ಇಂಟರ್ನೆಟ್ ಲೋಕದಲ್ಲಿ ನಿತ್ಯ ಹತ್ತಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಈ ಪಟ್ಟಿಗೆ ಬೆಳ್ಳುಳ್ಳಿ ಸಿಪ್ಪೆ ಬಿಡಿಸುವ ವಿಡಿಯೋ ಕೂಡ ಸೇರಿದೆ. ಹೌದು ಸಿಪ್ಪೆ ಸುಲಿಯುವ ವಿಚಾರ ಬಂದಾಗ ಬೆಳ್ಳುಳ್ಳಿ ಸಿಪ್ಪೆ ಸುಲಿಯುವುದು ಸುಲಭವಲ್ಲ. ಸಾಕಷ್ಟು ತಾಳ್ಮೆ ಮತ್ತು ತಂತ್ರದಿಂದ ಬೆಳ್ಳುಳ್ಳಿ ಸಿಪ್ಪೆ ಸುಲಿಯಬೇಕಾಗುತ್ತದೆ. ಆದರೆ ಈ ವಿಡಿಯೋದಲ್ಲಿ ಬೆಳ್ಳುಳ್ಳಿ ಸಿಪ್ಪೆಯನ್ನು ಕೆಲವೇ ಸೆಕೆಂಡುಗಳಲ್ಲಿ ಅದ್ಹೇಗೆ ಸುಲಿದಿದ್ದಾರೆ ಅನ್ನೋದನ್ನ ನೋಡಿದರೆ ನೀವೇ ಆಶ್ಚರ್ಯಗೊಳಗಾಗುತ್ತಿರಿ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುವ ಮೂಲಕ ಭಾರಿ ಸದ್ದು ಮಾಡುತ್ತಿರುವ ಈ ವಿಡಿಯೋವನ್ನು ಟಿಕ್ಟಾಕ್ನಲ್ಲಿ ಹಂಚಿಕೊಳ್ಳಲಾಗಿದೆ. 12 ಸೆಕೆಂಡುಗಳ ಈ ವಿಡಿಯೋ ಕ್ಲಿಪ್ ಅನ್ನು ಟಿಕ್ಟಾಕ್ ಬಳಕೆದಾರ @xwowduck ಎಂಬುವರು ಹಂಚಿಕೊಂಡಿದ್ದಾರೆ. ಈಗಾಗಲೇ ಲಕ್ಷಾಂತರ ಜನರು ವೀಕ್ಷಿಸಿದ್ದು, ಬೆಳ್ಳುಳ್ಳಿ ಸಿಪ್ಪೆ ಸುಲಿಯುವ ಸರಳ ತಂತ್ರಕ್ಕೆ ಮಾರುಹೋಗಿದ್ದಾರೆ. ವಿಡಿಯೋ ಶೇರ್ ಮಾಡಿರುವ ವ್ಯಕ್ತಿ ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ಸುಲಿಯುವ ತಂತ್ರವನ್ನು ಹೇಳಿಕೊಟ್ಟಿರುವ ತನ್ನ ಅತ್ತೆಗೆ ವಿಡಿಯೋದ ಸಂಪೂರ್ಣ ಕ್ರೆಡಿಟ್ ಸಲ್ಲಬೇಕು ಎಂದು ಹೇಳಿದ್ದಾನೆ.
Can someone confirm that this works... 😳🧄 pic.twitter.com/9Ni7825YLH
— First We Feast (@firstwefeast) November 10, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ