Viral Video: ನೋಡುಗರನ್ನ ಬೆಚ್ಚಿಬೀಳಿಸುವಂತಿದೆ ಈ ದೈತ್ಯ ಹೆಬ್ಬಾವು: ವಿಡಿಯೋ ಸಖತ್​​ ವೈರಲ್​!

Viral Video: ಈ ವಿಡಿಯೋ ಕೆಲ ದಿನಗಳಿಂದ ಎಲ್ಲೆಡೆ ವೈರಲ್​ ಆಗುತ್ತಿದೆ. ಈ ವಿಡಿಯೋದಲ್ಲಿರುವ ದೈತ್ಯ ಹೆಬ್ಬಾವು(Giant Python) ನೋಡಿದರೆ ನಿಮಗೆ ಅನಕೊಂಡ(Anaconda) ಸಿನಿಮಾ(Movie)ದ ದೃಶ್ಯಗಳು(Scenes) ಕಣ್ಣು ಮುಂದೆ ಹಾದು ಹೋಗುತ್ತವೆ.

ವೈರಲ್​ ಆದ ಬೃಹತ್​ ಗಾತ್ರದ ಹೆಬ್ಬಾವು

ವೈರಲ್​ ಆದ ಬೃಹತ್​ ಗಾತ್ರದ ಹೆಬ್ಬಾವು

  • Share this:
ಸಾಮಾಜಿಕ ಜಾಲತಾಣ(Social Media)ದಲ್ಲಿ ಪ್ರತಿದಿನ ಚಿತ್ರ ವಿಚಿತ್ರ ಘಟನೆಗಳನ್ನು ನಾವು ನೋಡುತ್ತಲೇ ಇರುತ್ತೆವೆ. ಪ್ರಪಂಚ(World)ದ ಮೂಲೆ ಮೂಲೆಯಲ್ಲೂ ಏನಾಗುತ್ತಿದ್ದೆ ಎಂಬುದನ್ನು, ಸೋಷಿಯಲ್​​ ಮೀಡಿಯಾ ಮೂಲಕ ನಾವು ತಿಳಿದುಕೊಳ್ಳಬುದು. ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಅನೇಕ ವೈರಲ್​​ ವಿಡಿಯೋಗಳು(Viral Videos) ಹರಿದಾಡುತ್ತಿರುತ್ತವೆ. ಕೆಲ ವಿಡಿಯೋಗಳನ್ನು ನೋಡಿ ಜನ ಎಂಜಾಯ್(Enjoy)​ ಮಾಡುತ್ತಾರೆ. ಆದರೆ ಕೆಲವು ವಿಡಿಯೋಗಳನ್ನು ನೋಡಿದರೆ ಸಾಕು ಮೈಜುಂ ಅನ್ನಿಸುವಂತಿರುತ್ತವೆ. ನಮ್ಮಿಂದ ನಂಬಲು ಸಾಧ್ಯವಾಗದಂತ ಕೆಲ ವೈರಲ್​ ವಿಡಿಯೋಗಳನ್ನ ನೋಡಿರುತ್ತೇವೆ. ಅದೇ ಸಾಲಿಗೆ ಮತ್ತೊಂದು ವಿಡಿಯೋ ಸೇರಿಕೊಂಡಿದೆ. ಈ ವಿಡಿಯೋ ಕೆಲ ದಿನಗಳಿಂದ ಎಲ್ಲೆಡೆ ವೈರಲ್​ ಆಗುತ್ತಿದೆ. ಈ ವಿಡಿಯೋದಲ್ಲಿರುವ ದೈತ್ಯ ಹೆಬ್ಬಾವು(Giant Python) ನೋಡಿದರೆ ನಿಮಗೆ ಅನಕೊಂಡ(Anaconda) ಸಿನಿಮಾ(Movie)ದ ದೃಶ್ಯಗಳು(Scenes) ಕಣ್ಣು ಮುಂದೆ ಹಾದು ಹೋಗುತ್ತವೆ. ಅಷ್ಟರ ಮಟ್ಟಿಗೆ ಈ ಹೆಬ್ಬಾವಿನ ಗಾತ್ರವಿದೆ.

ಇಂಟರ್​ನೆಟ್​ ಲೋಕದಲ್ಲಿ ವಿಡಿಯೋ ವೈರಲ್​

ಸದ್ಯ ಇಂಟರ್ ನೆಟ್ ಲೋಕದಲ್ಲಿ ಸಖತ್ ವೈರಲ್​ ಆಗಿರುವ ಭಾರೀ ಗಾತ್ರದ ಹೆಬ್ಬಾವು ಜೆಸಿಬಿಗೆ ನೇತು ಬಿದ್ದಿದ್ದು, ನೋಡುಗರನ್ನು ಹೌಹಾರುವಂತೆ ಮಾಡಿದೆ. ಬೃಹತ್ ಹಾವಿನ ಗಾತ್ರ ನೋಡಿ ಅನೇಕರು ಅಚ್ಚರಿ ಜೊತೆಗೆ ಆಶ್ಚರ್ಯವ್ಯಕ್ತಪಡಿಸಿದ್ದಾರೆ. ಸುತ್ತಮುತ್ತ ದಟ್ಟ ಕಾನನದ ನಡುವೆ ಈ ಹೆಬ್ಬಾವನ್ನು ಎತ್ತುವ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಭಾರತದಲ್ಲಿ ಇಷ್ಟು ದೊಡ್ಡ ಗಾತ್ರದ ಹೆಬ್ಬಾವನ್ನು ನಾವು ನೋಡೇ ಇಲ್ಲ ಎಂದು ಹೇಳಿದ್ದಾರೆ . ಮತ್ತೊಂದು ವರ್ಗ ಇದು ಫೇಕ್​ ಹೆಬ್ಬಾವು, ವಿಡಿಯೋ ಕೂಡ ಫೇಕ್​ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನು ಓದಿ: ತನ್ನ ಮರಿಯನ್ನು ಉಳಿಸಿಕೊಳ್ಳಲು ಈ ಆನೆ ಮಾಡಿದ್ದೇನು ಗೊತ್ತಾ? ನೀವು ನೋಡಿದರೆ ದಂಗಾಗ್ತೀರಾ!

100 ಕೆಜಿ ತೂಕದ 6.1ಮೀ ಉದ್ದದ ಹೆಬ್ಬಾವು

ಮೊದಲು ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ. ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ಈ ಬೃಹತ್ ಹೆಬ್ಬಾವು ಪತ್ತೆಯಾಗಿದೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಟ್ವಿಟರ್​​ ಬಳಕೆದಾರರೊಬ್ಬರು ‘ಧನ್‌ಬಾದ್‌ನಲ್ಲಿ 100 ಕೆಜಿ ತೂಕದ ಮತ್ತು 6.1 ಮೀ ಉದ್ದದ ಈ ಬೃಹತ್ ಹೆಬ್ಬಾವನ್ನು ಸ್ಥಳಾಂತರಿಸಲು ಕ್ರೇನ್ ಬೇಕಾಯಿತು’ ಎಂದು ಟ್ವೀಟ್​ ಮಾಡಿದ್ದರು. ಬಳಿಕ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.



ಡೊಮಿನಿಕಾ ಮಳೆಕಾಡಿನ ಪ್ರದೇಶದಲ್ಲಿ ಹೆಬ್ಬಾವು ಪತ್ತೆ
ಅಸಲಿಗೆ ಈ ಹೆಬ್ಬಾವು ಪತ್ತೆಯಾಗಿರುವುದು ಡೊಮಿನಿಕಾ ಮಳೆಕಾಡಿನ ಪ್ರದೇಶ(Dominica rainforest)ದಲ್ಲಿ ಎಂದು ತಿಳಿದುಬಂದಿದೆ. ಕೆಲಸ ಮಾಡುತ್ತಿದ್ದ ಕಾರ್ಮಿಕರು ಇಷ್ಟು ಬೃಹತ್ ಗಾತ್ರದ ಹೆಬ್ಬಾವನ್ನು ಪತ್ತೆ ಹಚ್ಚಿ ಅದನ್ನು ಜೆಸಿಬಿ ಮೂಲಕ ಬೇರೆಡೆ ಸ್ಥಳಾಂತರಿಸಿದ್ದಾರಂತೆ. ಮೊದಲಿಗೆ ಈ ವಿಡಿಯೋವನ್ನು @fakrulazwa ಹೆಸರಿನ ಟಿಕ್‌ಟಾಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿತ್ತು.

ಇದನ್ನು ಓದಿ: ಹಾಸಿಗೆಯ ಕೆಳಗಿತ್ತು ವಿಶ್ವದ ಅತ್ಯಂತ ಬೃಹತ್ ವಿಷಕಾರಿ ಜೇಡ; ಮುಂದೇನಾಯ್ತು?

ಅನಕೊಂಡ ಸಿನಿಮಾ ನೆನಪಿಸುತ್ತೆ ಈ ಹೆಬ್ಬಾವು 

ಬಹುತೇಕ ಜನರು ಅನಕೊಂಡ ಸಿನಿಮಾವನ್ನು ನೋಡಿರುತ್ತೀರಾ. ಅದರಲ್ಲೂ ಆ ಅನಕೊಂಡ ಹೆಬ್ಬಾವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಕನಸಿನಲ್ಲೂ ಬಂದು ಅದೆಷ್ಟೋ ಜನರ ನಿದ್ದೆಗೆಡಿಸಿತ್ತು ಅನಕೊಂಡ ಹಾವು. ಥೇಟ್​​ ಅನಕೊಂಡ ಸಿನಿಮಾದಲ್ಲಿ ಇರುವಂತೆ ಈ ಹೆಬ್ಬಾವು ಕಾಣುತ್ತೆ. ಅಷ್ಟೇ ಗಾತ್ರ, ಅಷ್ಟೇ ಉದ್ದ, ಈ ಹೆಬ್ಬಾವನ್ನು ಕಂಡು ಜನರು ಕಣ್ಣು ಬಾಯಿ ಬಿಟ್ಟು ಈ ವಿಡಿಯೋವನ್ನು ನೋಡುತ್ತಿದ್ದಾರೆ. ವಿಡಿಯೋ ಎಲ್ಲಿಯದು ಎಂದು ಹುಡುಕುವ ಬದಲು ನೀವು ಎಂದು ನೋಡಿರದ ದೈತ್ಯ  ಹೆಬ್ಬಾವನ್ನು ನೋಡಿ ಕಣ್ತುಂಬಿಕೊಳ್ಳಿ ಎಂದು ನೆಟ್ಟಿಗರು ಹೇಳಿದ್ದಾರೆ. ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಈ ಹೆಬ್ಬಾವಿನ ವಿಡಿಯೋಗಳಿಂದ ತುಂಬಿಹೋಗಿದೆ.
Published by:Vasudeva M
First published: