ಬೈಕ್ ನಲ್ಲಿ ಸ್ಟಂಟ್ ಮಾಡಿದ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಯುವತಿಯರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದು, ಬರೋಬ್ಬರಿ 28,000 ರೂಪಾಯಿ ದಂಡ ವಿಧಿಸಿದ್ದಾರೆ.
ಗಾಜಿಯಾಬಾದ್ ನಲ್ಲಿ ಯುವತಿಯರಿಬ್ಬರು ಬೈಕ್ ಸ್ಟಂಟ್ ಮಾಡಿದ ವಿಡಿಯೋಗಳು ಫುಲ್ ವೈರಲ್ ಆಗಿದ್ದವು. ಇದನ್ನು ಗಮನಿಸಿದ ಪೊಲೀಸರು, ಹೆಲ್ಮೆಟ್ ಧರಿಸದಿರುವುದು ಸೇರಿದಂತೆ ಹಲವಾರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ, ಸ್ಟಂಟ್ನ ಫೋಟೋದೊಂದಿಗೆ ದಂಡದ ರಶೀದಿಯನ್ನು ಇಬ್ಬರಿಗೂ ಕಳುಹಿಸಿದ್ದಾರೆ. ಫೋಟೋದಲ್ಲಿ ಒಂದೇ ರೀತಿಯ ಕೆಂಪು ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿ, ಸ್ನೇಹ ರಾಘುವಂಶಿ ಭುಜದ ಮೇಲೆ ಶಿವಾಂಗಿ ದಬಾಸ್ ಕುಳಿತಿದ್ದರು.
View this post on Instagram
ಇದನ್ನೂ ಓದಿ: Viral Video: ಸೆಲ್ಫಿ ತೆಗೆಯುತ್ತಿದ್ದ ಯುವತಿಗೆ ಡಿಕ್ಕಿ ಹೊಡೆದ ಮೇಕೆ!; ವೈರಲ್ ಆಯ್ತು ವಿಡಿಯೋ
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು, ಅಧಿಕಾರಿಗಳ ಅನುಮತಿಯಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಸಾಹಸ ಪ್ರದರ್ಶನ, ಸರಿಯಾದ ನಂಬರ್ ಪ್ಲೇಟ್ ಇಲ್ಲದೆ ಇರುವುದು ಮತ್ತು ಟ್ರಿಪಲ್ ರೈಡಿಂಗ್ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳಿಗೆ ಇಬ್ಬರು ಬೈಕ್ ಮಾಲೀಕರಿಗೆ ದಂಡದ ರಶೀದಿ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ಇದೀಗ ಈ ಪ್ರಕರಣ ಸುಖಾಂತ್ಯ ಕಂಡಿದೆ.
ಈ ಮೊದಲು ಗುಜರಾತ್ನ ಸೂರತ್ ಮೂಲದ ಬಾಲಕಿಯು ಹೆಲ್ಮೆಟ್ ಮತ್ತು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ನಡು ರಸ್ತೆಯಲ್ಲಿ ಸ್ಟಂಟ್ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಳು. ಆಕೆ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 279, ಸೆಕ್ಷನ್ 188, ಸೆಕ್ಷನ್ 269 ಅಡಿಯಲ್ಲಿ ಪೊಲೀಸರು ವಿರುದ್ಧ ವಿವಿಧ ಪ್ರಕರಣ ದಾಖಲಿಸಿದ್ದರು. ಈ ಘಟನೆ ಸಹ ಸಂಜನಾ ಅಲಿಯಾಸ್ ಪ್ರಿನ್ಸಿ ಪ್ರಸಾದ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದ ಸ್ಟಂಟ್ ವಿಡಿಯೋಗಳು ವೈರಲ್ ಆದ ಬಳಿಕ ನಡೆದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ