Viral Video: ಸ್ಟಾರ್ ನಟನ ಚಿತ್ರದ ಹಾಡನ್ನು ಈ ಬಾಲಕಿ ಎಷ್ಟು ಚೆಂದವಾಗಿ ಹಾಡಿದ್ದಾಳೆ ನೋಡಿ

ಛತ್ತೀಸಗಡದ ಎಂಟು ವರ್ಷದ ಶಾಲಾ ಬಾಲಕಿ ಮುರಿ ಮುರಾಮಿ ಅವರ ಮುದ್ದಾದ ಹಾಡಿನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಬಾಲಕಿ

ಬಾಲಕಿ

  • Share this:
ಕೆಲವೊಮ್ಮೆ ನಾವು ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ (Railway Travelling) ಕೈಯಲ್ಲಿ ಮಗುವನ್ನು ಹಿಡಿದುಕೊಂಡು ಅಥವಾ ಎರಡು ಕಾಲುಗಳನ್ನು ಕಳೆದುಕೊಂಡಿರುವ ವ್ಯಕ್ತಿ ಅಥವಾ ಮಹಿಳೆ ನಾವು ಕುಳಿತಿರುವ ಸೀಟ್ ಹತ್ತಿರ ಬಂದು ಒಂದು ಒಳ್ಳೆಯ ಹಾಡನ್ನು ತಮ್ಮ ಸುಮಧುರ ಕಂಠದಲ್ಲಿ ಹಾಡಿ(Song)ದಾಗ ನಮಗೆ ‘ಎಷ್ಟು ಚೆನ್ನಾಗಿ ಹಾಡುತ್ತಿದ್ದಾರೆ ಇವರು, ಪಾಪ ಹೃದಯದಲ್ಲಿ ಎಂತಹ ನೋವು ಇಟ್ಟುಕೊಂಡು ಬದುಕು (Struggle Life) ನಡೆಸುತ್ತಿದ್ದಾರೆ’ ಎಂದು ಅನ್ನಿಸುತ್ತದೆ. ಹೀಗೆ ಅನೇಕರು ರಸ್ತೆ ಬದಿ(Road side)ಗಳಲ್ಲಿ, ದೇವಸ್ಥಾನ(Temple)ದ ಮುಂದೆ ಹಾಡು ಹೇಳುತ್ತಾ ಜನರನ್ನು ರಂಜಿಸಿ ತಮ್ಮ ಹೊಟ್ಟೆಪಾಡಿಗೆ ಬೇಕಾಗುವಷ್ಟನ್ನು ಕೇಳಿ ಪಡೆಯುತ್ತಾರೆ. ಈ ಕಂಠ (Voice) ಎನ್ನುವುದು ದೇವರು ನೀಡಿದ ಒಂದು ವರದಾನ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಎಷ್ಟೋ ಜನರಿಗೆ ಸುಮಧುರವಾದ ಕಂಠ ಇರುತ್ತದೆ. ಆದರೆ ಅವಕಾಶ ಸಿಕ್ಕಿ ಜನರ ಮಧ್ಯೆ ಗುರುತಿಸಿಕೊಳ್ಳುವ ಹಾಗೆ ಆಗುವುದು ಕೆಲವರಿಗೆ ಮಾತ್ರ ಎಂದು ಹೇಳಬಹುದು.

ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇವೆ ಇಲ್ಲಿ ಎಂದು ನೀವು ಆಶ್ಚರ್ಯ ಪಡಬಹುದು, ಆದರೆ ಇದಕ್ಕೆ ಒಂದು ಕಾರಣವಿದೆ. ಛತ್ತೀಸಗಡದ 10 ವರ್ಷದ ಬಾಲಕ ಸಹದೇವ್ ದಿರ್ಡೊ ಹೀಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟ ವಿಡಿಯೋದಿಂದಾಗಿ ನಂತರ ದೊಡ್ಡ ಇಂಟರ್ನೆಟ್ ಸೆನ್ಸೇಷನ್ ಆದದ್ದು ನಿಮಗೆ ನೆನಪಿರಲೇ ಬೇಕಲ್ಲವೇ..? ಈಗ, ಅದೇ ರಾಜ್ಯದಿಂದ ಮತ್ತೊಂದು ವೈರಲ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ, ಇದು ಮುಂದೆ ಒಂದು ದಿನ ದೊಡ್ಡ ಸನ್ಸೇಷನ್ ಆದ್ರೂ ಆಶ್ಚರ್ಯ ಪಡಬೇಕಿಲ್ಲ.

ಎಂಟು ವರ್ಷದ ಬಾಲಕಿಯ ವಿಡಿಯೋ ವೈರಲ್

ಹೌದು.. ಛತ್ತೀಸಗಡದ ಎಂಟು ವರ್ಷದ ಶಾಲಾ ಬಾಲಕಿ ಮುರಿ ಮುರಾಮಿ ಅವರ ಮುದ್ದಾದ ಹಾಡಿನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಲ್ಲಿ ಅವರು ಬಾಲಿವುಡ್ ಗಾಯಕಿಯಾದ ಅಲ್ಕಾ ಯಗ್ನಿಕ್ ಮತ್ತು ಗಾಯಕ ಕುಮಾರ್ ಸಾನು ಅವರು ಹಾಡಿದ ‘ಕಹಿ ಪ್ಯಾರ್ ನಾ ಹೋ ಜಾಯೆ’ ಹಿಂದಿ ಹಾಡನ್ನು ತಮ್ಮ ಸುಮಧುರ ಧ್ವನಿಯಲ್ಲಿ ಹಾಡಿದ್ದಾರೆ.

ಇದನ್ನೂ ಓದಿ:  Viral Photo: ಪುಟ್ಟ ತಂಗಿಯನ್ನು ಮಡಿಲಿನಲ್ಲಿ ಇರಿಸಿಕೊಂಡು ಪಾಠ ಕೇಳುವ 10 ವರ್ಷದ ಬಾಲಕಿ: ಹೃದಯ ಸ್ಪರ್ಶಿ ಫೋಟೋ ವೈರಲ್

34 ಸೆಕೆಂಡಿನ ವಿಡಿಯೋಗೆ ನೆಟ್ಟಿಗರು ಫಿದಾ!

ಈ 34 ಸೆಕೆಂಡಿನ ವಿಡಿಯೋದಲ್ಲಿ ಈ ಬಾಲಕಿ ಮುರಿ ಮುರಾಮಿ ತನ್ನ ಶಾಲಾ ಸಮವಸ್ತ್ರದಲ್ಲಿ ಕಪ್ಪು ಹಲಗೆಯ ಮುಂದೆ ನಿಂತುಕೊಂಡು ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ನಟಿ ರಾಣಿ ಮುಖರ್ಜಿ ಅವರಿಬ್ಬರು ನಟಿಸಿದ ಬಾಲಿವುಡ್ ಚಿತ್ರವಾದ ‘ಕಹಿ ಪ್ಯಾರ್ ನಾ ಹೋ ಜಾಯೆ’ ಟೈಟಲ್ ಟ್ರ್ಯಾಕ್ ಅನ್ನು ಹಾಡುತ್ತಿರುವುದನ್ನು ನಾವು ನೋಡಬಹುದಾಗಿದೆ.ಯುವತಿ ಪ್ರತಿಭೆಗೆ ಬಹುಪರಾಕ್

ಈ ವಿಡಿಯೋವನ್ನು ಮೂಲತಃ ಬುಡಕಟ್ಟು ಸೈನ್ಯದ ಅಧಿಕೃತ ಖಾತೆಯಿಂದ ಹಂಚಿಕೊಳ್ಳಲಾಗಿದೆ ಮತ್ತು ನಂತರ ಐಪಿಎಸ್ ಅಧಿಕಾರಿ ಅವನೀಶ್ ಶರಣ್ ಅವರು ಮರು ಪೋಸ್ಟ್ ಮಾಡಿದ್ದಾರೆ. ಇದು ಈಗಾಗಲೇ 3,700 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದ್ದು ಮತ್ತು 952 ಬಾರಿ ಈ ಟ್ವೀಟ್ ಅನ್ನು ಮರು ಟ್ವೀಟ್ ಮಾಡಲಾಗಿದೆ.

ಒಟ್ಟಿನಲ್ಲಿ ನೆಟ್ಟಿಗರಂತೂ ಈ ವಿಡಿಯೋವನ್ನು ಸಾಕಷ್ಟು ಬಾರಿ ನೋಡಿ ಈ ಯುವತಿಯ ಪ್ರತಿಭೆಯನ್ನು ಶ್ಲಾಘಿಸುತ್ತಿದ್ದಾರೆ.

ನೆಟ್ಟಿಗರಿಂದ ಕಮೆಂಟ್

"ಈಕೆ ಭವಿಷ್ಯದ ಲತಾ ಮಂಗೇಶ್ಕರ್" ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ. "ನಮ್ಮ ದೇಶದ ಮೂಲೆ ಮೂಲೆಯಲ್ಲೂ ಇಂತಹ ಪ್ರತಿಭೆಗಳು ಅಡಗಿದೆ, ತುಂಬಾನೇ ಸುಂದರವಾಗಿ ಹಾಡಿದ್ದಾಳೆ" ಎಂದು ಇನ್ನೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ: Viral News: ನಗಲು ಸಾಧ್ಯವಾಗದ ಈ ಮಹಿಳೆಯ ಪರಿಸ್ಥಿತಿ ಕೇಳಿದ್ರೆ ಅಳು ಬರುತ್ತದೆ!

ಈ ಹಿಂದೆ ಇದೇ ರಾಜ್ಯದ ಸಹದೇವ್ ದಿರ್ಡೊ ಎಂಬ ಯುವಕ ‘ಬಚ್ಪನ್ ಕಾ ಪ್ಯಾರ್’ ಎಂಬ ಹಾಡನ್ನು ಹಾಡಿದ್ದನು. ಪ್ರಸಿದ್ಧ ರ್ಯಾಪರ್ ಬಾದ್ ಷಾ ಅವರು ಈ ಸಹದೇವ್ ದಿರ್ಡೊ ಅವರೊಂದಿಗೆ ಸೇರಿಕೊಂಡು ಆಸ್ತಾ ಗಿಲ್ ಅವರ ಧ್ವನಿಯಲ್ಲಿ ಹಾಡಿದ್ದ ಈ ಹಾಡನ್ನು ರೀಮಿಕ್ಸ್ ಸಹ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
Published by:Mahmadrafik K
First published: