1984ರಲ್ಲಿ ಇ-ಮೇಲ್ ಬಂದ್ರೆ ಚೆಕ್ ಮಾಡುವುದಕ್ಕೆ ಎಷ್ಟೆಲ್ಲಾ ಸರ್ಕಸ್ ಮಾಡಬೇಕಿತ್ತು ಗೊತ್ತಾ?: ತಪ್ಪದೇ ಈ ವಿಡಿಯೋ ನೋಡಿ

ಟ್ವಿಟ್ಟರ್‌ನಲ್ಲಿ ಬ್ರಿಟಿಷ್ ಪತ್ರಕರ್ತ ಜಾನ್ ಎರ್ಲಿಚ್ಮನ್ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ 1984 ರಲ್ಲಿ ಎಲೆಕ್ಟ್ರಾನಿಕ್ ಮೇಲ್‌ಗಳನ್ನು ಪರಿಶೀಲಿಸುವ ಪ್ರಕ್ರಿಯೆಯು ಎಷ್ಟು ಜಟಿಲ ಮತ್ತು ತ್ರಾಸದಾಯಕವಾಗಿದೆ ಎನ್ನವುದರ ಸಂಪೂರ್ಣ ಚಿತ್ರಣವಿದೆ.

(credit: Twitter)

(credit: Twitter)

  • Share this:
1990 ರಿಂದ ಅಂತರ್ಜಾಲ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ಪರಿಣಾಮ ಇಂದು ಇಂಟರ್ನೆಟ್ ಕ್ಷೇತ್ರದ ಕ್ಷಿಪ್ರ ಕ್ರಾಂತಿಯಿಂದಾಗಿ ಮಾಹಿತಿಯನ್ನು ಕೆಲವೇ ಕ್ಷಣಗಳಲ್ಲಿ ಹಂಚಿಕೊಳ್ಳುತ್ತೇವೆ. ಮಾಹಿತಿ ರವಾನೆ ಮತ್ತು ಸ್ವೀಕರಿಸುವುದು ಈಗ ಸೆಕೆಂಡ್ಸ್‌ಗಳಲ್ಲಿ ದಕ್ಕುವಷ್ಟು ಸರಳವಾಗಿರುವುದರ ಹಿಂದೆ ತಂತ್ರಜ್ಞಾನದ ವೇಗವನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಆದರೆ 1980 ನೇ ಇಸವಿಗೆ ಹೋದರೆ ಅಂದು ಪರಿಸ್ಥಿತಿ ಈಗಿನಂತೆ ಇರಲಿಲ್ಲ. ಸಣ್ಣ ಇ- ಮೇಲ್ ಪರೀಕ್ಷೆ ಮಾಡಲು ಏನೆಲ್ಲಾ ಸರ್ಕಸ್ ಮಾಡಬೇಕಿತ್ತು ಎನ್ನುವುದನ್ನು ಚಿಕ್ಕ ವೈರಲ್ ವಿಡಿಯೋವೊಂದು ತೆರೆದಿಟ್ಟಿದೆ.

ಟ್ವಿಟ್ಟರ್‌ನಲ್ಲಿ ಬ್ರಿಟಿಷ್ ಪತ್ರಕರ್ತ ಜಾನ್ ಎರ್ಲಿಚ್ಮನ್ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ 1984 ರಲ್ಲಿ ಎಲೆಕ್ಟ್ರಾನಿಕ್ ಮೇಲ್‌ಗಳನ್ನು ಪರಿಶೀಲಿಸುವ ಪ್ರಕ್ರಿಯೆಯು ಎಷ್ಟು ಜಟಿಲ ಮತ್ತು ತ್ರಾಸದಾಯಕವಾಗಿದೆ ಎನ್ನವುದರ ಸಂಪೂರ್ಣ ಚಿತ್ರಣವಿದೆ.

ಈ ವಿಡಿಯೋದಲ್ಲಿ ಟಿವಿ ನಿರೂಪಕರು ತಮ್ಮ ಇಮೇಲ್ ಬಾಕ್ಸ್‌ನಲ್ಲಿ ಪರಿಶೀಲಿಸುವ ಪೂರ್ಣ ಪ್ರಕ್ರಿಯೆಯನ್ನು ವಿವರಿಸಿದ್ದಾರೆ. ಟ್ರೈನ್‌ನಲ್ಲಿ ಪ್ರಯಾಣಿಸುತ್ತಿರುವ ಬ್ರಿಟಿಷ್ ಹೋಸ್ಟ್ ಪೋರ್ಟಬಲ್ ಕಂಪ್ಯೂಟರ್ ಹಿಡಿದುಕೊಂಡಿದ್ದಾರೆ. ಆಗಿನ ಕಾಲದಲ್ಲಿ ಇನ್ನೂ ಸಹ ಕಮರ್ಷಿಯಲ್ ಇಂಟರ್ನೆಟ್‌ಗಳ ಲಭ್ಯತೆ ಇರಲಿಲ್ಲ. ಆದ್ದರಿಂದ ಮೋಡಮ್ ಅನ್ನು ಟೆಲಿಫೋನ್ ರಿಸೀವರ್‌ಗೆ ಹೊಂದಿಸಿಕೊಂಡು ಕಂಪ್ಯೂಟರ್‌ನಲ್ಲಿ ಕನೆಕ್ಷನ್ ಬರುವುದನ್ನು ನೋಡಿಕೊಂಡು ಇ ಮೇಲ್‌ ನೋಡಬೇಕಿತ್ತು ಎಂದು ವಿವರಿಸಿದ್ದಾರೆ. ಇನ್ನೂ ಇ ಮೇಲ್‌ಗಳನ್ನು ಫೋನ್‌ಗೆ ಹೊಂದಿಸಿ ನೋಡಲು ನಾಣ್ಯಗಳ ಅಗತ್ಯತೆ ಇರುತ್ತಿತ್ತು. ಒಂದು ವೇಳೆ ನಾಣ್ಯಗಳು ಮುಗಿದು ಹೋದರೆ, ಇ ಮೇಲ್ ಸಂಪರ್ಕ ಸ್ಥಗಿತವಾಗುತ್ತಿತ್ತು. ಈ ಪ್ರಕ್ರಿಯೆ ಕಾಯಿನ್ ಬಾಕ್ಸ್‌ನಲ್ಲಿ ನಾವು ಇಂದು ಫೋನ್ ಮಾಡುವ ಹಾಗೆಯೇ ಇತ್ತು ಎನಿಸುವುದಿಲ್ಲವೇ?

ಇದಾದ ಬಳಿಕ 2 ನಿಮಿಷ 20 ಸೆಕೆಂಡ್ಸ್‌ಗಳ ವಿಡಿಯೋದಲ್ಲಿ ಬ್ರಿಟಿಷ್ ನಿರೂಪಕರು ಜಪಾನಿನ ಹೊಟೇಲ್ ರೂಂ ಒಳಗೆ ಹೋಗಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಾರೆ. ಇದರಲ್ಲಿ ಟೆಲಿಫೋನ್ ಮೂಲಕ ಲಂಡನ್ ನಂಬರ್‌ಗೆ ಡಯಲ್ ಮಾಡುತ್ತಾರೆ. ನಂತರ ಕಂಪ್ಯೂಟರ್ ನಂಬರ್ ಡಯಲ್ ಮಾಡುತ್ತಾರೆ. ಒಂದು ಸಣ್ಣ ಬೀಪ್ ನಂತರ ಕಂಪ್ಯೂಟರ್‌ಗೆ ಹೊಂದಿಕೊಂಡಂತಿರುವ ಟೆಲಿಫೋನ್ ರಿಸಿವರ್ ಮತ್ತು ಮೋಡಮ್ ಎರಡನ್ನು ಹೊಂದಿಸುತ್ತಾರೆ.

ನಿರಂತರ ಪ್ರಯತ್ನದಲ್ಲಿ ಬೇಸತ್ತ ನಿರೂಪಕರು ತಮ್ಮ ಇ ಮೇಲ್ ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಆದರೆ ಲಂಡನ್ನಲ್ಲಿರುವ ಮೇಲ್ ಬಾಕ್ಸ್‌ನೊಂದಿಗೆ ಸಂಪರ್ಕ ಸಾಧಿಸಿದ ನಂತರ, ತನ್ನ ಅಕೌಂಟ್ ನಂಬರ್ ಮತ್ತು ವೈಯಕ್ತಿಕ ಐಡಿಯನ್ನು ಪೋರ್ಟಬಲ್ ಕಂಪ್ಯೂಟರ್‌ಗೆ ನಮೂದಿಸಬೇಕಾಗುತ್ತದೆ. ಕೆಲವು ಸೆಕೆಂಡ್ಸ್‌ಗಳ ಬಳಿಕ ಟಿ ವಿ ನಿರೂಪಕರು ಇ ಮೇಲ್‌ಗಳನ್ನು ನೋಡಲು ಸಾಧ್ಯವಾಗುತ್ತದೆ.

ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಎರ್ಲಿಚ್‌ಮನ್ ಅವರು ಕಳೆದ ಹಲವು ದಶಕಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಬೃಹತ್ ಬೆಳವಣಿಗೆಯನ್ನು ಹೋಲಿಸಿ ನೋಡುವ ಮೂಲಕ ಇಂದಿನ ಅಭಿವದ್ಧಿ ಬಗ್ಗೆ ಹೆಮ್ಮೆ ಪಡುವಂತೆ ಮಾಡುತ್ತಾರೆ. ಅಲ್ಲದೇ ಅವರು ಇಂತಹ ಅದ್ಭುತ ಆವಿಷ್ಕಾರಗಳನ್ನು ಪರಿಚಯಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ.
First published: