• Home
  • »
  • News
  • »
  • trend
  • »
  • Snake: ಇಷ್ಟು ಉದ್ದನೆಯ ಹಾವು ನೀರಿಗೆ ಹೇಗೆ ಎಂಟ್ರಿ ಕೊಟ್ಟಿದೆ ನೋಡಿ! ಆ ಬಳಿಕ ಆಗಿದ್ದೇನು?

Snake: ಇಷ್ಟು ಉದ್ದನೆಯ ಹಾವು ನೀರಿಗೆ ಹೇಗೆ ಎಂಟ್ರಿ ಕೊಟ್ಟಿದೆ ನೋಡಿ! ಆ ಬಳಿಕ ಆಗಿದ್ದೇನು?

ಹೊಳೆಯಲ್ಲಿ ದೈತ್ಯಾಕಾರದ ಹಾವು ಪ್ರತ್ಯಕ್ಷ

ಹೊಳೆಯಲ್ಲಿ ದೈತ್ಯಾಕಾರದ ಹಾವು ಪ್ರತ್ಯಕ್ಷ

ವೈರಲ್ ಆಗಿರುವ ವೀಡಿಯೋದಲ್ಲಿ ಕೆಲವು ವಿದೇಶೀಯರು ಸುಂದರವಾದ ನೀಲಿ ಬಣ್ಣದ ನೀರಿರುವ ಹೊಳೆಯಲ್ಲಿ ಈಜುವುದನ್ನು ಆನಂದಿಸುತ್ತಿದ್ದರು. ಇದ್ದಕ್ಕಿದ್ದಂತೆ ಆ ಕಡೆಯಿಂದ ಒಂದು ಉದ್ದನೆಯ ಹಾವು ನೀರಿಗೆ ಪ್ರವೇಶಿಸಿತು ಮತ್ತು ಒಬ್ಬ ಹುಡುಗನ ಸ್ವಲ್ಪ ದೂರದಲ್ಲಿಯೇ ಅದು ಈಜಲು ಪ್ರಾರಂಭಿಸಿತು.

  • Share this:

ಮೊನ್ನೆ ತಾನೇ ನಾವು ಹೀಗೆ ಸಾಮಾಜಿಕ ಮಾಧ್ಯಮದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗಿರುವ ಕೆಲವು ಫೋಟೋಗಳಲ್ಲಿ ಮನೆಯ ಈಜುಕೊಳದಲ್ಲಿ ಒಂದು ದೈತ್ಯವಾದ ಮೊಸಳೆಯೊಂದು ಇರುವುದನ್ನು ಕಂಡು ಜನರು ಆಘಾತಕ್ಕೆ ಒಳಗಾಗಿರುವುದರ ಬಗ್ಗೆ ಹೇಳಿದ್ದೆವು. ಈ ಸರಿಸೃಪಗಳೇ ಹೀಗೆ ನೋಡಲು ತುಂಬಾನೇ ಭಯಾನಕವಾಗಿರುತ್ತವೆ (Scary) ಮತ್ತು ಅವುಗಳು ಎಲ್ಲಿ, ಯಾವಾಗ, ಹೇಗೆ ಬರುತ್ತವೆ ಮತ್ತು ಅಡಗಿ ಕುಳಿತಿರುತ್ತವೆ ಎನ್ನುವುದನ್ನು ಯಾರು ಊಹಿಸಲು ಸಾಧ್ಯವಾಗುವುದಿಲ್ಲ. ನಂತರ ಅಲ್ಲಿನ ಅಧಿಕಾರಿಗಳು ಜನರಿಗೆ ಈಜುಕೊಳಕ್ಕೆ (Swimming pool) ಇಳಿಯುವ ಮೊದಲು ಈಜುಕೊಳವನ್ನು ಒಮ್ಮೆ ಸರಿಯಾಗಿ ಪರಿಶೀಲಿಸಿಕೊಂಡು ನಿಧಾನವಾಗಿ ಧುಮುಕಿ ಎಂದು ಎಚ್ಚರ ನೀಡಿದ್ದು ಇನ್ನೂ ನಮ್ಮ ನೆನಪಿನಿಂದ ಮಾಸುವ ಮೊದಲೇ ಇನ್ನೊಂದು ಇಂತಹ ವೀಡಿಯೋ (Video) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ನೋಡಿ. ಇಲ್ಲಿ ಸ್ವಲ್ಪ ಭಿನ್ನತೆ ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಹೊಳೆಯಲ್ಲಿ ದೈತ್ಯಾಕಾರದ ಹಾವು ಪ್ರತ್ಯಕ್ಷ


ಸಾಮಾನ್ಯವಾಗಿ ಬೇಸಿಗೆಯಲ್ಲಿ ಜನರು ಸುಡುವ ಬಿಸಿಲು ಮತ್ತು ಶಾಖದಿಂದ ಸ್ವಲ್ಪ ಮಟ್ಟಿಗಾದರೂ ದೇಹವನ್ನು ತಂಪಾಗಿರಿಸಿಕೊಳ್ಳಬೇಕು ಎಂದು ಹೇಳಿ ಹತ್ತಿರದ ಈಜುಕೊಳ, ಕಡಲತೀರ ಅಥವಾ ಸಿಹಿನೀರಿನ ನದಿಯಲ್ಲಿ ಈಜಲು ಹೋಗುವುದುಂಟು.


ಬೇಸಿಗೆಯನ್ನು ಆನಂದಿಸುವ ಅತ್ಯುತ್ತಮ ಮಾರ್ಗಗಳಲ್ಲಿ ಇದು ಒಂದಾಗಿದೆ ಎಂದು ಹೇಳಬಹುದು. ಈಜುವುದು ದೇಹಕ್ಕೆ ಸರ್ವತೋಮುಖ ವ್ಯಾಯಾಮವಾಗಿದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುದ್ಧ ಗಾಳಿ, ಬಿಸಿಲು ಮತ್ತು ನೀರನ್ನು ಎಲ್ಲವೂ ಒಂದೇ ಸಮಯದಲ್ಲಿ ಆನಂದಿಸಲು ಇದು ಉತ್ತಮ ಮಾರ್ಗವಾಗಿದೆ.


ಹೀಗೆ ಹಾಯಾಗಿ ಈಜಾಡಬೇಕಾದರೆ ಹಾವು ಬಂದರೆ ಹೇಗಿರುತ್ತದೆ ಎಂದು ಆಡಿದ ಮಾತಿಗೆ ನಾವು ಹೆದರುತ್ತೇವೆ, ಇನ್ನೂ ನಿಜವಾಗಿಯೂ ಹಾವು ಬಂದರೆ ಹೇಗಿರುತ್ತದೆ ಎಂದು ಈ ವೀಡಿಯೋದಲ್ಲಿ ನೋಡಿ.


 ಹುಡುಗನ ಬಳಿಗೆ ಬಂದ ಹಾವು


ಇಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಕೆಲವು ವಿದೇಶೀಯರು ಸುಂದರವಾದ ನೀಲಿ ಬಣ್ಣದ ನೀರಿರುವ ಹೊಳೆಯಲ್ಲಿ ಈಜುವುದನ್ನು ಆನಂದಿಸುತ್ತಿದ್ದರು. ಇದ್ದಕ್ಕಿದ್ದಂತೆ ಆ ಕಡೆಯಿಂದ ಒಂದು ಉದ್ದನೆಯ ಹಾವು ನೀರಿಗೆ ಪ್ರವೇಶಿಸಿತು ಮತ್ತು ಒಬ್ಬ ಹುಡುಗನ ಸ್ವಲ್ಪ ದೂರದಲ್ಲಿಯೇ ಅದು ಈಜಲು ಪ್ರಾರಂಭಿಸಿತು.


ಇದನ್ನೂ ಓದಿ: Snake Bite: ಟಾಯ್ಲೆಟ್​ನಲ್ಲಿ ಕೂತು ವಿಡಿಯೋ ಗೇಮ್ಸ್ ಆಡ್ತಿದ್ದ! ಹಾವು ಕಚ್ಚಿದ್ದೆಲ್ಲಿಗೆ ನೋಡಿ


ಹಾವು ಅವನನ್ನು ಬೆನ್ನಟ್ಟುವುದನ್ನು ಬಿಟ್ಟು ಹಾಗೆಯೇ ಮುಂದುವರಿಸುತ್ತಿದ್ದಂತೆ ಇನ್ನೊಬ್ಬ ಹುಡುಗ ಅಲ್ಲೇ ದೊಡ್ಡ ಬಂಡೆಯ ಮೇಲೆ ಕುಳಿತು ವೀಡಿಯೋ ಮಾಡಲು ಮುಂದುವರೆಸಿದರೆ, ಆ ಹಾವು ಆ ಹುಡುಗನ ಕಡೆಗೆ ಬಂದಿತು. ಆತುರಾತುರವಾಗಿ ಆ ಹುಡುಗ ಅಲ್ಲಿಂದ ಬೇರೆ ಬಂಡೆಯ ಮೇಲೆ ಹತ್ತಿ ಕುಳಿತನು. ಅಲ್ಲಿದ್ದವರು ಈ ಹಾವನ್ನು ನೋಡಿ ಸ್ವಲ್ಪ ಮಟ್ಟಿಗೆ ಭಯಭೀತರಾಗಿದ್ದಂತೂ ನಿಜ ಎಂದು ಹೇಳಬಹುದು.


ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಯ್ತು ಈ ವಿಡಿಯೋ


ಈ ವೀಡಿಯೋವನ್ನು ಇತ್ತೀಚೆಗೆ 'ವೈಲ್ಡಿಸ್ಟಿಕ್' ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದೆ. ಇದು ಈವರೆಗೂ 4.2 ಮಿಲಿಯನ್ ವೀಕ್ಷಣೆಗಳನ್ನು ಮತ್ತು 108 ಸಾವಿರ ಲೈಕ್ ಗಳನ್ನು ಪಡೆದಿದೆ.


ಕೆಲವು ಇನ್‌ಸ್ಟಾಗ್ರಾಮ್ ಬಳಕೆದಾರರು ಈ ವೀಡಿಯೋ ನೋಡಿ ಹೆದರಿದಂತೆ ಕಾಣಲಿಲ್ಲ, ಏಕೆಂದರೆ ಅದು ಅವರ ಸಾಕುಪ್ರಾಣಿಯಾಗಿರುವಂತೆ ಮತ್ತು ಅದರ ದೇಹವನ್ನು ತಂಪು ಮಾಡಿಕೊಳ್ಳಲು ಆ ನೀರಿನಲ್ಲಿ ಅದನ್ನು ಬಿಟ್ಟಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

View this post on Instagram


A post shared by Wildistic ™ (@wildistic)

ಇದನ್ನೂ ಓದಿ: Crocodile: ಸ್ವಿಮ್ಮಿಂಗ್​ ಪೂಲ್​ಗೆ ಹಾರೋ ಮುನ್ನ ಹುಷಾರ್, ತಂಪು ಕೊಳದಲ್ಲಿತ್ತು ಡೆಡ್ಲೀ ಮೊಸಳೆ


ಹೀಗೆ ಈ ಹಾವುಗಳು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಕಂಡು ಬರಬಹುದು. ಇತ್ತೀಚೆಗೆ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನ ಸನ್ ಶೈನ್ ಕೋಸ್ಟ್ ನ ಬುಡೆರಿಮ್ ನ ಮಳೆಕಾಡಿನ ಬಳಿ ಇರುವ ಒಂದು ಮನೆಯಲ್ಲಿ ಆರು ದೊಡ್ಡ ಹೆಬ್ಬಾವುಗಳು ಕಾಣಿಸಿಕೊಂಡಿರುವ ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.


ಹಾವಿನ ರಕ್ಷಕರೊಬ್ಬರು ಮನೆಯಲ್ಲಿ ಯಾವ ಯಾವ ಸ್ಥಳಗಳಲ್ಲಿ ಈ ಆರು ಕಾರ್ಪೆಟ್ ಹೆಬ್ಬಾವುಗಳು ಅಡಗಿ ಕುಳಿತಿವೆ ಎಂದು ತೋರಿಸುವ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿ ಕೊಂಡಿದ್ದನ್ನು ಸಹ ಇಲ್ಲಿ ನೆನಪಿಸಿಕೊಳ್ಳಬಹುದು.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು