ಚಲಿಸುವ ರೈಲಿನಡಿ ಸಿಲುಕಿದವನನ್ನು ಬಚಾವ್‌ ಮಾಡಿದ ರೈಲ್ವೆ‌ ಸಿಬ್ಬಂದಿ; ವಿಡಿಯೋ ವೈರಲ್

ರೈಲ್ವೆ ಸಚಿವಾಲಯವು ಈ ಬಗಗೆ ಟ್ವೀಟ್‌ ಮಾಡಿದ್ದು, ಆರ್‌ಪಿಎಫ್ ನೌಕರರ ಪ್ರಯತ್ನವನ್ನು ಶ್ಲಾಘಿಸಿದೆ. ಆದರೆ ಚಲಿಸುವ ರೈಲು ಹತ್ತಲು ಪ್ರಯತ್ನಿಸುವ ಮೂಲಕ ತಮ್ಮ ಪ್ರಾಣವನ್ನೇ ಪಣಕ್ಕಿಡದಂತೆ ಜನರನ್ನು ಒತ್ತಾಯಿಸಿದೆ.

ರೈಲ್ವೆ ಪ್ಲಾಟ್​ಫಾರ್ಮ್​ನಲ್ಲಿ ಸಿಲುಕಿದವನನ್ನು ಕಾಪಾಡಿದ ರೈಲ್ವೆ ಸಿಬ್ಬಂದಿ

ರೈಲ್ವೆ ಪ್ಲಾಟ್​ಫಾರ್ಮ್​ನಲ್ಲಿ ಸಿಲುಕಿದವನನ್ನು ಕಾಪಾಡಿದ ರೈಲ್ವೆ ಸಿಬ್ಬಂದಿ

 • Share this:
  ಎಲ್ಲ ವ್ಯಕ್ತಿಗಳೂ ನಾಯಕರಾಗುವುದಿಲ್ಲ. ಹಾಗೆ, ನಾಯಕರಾದವರು ಕ್ಯಾಪ್‌ ಹಾಕಬೇಕಿಲ್ಲ. ಸಮವಸ್ತ್ರ ಧರಿಸಿದರೂ ಸಾಕು. ಈ ಮಾತು ಯಾಕೆ ಅಂದ್ರೆ, ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಿದ ರೈಲ್ವೆ ಪೊಲೀಸ್ ಪಡೆ (ಆರ್‌ಪಿಎಫ್) ಸಿಬ್ಬಂದಿ ಸಾಮಾಜಿಕ ಜಾಲತಾಣದ ಇತ್ತೀಚಿನ ಹೀರೋ ಆಗಿದ್ದಾನೆ. ಗೋವಾದ ವಾಸ್ಕೋ ನಿಲ್ದಾಣದಲ್ಲಿ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರದಲ್ಲಿ ಪ್ರಯಾಣಿಕರೊಬ್ಬರು ಬಿದ್ದ ನಂತರ ಈ ಘಟನೆ ನಡೆದಿದೆ. ಸಿಬ್ಬಂದಿಯ ಪ್ರಯತ್ನಗಳನ್ನು ಅಂತರ್ಜಾಲದಲ್ಲಿ ಶ್ಲಾಘಿಸಿದ್ದು, ಇನ್ನು ಕೆಲವರು ಕಠಿಣ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುವ ಅಗತ್ಯತೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನು, ಕೆಲವರು ಪ್ರಯಾಣಿಕನ ಅಜಾಗರೂಕ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ರೈಲ್ವೆ ಸಚಿವಾಲಯ ಹಂಚಿಕೊಂಡಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಚಲಿಸುವ ರೈಲು ಹತ್ತಲು ಆ ವ್ಯಕ್ತಿ ಓಡುತ್ತಿರುವುದನ್ನು ನೋಡಬಹುದು. ಹಾಗೆ ಮಾಡುವ ಪ್ರಯತ್ನದಲ್ಲಿ, ಆ ಪ್ರಯಾಣಿಕ ಜಾರಿ ಕೆಳಗೆ ಬಿದ್ದಿದ್ದಾನೆ. ನಂತರ, ಕೆಲವೇ ಸೆಕೆಂಡುಗಳಲ್ಲಿ, ರೈಲ್ವೆ ಪೊಲೀಸ್ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಸಮಯಕ್ಕೆ ಸರಿಯಾಗಿ ಆತನನ್ನು ಹೊರಗೆಳೆದಿದ್ದಾನೆ. ಆ ವ್ಯಕ್ತಿ ವಾಸ್ಕೋ ಡ ಗಾಮಾ-ಪಾಟ್ನಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು ಹತ್ತಲು ಪ್ರಯತ್ನಿಸುತ್ತಿದ್ದ ಎಂದು ಅಧಿಕೃತ ಮಾಹಿತಿಯು ಹೇಳುತ್ತದೆ.

  ಇನ್ನು, ರೈಲ್ವೆ ಸಚಿವಾಲಯವು ಈ ಬಗಗೆ ಟ್ವೀಟ್‌ ಮಾಡಿದ್ದು, ಆರ್‌ಪಿಎಫ್ ನೌಕರರ ಪ್ರಯತ್ನವನ್ನು ಶ್ಲಾಘಿಸಿದೆ. ಆದರೆ ಚಲಿಸುವ ರೈಲು ಹತ್ತಲು ಪ್ರಯತ್ನಿಸುವ ಮೂಲಕ ತಮ್ಮ ಪ್ರಾಣವನ್ನೇ ಪಣಕ್ಕಿಡದಂತೆ ಜನರನ್ನು ಒತ್ತಾಯಿಸಿದೆ. ಭಾರತೀಯ ರೈಲ್ವೆ ಸಹ ತಮ್ಮ ಟ್ವೀಟ್‌ನ ಒಂದು ಭಾಗದಲ್ಲಿ, “ಪ್ರಯಾಣಿಕರು ಚಲಿಸುವ ರೈಲಿನಲ್ಲಿ ಹತ್ತಬಾರದು / ಇಳಿಯಬಾರದು ಎಂದು ವಿನಂತಿ ಮಾಡಿಕೊಂಡಿದ್ದಾರೆ. ಇದು ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡಬಹುದು. ” ಎಂದೂ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

  ಆರ್‌ಪಿಎಫ್ ಸಿಬ್ಬಂದಿ ಕೆಎಂ ಪಾಟೀಲ್ ಅವರ ವೀರತನದ ಕೃತ್ಯವನ್ನು ಶ್ಲಾಘಿಸಿದ ಇಲಾಖೆ, “ಎಸ್‌ಡಬ್ಲ್ಯುಆರ್‌ನ ವಾಸ್ಕೋ ನಿಲ್ದಾಣದಲ್ಲಿ ಆರ್‌ಪಿಎಫ್ ಸಿಬ್ಬಂದಿ ನಡೆಸಿದ ಜೀವ ಉಳಿಸಿದ್ದಾರೆ'' ಎಂದು ಬರೆದುಕೊಂಡಿದ್ದಾರೆ.  ಈ ಟ್ವಿಟ್ಟರ್‌ ಪೋಸ್ಟ್‌ಗೆ ಹಲವು ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ವಿವಿಧ ದೇಶಗಳು ಮತ್ತು ಸಂಸ್ಥೆಗಳು ಹೇಗೆ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂಬುದರ ಉದಾಹರಣೆಗಳನ್ನು ಒಂದು ಗುಂಪಿನ ಜನರು ಹಂಚಿಕೊಂಡಿದ್ದಾರೆ. ದೆಹಲಿ ಮೆಟ್ರೋದ ಉದಾಹರಣೆಯನ್ನು ಬಳಕೆದಾರರು ಹಂಚಿಕೊಂಡಿದ್ದು, ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಸ್ವಯಂಚಾಲಿತ ಡೋರ್ ಲಾಕ್ ಮತ್ತು ಅನ್ಲಾಕ್ ವ್ಯವಸ್ಥೆಯು ಹೇಗೆ ಸಹಾಯ ಮಾಡುತ್ತದೆ ಎಂದು ಬರೆಯುತ್ತಾರೆ.

  ಇನ್ನೊಬ್ಬ ಬಳಕೆದಾರರು ಬೇರೆ ದೇಶದ ಉದಾಹರಣೆಯನ್ನು ಉಲ್ಲೇಖಿಸಿದ್ದು, ರೈಲ್ವೆ ಪ್ಲಾಟ್‌ಫಾರ್ಮ್‌ನ ಫೋಟೋವನ್ನು ಹಂಚಿಕೊಂಡ ಅವರು ಭಾರತದಲ್ಲಿ ಅಂತಹ ಕೆಲಸ ಸಾಧ್ಯವೇ ಎಂದು ಸಚಿವಾಲಯವನ್ನು ಕೇಳಿದರು.  ಇನ್ನು, ಹಲವು ನೆಟ್ಟಿಗರು, ಇಂತಹ ಕೆಲಸಗಳನ್ನು ಮಾಡುವ ಪ್ರಯಾಣಿಕರಿಗೆ ದಂಡ ವಿಧಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. ಈ ಬಗ್ಗೆ ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್ದು, ''ಚಾಲನೆಯಲ್ಲಿರುವ ರೈಲು ಹತ್ತುವ ಅಪಾಯಗಳ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಲು ರೈಲ್ವೆ ಮತ್ತೆ ಮತ್ತೆ ವಿಡಿಯೋಗಳನ್ನು ಹಾಕುತ್ತಿದೆ. ಆದರೆ ಯಾರೂ ಗಮನಹರಿಸುವುದಿಲ್ಲ. ಇದನ್ನು ಮಾಡುವ ಅಂತಹ ಪ್ರಯಾಣಿಕರನ್ನು ತಡೆಯಲು ದಂಡ ವಿಧಿಸಬೇಕು'' ಎಂದಿದ್ದಾರೆ.  ಆರ್‌ಪಿಎಫ್ ಸಿಬ್ಬಂದಿ ಕೆಎಂ ಪಾಟೀಲ್ ಅವರ ಕೃತ್ಯವನ್ನು ಶ್ಲಾಘಿಸಿದ ವ್ಯಕ್ತಿಯೊಬ್ಬರು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದು, ಈ ಆರ್‌ಪಿಎಫ್‌ ಸಿಬ್ಬಂದಿಗೆ ಪ್ರಶಸ್ತಿ ನೀಡುವಂತೆ ವಿನಂತಿಸಿದ್ದಾರೆ.

  ರೈಲ್ವೆ ಪೊಲೀಸ್ ಸಿಬ್ಬಂದಿಯ ಪ್ರಯತ್ನವನ್ನು ಶ್ಲಾಘಿಸಿದ ನೆಟ್ಟಿಗೆ ಕೆಲವು ಪ್ರತಿಕ್ರಿಯೆಗಳು ಹೀಗಿದೆ ನೋಡಿ..  ಇನ್ನು, ಇದೇ ರೀತಿ ಮುಂಬೈನ ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪ್ಲಾಟ್‌ಫಾರ್ಮ್ ಮತ್ತು ರೈಲು ನಡುವಿನ ಅಂತರದಲ್ಲಿ ಬೀಳುವುದರಲ್ಲಿದ್ದ ಪ್ರಯಾಣಿಕನೊಬ್ಬನನ್ನು ಇಬ್ಬರು ಆರ್‌ಪಿಎಫ್‌ ಸಿಬ್ಬಂದಿ ರಕ್ಷಿಸಿದ್ದರು. ಆರ್‌ಪಿಎಫ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ ಜನವರಿ 29 ರಂದು ಈ ಘಟನೆ ನಡೆದಿದೆ.
  Published by:Sushma Chakre
  First published: