• Home
  • »
  • News
  • »
  • trend
  • »
  • ನೀರೊಳಗಿನ ಪ್ಲಾಸ್ಟಿಕ್ ಕವರ್‌ ಒಳಗೆ ಸಿಕ್ಕಿಬಿದ್ದ ಮೀನು ರಕ್ಷಿಸಿದ ಸ್ಕೂಬಾ ಡೈವರ್: ವಿಡಿಯೋ ವೈರಲ್‌

ನೀರೊಳಗಿನ ಪ್ಲಾಸ್ಟಿಕ್ ಕವರ್‌ ಒಳಗೆ ಸಿಕ್ಕಿಬಿದ್ದ ಮೀನು ರಕ್ಷಿಸಿದ ಸ್ಕೂಬಾ ಡೈವರ್: ವಿಡಿಯೋ ವೈರಲ್‌

ಮೀನು

ಮೀನು

ದಕ್ಷಿಣ ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ನ್ಯಾಟ್ ಸೆನ್ಮುವಾಂಗ್ ಸ್ನೇಹಿತರೊಂದಿಗೆ ಡೈವಿಂಗ್ ಮಾಡುತ್ತಿದ್ದಾಗ ಪ್ಲಾಸ್ಟಿಕ್ ಚೀಲದೊಳಗೆ ಮೀನು ಕಷ್ಟಪಟ್ಟು ಉಸಿರಾಡುತ್ತಿರುವುದನ್ನು ಗಮನಿಸಿದಳು. ಅದನ್ನು ಯಾರೂ ರಕ್ಷಿಸದಿದ್ದರೆ, ಮೀನು ಖಂಡಿತವಾಗಿಯೂ ಉಸಿರುಗಟ್ಟಿ ಸಾಯುತ್ತಿತ್ತು.

  • Share this:

ಪ್ಲಾಸ್ಟಿಕ್ ಚೀಲದೊಳಗೆ ಅಲೆಗಳ ಕೆಳಗೆ ಸಿಲುಕಿಕೊಂಡಿದ್ದ ಒಂದು ಸಣ್ಣ ಮೀನನ್ನು ಸ್ಕೂಬಾ ಡೈವರ್‌ ಉಳಿಸಿದ ಹೃದಯವಿದ್ರಾವಕ ಕ್ಷಣ ಇದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಐಎಫ್‌ಎಸ್‌ ಅಧಿಕಾರಿ ಸುಶಾಂತ್‌ ನಂದಾ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.


ದಕ್ಷಿಣ ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ನ್ಯಾಟ್ ಸೆನ್ಮುವಾಂಗ್ ಸ್ನೇಹಿತರೊಂದಿಗೆ ಡೈವಿಂಗ್ ಮಾಡುತ್ತಿದ್ದಾಗ ಪ್ಲಾಸ್ಟಿಕ್ ಚೀಲದೊಳಗೆ ಮೀನು ಕಷ್ಟಪಟ್ಟು ಉಸಿರಾಡುತ್ತಿರುವುದನ್ನು ಗಮನಿಸಿದಳು. ಅದನ್ನು ಯಾರೂ ರಕ್ಷಿಸದಿದ್ದರೆ, ಮೀನು ಖಂಡಿತವಾಗಿಯೂ ಉಸಿರುಗಟ್ಟಿ ಸಾಯುತ್ತಿತ್ತು.


ಆದರೆ ಕಾಳಜಿಯುಳ್ಳ ಸ್ಕೂಬಾ ಶಿಕ್ಷಕಿಯು ಸಮುದ್ರತಳದಿಂದ ಆ ಕವರ್‌ ಅನ್ನು ತೆಗೆದುಕೊಂಡು ಮತ್ತು ಮೀನು ಆರಾಮಾಗಿ ಉಸಿರಾಡಿ ತನ್ನ ದಾರಿ ಕಂಡುಕೊಳ್ಳಲು ಸಹಾಯ ಮಾಡಲು ಅದನ್ನು ಅಲುಗಾಡಿಸಿದಳು. ಈ ವಿಡಿಯೋ ಹೆಡ್‌ ಕ್ಯಾಮ್‌ ಫೂಟೇಜ್‌ನಲ್ಲಿ ಸೆರೆಯಾಗಿದೆ.


ಮೀನು ಅಂತಿಮವಾಗಿ ಪ್ಲಾಸ್ಟಿಕ್ ಚೀಲದ ರಂಧ್ರದ ಮೂಲಕ ತಪ್ಪಿಸಿಕೊಂಡು ಮುಕ್ತವಾಗಿ ಈಜುವಂತಾಯಿತು.


ಅಂಡಮಾನ್ ಸಾಗರದಲ್ಲಿ ಡೈವಿಂಗ್‌ ಮಾಡುವಾಗ ಪ್ಲಾಸ್ಟಿಕ್ ಮಾಲಿನ್ಯದಿಂದ ಸಾಕಷ್ಟು ಸಮುದ್ರ ಜೀವಿಗಳು ನಾಶವಾಗಿದ್ದವು ಮತ್ತು ಸಾವಿಗೀಡಾಗಿದ್ದವು ಎಂದು ನ್ಯಾಟ್ ಬೇಸರದಿಂದಲೇ ಡೈಲಿ ಮೇಲ್‌ಗೆ ಹೇಳಿದ್ದಾರೆ.


''ಸ್ಥಳೀಯರಾಗಿ, ಥಾಯ್ ಮತ್ತು ವಿದೇಶಿ ಪ್ರವಾಸಿಗರ ಹೆಚ್ಚಳದಿಂದ ನಗರವು ಹೆಚ್ಚು ಕಲುಷಿತವಾಗುವುದನ್ನು ನಾನು ನೋಡಿದ್ದೇನೆ. ಸಾಗರದಲ್ಲಿ ಕೆಳಗಿರುವ ಅನೇಕ ಜೀವಗಳಿಗೆ ತ್ಯಾಜ್ಯವು ಹೆಚ್ಚು ಹೆಚ್ಚು ಅಪಾಯಕಾರಿಯಾಗಿದೆ. ಪ್ರತಿಯೊಬ್ಬರೂ ತಮ್ಮ ಕಸವನ್ನು ತೊಟ್ಟಿಯಲ್ಲಿ ಹಾಕುವುದರ ಮೂಲಕ ಕಡಲತೀರದ ಸುತ್ತಲೂ ಕಸವನ್ನು ಹರಡದೆ ಇತರ ಜೀವಿಗಳ ಬಗ್ಗೆ ಹೆಚ್ಚು ಪರಿಗಣಿಸಬೇಕೆಂದು ನಾನು ಬಯಸುತ್ತೇನೆ.
ಏಕೆಂದರೆ ನಾವು ನಮ್ಮ ಮಾರ್ಗಗಳನ್ನು ಬದಲಾಯಿಸದ ಹೊರತು ನಮ್ಮ ಸುಂದರ ಜೀವಿಗಳು ಶೀಘ್ರದಲ್ಲೇ ನಮ್ಮಿಂದಾಗಿ ನಶಿಸಿ ಹೋಗುತ್ತವೆ ಎಂದೂ ನ್ಯಾಟ್‌ ಡೈಲಿ ಮೇಲ್‌ಗೆ ಹೇಳಿದ್ದರು.


ಪ್ಲಾಸ್ಟಿಕ್‌ನಲ್ಲಿ ಸಿಕ್ಕಿಹಾಕಿಕೊಂಡು ಉಸಿರುಗಟ್ಟಿಸುವುದರಿಂದ ಪ್ರತಿವರ್ಷ ಸುಮಾರು 100,000 ಸಮುದ್ರ ಜೀವಿಗಳು ಸಾಯುತ್ತಿವೆ


ಆದರೆ, ಸುಶಾಂತ್‌ ನಂದಾ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿರುವ ಈ ವಿಡಿಯೋ 2019 ಗೆ ಸೇರಿದ್ದು ಎಂದು ಡೈಲಿ ಮೇಲ್‌ ವರದಿ ಹೇಳುತ್ತದೆ.


ಈ ವಿಡಿಯೋಗೆ ಸುಶಾಂತ್‌ ನಂದಾ, ''ಮನುಷ್ಯ ಎಲ್ಲಿದ್ದರೂ ಅಲ್ಲಿ ದಯೆಗೆ ಅವಕಾಶವಿದೆ'' ಎಂಬ ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ.


ಈ ಕಿರು ಕ್ಲಿಪ್ ಆನ್‌ಲೈನ್‌ನಲ್ಲಿ ಲಭ್ಯವಾದ ಕೆಲವೇ ಗಂಟೆಗಳಲ್ಲಿ ಸುಮಾರು 24,000 ಬಾರಿ ವೀಕ್ಷಿಸಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಹಲವಾರು ಲೈಕ್‌ಗಳು ಮತ್ತು ರಿಟ್ವೀಟ್‌ಗಳನ್ನು ಗಳಿಸಿದೆ ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಆಲೋಚನೆಗಳನ್ನು ಕಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಒಬ್ಬೊಬ್ಬರು ಒಂದು ರೀತಿ ಕಮೆಂಟ್‌ ಮಾಡಿದ್ದಾರೆ. ಸುಶಾಂತ್‌ ನಂದಾ ಪಾಸಿಟಿವ್‌ ರೀತಿಯಲ್ಲಿ ಕ್ಯಾಪ್ಷನ್‌ ಬರೆದುಕೊಂಡಿದ್ದರೆ, ಹಲವರು ಈ ತೊಂದರೆಗೆ ಮನುಷ್ಯರೇ ಕಾರಣ ಎಂದು ನೆಗೆಟಿವ್‌ ರೀತಿಯಲ್ಲಿ ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ.


ಒಟ್ಟಾರೆ, 2 ವರ್ಷಗಳ ಹಳೆಯ ವಿಡಿಯೋ ಟ್ವಿಟ್ಟರ್‌ನಲ್ಲಿ ಮತ್ತೆ ವೈರಲ್‌ ಆಗಿದೆ.

First published: