Viral Video: ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು, ಕುಳ್ಳಿಯರ ಗೋಳಿಗೆ ಇಲ್ವಾ ಮುಲಾಮು?

ವೈರಲ್​ ಆದ ಹುಡುಗಿ

ವೈರಲ್​ ಆದ ಹುಡುಗಿ

ಕುಳ್ಳಕ್ಕೆ ಇದ್ದವರ ಕಷ್ಟ ಯಾರಿಗೆ ಹೇಳಿಕೊಳ್ಳೋದು ಅಲ್ವಾ? ಇದೇ ಪಜೀತಿ ಇಲ್ಲೊಂದು ಹುಡುಗಿಗೆ ಆಗಿದೆ.

  • Share this:

ಮನುಷ್ಯ ಅಂತ ಆದ್ಮೇಲೆ ಒಂದಲ್ಲಾ ಒಂದು ಪ್ರಾಬ್ಲಮ್ಮು (Problem) ಇದ್ದಿದ್ದೇ ಬಿಡಿ. ಆದರೆ ಸಣ್ಣ ಪುಟ್ಟ ರೋಗ ರುಜಿನಗಳು ಬಂದಾಗ ಕೂಡ ಅಯ್ಯೋ ನನಗೆ ಆಗಲ್ಲ, ನನ್ನ ಜೀವನವೇ ಶೂನ್ಯ ಎಂದೆಲ್ಲಾ ಮಾತನಾಡುವವರು ಇರ್ತಾರೆ. ಆದ್ರೆ ನಿಜವಾಗಿಯೂ ಅದೆಲ್ಲಾ ಒಂದು ಸಮಸ್ಯೆಯೇ ಅಲ್ಲ. ಅದೆಷ್ಟೋ ಜನರಿಗೆ ಕಾಲು, ಕೈ, ಕಣ್ಣು ಇಲ್ಲದೇ ಎಷ್ಟು ಆರಾಮದಾಯಕವಾಗಿ ಜೀವನ ಸಾಗಿಸುತ್ತಾ ಇದ್ದಾರೆ. ಅವರಿಗಾಗಿ ಸರ್ಕಾರದಿಂದ ಹಲವಾರು ಯೋಜನೆಗಳು ಕೂಡ ಬರ್ತಾ ಇದೆ ಮತ್ತು ಅದನ್ನು ಉಪಯೋಗಿಸಿಕೊಳ್ಳುತ್ತಾರೆ. ಇವರದ್ದು ಒಂದು ರೀತಿಯ ವಿಷಯ ಆದ್ರೆ, ಅತೀ ಕುಳ್ಳಕ್ಕೆ ಇರುವವರದ್ದು ಇನ್ನೊಂದು ಗೋಳು. ಕುಳ್ಳಕ್ಕೆ ಇದ್ದೋರು ನೋಡೋಕೆ ಕ್ಯೂಟ್ (Cute)​ ಇರ್ತಾರೆ ಅಂತ ಹಲವಾರು ಮೀಮ್ಸ್​ಗಳನ್ನು ನಾವು ಸೋಶಿಯಲ್​ ಮೀಡಿಯಾದಲ್ಲಿ (Media) ಕಾಣಬಹುದು. ಹಾಗೆಯೇ ಇನ್ನು ಅದೆಷ್ಟೋ ಜನರು ಕಳ್ಳರನ್ನು ನಂಬಿದ್ರೂ ಕುಳ್ಳರನ್ನು ನಂಬಾರ್ದು ಎಂಬೆಲ್ಲಾ ಮಾತುಗಳನ್ನು ನಾವು ಕೇಳಿರ್ತೇವೆ.

ಹಾಗೆಯೇ ಕುಳ್ಳಕ್ಕೆ ಇರೋರು ರೆಡ್​ ಕಲ್ಲರ್​ ಡ್ರೆಸ್​ ಹಾಕ್ಬೇಡಿ ಸೇಮ್​ ಸಿಲಿಂಡರ್​ ನೋಡಿದ ಹಾಗೆ ಆಗುತ್ತೆ ಅಂತೆಲ್ಲಾ ಟೀಸ್​ ಮಾಡೋರು ಇರ್ತಾರೆ ಅಲ್ವಾ? ಹೀಗೆಲ್ಲಾ ಕೇಳ್ತಾ ಇದ್ರೆ ಯಾರಿಗೆ ತಾನೆ ಬೇಜಾರು  ಅಥವಾ ಕೋಪ ಬರೋಲ್ಲ ಹೇಳಿ? ಯಾಕಾಗಿ ಈ ವಿಷಯ ಬರ್ತಾ ಇದೆ ಅಂದ್ರೆ ಇಲ್ಲೊಂದು ಕುಳ್ಳಿಯ ವಿಡಿಯೋ ಸಖತ್​ ವೈರಲ್​ ಆಗ್ತಾ ಇದೆ.


ಓರ್ವ ಹುಡುಗಿ ಜೆರಾಕ್ಸ್​ ಅಂಗಡಿಗೆ  ಹೋಗಿದ್ದಾಳೆ ಆಗ ಅಲ್ಲಿನ ಅಂಗಡಿಯ ಮಾಲೀಕ ಏನು ಬೇಕು ಪುಟ್ಟ, 8 ನೇ ಕ್ಲಾಸ್​ದು ಬುಕ್ ಬೇಕಾ? ಅಂತ ಕೇಳಿದ್ದಾರೆ. ಆದ್ರೆ ಆಕೆ ಇಂಜಿನಿಯರ್​ ಮುಗಿಸಿ ಕೆಲಸದಲ್ಲಿ ಇದ್ದಾಳೆ. ಹೀಗೆಯೇ ಅಂಗಡಿಯಲ್ಲೂ ಹೇಳಿದ್ದಾಳೆ ಆಕೆ.


ಇದನ್ನೂ ಓದಿ: 11 ವರ್ಷದ ಹುಡುಗಿ ತಿಂಗಳಿಗೆ 1 ಕೋಟಿ ಸಂಪಾದಿಸುತ್ತಾಳೆ ಅಂದ್ರೆ ಸುಮ್ನೆನಾ? ಏನಿದರ ಗುಟ್ಟು?


ಈ ವೀಡಿಯೋದಲ್ಲಿ ಹುಡುಗಿ ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನ್ನು ಆರಂಭಿಸುತ್ತಾ ಮೊನ್ನೆ ತಾನೇ ನಾನು ಜೆರಾಕ್ಸ್ ಶಾಪ್‌ಗೆ ಹೋಗಿದ್ದೆ, ಅಲ್ಲಿದ್ದವನು ಮಗು ನಿನಗೆ ಏನು ಎಂಟನೇ ಕ್ಲಾಸ್ ಪುಸ್ತಕದ ಜೆರಕ್ಸ್ ಬೇಕಾ ಎಂದು ಕೇಳೋದಾ, ನಾನು ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಹೋಗುತ್ತಿದ್ದೇನೆ ಅಂತ ಹೇಳಿದೆ. ಇನ್ನೊಂದೆನಂದ್ರೆ ನನ್ನ ಜೊತೆಗಿದ್ದವರಿಗೆಲ್ಲಾ ಮದುವೆಯಾಗಿ ಅವರಿಗೆ ಮಕ್ಕಳಾಗಿ ಆ ಮಕ್ಕಳೆಲ್ಲಾ ನನ್ನ ಎತ್ತರಕ್ಕೆ ಬೆಳೆದು ನಿಂತಿವೆ ಆದ್ರೆ ನಾನು ಮಾತ್ರ ಇನ್ನೂ ಹೀಗೆ ಇದ್ದೀನಿ ಅಂತ ತನ್ನ ಅಳಲನ್ನು ತೋರಿಸಿಕೊಂಡಿದ್ದಾಳೆ.




ಆದ್ರೆ ನನ್ನ ಒಬ್ಬನೂ ಕೂಡಾ ಕಣ್ಣೆತ್ತಿ ನೋಡಿಲ್ಲ. ನನ್ನನ್ನು ಕಣ್ಣೆತ್ತಿ ಯಾರು ನೋಡುತ್ತಾರೆ, ಕಣ್ಣು ತಲೆ ಬಗ್ಗಿಸಿಯೇ ನೋಡಬೇಕು ಯಾಕಂದ್ರೆ ನಾನು ಅಷ್ಟು ಕುಳ್ಳಗಿದ್ದೇನೆ ಎಂದು ಹೇಳುತ್ತಾಳೆ. ಈ ವಿಡಿಯೊದಲ್ಲಿ ಆಕೆಯ ಮಾತು ಕೇಳಿದರೆ ನಗು ಬರುವುದಂತೂ ಖಂಡಿತ. ಆದ್ರೆ ಇದು ಒಂತರಾ ಖುಷಿಯ ವಿಚಾರ ಅಲ್ವಾ? ಕುಳ್ಳಕ್ಕೆ ಇದ್ದೋರು ತಲೆ ಎತ್ತಿ ಮಾತನಾಡ್ತಾರೆ, ಆದರೆ ಎತ್ತರ ಇದ್ದೋರು ತಲೆ ತಗ್ಗಿಸಿ ಮಾತನಾಡುತ್ತಾರೆ ಅಲ್ವಾ?


ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ತಮಾಷೆಯ ವಿಡಿಯೊ 1 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್​ಗಳನ್ನು ಪಡೆದುಕೊಂಡಿದೆ. ಹಾಗೂ ಹೆಚ್ಚಿನ ಲೈಕ್ಸ್ ಮತ್ತು ಕಮೆಂಟ್‌ಗಳನ್ನು ಈ ವೀಡಿಯೋ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ಯಾರಿಗೇಳೋಣ ನಮ್ಮ ಪ್ರಾಬ್ಲಮ್ಮು ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ವೆಲ್‌ಕಮ್ ಟು ಶಾರ್ಟ್ ಗರ್ಲ್ಸ್ ಟೀಮ್ ಎಂದು ತಮಾಷೆಗೆ ಕಮೆಂಟ್ ಮಾಡಿದ್ದಾರೆ.




ಒಟ್ಟಿನಲ್ಲಿ ಬೆಕ್ಕಿಗೆ ಆಟವಾದ್ರೆ ಇಲಿಗೆ ಪ್ರಾಣ ಸಂಕಟ ಎಂಬ ಮಾರಿನಂತೆ ಆಯ್ತು ಈ ಹುಡುಗಿಯ ಕಥೆ. ಈ ವಿಡಿಯೋ ನೋಡಿದ ಪ್ರತಿಯಬ್ಬರು ಕಮೆಂಟ್​ ಮಾಡಿದ ಹಾಗೆ ಇದೆ. ಯಾಕಂದ್ರೆ ಅಷ್ಟು ಕ್ಯೂಟ್​ ಮತ್ತು ಆಕೆಯ ನೋವಿನ ಕಥೆಯಾಗಿದೆ. ಹೀಗೆ ಅದೆಷ್ಟೋ ಜನ ಕುಳ್ಳಿಯರು ಸಮಾಜದಲ್ಲಿ ಕಷ್ಟಗಳನ್ನು ಎದುರಿಸುತ್ತಾ ಇರಬಹುದೇನೋ ಅಲ್ವಾ?

First published: