Russia Ukraine War: ಸೂಪರ್ ಮಾರುಕಟ್ಟೆಯಲ್ಲಿ ಸಕ್ಕರೆಗಾಗಿ ಹೊಡೆದಾಡಿಕೊಂಡ ರಷ್ಯಾ ಜನರು; ವಿಡಿಯೋ ನೋಡಿ

ಹಣದುಬ್ಬರದಿಂದಾಗಿ ರಷ್ಯಾದಲ್ಲಿ ಸಕ್ಕರೆ ಬೆಲೆ ಗಗನಕ್ಕೇರಿದೆ. ಉಕ್ರೇನ್ ನಲ್ಲಿನ ಯುದ್ಧದಿಂದ ರಷ್ಯಾ ಆರ್ಥಿಕವಾಗಿ ಕುಸಿತ ಕಾಣಲಾರಂಭಿಸಿದೆ. ಸಕ್ಕರೆ ಬೆಲೆ ಏರಿಕೆ ಆಗುತ್ತಿರೋದರಿಂದ ಕೆಲವು ಮಳಿಗೆಗಳು ಪ್ರತಿ ಗ್ರಾಹಕರಿಗೆ 10 ಕೆಜಿ ಮಿತಿಯನ್ನು ವಿಧಿಸಿವೆ

ವೈರಲ್ ವಿಡಿಯೋ

ವೈರಲ್ ವಿಡಿಯೋ

  • Share this:
Russia Ukraine War: ಉಕ್ರೇನ್ ಮೇಲೆ ಅಪ್ರಚೋದಿತ ದಾಳಿ ನಡೆಸಿರುವ ರಷ್ಯಾದ ಮೇಲೆ ಬೇರೆ ವಿದೇಶಗಳು ಆರ್ಥಿಕತೆಯ (Finance)ನಿರ್ಬಂಧವನ್ನು ಹೇರಿವೆ. ಇದರಂದ ರಷ್ಯಾದ ಆರ್ಥಿಕ ಪರಿಸ್ಥಿತಿ (Russia Economy) ಪಾತಾಳಕ್ಕೆ ಇಳಿದಿದೆ. ಇದೆಲ್ಲದರ ನಡುವೆ ರಷ್ಯಾ ಜನರು (Russians) ಸಹ ಈ ಯುದ್ಧ ಯಾವಾಗ ಕೊನೆ ಆಗುತ್ತೆ ಅಂತ ಕಾದು ನೋಡುತ್ತಿದ್ದಾರೆ. ಯುದ್ಧದ ಹಿನ್ನೆಲೆ ಜನರು ಆಹಾರ ದಾಸ್ತಾನುಗಳನ್ನು (Food) ಸಂಗ್ರಹಿಸಿಕೊಳ್ಳುವ ಕಾರ್ಯಕ್ಕೆ ಮುಂದಾದ ಹಿನ್ನೆಲೆ ಮಾರುಕಟ್ಟೆ(Market)ಯಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಜನರು ಸೂಪರ್ ಮಾರ್ಕೆಟ್ (Super Market) ಗಳ ಮುಂದೆ ಸಿಕ್ಕ ಸಿಕ್ಕ ಆಹಾರ ಪದಾರ್ಥಗಳನ್ನು ಖರೀದಿಸುತ್ತಿದ್ದಾರೆ. ಸೂಪರ್ ಮಾರ್ಕೆಟ್‌ ನಲ್ಲಿ ಸಕ್ಕರೆ ಪ್ಯಾಕೆಟ್ ‌ಗಳಿಗಾಗಿ ಕೆಲ ರಷ್ಯನ್ನರು ಜಗಳವಾಡುತ್ತಿರುವ ವೀಡಿಯೊ (Video Viral) ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಜನರು ಸಕ್ಕರೆಗಾಗಿ ಕೂಗುವುದು, ನೂಕುವುದು ಮಾಡುತ್ತಿರೋದನ್ನು ನೋಡಬಹುದಾಗಿದೆ,

ಹಣದುಬ್ಬರದಿಂದಾಗಿ ರಷ್ಯಾದಲ್ಲಿ ಸಕ್ಕರೆ ಬೆಲೆ ಗಗನಕ್ಕೇರಿದೆ. ಉಕ್ರೇನ್ ನಲ್ಲಿನ ಯುದ್ಧದಿಂದ ರಷ್ಯಾ ಆರ್ಥಿಕವಾಗಿ ಕುಸಿತ ಕಾಣಲಾರಂಭಿಸಿದೆ. ಸಕ್ಕರೆ ಬೆಲೆ ಏರಿಕೆ ಆಗುತ್ತಿರೋದರಿಂದ ಕೆಲವು ಮಳಿಗೆಗಳು ಪ್ರತಿ ಗ್ರಾಹಕರಿಗೆ 10 ಕೆಜಿ ಮಿತಿಯನ್ನು ವಿಧಿಸಿವೆ. ರಷ್ಯಾದಲ್ಲಿ ವಾರ್ಷಿಕ ಹಣದುಬ್ಬರವು 2015 ರಿಂದ ಗರಿಷ್ಠ ಮಟ್ಟವನ್ನು ಮುಟ್ಟಿದೆ.

ಸಕ್ಕರೆಗಾಗಿ ವರ್ತಕನ ಮೇಲೆ ಹಲ್ಲೆ

ಇನ್ನು ಮತ್ತೊಂದು ಘಟನೆಯಲ್ಲಿ  ಓರ್ವ ತನ್ನ ಬಾಸ್ಕೆಟ್ ನಲ್ಲಿ ಐದಕ್ಕಿಂತ ಹೆಚ್ಚು ಸಕ್ಕರೆ ಪ್ಯಾಕೆಟ್ ಹಾಕಿಕೊಳ್ಳುತ್ತಾನೆ. ಇದರಿಂದ ಕೋಪಗೊಂಡ ಗ್ರಾಹಕ ವ್ಯಾಪಾರಿಯೊಂದಿಗೆ ಜಗಳ ಆರಂಭಿಸಿದ್ದಾನೆ. ಜಗಳದ ವೇಳೆ ವ್ಯಾಪಾರಿಯ ಮುಖಕ್ಕೆ ಗ್ರಾಹಕ ಬಲವಾಗಿ ಹೊಡೆದಿದ್ದಾನೆ. ಸಕ್ಕರೆ ಜೊತೆ ಇನ್ನಿತರ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ.

ಇದನ್ನೂ ಓದಿ:  War Crimes Law: ಯುದ್ಧಕ್ಕೆ ಕಾರಣವಾಗಿರುವ Russia ಅಧ್ಯಕ್ಷ ಪುಟಿನ್ ಅವರನ್ನು ಬಂಧಿಸಬಹುದೇ?

ಮಾರುಕಟ್ಟೆಯಲ್ಲಿ ಜನರು ದಿನಸಿ ವಸ್ತುಗಳಿಗಾಗಿ ಹೊಡೆದಾಡಿಕೊಳ್ಳುತ್ತಿದ್ರೆ, ರಷ್ಯಾದ ಅಧಿಕಾರಿಗಳು ಸಕ್ಕರೆಯ ಕೊರತೆ ಇಲ್ಲ ಎಂದು ಹೇಳಿಕೊಂಡಿದ್ದಾರೆ. ದಾಸ್ತಾನುದಾರರು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮೂಲಕ ಜನರನಲ್ಲಿ ಆಹಾರದ ಬಗ್ಗೆ ಭಯ ಹುಟ್ಟಿಸುತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.ರಷ್ಯಾ ಸರ್ಕಾರದಿಂದ ಹೇಳಿಕೆ ಬಿಡುಗಡೆ

ರಷ್ಯಾದ ಜನರು ಆಹಾರಕ್ಕಾಗಿ ಚಿಂತಿಸುವ ಅಗತ್ಯವಿಲ್ಲ, ಪೇಪರ್, ದಿನಸಿಗಾಗಿ ಸೂಪರ್ ಮಾರ್ಕೆಟ್ ಗಳಲ್ಲಿ ಆಹಾರಗಳ ಹಿಂದೆ ಹೋಗಬೇಕಿಲ್ಲ. ಎಲ್ಲರಿಗೂ ಎಂದಿನಂತೆ ಆಹಾರ ಸಿಗಲಿದೆ ಎಂದು ರಷ್ಯಾ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ. ಇತ್ತ ರಷ್ಯಾ ನಿರ್ಯಾತದ ಮೇಲೆ ನಿರ್ಬಂಧ ಹಾಕಿದೆ.

ಮಕ್ಕಳು ಆಶ್ರಯ ಪಡೆದಿದ್ದ Ukraineನ ನಾಟಕದ ಥಿಯೇಟರ್ ಮೇಲೆ Russia ಬಾಂಬ್ ದಾಳಿ!

ಹಲವಾರು ದೇಶಗಳು ಜೊತೆ ಸೇರಿ ಒತ್ತಡ ತಂದರೂ ರಷ್ಯಾ (Russia) ಮಾತ್ರ ಉಕ್ರೇನ್ (Ukraine) ಮೇಲೆ ದಾಳಿ ನಡೆಸುವುದನ್ನು ನಿಲ್ಲಿಸುವಂತೆ ಕಾಣುತ್ತಿಲ್ಲ. ಉಕ್ರೇನ್‍ನ ಮೇಲೆ ನಿರಂತರ ದಾಳಿ (War) ನಡೆಸುತ್ತಲೇ ಇದೆ. ಇದೀಗ, ರಷ್ಯಾದ ಪಡೆಗಳು ಬುಧವಾರ, ಉಕ್ರೇನಿನ ಮಾರಿಯುಪೋಲ್‍ನಲ್ಲಿರುವ ಥಿಯೇಟರ್ (Mariupol Theatre) ಒಂದರ ಮೇಲೆ ಬಲಿಷ್ಟ ಬಾಂಬನ್ನು ಹಾಕಿದೆ ಎಂದು ಉಕ್ರೇನಿನ ವಿದೇಶಾಂಗ ಸಚಿವಾಲಯ ( Ukraine's foreign ministry) ತಿಳಿಸಿದೆ.

ಇದನ್ನೂ ಓದಿ:  Viral News: ಕುಡಿದ ನಶೆಯಲ್ಲಿ ರಷ್ಯಾ ವಿರುದ್ಧ ಯುದ್ಧ ಮಾಡಲು ಹೊರಟ ಮಹಿಳೆ; ಕೊನೆಗೆ ಆಕೆ ಹೋಗಿದೆಲ್ಲಿಗೆ?

ಅಧಿಕಾರಿಗಳು ಹೇಳಿರುವ ಪ್ರಕಾರ, ಬಾಂಬ್ ದಾಳಿಗೊಳಗಾದ ಉಕ್ರೇನಿನ ಥಿಯೇಟರ್​​ನಲ್ಲಿ ಮಕ್ಕಳು ಸೇರಿದಂತೆ “ಸಾವಿರಕ್ಕೂ ಹೆಚ್ಚು” ಮಂದಿ ಆಶ್ರಯ ಪಡೆದಿದ್ದಾರೆ. “ಇವತ್ತು ದಾಳಿಕೋರರು ಡ್ರಾಮಾ ಥಿಯೇಟರ್ ಅನ್ನು ನಾಶ ಮಾಡಿದರು. ಸಾವಿರಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದಿದ್ದ ಜಾಗ ಅದಾಗಿತ್ತು. ನಾವು ಇದನ್ನು ಯಾವತ್ತೂ ಕ್ಷಮಿಸುವುದಿಲ್ಲ” ಎಂದು ಮಾರಿಯುಪೋಲ್ ಸ್ಥಳೀಯ ಕೌನ್ಸಿಲ್ ಮಾಧ್ಯಮ ಸಂಸ್ಥೆ ಒಂದಕ್ಕೆ ಹೇಳಿಕೆ ನೀಡಿದ್ದಾರೆ.
Published by:Mahmadrafik K
First published: