ಕೂಲ್​ ಡ್ರಿಂಕ್ಸ್​ ಬಳಸಿ ಆಮ್ಲೆಟ್​ ಮಾಡಿದ ವಿಡಿಯೋ ವೈರಲ್‌: ಟ್ವಿಟ್ಟರ್‌ನಲ್ಲಿ ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ..!

ಆಹಾರ ಪ್ರಿಯರು ನಾನಾ ರೀತಿಯ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈಗಲೂ ಸಹ ಒಂದು ವಿಡಿಯೋ ವೈರಲ್​ ಆಗಿದ್ದು, ಇದರಲ್ಲಿ ಕೂಲ್​ ಡ್ರಿಂಕ್ಸ್​ ಬಳಸಿ ಆಮ್ಲೆಟ್​ ಮಾಡಲಾಗಿದೆ.

ಫ್ಯಾಂಟಾ ಆಮ್ಲೆಟ್​

ಫ್ಯಾಂಟಾ ಆಮ್ಲೆಟ್​

  • Share this:
ಮೊಟ್ಟೆ ಬಹುಮುಖ ಭಕ್ಷ್ಯಗಳಲ್ಲಿ ಒಂದಾಗಿದೆ. ಅವುಗಳನ್ನು ನೀರಿನಲ್ಲಿ ಕುದಿಸಿದರೆ ಮತ್ತು ನೀವು ಕೆಲವೇ ಸಮಯದಲ್ಲಿ ನಿಮ್ಮ ಆಹಾರ ಅಥವಾ ಸ್ನ್ಯಾಕ್‌ ಸಿದ್ಧವಾಗುತ್ತದೆ. ಗ್ರೀಸ್ ಮಾಡಿದ ಪ್ಯಾನ್ ಮೇಲೆ ಮೊಟ್ಟೆಗಳನ್ನು ಒಡೆದು, ನೀವು ಫ್ರೈ ಮಾಡಿದ ಮೊಟ್ಟೆಗಳನ್ನು ಪಡೆಯುತ್ತೀರಿ. ಇನ್ನು, ಮೊಟ್ಟೆ ರುಚಿ ಹೇಗಿರುತ್ತದೆ ಅಂದರೆ, ಅದನ್ನು ನೀವು ಯಾವುದಾದರೂ ಗ್ರೇವಿಗೆ ಸೇರಿಸಿದರೂ ಅದು ರುಚಿಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಭಾರತದಲ್ಲೂ ಸಾಕಷ್ಟು ಕರಿಗಳಿದ್ದು, ಅದರಲ್ಲಿ ಬೇಯಿಸಿದ ಅಥವಾ ಫ್ರೈ ಮಾಡಿದ ಮೊಟ್ಟೆ ಸಹ ಸೇರಿವೆ. ಆದರೆ, ಇತ್ತೀಚಿನ ವಿಲಕ್ಷಣ ವಿಡಿಯೋವೊಂದರಲ್ಲಿ ಮೊಟ್ಟೆಯನ್ನು ಆರೆಂಜ್‌ ಡ್ರಿಂಕ್​ನಲ್ಲಿ (ಕೂಲ್​ ಡ್ರಿಂಕ್​- ಫ್ಯಾಂಟಾದಲ್ಲಿ) ಫ್ರೈ ಮಾಡುವುದನ್ನು ತೋರಿಸಲಾಗಿದೆ. ನಮ್ಮ ಈ ಮಾತನ್ನು ನೀವು ನಂಬದಿದ್ದರೇ, ಒಮ್ಮೆ ನೀವೇ ಈ ವಿಡಿಯೋ ನೋಡಿ.ಈ ಕೆಳಗಿರುವ ವಿಡಿಯೋ ನಿಮ್ಮನ್ನು ಅಚ್ಚರಿಗೀಡು ಮಾಡುತ್ತದೆ.

ಆಹಾರ ಪ್ರಿಯರು ನಾನಾ ರೀತಿಯ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈಗಲೂ ಸಹ ಒಂದು ವಿಡಿಯೋ ವೈರಲ್​ ಆಗಿದ್ದು, ಇದರಲ್ಲಿ ಕೂಲ್​ ಡ್ರಿಂಕ್ಸ್​ ಬಳಸಿ ಆಮ್ಲೆಟ್​ ಮಾಡಲಾಗಿದೆ.

Mom come pick me they're frying Fanta with eggs. pic.twitter.com/EcvoXszmTKಬೀದಿ - ಬದಿ ಹೋಟೆಲ್‌ಗಳ ಶೈಲಿಯ ತಯಾರಿಕೆಯ ವಿಡಿಯೋವನ್ನು @Agabaai ಎಂಬುವರು ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಮ್ಮ ಬಂದು ನನ್ನನ್ನು ಪಿಕ್‌ ಮಾಡಿ, ಅವರು ಫ್ಯಾಂಟಾವನ್ನು ಮೊಟ್ಟೆ ಫ್ರೈ ಮಾಡಲು ಬಳಸುತ್ತಿದ್ದಾರೆ ಎಂದು ಬಳಕೆದಾರರು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿ, 120k ವೀಕ್ಷಣೆಗಳು ಮತ್ತು ಸಾವಿರಾರು ಲೈಕ್‌ಗಳು ಹಾಗೂ ಕಮೆಂಟ್‌ಗಳನ್ನು ಗಳಿಸಿದೆ. ಆದರೆ, ಈ ವೈರಲ್‌ ವಿಡಿಯೋದ ಮೂಲವಾಗಲೀ ಅಥವಾ ಯಾವ ಸ್ಥಳದಲ್ಲಿ ಈ ರೀತಿ ಫ್ಯಾಂಟಾ ಆಮ್ಲೆಟ್‌ ವಿಡಿಯೋ ಮಾಡಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: Ananya Panday: ಬಾಸ್​ ಬೇಬಿ ಲುಕ್​ನಲ್ಲಿ ಮಾದಕ ನೋಟ ಬೀರಿದ ಅನನ್ಯಾ ಪಾಂಡೆ..!

ವಿಲಕ್ಷಣವಾದ ವಿಡಿಯೋದಲ್ಲಿ ಮೊಟ್ಟೆಗಳನ್ನು ಫ್ರೈ ಮಾಡಿದ ಮೂರು ಭಾಗಗಳಿದೆ. ಮೊದಲಿಗೆ, ಮೂರು ಮೊಟ್ಟೆಗಳನ್ನು ಫ್ರೈ ಮಾಡಿ ತಟ್ಟೆಗೆ ಹಾಕಲಾಯಿತು. ನಂತರ, ಗ್ರೇವಿ ಅಥವಾ ಬಾಜಿಯನ್ನು ತಯಾರಿಸಲಾಯಿತು. ಇದು ಸ್ಪಷ್ಟವಾಗಿ ಹಸಿರು ಚಟ್ನಿಯನ್ನು ಆಧರಿಸಿದೆ. ನಂತರ ಮೊಟ್ಟೆಗಳಿಗೆ ಟಾಪಿಂಗ್ ಮಾಡಲು ಮಸಾಲೆ, ಈರುಳ್ಳಿ, ಟೊಮ್ಯಾಟೋ ಕೆಚಪ್ ಮಿಶ್ರಣ ಮಾಡಿ ಮತ್ತು ಅದಕ್ಕಾಗಿ ಆರೆಂಜ್‌ ಕೋಲಾ ಪಾನೀಯ ಫ್ಯಾಂಟಾವನ್ನೂ ಹಾಕಿದ್ದಾರೆ. ಫ್ಯಾಂಟಾವನ್ನು ಉದಾರವಾಗಿ ತವಾ ಮೇಲೆ ಸುರಿಯಲಾಯಿತು ಮತ್ತು ನಂತರ ಫ್ರೈ ಮಾಡಿದ ಮೊಟ್ಟೆಗಳ ಮೇಲೆ ಹಾಕಲಾಯಿತು.

ಆದರೆ, ಈ ವಿಲಕ್ಷಣ ಮೊಟ್ಟೆಗಳ ಖಾದ್ಯ ಆಹಾರ ಪ್ರಿಯರಿಗೆ ಇಂಟರ್‌ನೆಟ್‌ನಲ್ಲಿ ಇಷ್ಟವಾಗಲಿಲ್ಲ. ಕೆಲವರು ಆ ವಿಡಿಯೋದಲ್ಲಿ ತಯಾರಾಗಿರುವ ಫ್ಯಾಂಟಾ ಆಮ್ಲೆಟ್‌ ಬಗ್ಗೆ ಅಸಹ್ಯಗೊಂಡರು, ಇತರರು ಭಕ್ಷ್ಯವನ್ನು ಏಕೆ ಕಂಡುಹಿಡಿಯಲಾಯಿತು ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Raj Kundra: ತಕ್ಷಣವೇ ಬಿಡುಗಡೆ ಮಾಡಿ ಎಂದು ಮನವಿ ಸಲ್ಲಿಸಿದ್ದ ರಾಜ್​ ಕುಂದ್ರಾ: ಜಾಮೀನು ಅರ್ಜಿ ತಿರಸ್ಕರಿದ ನ್ಯಾಯಾಲಯ

ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋಗೆ ಬಂದಿರುವ ಕೆಲ ಪ್ರತಿಕ್ರಿಯೆಗಳನ್ನು ನೋಡಿ...

''ಮೊಟ್ಟೆ, ಹರಿ ಚಟ್ನಿ ಹಾಗೂ ಫ್ಯಾಂಟಾ ಮಿಶ್ರಣ ಮಾಡಿ ಎಣ್ಣೆಯಲ್ಲಿ ಫ್ರೈ ಮಾಡಲಾಗಿದೆ'' ಎಂದೂ ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಇದೇ ರೀತಿ ಫ್ಯಾಂಟಾ ಬದಲು ಪೆಪ್ಸಿ ಮಿಕ್ಸ್ ಮಾಡಿಯೂ ಮೊಟ್ಟೆ ಫ್ರೈ ಮಾಡಲಾಗಿದೆ. ಇದೂ ಅದೇ ಸ್ಥಳ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ.ಫ್ಯಾಂಟಾದಲ್ಲಿ ಮಾಡಿದ ಈ ವಿಲಕ್ಷಣ ಮೊಟ್ಟೆಗಳನ್ನು ನೀವು ಟ್ರೈ ಮಾಡ್ತೀರಾ..? ಎಂದೆಲ್ಲ ಕೆಲವರು ಕಮೆಂಟ್​ ಮಾಡುತ್ತಿದ್ದಾರೆ.
First published: