Viral Video: ಜೇಡ ಬಲೆ ಕಟ್ಟುವುದನ್ನ ನೋಡಿದ್ದೀರಾ? ಇಲ್ಲಿದೆ ನೋಡಿ ಆ ಸುಂದರ ವಿಡಿಯೋ

Spider Weaving Web: ಇನ್ನು ಹೆಚ್ಚಿನ ಜನರು  ಕಾಮೆಂಟ್ ಕೂಡ ಮಾಡಿದ್ದು, ಇಂಥಹ ಅದ್ಭುತ ದೃಶ್ಯ ನೋಡಲು ಸಂತೋಷವಾಗುತ್ತಿದೆ ಎಂದಿದ್ದಾರೆ.

ಬಲೆ ಹೆಣೆಯುತ್ತಿರುವ ಜೇಡ

ಬಲೆ ಹೆಣೆಯುತ್ತಿರುವ ಜೇಡ

  • Share this:
ಜೇಡರ ಹುಳಗಳು ಪ್ರತಿಯೊಬ್ಬರ ಮನೆಯಲ್ಲೂ ಕಾಣಸಿಗುತ್ತದೆ, ಹಳ್ಳಿ ಪ್ರದೇಶಗಳಲ್ಲಿ ಇದು ಸಾಮಾನ್ಯ.  ಮಳೆಗಾಲದಲ್ಲಿ ಜೇಡರ ಬಲೆಯ ಮೇಲೆ ನೀರು ಕುಳಿತಾಗ ಎಷ್ಟು ಸೊಗಸಾಗಿ ಕಾಣುತ್ತದೆ ಎಂಬುದನ್ನ ನಾವು ಹಲವು ಬಾರಿ ಫೋಟೋಗಳಲ್ಲಿ ನೋಡಿರುತ್ತೇವೆ. ಆದರೆ ಜೇಡ ಬಲೆ ಕಟ್ಟುವುದು ಹೇಗೆ ಎಂಬುದನ್ನ ನೋಡಿದ್ದೀರಾ? ಜೇಡಗಳು ಭೂಮಿಯಲ್ಲಿರುವ ಅತ್ಯಂತ  ಆಕರ್ಷಕ ಜೀವಿಗಳಲ್ಲಿ ಒಂದಾಗಿದೆ, ಇದು ವಿಶಿಷ್ಟವಾದ ಆಕಾರ ಮತ್ತು ಗಾತ್ರವನ್ನು ಹೊಂದಿರುವುದಲ್ಲದೆ, ಅದು ಗಮನ ಸೆಳೆಯುವಂತಿದೆ.

ಸಾಮಾಜಿಕ ಜಾಲಾತಾಣಗಳಲ್ಲಿ ದಿನಕ್ಕೊಂದು ಫೋಟೋ ವಿಡಿಯೋ ವೈರಲ್ ಆಗುತ್ತದೆ. ಕೆಲವೊಮ್ಮೆ ಅಚ್ಚರಿ ಮೂಡಿಸಿದರೆ ಕೆಲವೊಂದು ನಗು ತರಿಸುತ್ತದೆ. ಇದೀಗ ಜೇಡವೊಂದು ಬಲೆ ಕಟ್ಟುತ್ತಿರುವ ದೃಶ್ಯ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ.  ನಮ್ಮ ಪ್ರಕೃತಿಯಲ್ಲಿ ಪ್ರತಿಯೊಂದು ವಿಭಿನ್ನ. ಕೆಲವೊಂದು ವಿಚಾರಗಳು ಕುತೂಹಲವನ್ನು ಮೂಡಿಸುತ್ತದೆ.

ಇನ್ನು ಜೇಡ ಅತಿ ಸುಂದರವಾಗಿ ಬಲೆಯನ್ನು ಹೆಣೆಯುತ್ತದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತು, ಆದರೆ ಹೇಗೆ ಎಂಬುದು ಮಾತ್ರ ಪ್ರಶ್ನೆಯಾಗಿತ್ತು. ಈ ವೈರಲ್ ವಿಡಿಯೊ ಈ ಪ್ರಶ್ನೆಗೂ ಉತ್ತರ ನೀಡಿದೆ.1 ನಿಮಿಷ 56 ಸೆಕೆಂಡಿನ ಈ ವಿಡಿಯೋ ಕ್ಲಿಪ್‌ನಲ್ಲಿ ಜೇಡರ ಹುಳು ತುಂಬಾ ಅದ್ಬುತವಾಗಿ ತನ್ನ ಬಲೆಯನ್ನು ಕಟ್ಟುವುದನ್ನ ನೋಡಬಹುದಾಗಿದೆ.  ಅಲ್ಲದೇ ಬಲೆ ಕಟ್ಟುವಾಗ ಜೇಡವು ಒಂದು ನಿಮಿಷ ಬ್ರೇಕ್ ಸಹ ಪಡೆಯದೇ ಅತ್ಯಂತ ವೇಗವಾಗಿ ಬಲೆ ಹೆಣೆದಿದ್ದು, ನಿಜಕ್ಕೂ  ಜನರಲ್ಲಿ ಅಚ್ಚರಿಗೆ ಕಾರಣವಾಗಿದೆ.  ಬಲೆ ಸುಂದರವಾಗಿ ಕಟ್ಟುವುದಲ್ಲದೇ ಯಾವುದೇ ವಿರಾಮವಿಲ್ಲದೇ ಅತಿ ವೇಗವಾಗಿ ಜೇಡ ಬಲೆಯನ್ನು ಕಟ್ಟಿರುವುದು ಜೇಡದ ಸಾಮರ್ಥ್ಯವನ್ನು ತೋರಿಸುತ್ತದೆ.

ಇದನ್ನೂ ಒದಿ: ನೀರಿನಲ್ಲಿ ಮೊಲದ ಈಜಾಟ, ವೈರಲ್ ವಿಡಿಯೋಗೆ ನೆಟ್ಟಿಗರು ಫಿದಾ

ಇನ್ನು ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋ ವೈರಲ್ ಆದರೆ ಸಾಕು ಅದು ಎಲ್ಲಿಯವರೆಗೆ ಬೇಕಾದರು ತಲುಪುತ್ತದೆ.  ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದ್ದು, ಹಲವಾರು ಜನರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.  ಈ ವೀಡಿಯೋವನ್ನು ಒಂದು ದಿನದ ಹಿಂದೆ ಶೇರ್ ಮಾಡಲಾಗಿದ್ದು,ಇದನ್ನು ಸುಮಾರು 1 ಲಕ್ಷ 60 ಸಾವಿರ ಜನರು ವೀಕ್ಷಿಸಿದ್ದಾರೆ.

ಈ ವಿಡಿಯೋ ನೋಡಿ ನೆಟ್ಟಿಗರು ಸಂತಸಗೊಂಡಿದ್ದು, ಭಾರೀ ಸಂಖ್ಯೆಯಲ್ಲಿ ಕಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ಸುಂದರವಾಗಿ ಮಾತ್ರವಲ್ಲದೆ ತುಂಬಾ ಮುಖ್ಯವಾಗಿದೆ. ಆ ಜಾಲಗಳು ಇತರ ಕಿರಿಕಿರಿ ಮತ್ತು ದೋಷಗಳನ್ನು ಹಾಗೂ ಸಮಸ್ಯೆಗಳನ್ನು ನಿಮ್ಮ ಮನೆಯಿಂದ ದೂರವಿಡುತ್ತವೆ. ಜೇಡರ ಜಾಲವನ್ನು ಎಂದಿಗೂ ನಾಶ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

ಇನ್ನು ಹೆಚ್ಚಿನ ಜನರು  ಕಾಮೆಂಟ್ ಕೂಡ ಮಾಡಿದ್ದು, ಇಂಥಹ ಅದ್ಭುತ ದೃಶ್ಯ ನೋಡಲು ಸಂತೋಷವಾಗುತ್ತಿದೆ ಎಂದರೆ, ಇನ್ನು ಕೆಲವರು ಹಲವಾರು ದಿನಗಳಿಂದ ಜೇಡ ಹೇಗೆ ಬಲೆ ಕಟ್ಟುತ್ತದೆ ಎಂಬ ಅನುಮಾನವಿತತು ಅದಕ್ಕೆ ಉತ್ತರ ಲಭಿಸಿದೆ ಎಂದಿದ್ದಾರೆ.

ಇನ್ನೊಬ್ಬ ಟ್ವಿಟರ್ ಬಳಕೆದಾರರು, ವಾಹ್ ಪ್ರಕೃತಿ ಅದ್ಭುತವಲ್ಲವೇ 'ಜೇಡಗಳು  ಎಷ್ಟು ಅದ್ಭುತವಲ್ಲವೇ' ನಾನು ಜೇಡಗಳನ್ನು ಪ್ರೀತಿಸುತ್ತೇನೆ. ನಾನು ಬಾಲ್ಯದಲ್ಲಿ ಜೇಡಗಳ ನೋಡಿ ಭಯಪಡುತ್ತಿದೆ, ಆದರೆ ನೆಮ್ಮದಿ ಮಾತ್ರವಲ್ಲದೆ ಹೆಚ್ಚು ತಾಳ್ಮೆ ಮತ್ತು ತಿಳುವಳಿಕೆಯನ್ನು ನೀಡಿದೆ ಎಂದು ಬರೆದುಕೊಂಡಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು
Published by:Sandhya M
First published: