• Home
  • »
  • News
  • »
  • trend
  • »
  • Viral Video: ಗಾಲ್ಫ್​ ಕೋರ್ಸ್​ಗೆ ಎಂಟ್ರಿ ಕೊಟ್ಟ ಹುಲಿರಾಯ, ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ..!

Viral Video: ಗಾಲ್ಫ್​ ಕೋರ್ಸ್​ಗೆ ಎಂಟ್ರಿ ಕೊಟ್ಟ ಹುಲಿರಾಯ, ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ..!

ಹುಲಿ

ಹುಲಿ

"ಓಹ್, ನಾನು ಆ ಗಾಲ್ಫ್ ಕೋರ್ಸ್ ನಲ್ಲಿ ಗಾಲ್ಫ್ ಆಟ ಆಡಲು ಹೋಗುತ್ತೇನೆ, ಇನ್ಮುಂದೆ ನಾನು ತುಂಬಾನೇ ಜಾಗರೂಕನಾಗಿರುವುದು ಒಳ್ಳೆಯದು" ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದಾರೆ.

  • Trending Desk
  • Last Updated :
  • Karnataka, India
  • Share this:

ಈ ಕಾಡು ಪ್ರಾಣಿಗಳನ್ನು ದೊಡ್ಡ ದೊಡ್ಡ ಮೃಗಾಲಯದಲ್ಲಿ(Zoo) ಅಥವಾ ಸಫಾರಿಗೆ(Safari) ಹೋದಾಗ ನೋಡೋಕೆ ಸಿಕ್ಕರೆ ತುಂಬಾನೇ ಖುಷಿಯಾಗುತ್ತೆ, ಮತ್ತೆ ರೋಮಾಂಚನಕಾರಿ ಆಗಿರುತ್ತೆ. ಆದರೆ ಅದೇ ಕಾಡು ಪ್ರಾಣಿಗಳು ನಗರಗಳಲ್ಲಿ ರಾತ್ರಿ ಹೊತ್ತು ಮನೆಯ ಬಳಿ ಮತ್ತು ತೋಟದಲ್ಲಿ ಕಾಣಿಸಿಕೊಂಡರೆ ಜೀವ ಬಾಯಿಗೆ ಬಂದಂತೆ ಆಗಿರುತ್ತೆ.  ಕಾಡಿನಿಂದ(Forest) ಹೊರಬಂದು ಮನೆಗಳ ಬಳಿ ಕಂಡುಬರುವ ಕಾಡು ಪ್ರಾಣಿಗಳ ವಿಡಿಯೋಗಳು ಆಗಾಗ್ಗೆ ನೋಡಲು ಚೆನ್ನಾಗಿದ್ದರೂ, ಅಷ್ಟೇ ಭಯಾನಕವಾಗಿರುತ್ತವೆ. 


ಈ ಹಿಂದೆ ಸಹ ಕಾಡುಪ್ರಾಣಿಗಳು ನಾಡಿನಲ್ಲಿ ಕಾಣಿಸಿಕೊಂಡಿದ್ದವು..


ಈ ಹಿಂದೆ ಸಹ ನಾವು ಚಿರತೆಯೊಂದು ರಾತ್ರಿ ಹೊತ್ತಿನಲ್ಲಿ ಒಂದು ಮನೆಯ ಅಂಗಳಕ್ಕೆ ಬಂದು ಅಡ್ಡಾಡಿ ಹೋಗಿದ್ದು, ಮತ್ತು ಅಲ್ಲೇ ಇರುವ ನಾಯಿಯನ್ನು ಅಟ್ಟಿಸಿಕೊಂಡು ಹೋಗಿರುವ ವೀಡಿಯೋವನ್ನು ನೋಡಿದ್ದೆವು.


ಅಷ್ಟೇ ಅಲ್ಲದೆ ಕಾಡಿನಿಂದ ಹೊರಬಂದ ಆನೆಯೊಂದು ನಗರದ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾದ ದ್ವಿಚಕ್ರ ವಾಹನವನ್ನು ತನ್ನ ಸೊಂಡಿಲಿನಿಂದ ಅಲ್ಲಾಡಿಸಿ ಅದನ್ನು ಕೆಳಕ್ಕೆ ಬೀಳಿಸಿ ಗಲಾಟೆ ಮಾಡಿದ್ದು, ಅಲ್ಲಿದ್ದ ಜನರು ಕಾಡಿನಿಂದ ಬಂದ ಈ ಆನೆಯ ವರ್ತನೆಯನ್ನು ನೋಡಿ ಭಯಭೀತರಾದ ವೀಡಿಯೋವನ್ನು ಸಹ ನಾವು ಈ ಹಿಂದೆ ನೋಡಿದ್ದೆವು. ಹೀಗೆ ಅನೇಕ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದನ್ನು ಈಗಾಗಲೇ ನೋಡಿದ್ದೇವೆ.


ಇದನ್ನೂ ಓದಿ: Viral Video: ಮಹಿಳೆಯ ಏರ್‌ಪಾಡ್ ಕದ್ದು ಹಾರಿ ಹೋದ ಪಕ್ಷಿ! ಮುಂದೇನಾಯ್ತು ನೋಡಿ.


ಗಾಲ್ಫ್ ಕೋರ್ಸ್ ಗೆ ಎಂಟ್ರಿ ಕೊಟ್ಟ ಹುಲಿ


ಟ್ವಿಟರ್ ನಲ್ಲಿ ಹೊಸದಾಗಿ ಪೋಸ್ಟ್ ಮಾಡಲಾದ 33 ಸೆಕೆಂಡಿನ ವೀಡಿಯೋ ತುಣುಕಿನಲ್ಲಿ ಒಂದು ಹುಲಿಯು ತನ್ನ ಬೇಟೆಯನ್ನು ಹುಡುಕುತ್ತಾ ಹಾಗೆಯೇ ಗಾಲ್ಫ್ ಕೋರ್ಸ್ ಗೆ ಬಂದಿರುವುದನ್ನು ನಾವು ನೋಡಬಹುದು. ರೈಲ್ವೆ ಅಧಿಕಾರಿ ಅನಂತ್ ರೂಪನಗುಡಿ ಅವರು ಹಂಚಿಕೊಂಡಿರುವ ಈ ವಿಡಿಯೋ ಟ್ವಿಟರ್ ಬಳಕೆದಾರರಲ್ಲಿ ಒಂದು ರೀತಿಯ ಭಯ ಹುಟ್ಟಿಸಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.



"ಇದು ಊಟಿಯ ಗಾಲ್ಫ್ ಕೋರ್ಸ್ ನಲ್ಲಿರುವ ಕೊನೆಯ ಅಂಚಿನ ಭಾಗವಾಗಿತ್ತು. ಅದರ ಬೇಟೆಯನ್ನು ಹುಡುಕಿಕೊಂಡು ಹುಲಿಯೊಂದು ಗಾಲ್ಫ್ ಕೋರ್ಸ್ ಗೆ ಎಂಟ್ರಿ ಕೊಟ್ಟಿದೆ" ಎಂದು ರೂಪನಗುಡಿ ಅವರು ಪೋಸ್ಟ್ ಮಾಡಿದ್ದಾರೆ. ಅವರು ದೊಡ್ಡ ಹುಲಿಯ ಎರಡು ಫೋಟೋಗಳನ್ನು ಮತ್ತು ಎರಡು ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. ಒಂದು ವಿಡಿಯೋವು ಹುಲಿಯು ಗಾಲ್ಫ್ ಕೋರ್ಸ್ ನಲ್ಲಿರುವ ಒಂದು ಚಿಕ್ಕ ಪೊದೆಯ ಹಿಂದಿನಿಂದ ಹಾಗೆಯೇ ನಿಧಾನವಾಗಿ ಹೊರ ಬರುವುದನ್ನು ತೋರಿಸುತ್ತದೆ. ಮತ್ತೊಂದು ಕ್ಲಿಪ್‌ನಲ್ಲಿ ಹುಲಿ ತನ್ನ ಅರ್ಧ ತಿಂದು ಮುಗಿಸಿದ ಬೇಟೆಯ ಮುಂದೆ ನಿಂತಿರುವುದನ್ನು ಸೆರೆ ಹಿಡಿದಿದೆ.


2 ಸಾವಿರಕ್ಕೂ ಹೆಚ್ಚು ಲೈಕ್ ಗಳಿಸಿದೆ ಈ ವಿಡಿಯೋ


ಈ ಪೋಸ್ಟ್ ಅನ್ನು ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದಾಗಿನಿಂದ ಈ ಟ್ವೀಟ್ 2,000 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ ಮತ್ತು ಈ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಹಂಚಿಕೆಯು ವಿವಿಧ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲು ಜನರನ್ನು ಪ್ರೇರೇಪಿಸಿದೆ ಎಂದರೂ ತಪ್ಪಾಗಲಾರದು.


ಇದನ್ನೂ ಓದಿ: Woman at Gym: ಸೀರೆಯಲ್ಲೇ ವರ್ಕೌಟ್‌ ಮಾಡ್ತಾರೆ ಈ ಮಹಿಳೆ, 56 ವರ್ಷವಾದ್ರೂ ಇನ್ನೂ ಫಿಟ್ ಆ್ಯಂಡ್ ಫೈನ್!


ಹುಲಿ ವೀಡಿಯೋ ಬಗ್ಗೆ ನೆಟ್ಟಿಗರು ಹಾಕಿದ ಕಾಮೆಂಟ್ ಗಳನ್ನ ನೋಡಿ..


"ಓಹ್, ನಾನು ಆ ಗಾಲ್ಫ್ ಕೋರ್ಸ್ ನಲ್ಲಿ ಗಾಲ್ಫ್ ಆಟ ಆಡಲು ಹೋಗುತ್ತೇನೆ, ಇನ್ಮುಂದೆ ನಾನು ತುಂಬಾನೇ ಜಾಗರೂಕನಾಗಿರುವುದು ಒಳ್ಳೆಯದು" ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದಾರೆ. "ಟೈಗರ್ ವುಡ್ಸ್" ಎಂದು ಇನ್ನೊಬ್ಬರು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ. "ಎಂತಹ ಅದ್ಭುತ ದೃಶ್ಯ" ಎಂದು ಮೂರನೆಯವರು ಕಾಮೆಂಟ್ ಮಾಡಿದರೆ, "ಕಾಡಿನಲ್ಲಿ ಹುಲಿ" ಎಂದು ನಾಲ್ಕನೆಯವರು ಕಾಮೆಂಟ್ ಮಾಡಿದ್ದಾರೆ.

Published by:Latha CG
First published: