Viral Video: ಹೆಲ್ಮೆಟ್​ ಧರಿಸದ ಈ ಬೈಕ್​​​ ಸವಾರನಿಗೆ ಪೊಲೀಸ್​​ ಅಧಿಕಾರಿ ಏನು ಮಾಡಿದ್ದಾರೆ ನೋಡಿ

ಪೊಲೀಸ್​​ ಬೈಕ್​ ಸವಾರಿನಿಗೆ ಹೆಲ್ಮೆಟ್​​ ತೊಡಿಸಿ ಸ್ತೋತ್ರವನ್ನು ಪಠಿಸುವಂತೆ ಸಂಚಾರ ನಿಯಮವನ್ನು ವಿವರಿಸುತ್ತಾರೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪೊಲೀಸ್​ ಅಧಿಕಾರಿ ಮತ್ತು ಬೈಕ್​ ಸವಾರ

ಪೊಲೀಸ್​ ಅಧಿಕಾರಿ ಮತ್ತು ಬೈಕ್​ ಸವಾರ

  • Share this:
    ಸಂಚಾರ ನಿಯಮವನ್ನು ಎಷ್ಟೇ ಬಿಗಿಗೊಳಿಸಿದರು ದ್ವಿಚಕ್ರ ವಾಹನ ಸವಾರರು ಮಾತ್ರ ನಿಯಮಗಳನ್ನು ಗಾಳಿಗೆ ತೂರಿ ಬಿಡುತ್ತಾರೆ. ಅದರಲ್ಲೂ ಪ್ರಾಣ ಹಾನಿಗೆ ಸಂಬಂಧಿಸಿದಂತೆಯೇ ಹೆಲ್ಮೆಟ್​​ (Helmet) ಧರಿಸುವಂತೆ ಎಷ್ಟೇ ಜಾಹೀರಾತು (Advertisement) ಅಥವಾ ನಿಯಮವನ್ನು (Rules) ಜಾರಿಗೆ ತಂದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಓಡಾಡುವ ವಾಹನ ಸವಾರರ ಸಂಖ್ಯೆಯೇ ಜಾಸ್ತಿ. ಆದರೆ ಇಲ್ಲೊಂದು ವಿಡಿಯೋ (Video) ಗಮನಿಸಿದ್ದೀರಾ? ಪೊಲೀಸ್​​ (Police) ಹೆಲ್ಮೆಟ್​ ಧರಿಸದ ಸವಾರನಿಗೆ ಏನು ಮಾಡಿದ್ದಾರೆ ಎಂದು ಈ ವಿಡಿಯೋ ನೋಡಿದರೆ ನಗು ಬರುತ್ತದೆ. ಈ ವಿಡಿಯೋ ಹಾಸ್ಯಸ್ಪದದಿಂದ ಕೂಡಿದ್ದರೂ ಪೊಲೀಸ್​ ಅಪಘಾತದಿಂದ ರಕ್ಷಿಸಿಕೊಳ್ಳಲು ಹೆಲ್ಮೆಟ್​ ​ ಧರಿಸು ಎಂದು ಮನವರಿಕೆ ಮಾಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಜೈಕಿ ಯಾದವ್​ ಎಂಬ ಬಳಕೆದಾರ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪೊಲೀಸ್​ ಹೆಲ್ಮೆಟ್​​ ಧರಿಸಿದ ಸವಾರನಿಗೆ ಹೆಲ್ಮಟ್​​​ ಧರಿಸಿ ಮಂತ್ರ ಪಠಿಸಿದಂತೆ ಜಾಗೃತಿ ಸಾರಿದ್ದಾರೆ. ವಿಡಿಯೋ ಹಂಚಿಕೊಂಡ ವ್ಯಕ್ತಿ ‘‘ ಈ ಸಹೋದರನಿಗೆ ತನ್ನ ಮದುವೆಯಲ್ಲೂ ಸಹ ಇಂತಹ ಗೌರವ ಸಿಕ್ಕಿರಲು ಸಧ್ಯವಿಲ್ಲ ಎಂದು’’ ಶೀರ್ಷಿಕೆ ನೀಡಿದ್ದಾರೆ.

    ಪೊಲೀಸ್​​ ಬೈಕ್​ ಸವಾರಿನಿಗೆ ಹೆಲ್ಮೆಟ್​​ ತೊಡಿಸಿ ಸ್ತೋತ್ರವನ್ನು ಪಠಿಸುವಂತೆ ಸಂಚಾರ ನಿಯಮವನ್ನು ವಿವರಿಸುತ್ತಾರೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಈ ವಿಡಿಯೋ ಕ್ಲಿಪ್ ಅನ್ನು ಸೆಪ್ಟೆಂಬರ್ 9 ರಂದು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ, ಇದು 191,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಸುಮಾರು 10,000 ಲೈಕ್ಸ್​ಗಳನ್ನು ಗಳಿಸಿದೆ. ವಿಡಿಯೋದ ಕಾಮೆಂಟ್ ವಿಭಾಗದಲ್ಲಿ, ಹಲವಾರು ಇಂಟರ್ನೆಟ್ ಬಳಕೆದಾರರು ತಮ್ಮ ವಿಶಿಷ್ಟ ಕಲ್ಪನೆಗಾಗಿ ಅಧಿಕಾರಿಯನ್ನು ಶ್ಲಾಘಿಸಿದ್ದಾರೆ. ಅದರಲ್ಲಿ ಒಬ್ಬ ಬಳಕೆದಾರ ಪೋಲೀಸ್ ಹೆಸರನ್ನು ಭಗವತ್ ಪ್ರಸಾದ್ ಪಾಂಡೆ ಎಂದು ಬಹಿರಂಗಪಡಿಸಿದ್ದಾರೆ.





    ಇದನ್ನೂ ಓದಿ: Traffic Rules: ಟ್ರಾಫಿಕ್ ಪೊಲೀಸ್​ ಜೊತೆ ಕಿರಿಕ್ ಮಾಡಿದ್ರೆ ಹುಷಾರ್​, ಮೊದಲು ಈ ಹೊಸ ರೂಲ್ಸ್​ ಬಗ್ಗೆ ತಿಳಿದುಕೊಳ್ಳಿ!

    ಹೆಲ್ಮೆಟ್​​ ಧರಿಸಿದರೆ ಮುಂದಾಗುವ ಅನಾಹುತವನ್ನು ತಪ್ಪಿಸಬಹುದು. ಅದರಲ್ಲೂ ಹೆಲ್ಮೆಟ್​ ಇದ್ದರೆ ದೊಡ್ಡದರಲ್ಲಾಗುವ ಅನಾಹುತ ಸಣ್ಣದರಲ್ಲಿ ಆಗಬಹುದು. ಆದರೆ ಹೆಲ್ಮೆಟ್​​ ಧರಿಸಲು ಬಹುತೇಕರು ಹಿಂದೆ ಜಾರುವವರೇ ಜಾಸ್ತಿ. ಅದರಲ್ಲೂ ಯುವಕರಂತೂ ಕೂದಲು ಹಾಳಾಗುತ್ತೆ ಎಂದು ಹೆಲ್ಮೆಟ್​​ ಧರಿಸುದಿಲ್ಲ. ಆದರೆ ಇವರು ಹೋಗುವ ಸ್ಪೀಡ್​ಗೇನೂ ಕಡಿಮೆ ಇಲ್ಲ.

    ಇದನ್ನೂ ಓದಿ: Viral Video: ಮಲಗಿರುವ ಸಿಂಹಿಣಿಯನ್ನು ಕೆಣಕಿದ ಸಿಂಹ; ಬಳಿಕ ಏನಾಯ್ತು? ಈ ವಿಡಿಯೋ ನೋಡಿ

    ಹೆಲ್ಮೆಟ್​​ ಧರಿಸಿ ಬಹುಕುಳಿದ ಅನೇಕ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಳ್ಲಿ ವೈರಲ್​ ಆಗುತ್ತಿರುತ್ತವೆ. ಆದರೆ ಬಹುತೇಕರು ಹೆಲ್ಮೆಟ್​​ ಧರಿಸಲು ಹಿಂಜರಿಯುತ್ತಾರೆ. ಬೈಕ್​ ಚಲಾಯಿಸುವ ಮುಂಬದಿಯ ಮತ್ತು ಹಿಂಬದಿಯ ಸವಾರ ಹೆಲ್ಮೆಟ್​ ಧರಿಸಿದರೆ ಇಂತಹ ಪ್ರಾಣಪಾಯದಿಂದ ಪಾರಗಬಹುದಾಗಿದೆ.
    Published by:Harshith AS
    First published: