HOME » NEWS » Trend » VIRAL VIDEO SHOCKING VIDEO SHOWS SAMSUNG MOBILE PHONE CATCHING FIRE INSIDE MAN BAG IN CHINA STG SCT

Viral Video: ಮೊಬೈಲ್ ಬಳಸುವಾಗ ಎಚ್ಚರ!; ಬ್ಯಾಗ್​ನೊಳಗೆ ಮೊಬೈಲ್ ಸ್ಫೋಟದ ಶಾಕಿಂಗ್ ವಿಡಿಯೋ ವೈರಲ್

ಚೀನಾದ ವ್ಯಕ್ತಿಯೊಬ್ಬ ಹುಡುಗಿಯ ಜೊತೆ ಬೈಕ್ ಪಾರ್ಕಿಂಗ್ ಏರಿಯಾದಲ್ಲಿ ನಡೆದು ಹೋಗುತ್ತಿರುತ್ತಾನೆ. ಆಗ ಆತನ ಬಳಿ ಇದ್ದ ಸ್ಯಾಮ್​ಸಂಗ್ ಮೊಬೈಲ್ ಬ್ಯಾಗಿನಲ್ಲೇ ಸ್ಫೋಟವಾಗಿದ್ದು, ಬೆಂಕಿ ಹೊತ್ತಿಕೊಂಡು ಆತನಿಗೆ ಗಾಯಗಳಾಗಿವೆ. ಈ ವಿಡಿಯೋ ವೈರಲ್ ಆಗಿದೆ.

news18-kannada
Updated:April 23, 2021, 8:01 AM IST
Viral Video: ಮೊಬೈಲ್ ಬಳಸುವಾಗ ಎಚ್ಚರ!; ಬ್ಯಾಗ್​ನೊಳಗೆ ಮೊಬೈಲ್ ಸ್ಫೋಟದ ಶಾಕಿಂಗ್ ವಿಡಿಯೋ ವೈರಲ್
ಬ್ಯಾಗ್​ಗೆ ಬೆಂಕಿ ತಗುಲಿದ ದೃಶ್ಯ
  • Share this:
ದಾರಿಯಲ್ಲಿ ನಡೆದುಹೋಗುತ್ತಿದ್ದ ವೇಳೆ ವ್ಯಕ್ತಿಯ ಬ್ಯಾಗಿನಲ್ಲಿ ಅಚಾನಕ್ಕಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಚೀನಾದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸೌತ್ ಚೀನಾ ಮಾರ್ನಿಂಗ್ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಹುಡುಗಿಯ ಜೊತೆ ಬೈಕ್ ಪಾರ್ಕಿಂಗ್ ಏರಿಯಾದಲ್ಲಿ ನಡೆದು ಹೋಗುತ್ತಿರುತ್ತಾನೆ. ಆಗ ಆತನ ಬಳಿ ಇದ್ದ ಬ್ಯಾಗಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಳ್ಳುತ್ತದೆ. ತಕ್ಷಣವೇ ಬೆಂಕಿ ಹತ್ತಿದ ಬ್ಯಾಗನ್ನು ಎಸೆಯುತ್ತಾನೆ. ಅಷ್ಟರಲ್ಲೇ ಆತನ ಕೂದಲು ಕೊಂಚ ಸುಟ್ಟು ಹೋಗುತ್ತದೆ. ಆತನ ಕೈಗೆ ಸುಟ್ಟ ಗಾಯವಾಗುತ್ತದೆ. ಕಣ್ಣಿನ ರೆಪ್ಪೆ ಸುಟ್ಟು ಹೋಗುತ್ತದೆ. ಪಾರ್ಕಿಂಗ್‌ ಬಳಿ ಓಡಾಡುತ್ತಿದ್ದ ಜನ ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಈ ಘಟನೆ ಸಂಭವಿಸಿ ಬಿಡುತ್ತದೆ.

ಈ ಕುರಿತು ವಿವರಣೆ ನೀಡಿದ ಯುವಕ, ಇದು ಸ್ಯಾಮ್‍ಸಂಗ್ ಮೊಬೈಲ್. 2016ರಲ್ಲಿ ಇದನ್ನು ಖರೀದಿಸಿದ್ದೆ. ಐದು ವರ್ಷವಾದರೂ ಮೊಬೈಲ್ ಬ್ಯಾಟರಿ ಬದಲಿಸಿರಲಿಲ್ಲ. ನಾನು ಮೊಬೈಲ್‌ ಅನ್ನು ಚಾರ್ಜ್ ಮಾಡಿರಲಿಲ್ಲ. ಹೆಚ್ಚಿನದಾಗಿ ಬ್ಯಾಟರಿ ತೊಂದರೆಯಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಿದ್ದಾರೆ.

51 ಸೆಕೆಂಡ್ ಇರುವ ವಿಡಿಯೋವನ್ನು ನೋಡಿದ ಜನರು ಕ್ಷಣಕಾಲ ದಂಗಾಗಿ ಹೋಗಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಚೀನಾದ ಸ್ಮಾರ್ಟ್ ಫೋನ್ ತಯಾರಕರು ತಿಳಿಸಿದ್ದಾರೆ.



2016ರಲ್ಲಿ ಸ್ಯಾಮ್‍ಸಂಗ್ ಗ್ಯಾಲಕ್ಸಿ ನೋಟ್ 7ನ್ನು ಬಿಡುಗಡೆ ಮಾಡಲಾಗಿತ್ತು. ಇದು ಅತಿ ಬೇಗ ಚಾರ್ಜ್ ಆಗುವ ಲಕ್ಷಣ ಹೊಂದಿದೆ ಎಂದು ಹೇಳಲಾಗಿತ್ತು. ಇದುವರೆಗೆ ಸ್ಯಾಮ್‍ಸಂಗ್ ಗ್ಯಾಲಕ್ಸಿ ನೋಟ್ 7 ಮೊಬೈಲ್‍ಗಳು ಹೆಚ್ಚು ಉಷ್ಣತೆಯಿಂದಾಗಿ ಸ್ಫೋಟಗೊಂಡಿವೆ. ಎಸ್‍ಸಿಎಮ್‍ಪಿ ವರದಿಯ ಪ್ರಕಾರ, 1,91,000 ಮೊಬೈಲ್‍ಗಳು ಸ್ಫೋಟಗೊಂಡಿದೆ ಎಂದು ಸೌತ್ ಕೊರಿಯಾ ಕಂಪೆನಿ ಮನನ ಮಾಡಿದೆ ಎಂದು ಹೇಳಲಾಗಿದೆ. ಹಾಗಾಗಿ ಗ್ರಾಹಕರಿಗೆ ಮೊಬೈಲ್‍ಗಳು ಸ್ವಿಚ್ ಆಫ್ ಮಾಡುವಂತೆ ಸಲಹೆ ನೀಡಿದೆ.ಕೆಲವೊಮ್ಮೆ ಕೆಲವು ಭಾಗಗಳ ಲೋಪದೋಷದಿಂದಾಗಿ ಮೊಬೈಲ್‍ಗಳು ಸ್ಫೋಟಗೊಳ್ಳುತ್ತದೆ. ಇದಲ್ಲದೇ ಚೀನಾ ಮೂಲದ ವಿವೋ ಮೊಬೈಲ್ ಕೂಡ ಸ್ಫೋಟಗೊಂಡಿರುವ ಘಟನೆ ಹಾಂಗ್ ಕಾಂಗ್ ವಿಮಾನ ನಿಲ್ದಾಣದಲ್ಲಿ ನಡೆದಿತ್ತು. ನಂತರ ಸ್ಪೈಸ್‌ ಜೆಟ್ ಹಾಗೂ ಏರ್‌ಗೋ ವಿವೋ ಮೊಬೈಲ್‍ನ ಸಾಗಾಣೆಯನ್ನು ನಿಲ್ಲಿಸಿತು. ಅಲ್ಲದೇ ಹಾಂಗ್ ಕಾಂಗ್ ಏರ್ ಕಾರ್ಗೋ ಕೂಡ ವಿವೋ ಮೊಬೈಲ್ ಸಾಗಾಟಕ್ಕೆ ಸಂಪೂರ್ಣವಾಗಿ ನಿಷೇಧ ಹೇರಿತು.

ಮೊಬೈಲ್‍ಗಳು ಚಾರ್ಜಿಂಗ್ ಹಾಕುವ ವೇಳೆ, ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಹೀಗೆ ಅನೇಕ ಕಾರಣಗಳಿಂದ ಮೊಬೈಲ್‍ಗಳು ಸ್ಫೋಟಗೊಂಡಿದೆ. ಇದರಿಂದ ಕೆಲವು ಕಿವಿ ಕಳೆದುಕೊಂಡರೆ, ಇನ್ನು ಕೆಲವರಿಗೆ ಮುಖದ ಕೆಲವು ಭಾಗಗಳಿಗೆ ಹಾನಿಯಾಗಿವೆ. ಇನ್ನು ಕೆಲವರ ಜೀವವೇ ಹೋಗಿದೆ. ಕ್ಷಣ ಮಾತ್ರದಲ್ಲಿ ಸ್ಫೋಟಗೊಂಡರೂ ಅದರ ತೀವ್ರತೆ ಬಹಳ ಗಾಡವಾಗಿರುತ್ತದೆ. ಆದ್ದರಿಂದ ಹಿರಿಯರು ಚಾರ್ಜಿಂಗ್ ಮಾಡುವ ವೇಳೆ ಮಾತನಾಡದಂತೆ, ಅತಿಹೆಚ್ಚು ಮೊಬೈಲ್ ಬಳಕೆ ಮಾಡದಂತೆ ಸಲಹೆ ನೀಡುತ್ತಾರೆ.
Published by: Sushma Chakre
First published: April 23, 2021, 8:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories