ನಮ್ಮಲ್ಲಿ ಯಾವುದಾದರೂ ಒಂದು ಚಿತ್ರದ ಹಾಡು (Song) ಅಥವಾ ಡೈಲಾಗ್ (Dialogue) ಜನರಿಗೆ ಇಷ್ಟವಾದರೆ ಸಾಕು ಆ ಹಾಡನ್ನು ಎಲ್ಲಾ ಕಡೆ ಹಾಡುವುದಕ್ಕೆ ಮತ್ತು ಆ ಹಾಡಿಗೆ ಡ್ಯಾನ್ಸ್ ಮಾಡಲು ತಡ ಮಾಡುವುದಿಲ್ಲ ಅಂತ ಹೇಳಬಹುದು. ಇಲ್ಲಿಯೂ ಸಹ ಅದೇ ರೀತಿಯ ಒಂದು ಘಟನೆ (Incident)ಆಗಿದೆ ನೋಡಿ. ಒಂದು ಹಿಟ್ ಚಿತ್ರದ ಹಾಡಿಗೆ ವಿದೇಶಿ ಹುಡುಗರು ಹೆಜ್ಜೆ ಹಾಕಿದ್ದಾರೆ.
ಹೀಗೆ 1997ರಲ್ಲಿ ಬಿಡುಗಡೆಯಾಗಿ ತುಂಬಾನೇ ದೊಡ್ಡ ಮಟ್ಟದ ಯಶಸ್ಸನ್ನು ಕಂಡ ಬಾಲಿವುಡ್ ಚಿತ್ರಗಳ ಸಾಲಿನಲ್ಲಿ ಬಾಲಿವುಡ್ ನಲ್ಲಿ ಬಾದ್ ಶಾ ಅಂತಾನೆ ಖ್ಯಾತಿ ಗಳಿಸಿರುವ ಶಾರುಖ್ ಖಾನ್, ನಟಿ ಮಾಧುರಿ ದೀಕ್ಷಿತ್ ಮತ್ತು ಕರಿಷ್ಮಾ ಕಪೂರ್ ಅಭಿನಯದ ‘ದಿಲ್ ತೋ ಪಾಗಲ್ ಹೈ’ ಚಿತ್ರ ಸಹ ಒಂದು ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಈ ಚಿತ್ರದ ಕಥೆಯು ಪ್ರೇಮಕಥೆಯನ್ನು ಒಳಗೊಂಡಿದ್ದು, ಇದರಲ್ಲಿರುವ ಹಾಡುಗಳು ಸಹ ಚಿತ್ರದಷ್ಟೇ ಜನಪ್ರಿಯವಾಗಿದ್ದವು ಅಂತ ಹೇಳಬಹುದು. ಈ ಚಿತ್ರದಲ್ಲಿ ಇದ್ದ ಎರಡು ಹಾಡುಗಳನ್ನು ಮಾತ್ರ ಇನ್ನೂ ಅನೇಕರು ಹಾಡುತ್ತಿರುತ್ತಾರೆ ಮತ್ತು ಮದುವೆ ಸಮಾರಂಭಗಳಲ್ಲಿ, ಆರ್ಕೇಸ್ಟ್ರಾದಲ್ಲಿ ಅಲ್ಲದೆ ಬೇರೆ ಬೇರೆ ಪಾರ್ಟಿಗಳಲ್ಲಿಯೂ ಸಹ ನಾವು ಕೇಳುತ್ತಿರುತ್ತೇವೆ.
‘ದಿಲ್ ತೋ ಪಾಗಲ್ ಹೈ’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ಹುಡುಗರು
‘ದಿಲ್ ತೋ ಪಾಗಲ್ ಹೈ’ ಎಂಬ ಟೈಟಲ್ ಟ್ರ್ಯಾಕ್ ಮತ್ತು ಇನ್ನೊಂದು ‘ಲೇ ಗಯೀ ಲೇ ಗಯೀ’ ಎಂಬ ಪಾರ್ಟಿ ಹಾಡು ಅಂತ ಹೇಳಿದರೆ ಸುಳ್ಳಲ್ಲ. ಈಗ ಈ ‘ಲೇ ಗಯೀ ಲೇ ಗಯೀ’ ಎಂಬ ಹಾಡಿಗೆ ವಿದೇಶಿ ಹುಡುಗರ ಡ್ಯಾನ್ಸ್ ಟ್ರೂಪ್ ಒಂದು ಹೆಜ್ಜೆ ಹಾಕಿದ್ದು, ಅವರ ಡ್ಯಾನ್ಸ್ ಅನ್ನು ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 9 ಗಂಟೆ ತಡವಾಗಿ ಬಂದ ರೈಲು ನೋಡಿ ಖುಷಿಯಿಂದ ಪ್ರಯಾಣಿಕರ ಸಖತ್ ಸ್ಟೆಪ್; ವಿಡಿಯೋ ನೋಡಿ
ಈ ಹಾಡಿನಲ್ಲಿ ಶಾರುಖ್ ಮತ್ತು ಕರಿಷ್ಮಾ ಕಪೂರ್ ಹೇಗೆ ಜೋಶ್ ನಲ್ಲಿ ಡ್ಯಾನ್ಸ್ ಮಾಡಿದ್ದರೋ, ಅದೇ ಜೋಶ್ ನಲ್ಲಿ ಇಲ್ಲಿ ನಾರ್ವೇಜಿಯನ್ ನೃತ್ಯ ತಂಡವಾದ ಕ್ವಿಕ್ ಸ್ಟೈಲ್ ನ ಹುಡುಗರು ಸಹ ಡ್ಯಾನ್ಸ್ ಮಾಡಿದ್ದಾರೆ.
ಡ್ಯಾನ್ಸ್ ವೀಡಿಯೋವನ್ನು ಹಂಚಿಕೊಂಡಿರುವ ದಿ ಕ್ವಿಕ್ ಸ್ಟೈಲ್
ನಾರ್ವೇಜಿಯನ್ ನೃತ್ಯ ತಂಡವಾದ ದಿ ಕ್ವಿಕ್ ಸ್ಟೈಲ್ ಬಗ್ಗೆ ಯಾರಿಗೆ ತಾನೇ ಗೊತ್ತಿರುವುದಿಲ್ಲ ಹೇಳಿ? ಈ ಹಿಂದೆ ‘ಕಾಲಾ ಚಶ್ಮಾ’ ಹಾಡಿಗೆ ಮಾಡಿದ ಡ್ಯಾನ್ಸ್ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ವೈರಲ್ ಆಗಿತ್ತು. ಆ ವೀಡಿಯೋದ ನಂತರ ಈ ನೃತ್ಯ ತಂಡವು ರಾತ್ರೋರಾತ್ರಿ ಎಲ್ಲರ ಗಮನವನ್ನು ತನ್ನೆಡೆಗೆ ಸೆಳೆದುಕೊಂಡಿತು ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಅಂದಿನಿಂದ, ಅವರ ಪ್ರತಿಯೊಂದು ಡ್ಯಾನ್ಸ್ ಪ್ರದರ್ಶನವು ಲಕ್ಷಾಂತರ ಜನರ ಹೃದಯವನ್ನು ಗೆದ್ದಿದೆ. ಈಗ, ದಿ ಕ್ವಿಕ್ ಸ್ಟೈಲ್ ಅವರು ಶಾರುಖ್ ಖಾನ್ ಅವರ ‘ದಿಲ್ ತೋ ಪಾಗಲ್ ಹೈ’ ಚಿತ್ರದ ‘ಮುಜ್ಕೋ ಹುಯಿ ನಾ ಖಬರ್’ ಹಾಡಿಗೆ ಎಂದರೆ ಅದೇ ‘ಲೇ ಗಯೀ ಲೇ ಗಯೀ’ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ಡ್ಯಾನ್ಸ್ ಅನ್ನು ತುಂಬಾ ಜನರು ಮೆಚ್ಚಿಕೊಂಡಿದ್ದು, ಕೂಡಲೇ ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ ಅಂತ ಹೇಳಬಹುದು.
View this post on Instagram
ವೀಡಿಯೋ ನೋಡಿ ಕಾಮೆಂಟ್ ಗಳನ್ನು ನೀಡಿದ ನೆಟ್ಟಿಗರು
ಆನ್ಲೈನ್ ನಲ್ಲಿ ಹಂಚಿಕೊಂಡ ನಂತರ, ಈ ವೀಡಿಯೋವು 2.6 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ತುಂಬಾ ಪ್ರಭಾವಿತರಾಗಿದ್ದಾರೆ ಮತ್ತು ನೃತ್ಯ ತಂಡವನ್ನು ತುಂಬಾನೇ ಶ್ಲಾಘಿಸಿದ್ದಾರೆ. "ನೀವೆಲ್ಲರೂ ನಮ್ಮ ಹೃದಯವನ್ನು ನಿಜಕ್ಕೂ ಗೆದ್ದಿದ್ದೀರಿ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ "ಓ ನನ್ನ ಬಾಲ್ಯವು ಅಕ್ಷರಶಃ ನನ್ನ ಕಣ್ಣ ಮುಂದೆ ಮಿನುಗಿತು" ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ