗೆ ಇದೆಲ್ಲ ಅಚ್ಚರಿಯ ವಿಷಯವೇನಲ್ಲ. ಕಾರಣ ಕೇಳಿದರೆ, ನಮ್ಮ ಮದುವೆ ಸಂದರ್ಭದಲ್ಲೂ ಅವರು ಭರ್ಜರಿ ಬ್ರೇಕ್ ಡ್ಯಾನ್ಸ್ ಮಾಡಿದ್ದರು ಎಂದು ಸ್ಮರಿಸುತ್ತಾರೆ ಅವರ ಪತ್ನಿ. ಸದ್ಯ ದೇಶ ವಿದೇಶಗಳಲ್ಲೂ ವೈರಲ್ ಆಗುತ್ತಿರುವ ಅಂಕಲ್ ಡ್ಯಾನ್ಸನ್ನು ಅಮೆರಿಕದ ದೀಪ್​ ಬ್ರಾರ್ ಎಂಬ ನೃತ್ಯಗಾರ್ತಿ ಕಾಪಿ ಮಾಡಿದ್ದಾರೆ.

ಈ ಡ್ಯಾನ್ಸಿಂಗ್ ವಿಡಿಯೋವನ್ನು ದೀಪ್  ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಕೂಡ ಸದ್ಯ ಸಖತ್ ವೈರಲ್ ಆಗುತ್ತಿದೆ. ವೃತ್ತಿಯಲ್ಲಿ ನೃತ್ಯಗಾರ್ತಿಯಾಗಿರುವ ಅಮೆರಿಕದ ದೀಪ್​ ಬ್ರಾರ್, ಸಂಜೀವ್ ಶ್ರೀವಾತ್ಸವ್ ಅವರು ಸ್ಟೆಪ್ಸ್​ಗೆ ಮಾರು ಹೋಗಿದ್ದಾರೆ. ಅಲ್ಲದೆ ನೃತ್ಯದಲ್ಲಿ ಡಬ್ಬು ಸೂಪರ್ ಸ್ಟಾರ್, ನಾನು ಅವರ ಅಭಿಮಾನಿಯಾದೆ ಎಂದು ಹೇಳಿದ್ದಾರೆ.
Loading...


ಅಂಕಲ್ ಡ್ಯಾನ್ಸ್​ ಸದ್ಯ ದೇಶ ವಿದೇಶಗಳಲ್ಲಿ ಸಖತ್ ವೈರಲ್ ಆಗಿದ್ದು, ಒಂದು ನೃತ್ಯದ ಮೂಲಕ ಸಂಜೀವ್ ಶ್ರೀವಾತ್ಸವ್ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ.
First published:June 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...