‘Want justice for Chai’: ಚಿಕ್ಕು, ಸೇಬು, ಬಾಳೆಹಣ್ಣು ಹಾಕಿ ಚಹಾ ತಯಾರಿಸಿದ ವಿಡಿಯೋ ವೈರಲ್

ಮಿಲ್ಕ್ ಶೇಕ್ ಮತ್ತು ಟೀ ಮಿಕ್ಸಿಂಗ್ ನೋಡಿದ ಜನರು 'ಜಸ್ಟೀಸ್ ಫಾರ್ ಚಾಯ್' ಎಂದು ಕರೆ ನೀಡುತ್ತಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋ

ವೈರಲ್ ವಿಡಿಯೋ

  • Share this:
ಕೆಲವೊಮ್ಮೆ ನಂಬಲಾರದಂತಹ ವಿಡಿಯೋ(Viral Video)ಗಳು ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲ ದಿನಗಳ ಹಿಂದೆ ಜಾಮೂನು  ಇರಿಸಿ ಪರೋಟಾ (Jamunu Parota) ಮಾಡಲಾಗಿತ್ತು. ಈ ವಿಡಿಯೋ ನೋಡಿದ ನೆಟ್ಟಿಗರು ಇದ್ಯಾವ ರೀತಿಯ ರೆಸಿಪಿ (Recipe) ಎಂದು ಕಮೆಂಟ್ ಮಾಡಿದ್ದರು. ಸಾಮಾನ್ಯವಾಗಿ ಎಲ್ಲರಿಗೂ ಮಿಲ್ಕ್ ಶೇಕ್ (Milkshakes) ಬಗ್ಗೆ  ಗೊತ್ತಿರುತ್ತವೆ. ಎರಡ್ಮೂರು ಹಣ್ಣುಗಳ ಕಾಂಬಿನೇಷನ್ ನಲ್ಲಿ ರುಚಿಯಾದ ಮಿಲ್ಕ್ ಶೇಕ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಈ ರೀತಿಯ ವಿವಿಧ ಮಿಲ್ಕ್ ಶೇಕ್ ನೀವು ಕುಡಿದಿರುತ್ತೀರಿ. ಇನ್ನು ಚಹ (Tea) ವಿಷಯಕ್ಕೆ ಬಂದ್ರೆ, ಕೆಲವರು ಇದಕ್ಕೆ ಏಲಕ್ಕಿ, ಲವಂಗ ಸೇರಿದಂತೆ ಕೆಲ ಟೀ ಮಸಾಲೆ ಸೇರಿಸುತ್ತಾರೆ. ಈ ರೀತಿಯ ಖಡಕ್ ಮಸಾಲ್ ಚಹ (Masala Tea) ಕುಡಿದರೆ  ಮೈಂಡ್ ಫ್ರೆಶ್ ಆಗುತ್ತದೆ. ಆದ್ರೆ ಇಲ್ಲೊಬ್ಬ ವ್ಯಾಪಾರಿ ಟೀ ಮತ್ತು ಮಿಲ್ಕ್ ಶೇಕ್ ಮಿಕ್ಸ್ ಮಾಡಿದ್ದಾನೆ.

ವಿಲಕ್ಷಣವಾದ ಮಿಶ್ರಣಗಳು ಅಂತರ್ಜಾಲದಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುತ್ತದೆ.  ಮ್ಯಾಗಿ ಮಿಲ್ಕ್‌ ಶೇಕ್‌ಗಳಿಂದ ಹಿಡಿದು ಓರಿಯೊ ಪಕೋರಾಗಳವರೆಗೆ ನೆಟ್ಟಿಗರು ಎಲ್ಲವನ್ನೂ ನೋಡಿದ್ದಾರೆ.ಈಗ ಮಿಲ್ಕ್ ಶೇಕ್ ಮತ್ತು ಟೀ ಮಿಕ್ಸಿಂಗ್ ನೋಡಿದ ಜನರು 'ಜಸ್ಟೀಸ್ ಫಾರ್ ಚಾಯ್' ಎಂದು ಕರೆ ನೀಡುತ್ತಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಗುಜರಾತ್ ರಾಜ್ಯದ ಸೂರತ್ ನಲ್ಲಿ ನಿಮಗೆ ಈ ಫ್ರೂಟ್ ಟೀ ಸಿಗುತ್ತದೆ.

ಈ ವಿಡಿಯೋಗೆ 65 ಸಾವಿರಕ್ಕೂ ಹೆಚ್ಚು ಲೈಕ್ಸ್

ಸೇಬು, ಬಾಳೆ ಮತ್ತು ಚಿಕ್ಕು ಸೇರಿಸಿ ಹಣ್ಣಿನ ಚಹಾವನ್ನು ತಯಾರಿಸುತ್ತಾರೆ. ಇನ್‌ ಸ್ಟಾಗ್ರಾಮ್‌ನಲ್ಲಿ ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆ ವೈರಲ್ ಆಗಿದೆ. ಇಲ್ಲಿಯವರೆಗೆ 65 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.

ಇದನ್ನೂ ಓದಿ:  Viral News: ಹಸುಗೂಸಿಗೆ ಡಯಟ್, ಈ ತಾಯಿಯ ಕಷ್ಟ ಕೇಳಿದ್ರೆ ನಿಮ್ಮ ಕಣ್ಣಂಚಲಿ ನೀರು ಬರುತ್ತೆ!

ಮೊದಲಿಗೆ ಚಹಾದಲ್ಲಿ ಬಾಳೆಹಣ್ಣು ಹಾಕುತ್ತಾನೆ. ನಂತರ ಸೇಬು ಮತ್ತು ಚಿಕ್ಕು ಹಾಕಿ ಕೆಲ ನಿಮಿಷಗಳ ನಂತರ ಜರಡಿ ಹಿಡಿದು ಗ್ರಾಹಕರಿಗೆ ನೀಡುವದನ್ನು ವಿಡಿಯೋದಲ್ಲಿ ನೋಡಬಹುದು. ಇನ್ನು ವಿಡಿಯೋ ನೋಡಿದ ನೆಟ್ಟಿಗರು, ಇದೊಂದು ಬಾಕಿ ಇತ್ತು ಅಲ್ಲವಾ? ಇಂಹತ ಫ್ರುಟ್ ಟೀಯನ್ನು ಜನರು ಹೇಗೆ ಕುಡಿಯತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಚಹಾಗೆ ನ್ಯಾಯ ಬೇಕು ಎಂದು ಕಮೆಂ

ಕೆಲ ಜನರು ಒಂದು ಹೆಜ್ಜೆ ಮುಂದೆ ಹೋಗಿ, ಚಹಾದ ಸ್ವಾದವನ್ನು ಕಡಿಮೆ ಮಾಡುವ ಈ ಪ್ರಯೋಗಗಳನ್ನು ನಾವು ವಿರೋಧ ಮಾಡುತ್ತವೆ. ಚಹಾಗೆ ನ್ಯಾಯ ಬೇಕು ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇದು ಬಿಸಿ ಬಿಸಿ ಮಿಲ್ಕ್ ಶೇಕ್ ಅಂತ ಹೇಳಿದ್ದಾರೆ.
ಕೆಂಪಿರುವೆಯ ಚಟ್ನಿ ಮಾತ್ರವಲ್ಲ, ಈ ಡಾಬಾದಲ್ಲಿ ಅದರ ಸೂಪ್, ಉಪ್ಪಿನಕಾಯಿಯೂ ಸಿಗುತ್ತೆ!

ಭಾರತದ ಕೆಲವೆಡೆ ಕೆಂಪು ಇರುವೆಯನ್ನು (Red ant) ಬಳಸಿಕೊಂಡು ಅಡುಗೆ ಮಾಡುತ್ತಾರೆ. ಕರ್ನಾಟದಲ್ಲೂ (Karnataka) ಕೆಂಪು ಇರುವೆಯ ಚಟ್ನಿ (Red ant chutney) ಮಾಡಿ ತಿನ್ನುವವರೂ ಇದ್ದಾರೆ. ಕೆಲವು ಬುಡಕಟ್ಟು ಜನಾಂಗದವರು ಈ ಆಹಾರವನ್ನು ಸೇವಿಸುತ್ತಾರೆ. ಅಂದಹಾಗೆಯೇ ನಾವೀಗ ಮಾತನಾಡುತ್ತಿರುವುದು ಛತ್ತೀಸ್‌ಗಢ(Chhattisgarh)ದ ಬುಡಕಟ್ಟು ಪ್ರಾಬಲ್ಯದ ಬಸ್ತಾರ್ ವಿಭಾಗದಲ್ಲಿ ಕೆಂಪಿರುವೆ ವಿಶೇಷ ಪಾಕವಿಧಾನ ಮಾಡುತ್ತಾರೆ. ಇಲ್ಲಿ ಕೆಂಪು ಇರುವೆ ಚಟ್ನಿ ಫೇಮಸ್​​​. ಇದನ್ನು ಚಾಪ್ರಾ ಚಟ್ನಿ ಎಂದು ಕರೆಯುತ್ತಾರೆ. ಅದರ ಜೊತೆಗೆ ಇನ್ನೂ ಕೆಲವು ಪಾಕವನ್ನು ತಯಾರಿಸುತ್ತಾರೆ.

ಇದನ್ನೂ ಓದಿ:  Viral Photo: ಶ್ರೀ ಶರಣಬಸವೇಶ್ವರ ಜಾತ್ರೆಗೆ ಸನ್ನಿ ಲಿಯೋನ್ ಅಭಿಮಾನಿಗಳಿಂದ ಸ್ವಾಗತ: ಫೋಟೋ ವೈರಲ್

ಕೆಂಪು ಇರುವೆ ಚಟ್ನಿ ಬಗ್ಗೆ ಹಲವಾರು ಬಾರಿ ಕೇಳಿರಬಹುದು ಮತ್ತು ತಿಳಿದಿರಬಹುದು. ಆದರೆ ಬಸ್ತಾರ್‌ನಲ್ಲಿ ಕೆಂಪು ಇರುವೆಯಿಂದ ಇತರ ಆಹಾರಗಳನ್ನು ತಯಾರಿಸುತ್ತಾರೆ. ಒಮ್ಮೆ ಅದನ್ನು ಸೇವಿಸಿದ ಜನರು ನಂತರ ಅದರ ರುಚಿ ಸವಿಯಲು ಬಹಳ ಮತ್ತೆ ಮತ್ತೆ ಬರುತ್ತಾರಂತೆ.
Published by:Mahmadrafik K
First published: