HOME » NEWS » Trend » VIRAL VIDEO RAJINIKANTH STYLE MUMBAI STREET VENDOR FLYING DOSA VIDEO GOES VIRAL STG SCT

Viral Video | ಮೇಲೆ ಹಾರಿ ತಟ್ಟೆಗೆ ಬೀಳುತ್ತೆ ಮಸಾಲೆ ದೋಸೆ!; ಮುಂಬೈನ ಫ್ಲೈಯಿಂಗ್ ದೋಸೆ ವಿಡಿಯೋ ವೈರಲ್

Flying Dosa: ಮುಂಬೈನ ಮಂಗಲ್‌ದಾಸ್‌ ಮಾರುಕಟ್ಟೆಯಲ್ಲಿರುವ ಶ್ರೀಬಾಲಾಜಿ ದೋಸಾ ಸೆಂಟರ್​ನ ಫ್ಲೈಯಿಂಗ್ ದೋಸೆ‌ ಇದೀಗ ಭಾರೀ ವೈರಲ್‌ ಆಗಿದೆ.

news18-kannada
Updated:February 19, 2021, 10:12 AM IST
Viral Video | ಮೇಲೆ ಹಾರಿ ತಟ್ಟೆಗೆ ಬೀಳುತ್ತೆ ಮಸಾಲೆ ದೋಸೆ!; ಮುಂಬೈನ ಫ್ಲೈಯಿಂಗ್ ದೋಸೆ ವಿಡಿಯೋ ವೈರಲ್
ಫ್ಲೈಯಿಂಗ್ ದೋಸೆ
  • Share this:
ಕಲೆಗೆ ಬೆಲೆ ಕಟ್ಟಲು ಆಗುವುದಿಲ್ಲ ಎಂಬ ಮಾತು ಕೇಳಿರುತ್ತೇವೆ. ಕಲೆ ಇದ್ದರೇ ಒಳ್ಳೆಯದು ಎಂಬುದಕ್ಕೆ ಈ ಸುದ್ದಿಯಲ್ಲಿನ ನಾಯಕನೇ ಸಾಕ್ಷಿ. ಹೌದು, ಸೌತ್‌ ಮುಂಬೈನ ಮಂಗಲ್‌ದಾಸ್‌ ಮಾರುಕಟ್ಟೆಯಲ್ಲಿರುವ ಶ್ರೀಬಾಲಾಜಿ ದೋಸಾ ಸೆಂಟರ್‌ ಇದೀಗ ಭಾರೀ ವೈರಲ್‌ ಆಗಿದೆ. ಏಕೆಂದರೇ ಇಲ್ಲಿನ ದೋಸಾ ಸೆಂಟರ್‌ನಲ್ಲಿ ಎಲ್ಲರಂತೆ ಬಿಸಿ ಬಿಸಿ ದೋಸೆಯನ್ನು ಹಿಡಿದು ಗ್ರಾಹಕರು ಇರುವ ಕಡೆಗೆ ಬರುವುದಿಲ್ಲ. ದೋಸೆಯೇ ಸೀದಾ ಗ್ರಾಹಕರ ತಟ್ಟೆಗೆ ಬರುತ್ತದೆ.

ಹೌದು, ಇಲ್ಲಿ ದೋಸೆ ತಿನ್ನುವವರಿಗೆ ಹೊಸ ರೀತಿಯ ಅನುಭವ ಸಿಗಲಿದೆ. ಬಿಸಿ ಬಿಸಿಯಾಗಿ ಬಾಣಲೆ ಮೇಲೆ ಸಿದ್ಧಗೊಂಡಿರುವ ದೋಸೆಯೂ ನೇರವಾಗಿ ಗಾಳಿಯಲ್ಲಿ ತೇಲಿ ಗ್ರಾಹಕನ ತಟ್ಟೆಗೆ ಬೀಳುತ್ತದೆ. ದೋಸೆ ಅಂಗಡಿ ಮಾಲೀಕನು ಗ್ರಾಹಕರಿಗೆ ಹೊಸ ರೀತಿಯ ಅನುಭವ ಸಿಗಲಿ ಎಂದು ಗ್ರಾಹಕರು ನಿಂತಿರುವ ಜಾಗವನ್ನು ನೋಡಿಕೊಂಡು ಬಾಣಲೆಯಲ್ಲಿ ಬಿಸಿ ಬಿಸಿ ದೋಸೆ ಸಿದ್ಧವಾದ ಬಳಿಕ ಗ್ರಾಹಕರ ತಟ್ಟೆಗೆ ಗಾಳಿಯಲ್ಲಿ ಎಸೆಯುತ್ತಾರೆ. ಇನ್ನು, ಈ ವಿಡಿಯೋ ವೈರಲ್‌ ಆಗಿದ್ದು, ದೋಸೆ ಮಾಲೀಕನ ಕಲೆಗೆ ಕೆಲವರು ಹೊಗಳಿದರೆ, ಇನ್ನು ಕೆಲವರು ತಿನ್ನುವ ಅನ್ನಕ್ಕೆ ಗೌರವ ಕೊಡಬೇಕು ಎಂದಿದ್ದಾರೆ.



ಇನ್ನು, ದೋಸೆ ಮಾರಾಟಗಾರನ ಕಲೆಗೆ ನೆಟ್ಟಿಗರು ಪಿಧಾ ಆಗಿದ್ದು, ಏನು ಟ್ಯಾಲೆಂಟು ಗುರು ಎನ್ನುತ್ತಿದ್ದಾರೆ. ಗ್ರಾಹಕರು ದೋಸೆ ಆರ್ಡರ್‌ ಮಾಡುವ ವೇಳೆ ಅವರನ್ನು ನೋಡಿದಾಗ ಬಾಣಲೆಯಿಂದ ದೋಸೆ ಸಿದ್ಧವಾದ ತಕ್ಷಣವೇ ಅವರ ತಟ್ಟೆಗೆ ಗಾಳಿಯಲ್ಲಿ ದೋಸೆ ಇಳಿಯುತ್ತದೆ. ಇನ್ನು, ಈ ವಿಡಿಯೋವನ್ನು ‘ಸ್ಟ್ರೀಟ್‌ ಫುಡ್‌ ರೆಸಿಪೀಸ್‌’ ಎಂಬ ಫೇಸ್‌ಬುಕ್‌ ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋಗೆ ಈಗಾಗಲೇ 84 ಮಿಲಿಯನ್‌ ವೀಕ್ಷಣೆ ಪಡೆದಿದೆ. ಈತನ ಕಲೆಯನ್ನು ಕೆಲವರು ಹೊಗಳಿದ್ದಾರೆ.

ವಿಡಿಯೋದಲ್ಲಿ ಏನಿದೆ?:

ವೈರಲ್‌ ಆಗಿರುವ ವಿಡಿಯೋದಲ್ಲಿ ಬಾಣಲೆಯಲ್ಲಿ ದೋಸೆಗಳನ್ನು ತಯಾರಿಸುವುದು ಕಾಣಿಸುತ್ತದೆ. ದೋಸೆ ಸಿದ್ಧವಾದ ತಕ್ಷಣ ಗ್ರಾಹಕರು ಇರುವ ಕಡೆಗೆ ಕೈಯಿಂದ ಗಾಳಿಯಲ್ಲಿ ದೋಸೆಯನ್ನು ಎಸೆಯುತ್ತಾನೆ. ಗಾಳಿಯಲ್ಲಿ ತೇಲಿದ ದೋಸೆಯೂ ನೇರವಾಗ ಗ್ರಾಹಕನ ತಟ್ಟೆಯೊಳಗೆ ಇಳಿಯುತ್ತದೆ.

ಈತನ ಕೌಶಲ್ಯವನ್ನು ಕೆಲವರು ಹೊಗಳಿದರೇ ಇನ್ನು ಕೆಲವರನ್ನು ಕೆರಳುವಂತೆ ಆಗಿದೆ. ಅನ್ನದ ವಿಚಾರದಲ್ಲಿ ಮೋಜು ಏನು? ಉತ್ತಮ ಆಹಾರವನ್ನು ತಯಾರಿಸಲು ಕೌಶಲ್ಯ ಇರಬೇಕು. ಈ ರೀತಿ ದೋಸೆಯನ್ನು ಎಸೆಯುವ ಕೌಶಲ್ಯ ಅನಗತ್ಯ ಎಂದು ಬಳಕೆದಾರರೊಬ್ಬರು ಟೀಕಿಸಿದ್ದಾರೆ.

ಇದಕ್ಕೆ ಮತ್ತೋರ್ವ ಬಳಕೆದಾರ ಪ್ರತಿಕ್ರಿಯೆ ನೀಡಿದ್ದು, ಆತನ ಬಳಿ ದೋಸೆ ತಿನ್ನುವವರು ಎಲ್ಲರೂ ಆತನಿಗೆ ಗೌರವ ನೀಡುತ್ತಾರೆ. ಸಂಪಾದಿಸಿ ತಿನ್ನುತ್ತಿರುವ ಆತನ ಬಗ್ಗೆ ನೀವು ನಿರ್ಣಯ ತೆಗೆದುಕೊಳ್ಳಬೇಡಿ. ಆತನಿಗಿಂತ ನೀವು ದೊಡ್ಡವರಲ್ಲ ಎಂದಿದ್ದಾರೆ.
Published by: Sushma Chakre
First published: February 19, 2021, 10:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories