ಈ ಉಡುಗೊರೆ ಅನ್ನೋ ಪದ ಕೇಳಿದರೆ ಸಾಕು ನಮ್ಮೆಲ್ಲರ ಮುಖದಲ್ಲಿ ಒಂದು ನಗು ಮೂಡುವುದು ಸಹಜ. ಹೌದು.. ನಮ್ಮ ಹುಟ್ಟುಹಬ್ಬಕ್ಕೆ (Birthday), ಮದುವೆ ವಾರ್ಷಿಕೋತ್ಸವಕ್ಕೆ ಮತ್ತು ಇನ್ನ್ಯಾವುದೋ ವಿಶೇಷವಾದ ಸಂದರ್ಭದಲ್ಲಿ ನಮಗೆ ತುಂಬಾ ಬೇಕಾದವರು ಏನೋ ಒಂದು ಉಡುಗೊರೆಯನ್ನು ನೀಡಿದರೆ ನಮಗೆ ತುಂಬಾನೇ ಖುಷಿ ಆಗುತ್ತದೆ. ಅದರಲ್ಲೂ ನಮ್ಮನ್ನು ತುಂಬಾನೇ ಪ್ರೀತಿಸುವ ಜೀವ ನಮಗೆ ಬೇಕಾದ್ದುದ್ದನ್ನು ಉಡುಗೊರೆಯಾಗಿ (Gift) ಕೊಟ್ಟರೆ, ಅದರಲ್ಲೂ ನಮಗೆ ಗೊತ್ತಿರದೆ ಸರ್ಪ್ರೈಸ್ (Surprise) ಆಗಿ ಕೊಟ್ಟರೆ ಅದರ ಖುಷಿ ದುಪ್ಪಟ್ಟಾಗಿರುತ್ತದೆ ಮತ್ತು ಆ ಕ್ಷಣ ನಮ್ಮನ್ನು ಭಾವುಕರನ್ನಾಗಿಸದೆ ಬಿಡದು ಅಂತ ಹೇಳಬಹುದು.
ಈಗಂತೂ ಈ ಸಾಮಾಜಿಕ ಮಾಧ್ಯಮಗಳಲ್ಲಿ ಹೀಗೆ ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯನ್ನು ಸರ್ಪ್ರೈಸ್ ಆಗಿ ಕೊಟ್ಟು ಅದನ್ನು ನೋಡಿದಾಗ ಅವರಿಗಾಗುವ ಆ ಆನಂದವನ್ನು ವೀಡಿಯೋದಲ್ಲಿ ಸೆರೆ ಹಿಡಿದು ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ ಸಹ ನಾವು ತಾಯಿ ಮಗನ ಹುಟ್ಟುಹಬ್ಬಕ್ಕೆ ಮತ್ತು ತಾಯಿಯ ಹುಟ್ಟುಹಬ್ಬಕ್ಕೆ ಮಗನು ಸರ್ಪ್ರೈಸ್ ಆಗಿ ಉಡುಗೊರೆಯೊಂದನ್ನು ನೀಡಿ ಅವರನ್ನು ಖುಷಿ ಪಡಿಸಿದ ವೀಡಿಯೋಗಳನ್ನು ನೋಡಿ ನಾವು ಖುಷಿ ಪಟ್ಟಿದ್ದ ಉದಾಹರಣೆಗಳು ತುಂಬಾನೇ ಇವೆ ಅಂತ ಹೇಳಬಹುದು.
ತಂಗಿಗೆ ಸರ್ಪ್ರೈಸ್ ಗಿಫ್ಟ್
ಆದರೆ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೋ ತುಣುಕಿನಲ್ಲಿ ಒಬ್ಬ ಸಹೋದರ ತನ್ನ ಸಹೋದರಿಗೆ ಬೇಕಾದ ಉಡುಗೊರೆಯೊಂದನ್ನು ಸರ್ಪ್ರೈಸ್ ಆಗಿ ಕೊಟ್ಟು ಆಕೆಗೆ ಭಾವುಕಳನ್ನಾಗಿ ಮಾಡಿದ್ದಾರೆ. ಎಂದರೆ ಸಂತೋಷದಿಂದ ಆ ಸಹೋದರಿಯ ಕಣ್ಣಲ್ಲಿ ನೀರು ಬಂದಿದ್ದು, ಅಲ್ಲೇ ಇದ್ದ ತನ್ನ ಸಹೋದರನನ್ನು ಬಿಗಿದಪ್ಪಿಕೊಂಡಿದ್ದಾಳೆ.
ಈ ಅಣ್ಣ-ತಂಗಿ, ಅಕ್ಕ-ತಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ ಈ ಒಡಹುಟ್ಟಿದವರ ಸಂಬಂಧಗಳು ತುಂಬಾನೇ ಅಮೂಲ್ಯವಾದವುಗಳು ಅಂತ ಹೇಳಬಹುದು. ಈ ಸಂಬಂಧಗಳು ನಾವು ಹೊಂದಿರುವ ಅತ್ಯಂತ ಶಕ್ತಿಯುತ ಕೊಂಡಿಗಳಲ್ಲಿ ಒಂದಾಗಿದೆ ಅಂತ ಹೇಳಬಹುದು. ಏಕೆಂದರೆ ಅವು ಜೀವನದ ಆರಂಭದಲ್ಲಿ ರೂಪುಗೊಳ್ಳುತ್ತವೆ ಮತ್ತು ನಾವು ಭಾವನಾತ್ಮಕವಾಗಿ ಹೇಗೆ ಅಭಿವೃದ್ಧಿ ಹೊಂದುತ್ತೇವೆ ಎಂಬುದರ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ.
View this post on Instagram
ಅದರಲ್ಲೂ ಸಹೋದರ ಮತ್ತು ಸಹೋದರಿಯ ನಡುವಿನ ಈ ಬಾಂಧವ್ಯವನ್ನು ತೋರಿಸುವ ಈ ವೈರಲ್ ವೀಡಿಯೋದಿಂದ ಇಂಟರ್ನೆಟ್ ವೀಕ್ಷಕರು ಒಂದು ಕ್ಷಣ ಭಾವುಕರಾಗಿ ಅವರ ಕಣ್ಣುಗಳು ಒದ್ದೆಯಾಗುತ್ತಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅಂತದ್ದೇನಿದೆ ಈ ವೀಡಿಯೋದಲ್ಲಿ ಅಂತೀರಾ? ಈ ವೀಡಿಯೋದಲ್ಲಿ, ಸಹೋದರನು ತನ್ನ ಸಹೋದರಿಗೆ ಆಶ್ಚರ್ಯಕರ ಉಡುಗೊರೆಯಾಗಿ ಸ್ಕೂಟರ್ ಅನ್ನು ನೀಡುತ್ತಾನೆ, ಮತ್ತು ಅದನ್ನು ಸ್ವೀಕರಿಸಿದ ನಂತರ ಸಹೋದರಿ ತುಂಬಾನೇ ಭಾವುಕಳಾಗುತ್ತಾಳೆ. ವೀಡಿಯೋವು ನಿಮ್ಮ ಭಾವನೆಗಳನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಲು ಸಹ ಕಾರಣವಾಗಬಹುದು.
ತನ್ನ ಸಹೋದರಿಗೆ ಸ್ಕೂಟರ್ ಅನ್ನು ಉಡುಗೊರೆಯಾಗಿ ನೀಡಿದ ಸಹೋದರ
ವೀಡಿಯೋದ ಆರಂಭದಲ್ಲಿ ಸಹೋದರ ತನ್ನ ಸಹೋದರಿಗೆ ಒಂದು ಚಿಕ್ಕ ಪೆಟ್ಟಿಗೆಯನ್ನು ನೀಡುತ್ತಾನೆ. ಅವಳು ಆ ಪೆಟ್ಟಿಗೆಯನ್ನು ತೆರೆದಾಗ ಅದರೊಳಗೆ ಒಂದು ಕೀಲಿಯನ್ನು ನೋಡಿ ಅವಳು ಭಾವುಕಳಾಗುತ್ತಾಳೆ ಮತ್ತು ಆಶ್ಚರ್ಯಚಕಿತಳಾಗುತ್ತಾಳೆ. ಅದರ ನಂತರ, ಅವಳ ಸಹೋದರ ಅವಳ ಹತ್ತಿರದಲ್ಲಿ ನಿಲ್ಲಿಸಲಾದ ಹೊಸ ಸ್ಕೂಟರ್ ಅನ್ನು ತೋರಿಸುತ್ತಾನೆ. ಈ ವೀಡಿಯೋ ತುಣುಕನ್ನು ಐಶ್ವರ್ಯಾ ಭದಾನೆ ಅವರ ಇನ್ಸ್ಟಾಗ್ರಾಮ್ ಪುಟದಲ್ಲಿ ಅಪ್ಲೋಡ್ ಮಾಡಲಾಗಿದೆ. "ಶುದ್ಧ ಪ್ರೀತಿ... ಫಸ್ಟ್ ರೈಡ್" ಎಂದು ಅವರು ವೀಡಿಯೋಗೆ ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.
ಸಿಕ್ಕಾಪಟ್ಟೆ ವೈರಲ್ ಆಗಿದೆ ಈ ವೀಡಿಯೋ
ಅಕ್ಟೋಬರ್ 30 ರಂದು, ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ಗೆ ಅಪ್ಲೋಡ್ ಮಾಡಲಾಯಿತು ಮತ್ತು ಅಂದಿನಿಂದ ಇಂದಿನವರೆಗೂ ಸುಮಾರು 10 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 1,499,247 ಲೈಕ್ ಗಳನ್ನು ಸಹ ಪಡೆದಿದೆ. ಕಾಮೆಂಟ್ ವಿಭಾಗದಲ್ಲಿ ವಿವಿಧ ಕಾಮೆಂಟ್ ಗಳನ್ನು ಪೋಸ್ಟ್ ಮಾಡುವ ಮೂಲಕ ಜನರು ವೀಡಿಯೋಗೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: Viral News: ಆಫೀಸ್ ರಾಜಕೀಯ ಬೇಡವೇ ಬೇಡ ಅಂತ ಸ್ಮಶಾನದಲ್ಲಿ ಕೆಲಸಕ್ಕೆ ಸೇರಿಕೊಂಡ ಮಹಿಳೆ!
"ಇದು ನಾನು ಇತ್ತೀಚೆಗೆ ನೋಡಿದ ಅತ್ಯಂತ ಮುದ್ದಾದ ವೀಡಿಯೋ: ದೇವರು ನಿಮ್ಮಿಬ್ಬರನ್ನೂ ಆಶೀರ್ವದಿಸಲಿ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ನಾವು ಸಾಮಾನ್ಯವಾಗಿ ಬೋಗಸ್ ವೀಡಿಯೋ ಮತ್ತು ನಿಷ್ಪ್ರಯೋಜಕ ವಸ್ತುಗಳನ್ನು ನೋಡುತ್ತೇವೆ, ಆದರೆ ಈ ವೀಡಿಯೋ ನನ್ನನ್ನು ತುಂಬಾನೇ ಮೆಚ್ಚಿಸಿತು" ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ. "ಹೌದು, ಇದು ಶುದ್ಧ ಪ್ರೀತಿ" ಎಂದು ಮೂರನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ