Weird News: ಚೀನಾದಲ್ಲಿ ಹುಳುಗಳ ಮಳೆ, ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್!‌

ಹುಳಗಳ ಮಳೆ

ಹುಳಗಳ ಮಳೆ

ಮಳೆ ಅಂದ್ರೆ ಅದೇನೋ ಒಂದು ರೀತಿಯ ಖುಷಿ ಅಲ್ವಾ? ಆದರೆ, ಇಲ್ಲಿ ಬಿದ್ದ ಮಳೆಯಿಂದ ಜನರು ಶಾಕ್​ ಆಗಿದ್ದಾರೆ.

  • Share this:

ಮಳೆಯೆಂದರೆ ನೆನಪಾಗೋದು ಆಕಾಶದಿಂದ ಬೀಳೋ ನೀರಿನ ಹನಿಗಳು… ಘಮ್ಮಂಥ ಬರೋ ಮಣ್ಣಿನ ವಾಸನೆ ಅದರಲ್ಲಿ ಮಿಂದು ಸಂತೋಷ ಪಡೋ ಜನರು… ಇವೆಲ್ಲಾ ಕಲ್ಪನೆಗಳು ಮನಸ್ಸಲ್ಲಿ ಮೂಡುತ್ತವೆ. ಆದರೆ ಅದೇ ಆಕಾಶದಿಂದ ರಾಶಿ ರಾಶಿ ಹುಳುಗಳು ಬಿದ್ದರೆ…!? ಹುಳಗಳ ಮಳೆ… ಕೇಳಿದರೇ ಅಸಹ್ಯ ಎನಿಸುವ ಎಂದೂ ಕಂಡು ಕೇಳರಿಯದ ಇಂಥದ್ದೊಂದು ವಿಲಕ್ಷಣ ಘಟನೆ ಚೀನಾದಲ್ಲಿ ಆಗಿದೆಯಂತೆ. ಈ ದೃಶ್ಯವನ್ನು ತೋರಿಸುವ ವಿಡಿಯೋಗಳು ವೈರಲ್‌ ಆಗಿವೆ. ಅಂದಹಾಗೆ ಇಂಥದ್ದೊಂದು ವಿಲಕ್ಷಣ (Weired) ಘಟನೆ ನಡೆದಿರೋದು ಚೀನಾ ಲಿಯಾನಿಂಗ್‌ನಲ್ಲಿ. ಇಲ್ಲಿ ಆಕಾಶದಿಂದ ಹುಳುಗಳ ಮಳೆ (Rain) ಆಗಿದೆ ಎಂಬಂಥ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ (Social Media ) ವೈರಲ್‌ ಆಗಿದೆ.


ಇದು ಹವಾಮಾನ ವೈಪರೀತ್ಯದ ಭಾಗವೇ ಅಥವಾ ಇನ್ಯಾವುದರ ಭಾಗವೇ ಎಂಬುದು ತಿಳಿದುಬಂದಿಲ್ಲ. ಆದಾಗ್ಯೂ ವೈರಲ್‌ ವಿಡಿಯೋದಲ್ಲಿ ಕಂಡ ಹುಳುಗಳ ಮಳೆಯ ಬಗ್ಗೆ ಸಾಕಷ್ಟು ಜನರು ಆಶ್ಚರ್ಯ, ಕುತೂಹಲ ವ್ಯಕ್ತಪಡಿಸಿರುವುದರ ಜೊತೆಗೆ ಅಸಹ್ಯ ಎಂದೂ ಹೇಳಿದ್ದಾರೆ.


ವೈರಲ್‌ ಆಗಿರುವ ವಿಡಿಯೋ ಕ್ಲಿಪ್‌ ನಲ್ಲಿ ಏನಿದೆ?


ಚೀನಾ ಪ್ರಾಂತ್ಯದ ಲಿಯಾನಿಂಗ್‌ನಲ್ಲಿ ಇತ್ತೀಚೆಗೆ ಹವಾಮಾನ ವಿದ್ಯಮಾನದ ವಿಲಕ್ಷಣ ಹಾಗೂ ಆಘಾತಕಾರಿ ಘಟನೆ ವರದಿಯಾಗಿದೆ. ಅಲ್ಲಿ ಒಮ್ಮೆಲೇ ರಾಶಿ ರಾಶಿ ಹುಳುಗಳು ಆಕಾಶದಿಂದ ಭೂಮಿಗೆ ಬಿದ್ದವು ಎನ್ನಲಾಗಿದೆ.


ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊ ಕ್ಲಿಪ್ ಲಿಯಾನಿಂಗ್‌ನ ಕಾರುಗಳ ಮೇಲೆ ಮತ್ತು ಬೀದಿಗಳಲ್ಲಿ ಅಲ್ಲಲ್ಲಿ ಎರೆಹುಳುಗಳಂಥವು ಕಾಣಿಸಿಕೊಂಡವು ಎಂದು ತೋರಿಸಿದೆ. ರಸ್ತೆ ಮೇಲೆ ನಡೆಯುವವರು "ಹುಳು ಮಳೆ"ಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಛತ್ರಿಗಳನ್ನು ಹಿಡಿದುಕೊಂಡರು.


ವಿಡಿಯೋ ನಿಜವೋ ಸುಳ್ಳೋ?


ಅಂದಹಾಗೆ ಬೀಜಿಂಗ್‌ನಲ್ಲಿ ಇದೇ ರೀತಿಯ ಹುಳುಗಳು ಆಕಾಶದಿಂದ ಬೀಳುತ್ತಿರುವುದನ್ನು ತೋರಿಸಲು ಉದ್ದೇಶಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಆದರೆ ಹಲವಾರು ಜನರು ಅದರ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಕೆಲವರು ಈ ವಿಡಿಯೋದಲ್ಲಿರುವುದು ನಿಜವಲ್ಲ. ಇದೊಂದು ಸತ್ಯವಲ್ಲದ ಘಟನೆ ಎಂದಿದ್ದಾರೆ.


ಇದನ್ನೂ ಓದಿ: ಹಣ ಕೊಡಲಾಗದೇ ವಿಮಾನ ನಿಲ್ದಾಣದಲ್ಲಿಯೇ ಬಟ್ಟೆ, ಆಹಾರ ಬಿಟ್ಟು ಮಲೇಷ್ಯಾಗೆ ತೆರಳಿದ ವಿದ್ಯಾರ್ಥಿ!


ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇದು ಪ್ರಾಣಿಗಳ ಮಳೆ ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ಗಮನಿಸಿದಂತೆ ಬಲವಾದ ಬಿರುಗಾಳಿ ಅಥವಾ ಸುಂಟರಗಾಳಿ ಸಮಯದಲ್ಲಿ ಮೀನು ಅಥವಾ ಕಪ್ಪೆಗಳಂತಹ ಸಣ್ಣ ಜೀವಿಗಳು ಆಕಾಶದಿಂದ ಬೀಳುವುದು ಕಂಡುಬರುತ್ತವೆ.




ಆದಾಗ್ಯೂ, ಕೆಲವರು ಈ ವಿಡಿಯೋ ನಿಜವೋ ಅಥವಾ ಸುಳ್ಳೋ ಎಂಬುದನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ಬೀಜಿಂಗ್‌ನಲ್ಲಿ ಇತ್ತೀಚೆಗೆ ಮಳೆ ಇಲ್ಲದ ಕಾರಣ ಅದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.


ವಿಡಿಯೋದಲ್ಲಿರೋದು ಸುಳ್ಳು ಎಂಬ ಚೀನಾ ಪತ್ರಕರ್ತ


ಶೆನ್ ಶ್ವೇಯ್ ಎಂಬ ಚೀನಾದ ಪತ್ರಕರ್ತ ಟ್ವಿಟ್ಟರ್‌ನಲ್ಲಿ ಬೀಜಿಂಗ್ ವರ್ಮ್ ಮಳೆಯ ರಹಸ್ಯವನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ಈ ವೈರಲ್‌ ಆಗಿರುವ ವಿಡಿಯೋ ದೃಶ್ಯಾವಳಿಗಳು ಸುಳ್ಳು ಮತ್ತು ನಗರದಲ್ಲಿ ಇತ್ತೀಚೆಗೆ ಯಾವುದೇ ಮಳೆಯಾಗಿಲ್ಲ ಎಂದು ಹೇಳಿದ್ದಾರೆ.




ಕೆಲವು ಮೂಲಗಳ ಪ್ರಕಾರ,ವೀಡಿಯೊದಲ್ಲಿ ಕಂಡುಬಂದ ಹುಳುಗಳು ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಈ ಪ್ರದೇಶದಲ್ಲಿ ಇರುತ್ತವೆ ಎನ್ನಲಾಗಿದೆ.


ಒಬ್ಬ ಟ್ವಿಟ್ಟರ್‌ ಬಳಕೆದಾರ ಚೀನಾ ಹುಳುಗಳ ಮಳೆಯಿಂದ ತತ್ತರಿಸಿದೆ. ಇಲ್ಲಿನ ನಿವಾಸಿಗಳು ಕೊಡೆಗಳನ್ನು ಒಯ್ಯಲು ಮತ್ತು ಆಶ್ರಯವನ್ನು ಹುಡುಕಲು ಕೇಳಿಕೊಳ್ಳುತ್ತಿದ್ದಾರೆ ಎಂದು ಬರೆದಿದ್ದಾರೆ.




ಆದರೆ ಚೀನಾದಲ್ಲಿ ಆಕಾಶದಿಂದ ಉದುರಿದ ಹುಳುಗಳ ಬಗ್ಗೆ ಇನ್ನೂ ಸ್ಪಷ್ಟನೆ ಬರಬೇಕಷ್ಟೇ. ನೈಸರ್ಗಿಕ ಹವಾಮಾನಗಳ ಕಾರಣದಿಂದ ಈ ಹುಳುಗಳ ಮಳೆಯಾಗಿದೆಯಾ? ಅಥವಾ ಇದರ ಹಿಂದೆ ಬೇರೇನಾದರೂ ಕಾರಣ ಇದೆಯಾ? ಅಷ್ಟಕ್ಕೂ ಇದು ನಿಜವೋ ಸುಳ್ಳೋ ಎಂಬ ಬಗ್ಗೆಯೂ ಸ್ಪಷ್ಟನೆ ಸಿಗಬೇಕಿದೆ. ಆದರೆ ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಆಸಕ್ತಿಯನ್ನು ಹುಟ್ಟುಹಾಕಿದೆ ಎಂಬುದು ಸುಳ್ಳಲ್ಲ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು