ಸೋಶಿಯಲ್ ಮೀಡಿಯಾ (Social Media) ತೆರೆದರೆ ಸಾಕು ಸ್ಕಿನ್ ಕೇರ್, ಬ್ಯೂಟಿ ಕೇರ್, ಮೇಕಪ್ ಅಂತಾ ಸ್ವ ಕಾಳಜಿಯ ಪ್ರಜ್ಞೆಯ ವಿಡಿಯೋಗಳದ್ದೇ ಭರಾಟೆ. ತ್ವಚೆಯ ರಕ್ಷಣೆ, ಅದಕ್ಕೆ ಬೇಕಾಗುವ ಕಾಸ್ಮೆಟಿಕ್, ಔಷಧಿಗಳ ಬಗ್ಗೆ ಹೇಳಲಾಗುತ್ತಿದೆ. ಯಾರೇ ಮಹಿಳಾ ಇನ್‌ಸ್ಟಾಗ್ರಾಮ್ (Instagram) ಇನ್ಪ್ಯೂಯೆನ್ಸರ್ ಆಗಿರಬಹುದು, ಯೂಟ್ಯೂಬ್ ಬ್ಲಾಗರ್ ಆಗಿರಬಹುದು ಅವರೆಲ್ಲಾ ಈ ಮೇಕಪ್ (Makeup) ಮತ್ತು ಚರ್ಮದ ಆರೈಕೆ ಬಗ್ಗೆ ತಮ್ಮತಮ್ಮ ಫಾಲೋವರ್ಸ್‌ಗಳಿಗೆ ವಿಡಿಯೋ ಮೂಲಕ ಹೇಳುತ್ತಿದ್ದಾರೆ. ಬೆಳಗ್ಗೆ ಮುಖದ ಅಥವಾ ಚರ್ಮದ ಆರೈಕೆ ಹೇಗಿರಬೇಕು? ಯಾವೆಲ್ಲಾ ಉತ್ಪನ್ನಗಳು ಮುಖಕ್ಕೆ ಸೂಕ್ತ? ಯಾವ ಚರ್ಮಕ್ಕೆ (Skin) ಯಾವ ವಿಧದ ಕಾಸ್ಮೆಟಿಕ್ ಸೂಕ್ತ ಎಂಬುದನ್ನು ವೈದ್ಯರಿಗಿಂತ ಹೆಚ್ಚಾಗಿ ಹೇಳುತ್ತಿದ್ದಾರೆ. ರೆಸಾರ್ಟ್ (Resort) ಹೋದಾಗ, ಬೀಚ್ನಲ್ಲಿದ್ದಾಗ ಹೇಗಿರಬೇಕು ಮುಖದ ಕಾಳಜಿ ಅಂತೆಲ್ಲಾ ವಿಡಿಯೋಗಳನ್ನು (Video) ಮಾಡಿ ಹರಿಬಿಡುತ್ತಾರೆ. ಹಾಗೆಯೇ ಮೇಕಪ್ ಚಾಲೆಂಜ್ ಅನ್ನೋ ವಿಡಿಯೋಗಳನ್ನು ಕೂಡ ಹರಿಬಿಡುತ್ತಿದ್ದಾರೆ.
ಕಾರಲ್ಲಿ ಹೋಗುವಾಗ ಹೇಗೆ ಮೇಕಪ್ ಮಾಡೋದು? ಒಂದೇ ಕೈಯಲ್ಲಿ ಹೇಗೆ ಮೇಕಪ್ ಮಾಡೋದು ಹೀಗೆ ಬೇರೆ ಬೇರೆ ಮೇಕಪ್ ಚಾಲೆಂಜ್‌ಗಳನ್ನು ಸಹ ನಾವು ಆನ್‌ಲೈನ್‌ಲ್ಲಿ ನೋಡಬಹುದು.
ಸ್ಕೈಡೈವಿಂಗ್ ಮಾಡುತ್ತಾ ಮೇಕಪ್ ಮಾಡಿಕೊಂಡ ಯುವತಿ
ಆದರೆ ಇದೆಲ್ಲವನ್ನು ಮೀರಿ ಇಲ್ಲೊಬ್ಬ ಯುವತಿ ಸ್ಕೈಡೈವಿಂಗ್ ಮಾಡುತ್ತಾ ತನ್ನ ಸ್ಕಿನ್ ಕೇರ್ ಮತ್ತು ಬ್ಯೂಟಿ ಹ್ಯಾಕ್ ಬಗ್ಗೆ ತಿಳಿಸಿದ್ದಾಳೆ. ಆಕಾಶದೆತ್ತರದಿಂದ ಹಾರುವಾಗಲೇ ಅರ್ಧ ಪ್ರಾಣ ಹೋಗಿರುತ್ತದೆ, ಅಂತಹದರಲ್ಲಿ ಈ ಯುವತಿ ಧೈರ್ಯವನ್ನು ಮೆಚ್ಚಲೇಬೇಕು ನೋಡಿ.
ಮೆಕೆನ್ನಾ ನೈಪ್ ಸಾಹಸಮಯ ವಿಡಿಯೋ
ಇಂತಹದೊಂದು ಸಾಹಸಮಯ ಕೆಲಸ ಕೈಗೊಂಡಿದ್ದು, ಫ್ಲೋರಿಡಾದ ಪಾಮ್ ಸಿಟಿಯ ನಿವಾಸಿ ಮೆಕೆನ್ನಾ ನೈಪ್. ಈಕೆ ಸಾಹಸ ಪ್ರೇಮಿಯಾಗಿದ್ದು, ಇನ್‌ಸ್ಟಾಗ್ರಾಮ್ ಪ್ರಭಾವಶಾಲಿ ಕೂಡ ಹೌದು.
ಇದನ್ನೂ ಓದಿ: ಈ ಮಗುವಿನಲ್ಲಿ ಮೂವರ ಡಿಎನ್ಎ, ಅಚ್ಚರಿ ಮೂಡಿಸಿದೆ ಯುಕೆಯ ಮೊದಲ 'ಸೂಪರ್ ಬೇಬಿ'!
ಈಕೆಯ ಇನ್‌ಸ್ಟಾಗ್ರಾಮ್ ಪುಟದಲ್ಲಿ ಸ್ಕೈಡೈವಿಂಗ್‌ಗೆ ಸಂಬಂಧಿಸಿದ ಹಲವಾರು ಆಸಕ್ತಿದಾಯಕ ಪೋಸ್ಟ್‌ಗಳನ್ನು ನೋಡಬಹುದಾಗಿದೆ. ಈಕೆ ಆಕಾಶದಲ್ಲಿ ಗಾಳಿಯಲ್ಲಿ ತೇಲಾಡುತ್ತಾ ಮೇಕ್ಅಪ್ ಮಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದೀಗಾ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
View this post on Instagram
ಸ್ಕೈಡೈವಿಂಗ್ ಮಾಡಮಾಡುತ್ತಲೇ ಮೆಕೆನ್ನಾ ನೈಪ್ ತನ್ನ ತ್ವಚೆಯ ಕಾಳಜಿಯನ್ನು ಹೇಗೆ ಮಾಡುತ್ತೇನೆ ಎಂಬುದನ್ನು ವಿಡಿಯೋ ಮಾಡಿದ್ದಾರೆ. ಆಕಾಶದಲ್ಲಿ 10,000 ಅಡಿಗಳಷ್ಟು ಎತ್ತರದಲ್ಲಿ ನೈಪ್ ಈ ವಿಡಿಯೋ ಮಾಡಿ ತನ್ನ ಪೇಜಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮೆಡಿಟರೇನಿಯನ್ ಸಮುದ್ರದಲ್ಲಿ ಪತ್ತೆಯಾಯ್ತು 7000 ವರ್ಷಗಳಷ್ಟು ಹಳೆಯ ರೋಡ್!
"ನಿಮ್ಮ ಚರ್ಮದ ಆರೈಕೆ ದಿನಚರಿ ಏನು?" ಎಂಬ ಶೀರ್ಷಿಕೆಯೊಂದಿಗೆ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೌಂದರ್ಯವರ್ಧಕವೊಂದರ ಪ್ರಚಾರದ ಭಾಗವಾಗಿದ್ದು, ಆ ಉತ್ಪನ್ನಗಳನ್ನು ಸಹ ಈಕೆ ಉಲ್ಲೇಖಿಸಿ 10,000 ಅಡಿ ಎತ್ತರದಲ್ಲಿ ನನ್ನ ತ್ವಚೆಯ ಆರೈಕೆ ಮಾಡಲು ಇದಕ್ಕಿಂತ ಬೇರೆ ಉತ್ಪನ್ನವಿಲ್ಲ. ನೀವೂ ಕೂಡ ಉತ್ತಮ ತ್ವಚೆಗಾಗಿ ಈ ಉತ್ಪನ್ನ ಬಳಸಿ ಎಂದು ಬರೆದುಕೊಂಡಿದ್ದಾರೆ.
ವಿಡಿಯೋಗೆ ಭಾರಿ ಮೆಚ್ಚುಗೆ
ನೈಪ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಅವರ ವೀಡಿಯೊವನ್ನು ವೀಕ್ಷಿಸಿದ್ದಾರೆ ಮತ್ತು ಕಾಮೆಂಟ್‌ಗಳು ಸಹ ಪರ-ವಿರೋಧ ಎನ್ನುವಂತಿವೆ. ಕೆಲ ಬಳಕೆದಾರರು ಆಕೆಯ ಧೈರ್ಯದ ಬಗ್ಗೆ ಕಾಮೆಂಟ್ ಮಾಡಿದ್ದು, ನಿಮ್ಮ ಜೀವನವನ್ನು ಹೀಗೆ ಆನಂದಿಸಿ ಮತ್ತು ನಿಮಗೆ ಸಾಧ್ಯವಾದಷ್ಟು ಹಾರುತ್ತಿರಿ" ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು ಹಾಸ್ಯಮಯವಾಗಿ "ಕ್ಯಾಮೆರಾ ಹಿಡಿದವರು ಯಾರು ಎಂಬ ಗೊಂದಲದಲ್ಲಿಯೇ ನಾನು ಶೀರ್ಷಿಕೆ ಓದಿದೆ" ಎಂದು ಕ್ಯಾಮೆರಾ ಹಿಡಿದವರು ಯಾರಪ್ಪ ಎಂದು ಬಳಕೆದಾರರು ಬರೆದಿದ್ದಾರೆ. ಇನ್ನೂ ಕೆಲವರು ಇದೆಂಥಾಹ ಹುಚ್ಚಾಟ ಎಂದೂ ಸಹ ನೈಪ್ ಅವರನ್ನು ಕೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ