Viral Video: ಸೂಜಿ ಕಂಡು ಕಂಗಾಲಾಗಿ ಕಿರುಚಾಡಿದ ಮಹಿಳೆ! ವೈರಲ್ ಆಯ್ತು ವಿಡಿಯೋ

ಲಸಿಕೆ ಹಾಕಿಸಿಕೊಳ್ಳಲು ವೈದ್ಯರ ಮುಂದೆ ಕೂತು, ಚುಚ್ಚುಮದ್ದನ್ನು ಹತ್ತಿರ ತರುತ್ತಿದ್ದಂತೆ ಹೆದರಿ ಗಡಗಡ ನಡುಗುವವರ ಸಂಖ್ಯೆಯೂ ಕಡಿಮೆ ಇಲ್ಲ ಬಿಡಿ.

ಸೂಜಿ ಕಂಡು ಕಿರುಚಾಡಿದ ಮಹಿಳೆ

ಸೂಜಿ ಕಂಡು ಕಿರುಚಾಡಿದ ಮಹಿಳೆ

  • Share this:

ದೇಶದೆಲ್ಲೆಡೆ ಕೋವಿಡ್ -19 ಲಸಿಕೆ ಅಭಿಯಾನ ನಡೆಯುತ್ತಿದೆ. ಆದರೆ ಇನ್ನೂ ಬಹಳಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳುವ ವಿಷಯದಲ್ಲಿ ಮೀನಮೇಷ ಎಣಿಸುತ್ತಿದ್ದಾರೆ. ಅದಕ್ಕೆ ಕಾರಣ ಕೆಲವರಿಗೆ ಲಸಿಕೆಯ ಬಗ್ಗೆ ಇರುವ ತಪ್ಪು ಕಲ್ಪನೆಯಾಗಿದ್ದರೆ, ಇನ್ನು ಕೆಲವರಿಗೆ ಸೂಜಿಯ ಭಯ! ಈಗಾಗಲೇ ಲಸಿಕೆ ಹಾಕಿಸಿಕೊಳ್ಳದೇ ತಪ್ಪಿಸಿಕೊಳ್ಳಲು ದೇಶದ ಕೆಲವು ಭಾಗಗಳಲ್ಲಿ ಜನರು ವಿವಿಧ ರೀತಿಯ ಕಸರತ್ತು ಮಾಡಿರುವ ವರದಿಗಳನ್ನು ನೀವು ಓದಿರುತ್ತೀರಿ ಅಥವಾ ನೋಡಿರುತ್ತೀರಿ. ಸೂಜಿಯ ಭಯಕ್ಕೆ ಮರ ಹತ್ತಿ ಕೂತಿದ್ದು, ತಮ್ಮ ಗದ್ದೆಗಳಲ್ಲಿ , ತಮ್ಮ ಮನೆಗಳಲ್ಲಿ ಅಡಗಿ ಕೂತಿದ್ದು. . . ಹೀಗೆ ಜನರ ಲಸಿಕಾ ಪಲಾಯನ ಕೃತ್ಯಗಳು ಒಂದಾ ಎರಡಾ? ಹಾಗೋ ಹೀಗೋ ಧೈರ್ಯ ಮಾಡಿ, ಲಸಿಕೆ ಹಾಕಿಸಿಕೊಳ್ಳಲು ವೈದ್ಯರ ಮುಂದೆ ಕೂತು, ಚುಚ್ಚುಮದ್ದನ್ನು ಹತ್ತಿರ ತರುತ್ತಿದ್ದಂತೆ ಹೆದರಿ ಗಡಗಡ ನಡುಗುವವರ ಸಂಖ್ಯೆಯೂ ಕಡಿಮೆ ಇಲ್ಲ ಬಿಡಿ. ಈಗ ಅಂತದ್ದೇ ಒಂದು ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಿದೆ.


ಸಾಮಾನ್ಯವಾಗಿ ಚಿಕ್ಕ ಮಕ್ಕಳು ಚುಚ್ಚುಮದ್ದು ಹಾಕಿಸಿಕೊಳ್ಳಲು ಹೆದರಿದರೆ, ವೈದ್ಯಕೀಯ ಸಿಬ್ಬಂದಿ ಅವರ ಕೈ ಕಾಲುಗಳನ್ನು ಬಿಗಿಯಾಗಿ ಹಿಡಿದು, ಲಸಿಕೆ ಹಾಕಿಸುತ್ತಾರೆ. ದೊಡ್ಡವರಿಗೂ ಹಾಗೆ ಮಾಡಿದರೆ? ಅದನ್ನು ತಿಳಿಯಬೇಕೆಂದರೆ ಈ ವೈರಲ್ ವಿಡಿಯೋ ನೋಡಲೇಬೇಕು. ಏಕೆಂದರೆ ಈ ವಿಡಿಯೋದಲ್ಲಿ ಇರುವುದೇ ಅದು!


ಇದನ್ನೂ ಓದಿ: Viral Video: ಹೆಣ್ಮಕ್ಳೇ ಸ್ಟ್ರಾಂಗು ಗುರು!; ಧಾರೆ ಸೀರೆಯುಟ್ಟು ಮಾರ್ಷಲ್ ಆರ್ಟ್ಸ್‌ ಪ್ರದರ್ಶಿಸಿದ ಮದುಮಗಳು

ವಿಡಿಯೋದಲ್ಲಿರುವ ದೃಶ್ಯ ಹೀಗಿದೆ: ಲಸಿಕಾ ಕೇಂದ್ರದ ಕುರ್ಚಿಯ ಮೇಲೆ ಮಹಿಯೊಬ್ಬರು, ಲಸಿಕೆ ಹಾಕಿಸಿಕೊಳ್ಳಲು ಕುಳಿತುಕೊಂಡಿದ್ದಾರೆ. ಹೆದರಿಕೊಂಡು, ಲಸಿಕೆ ಹಾಕಿಸಿಕೊಳ್ಳಲಾರೆ ಎಂಬಂತೆ ದೇಹವನ್ನು ಹಿಂದಕ್ಕೆ ಮಾಡಿಕೊಳ್ಳುವ ಆ ಮಹಿಳೆಯನ್ನು ಇಬ್ಬರು ಸಮಾಧಾನ ಮಾಡಲು ಯತ್ನಿಸುತ್ತಿದ್ದಾರೆ. ಅವರಿಬ್ಬರು ಬಹುಶ: ಕುಟುಂಬದ ಸದಸ್ಯರು ಆಗಿರಬಹುದು. ನರ್ಸ್ ಚುಚ್ಚುಮದ್ದನ್ನು ಕೊಡಲು ಬರುತ್ತಿದ್ದಂತೆ, ಮಹಿಳೆ ಇನ್ನಷ್ಟು ಭಯದಿಂದ ಮಗುವಿನಂತೆ ಜೋರಾಗಿ ಕಿರುಚಿಕೊಳ್ಳಲು ಆರಂಭಿಸುತ್ತಾಳೆ. ಮಹಿಳೆಯ ಗೋಳಾಟದ ಪರಿಸ್ಥಿತಿ ನೋಡಿ, ಇನ್ನಿಬ್ಬರು ಬಂದು ಅವಳ ಕಾಲುಗಳನ್ನು ಬಿಗಿಯಾಗಿ ಹಿಡಿಯುತ್ತಾರೆ. ಆಗ ಅಂತೂ ಇಂತು ನರ್ಸ್ ಸಲೀಸಾಗಿ ಲಸಿಕೆ ಹಾಕುತ್ತಾರೆ.





ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಈ ವಿಡಿಯೋವನ್ನು ಶೇರ್ ಮಾಡಿದ್ದು, “ ಆಕೆಗೆ ಬಹುಶಃ ಸೂಜಿ ಚುಚ್ಚಿದ ನೋವಿಗಿಂತ ಬೇರೆಯವರು ಅವಳನ್ನು “ಹಿಡಿದುಕೊಂಡಾಗಲೇ” ಹೆಚ್ಚು ನೋವಾಗಿರಬಹುದು” ಎಂದು ಬರೆದುಕೊಂಡಿದ್ದಾರೆ.




ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಹಳಷ್ಟು ಮಂದಿ ನೆಟ್ಟಿಗರು ನಕ್ಕು ನಕ್ಕು ಸುಸ್ತಾಗುತ್ತಿದ್ದಾರೆ. ಕೆಲವೊಮ್ಮೆ ಗಟ್ಟಿಯಾಗಿರುವ ಜಟ್ಟಿಗಳು ಕೂಡ, ಚುಚ್ಚುಮದ್ದಿಗೆ ಭಯ ಪಡುವುದುಂಟು. ನಮ್ಮ ದೇಶದಲ್ಲಿ ಮಾತ್ರವಲ್ಲ, ವಿಶ್ವದೆಲ್ಲೆಡೆ ಬಹಳಷ್ಟು ಮಂದಿಗೆ ಚುಚ್ಚುಮದ್ದಿನ ಭಯ ಇರುವುದು ಸಾಮಾನ್ಯ ಸಂಗತಿ. ಅದನ್ನು ಟ್ರೈಪನೋಫೋಬಿಯಾ ಎಂದು ಕರೆಯುತ್ತಾರೆ. ಅಂದರೆ, ಚುಚ್ಚುಮದ್ದು ಅಥವಾ ಸೂಜಿಗಳನ್ನು ಒಳಗೊಂಡ ವೈದ್ಯಕೀಯ ಪ್ರಕ್ರಿಯೆಯ ಕುರಿತು ತೀವ್ರ ಭಯ.


Published by:Sushma Chakre
First published: