Viral Video: ರೂಟ್‌ ಕೆನಾಲ್‌ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಹಿಮಕರಡಿ..! ವಿಡಿಯೋ ನೋಡಿ..

ಹಿಮ ಕರಡಿ ರೂಟ್ ಕೆನಾಲ್ ಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವ ದೃಶ್ಯ

ಹಿಮ ಕರಡಿ ರೂಟ್ ಕೆನಾಲ್ ಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವ ದೃಶ್ಯ

ವಿಡಿಯೋ ಕ್ಲಿಪ್‌ಗೆ ಪ್ರತಿಕ್ರಿಯಿಸಿದ ನೆಟ್ಟಿಗರು ಹಿಮ ಕರಡಿ ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸಿದರು ಮತ್ತು ಪ್ರಾಣಿಗಳನ್ನು ಚೆನ್ನಾಗಿ ಆರೈಕೆ ಮಾಡಿದ್ದಕ್ಕಾಗಿ ವನ್ಯಜೀವಿ ಉದ್ಯಾನವನದ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

  • Trending Desk
  • 2-MIN READ
  • Last Updated :
  • Share this:

ನಿಮ್ಮ ಬಾಯಿಯ ಆರೋಗ್ಯವನ್ನು ನೀವು ಕಾಳಜಿ ವಹಿಸಬೇಕಾದರೆ ಅಥವಾ ನಿಮ್ಮ ಹಲ್ಲುಗಳನ್ನು ಪರೀಕ್ಷಿಸಬೇಕಾದರೆ ನೀವು ಏನು ಮಾಡುತ್ತೀರಿ..? ನಿಮಗೆ ಗೊತ್ತಿರುವ ಅಥವಾ ನಿಮ್ಮ ಬಳಿ ಇರುವ ದಂತ ವೈದ್ಯ(Dentist)ರನ್ನು ಭೇಟಿ ಮಾಡುತ್ತೀರಿ. ಅದೇ ರೀತಿ, ಪ್ರಾಣಿ(Animals)ಗಳಿಗೂ ವಿಶೇಷ ದಂತವೈದ್ಯರು(Special Dentist ) ಇದ್ದಾರೆ ಎಂಬುದು ನಿಮಗೆ ತಿಳಿದಿದೆಯೇ..? ಪಶುವೈದ್ಯರು ಸಾಕಷ್ಟು ಸಾಮಾನ್ಯವಾಗಿದ್ದರೂ, ಪ್ರಾಣಿಗಳ ದಂತವೈದ್ಯರ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ಯುನೈಟೆಡ್ ಕಿಂಗ್‌ಡಮ್(United Kingdom)‌ನಲ್ಲಿನ ಹಿಮಕರಡಿಯೊಂದು ತನ್ನ ಬಾಯಿಯಲ್ಲಿ ಬಾವು ಬೆಳೆಯುವುದನ್ನು ತಡೆಯಲು 1 ಗಂಟೆ ಅವಧಿಯ ರೂಟ್ ಕೆನಾಲ್(Root Canal Treatment) ಚಿಕಿತ್ಸೆಗೆ ಒಳಗಾಗಬೇಕಾಯಿತು. ಹೌದು, ಮನುಷ್ಯರಿಗೆ ಮಾತ್ರವಲ್ಲ, ಹಿಮ ಕರಡಿಗೂ ಇಲ್ಲಿ ರೂಟ್‌ ಕೆನಾಲ್‌ ಚಿಕಿತ್ಸೆ ಮಾಡಲಾಗಿದೆ.


ಹಲ್ಲು ನೋವಿನಿಂದ ಬಳಲುತ್ತಿದ್ದ ಹಿಮಕರಡಿ


ಯುಕೆಯ ಯಾರ್ಕ್‌ಷೈರ್ ವೈಲ್ಡ್‌ಲೈಫ್ ಪಾರ್ಕ್‌ನಲ್ಲಿರುವ 3 ವರ್ಷದ ಸಿಸು ಎಂಬ ಕರಡಿ ಉಲ್ಲಾಸ ಹಾಗೂ ಪ್ರೀತಿ ಭರಿತ ಜೀವಿ ಎಂದು ತಿಳಿದುಬಂದಿದೆ. ಆದರೆ ಬರಬರುತ್ತಾ ಅದರ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದೆ.


ಅದು ಹೆಚ್ಚಿನ ಸಮಯದಿಂದ ಇರಿಟೇಟ್‌ ಆಗಲು ಪ್ರಾರಂಭಿಸುತ್ತಿತ್ತು, ಮತ್ತು ಕೆಲವು ರೀತಿಯ ನೋವು ಕಾಣಿಸಿಕೊಂಡಂತೆ ಕಾಣುತ್ತಿತ್ತು ಎಂದು ತಿಳಿದುಬಂದಿದೆ. ಬಳಿಕ, ಹತ್ತಿರದಿಂದ ನೋಡಿದಾಗ, ವೈಲ್ಡ್‌ಲೈಫ್‌ ಪಾರ್ಕ್‌ನ ಸಿಬ್ಬಂದಿ ಅದರ 3 ಇಂಚಿನ ಕೋರೆಹಲ್ಲು ಮುರಿದುಹೋಗಿರುವುದನ್ನು ಅರಿತುಕೊಂಡರು ಎಂದು ಸ್ಕೈನ್ಯೂಸ್ ವರದಿ ಮಾಡಿದೆ. ಇದರ ನಂತರ, ಕರಡಿಗೆ ಚಿಕಿತ್ಸೆ ನೀಡಲು ಪ್ರಾಣಿಗಳ ದಂತವೈದ್ಯರಾದ ಡಾ. ಪೀಟರ್ ಕೆರ್ಟೆಸ್ಜ್ ಅವರನ್ನು ಕರೆಸಲಾಯಿತು.


ಇದನ್ನೂ ಓದಿ:Viral News : ಪ್ರಿಯತಮೆ ಬೆಕ್ಕು ಪರಚುತ್ತೆ ಅಂತ ಈತ ಮಾಡಿದ್ದೇನು ಗೊತ್ತಾ? 6 ವರ್ಷವಾದರೂ ರಟ್ಟಾಗದ ಗುಟ್ಟು!


ರೂಟ್ ಕೆನಾಲ್ ಚಿಕಿತ್ಸೆ ಮಾಡಿಸಿಕೊಂಡ ಹಿಮಕರಡಿ


ವರದಿಯ ಪ್ರಕಾರ, ನರ್ಸ್ ಮೊನಿಕಾ ಮಜುರಿಕಿವಿಕ್ಜ್ ಜೊತೆಗೆ ಡಾ. ಕೆರ್ಟೆಸ್ಜ್ ಚಿಕಿತ್ಸೆ ಪ್ರಾರಂಭಿಸಿದರು ಮತ್ತು ಪ್ರಮಾಣಿತ ಪ್ರಕ್ರಿಯೆಯ ಭಾಗವಾಗಿ, ಸಿಸುವಿನ ಮುರಿದ ಹಲ್ಲಿನ ಸೋಂಕಿತ ರೂಟ್‌ ಕೆನಾಲ್‌ ಅನ್ನು ಸ್ವಚ್ಛಗೊಳಿಸಿ ಅದನ್ನು ಫಿಲ್‌ ಮಾಡಿದರು. ಚಿಕಿತ್ಸೆಯ ನಂತರ ಕರಡಿ ಶಾಂತವಾಗಿತ್ತು ಮತ್ತು ಚೇತರಿಸಿಕೊಳ್ಳಲು ಅದರ ಗುಹೆಯಲ್ಲಿ ಇರಿಸಲಾಯಿತು ಎಂದು ವರದಿಯಾಗಿದೆ.


ಇನ್ನು, ಈ ಚಿಕಿತ್ಸೆಯ ಕುರಿತು ಮಾತನಾಡಿದ ಕೆರ್ಟೆಸ್, ಕರಡಿಯ ಯೋಗಕ್ಷೇಮದ ಬಗ್ಗೆ ಗಮನ ಹರಿಸುವುದಕ್ಕಾಗಿ ಸಿಬ್ಬಂದಿಯನ್ನು ಶ್ಲಾಘಿಸಿದರು ಮತ್ತು ಪ್ರಾಣಿಯು ಈಗ ತನ್ನ ಜೀವನದುದ್ದಕ್ಕೂ ನೋವುರಹಿತ ಮತ್ತು ಸೋಂಕುರಹಿತ ಹಲ್ಲು ಹೊಂದಿರುತ್ತದೆ ಎಂದು ಹೇಳಿದರು.


ಕರಡಿ ರೂಟ್​​ ಕೆನಾಲ್ ಮಾಡಿಸಿಕೊಂಡ ವಿಡಿಯೋ


ಯಾರ್ಕ್‌ಷೈರ್ ವೈಲ್ಡ್‌ಲೈಫ್ ಪಾರ್ಕ್ ತನ್ನ ಟ್ವಿಟ್ಟರ್ ಟೈಮ್‌ಲೈನ್‌ನಲ್ಲಿ ಕರಡಿಯ ರೂಟ್ ಕೆನಾಲ್ ಚಿಕಿತ್ಸೆಯ ವಿಡಿಯೋವನ್ನು ಹಂಚಿಕೊಂಡಿದೆ ಮತ್ತು ಹೀಗೆ ಬರೆದಿದೆ, “ಹಿಮಕರಡಿಗೆ ಹಲ್ಲುನೋವು ಇದ್ದಾಗ ಏನಾಗುತ್ತದೆ..? ಅದು ಸಹಜವಾಗಿ ದಂತವೈದ್ಯರ ಬಳಿಗೆ ಹೋಗುತ್ತದೆ..! ಸಿಸು ಹಿಮಕರಡಿ ತನ್ನ ಮೊದಲ ಭೇಟಿಯನ್ನು ದಂತವೈದ್ಯರನ್ನು ನೋಡಲು ಹೋದ ಕ್ಷಣದ ತೆರೆಯ ಹಿಂದಿನ ಹೆಜ್ಜೆಗಳು..!’’ ಎಂದು ಟ್ವೀಟ್‌ ಮಾಡಿದೆ.


ಇದನ್ನೂ ಓದಿ:Blue Whale ಒಂದು ದಿನದಲ್ಲಿ ಎಷ್ಟು ಆಹಾರ ಸೇವಿಸುತ್ತದೆ? ಅಧ್ಯಯನಗಳು ಏನು ಹೇಳುತ್ತವೆ?ಈ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ, ಈ ವಿಡಿಯೋ ಕ್ಲಿಪ್ ಹಲವಾರು ಕಾಮೆಂಟ್‌ಗಳ ಜೊತೆಗೆ 4 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವಿಡಿಯೋ ಕ್ಲಿಪ್‌ಗೆ ಪ್ರತಿಕ್ರಿಯಿಸಿದ ನೆಟ್ಟಿಗರು ಹಿಮ ಕರಡಿ ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸಿದರು ಮತ್ತು ಪ್ರಾಣಿಗಳನ್ನು ಚೆನ್ನಾಗಿ ಆರೈಕೆ ಮಾಡಿದ್ದಕ್ಕಾಗಿ ವನ್ಯಜೀವಿ ಉದ್ಯಾನವನದ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

Published by:Latha CG
First published: