HOME » NEWS » Trend » VIRAL VIDEO PATNA LAWYER ENJOYS LUNCH ON ZOOM MEETING SESSION VIDEO GOES VIRAL STG SCT

Viral Video: ಜೂಮ್ ಮೀಟಿಂಗ್‌ ವೇಳೆ ಕ್ಯಾಮೆರಾ ಆಫ್​ ಮಾಡಲು ಮರೆತು ಭೋಜನ ಸವಿದ ವಕೀಲ; ವೈರಲ್ ಆಯ್ತು ವಿಡಿಯೋ

Viral Video: ವರ್ಚುವಲ್ ಕೋರ್ಟ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಪಾಟ್ನಾ ಹೈಕೋರ್ಟ್‌ನ ವಕೀಲರೊಬ್ಬರು ತಮ್ಮ ಕ್ಯಾಮೆರಾವನ್ನು ಆಫ್ ಮಾಡಲು ಮರೆತು ಸಂತೋಷದಿಂದ ತಮ್ಮ ಊಟವನ್ನು ಸವಿಯುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.

news18
Updated:March 9, 2021, 1:27 PM IST
Viral Video: ಜೂಮ್ ಮೀಟಿಂಗ್‌ ವೇಳೆ ಕ್ಯಾಮೆರಾ ಆಫ್​ ಮಾಡಲು ಮರೆತು ಭೋಜನ ಸವಿದ ವಕೀಲ; ವೈರಲ್ ಆಯ್ತು ವಿಡಿಯೋ
ಜೂಮ್​ ವಿಡಿಯೋ ಕಾಲ್ ವೇಳೆ ಊಟ ಮಾಡಿದ ವಕೀಲ
  • News18
  • Last Updated: March 9, 2021, 1:27 PM IST
  • Share this:
ಪ್ರಪಂಚದಾದ್ಯಂತ ಉದ್ಯೋಗದ ಸಂಸ್ಕೃತಿಯು ಡಿಜಿಟಲ್ ಕ್ರಾಂತಿಗೆ ಒಳಗಾಗಿ ಒಂದು ವರ್ಷಗಳೇ ಕಳೆದರೂ ವಿಡಿಯೋ ಕರೆಗಳಲ್ಲಿ ನಡೆಯುವ ತಪ್ಪುಗಳಿಗೆ ಏನು ಕಡಿಮೆಯಾಗಿಲ್ಲ. ಇದಕ್ಕೆ ಪೂರಕವೆಂಬಂತೆ ಇತ್ತೀಚಿಗೆ ನಡೆದ ಘಟನೆಯಲ್ಲಿ ಝೂಮ್ ಕರೆಯಲ್ಲಿ ನಡೆದ ಒಂದು ಅಚಾತುರ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ವರ್ಚುವಲ್ ಕೋರ್ಟ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಪಾಟ್ನಾ ಹೈಕೋರ್ಟ್‌ನ ವಕೀಲರೊಬ್ಬರು ತಮ್ಮ ಕ್ಯಾಮೆರಾವನ್ನು ಆಫ್ ಮಾಡಲು ಮರೆತು ಸಂತೋಷದಿಂದ ತಮ್ಮ ಊಟವನ್ನು ಸವಿಯುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.

ಸಣ್ಣ ವಿಡಿಯೋ ತುಣುಕೊಂದರಲ್ಲಿ, ಕ್ಷತ್ರಶಲ್ ರಾಜ್ ಎಂಬ ವಕೀಲರೊಬ್ಬರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಮೀಟಿಂಗ್ ನಡೆಯುತ್ತಿದೆ ಎಂಬ ಪರಿವೆಯೇ ಇಲ್ಲದೆ ತಮ್ಮ ಪಾಡಿಗೆ ಕ್ಯಾಮೆರಾದ ಮುಂದೆ ಹಾಯಾಗಿ ಊಟ ಸವಿಯುವುದನ್ನು ಕಾಣಬಹುದು. ಇದನ್ನು ಗಮನಿಸಿದ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಆಗಿರುವ ತುಷಾರ್ ಮೆಹ್ತಾ, ತಮ್ಮ ವಿಡಿಯೋದ ಮೂಲಕ ವಕೀಲರಿಗೆ ಇನ್ನು ನೀವು ಲೈವ್‌ನಲ್ಲೇ ಇದ್ದೀರಿ, ವಿಡಿಯೋ ಆಫ್ ಮಾಡಿಲ್ಲ ಎಂದು ಸೂಚಿಸಲು ಪ್ರಯತ್ನಿಸುತ್ತಾರೆ. ನಂತರ ತುಷಾರ್ ಮೆಹ್ತಾ ಅವರು ತಮ್ಮ ಮೊಬೈಲ್ ನಲ್ಲಿ ಕರೆ ಮಾಡಿ, ಆಗುತ್ತಿರುವ ಅವಾಂತರದ ಬಗ್ಗೆ ಎಚ್ಚರಿಸುತ್ತಾರೆ. ಕೂಡಲೇ ಇದರ ಅರಿವಾದ ವಕೀಲ ಕ್ಷತ್ರಶಲ್ ರಾಜ್, ತನ್ನ ಊಟದ ತಟ್ಟೆಯನ್ನು ಪಕ್ಕಕ್ಕಿಟ್ಟು ವಿಡಿಯೋ ಸ್ಕ್ರೀನ್ ನಲ್ಲಿ ಏನು ಮಾಡಬೇಕೆಂದು ಪರದಾಡುವುದು ಗಮನಿಸಬಹುದು.

ಈ ಅವಾಂತರಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಸ್ಯ ಮಾಡುತ್ತಾ, “ಯಹಾ ಬೇಜೊ” (ಇಲ್ಲಿಗೆ ಕಳುಹಿಸಿ) ಎಂದು ನಮಗೂ ಸ್ವಲ್ಪ ಆಹಾರ ಕಳುಹಿಸಿ ಎಂದು ಕೇಳುತ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.ವೈರಲ್‌ ಆಗಿದ್ದ ಬೆಕ್ಕಿನ ಫಿಲ್ಟರ್‌:ತಮಾಷೆಗೆ ಆಹಾರವಾಗುತ್ತಿರುವ ಝೂಮ್ ವಿಡಿಯೋ ಕರೆಯ ಅವಾಂತರಗಳು ಈಗ ಇಂಟರ್ನೆಟ್ ನಲ್ಲಿ ಟ್ರೆಂಡಿಂಗ್ ಆಗಿವೆ. ಇತ್ತೀಚೆಗೆ, ಇದೇ ರೀತಿಯ ಮತ್ತೊಂದು ಘಟನೆ ನಡೆದಿದ್ದು, ನ್ಯಾಯಾಧೀಶ ರಾಯ್ ಫರ್ಗುಸನ್ ಫೆಬ್ರವರಿ ತಿಂಗಳ ಆರಂಭದಲ್ಲಿ ಟೆಕ್ಸಾಸ್ ನ 394ನೇ ನ್ಯಾಯಾಂಗ ಜಿಲ್ಲಾ ನ್ಯಾಯಾಲಯದ ವರ್ಚುವಲ್ ವಿಚಾರಣೆಯನ್ನು ಝೂಮ್ ನಲ್ಲಿ ಕರೆದಿದ್ದರು. ಮೀಟಿಂಗ್ ಶುರುವಾದಾಗ ಎರಡು ವಕೀಲರು ಮತ್ತು ಒಂದು ಬೆಕ್ಕನ್ನು ಕಂಡು ಒಮ್ಮೆ ಗಾಬರಿಯಾದರು. ಆದರೆ ಈ ಮುದ್ದಾದ ನೀಲಿ ಬೆಕ್ಕು ಬೇರೆ ಯಾರು ಅಲ್ಲ, ಕೌಂಟಿ ವಕೀಲ ರಾಡ್ ಪೊಂಟನ್. ಅವರ ಮುಖ ಬೆಕ್ಕಿನ ಫಿಲ್ಟರ್‌ ಹಿನ್ನೆಲೆ ಬೆಕ್ಕಿನ ರೀತಿ ಆಗಿತ್ತು.

"ನಾನು ಇಲ್ಲಿ ಲೈವ್ ನಲ್ಲಿ ಇದ್ದೇನೆ, ನಾನು ಬೆಕ್ಕು ಅಲ್ಲ" ಎಂದು ಅವರು ಹೇಳಿದರು.
"ನಾನು ಅದನ್ನು ನೋಡಬಹುದು" ಎಂದು ನ್ಯಾಯಾಧೀಶರು ಹೇಳಿದರು.ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಫರ್ಗುಸನ್ ಟ್ವೀಟ್‌ನಲ್ಲಿ ಹೀಗೆ ಬರೆದಿದ್ದಾರೆ: “ ಜೂಮ್ ಬಳಕೆದಾರರಿಗೆ ಪ್ರಮುಖ ಸಲಹೆ: ನೀವು ವಿಡಿಯೋ ಮೂಲಕ ವಿಚಾರಣೆಗೆ ಪಾಲ್ಗೊಳ್ಳುವ ಮುನ್ನ ಮಕ್ಕಳು ನಿಮ್ಮ ಕಂಪ್ಯೂಟರ್ ಅನ್ನು ಬಳಸಿದ್ದರೆ ಫಿಲ್ಟರ್‌ಗಳು ಆಫ್ ಆಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಜೂಮ್ ವಿಡಿಯೊ ಆಯ್ಕೆಗಳನ್ನು ಪರಿಶೀಲಿಸಿ.” ಎಂದಿದ್ದಾರೆ.
Published by: Sushma Chakre
First published: March 9, 2021, 1:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories