ಉತ್ತರ ಪ್ರದೇಶ: ಸಾಮಾನ್ಯವಾಗಿ ವಯಸ್ಸಾದ ಅಜ್ಜ (Grand Father) ಅಥವಾ ಅಜ್ಜಿಯರು (Grand Mother) ಹೇಗಿರುತ್ತಾರೆ? ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳ (Grand Children) ಜೊತೆ ಆಟ (Playing) ಆಡಿಕೊಂಡು, ಸ್ನೇಹಿತರ (Friends) ಜೊತೆ ದೇವಸ್ಥಾನ (Temple), ಪಾರ್ಕ್ (Park) ಅಂತ ತಿರುಗಾಡುತ್ತಾ ಇರುತ್ತಾರೆ. ಅಂತಹ ಅನಿವಾರ್ಯತೆ ಇದ್ದವರು, ರೈತರು (Farmer) ಆದ್ರೆ ವಯಸ್ಸಾದ ಮೇಲೂ ಗದ್ದೆಯಲ್ಲಿ ಮೈಮುರಿದು ದುಡೀತಾರೆ. ಆದ್ರೆ ಇಲ್ಲೊಬ್ಬ ವಯಸ್ಸಾದ ಅಜ್ಜ ಇವೆಲ್ಲವನ್ನೂ ಮಾಡ್ತಾರೋ ಇಲ್ವೋ ಗೊತ್ತಿಲ್ಲ, ಆದ್ರೆ ಇದಲ್ಲವನ್ನು ಬಿಟ್ಟು ಮತ್ತೊಂದು ಕೆಲ್ಸ ಮಾಡ್ತಾರೆ. ಅದೇ ಬೈಕ್ ಸ್ಟಂಟ್ (Bike Stunt) ! ಅರೇ ಇದೇನು ವಯಸ್ಸಾದ ಅಜ್ಜ ಬೈಕ್ ಓಡಿಸೋದೇ ದೊಡ್ಡ ವಿಚಾರ, ಅಂಥದ್ರಲ್ಲಿ ಬೈಕ್ ಮೇಲೆ ಸಾಹಸ (Adventure) ಪ್ರದರ್ಶನನಾ? ಅಂತ ಪ್ರಶ್ನೆ ಮಾಡಬೇಡಿ, ಈ ಅಜ್ಜ ಯಾರು? ಆತನ ಬೈಕ್ ಸಾಹಸ ಎಂತದ್ದು? ಅದರಿಂದ ಮುಂದೇನಾಯ್ತು ಅಂತ ತಿಳಿದುಕೊಳ್ಳಲು ಈ ಸುದ್ದಿ ಓದಿ…
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಅಜ್ಜನ ಬೈಕ್ ಸಾಹಸ
ಉತ್ತರ ಪ್ರದೇಶ ರಾಜ್ಯದ ಗಾಜಿಯಾಬಾದ್‌ನ ವೇವ್ ಸಿಟಿಯಲ್ಲಿ ವೃದ್ಧರೊಬ್ಬರು ಇಂಥದ್ದೊಂದು ಅಪಾಯಕಾರಿ ಬೈಕ್ ಸಾಹಸ ಪ್ರದರ್ಶನ ಮಾಡಿದ್ದಾರೆ ಎನ್ನಲಾಗುತ್ತಿಗೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆಚ. ಈ ವಿಜಿಯೋದಲ್ಲಿ ವೃದ್ಧನೊಬ್ಬ ಚಲಿಸುತ್ತಿರುವ ಪಲ್ಸರ್ ಬೈಕ್ ಮೇಲೆ ಹುಚ್ಚು ಸಾಹಸ ಪ್ರದರ್ಶನ ಮಾಡಿದ್ದಾನೆ. ಸದ್ಯ ವೈರಲ್ ಆಗುತ್ತಿರುವ 19 ಸೆಕೆಂಡಿನ ಈ ಕ್ಲಿಪ್‌ನಲ್ಲಿ ಈ ವೃದ್ಧ ಬೈಕ್‌ನಲ್ಲಿ ಸಾಗುತ್ತಿದ್ದಾಗಲೇ ಸ್ಟಂಟ್ ಪ್ರದರ್ಶಿಸುವ ದೃಶ್ಯವಿದೆ. ಸಾಗುತ್ತಿದ್ದಾಗಲೇ ಬೈಕ್‌ನಲ್ಲಿ ನಿಂತು, ಕುಳಿತು ಇವರು ತೋರುವ ಸಾಹಸ ಒಂದು ಕ್ಷಣ ಬೆಚ್ಚಿಬೀಳಿಸುವಂತೆ ಮಾಡುತ್ತದೆ.
ಬೈಕ್ ಮೇಲೆ ವೃದ್ಧನ ವಿವಿಧ ಸಾಹಸ ಪ್ರದರ್ಶನ
ಟ್ವಿಟ್ಟರ್ ನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ವೃದ್ಧರೊಬ್ಬರು ಜೀವದ ಹಂಗಿಲ್ಲದೇ ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿದ್ದಾರೆ. ಬೈಕ್ ಸ್ಟಂಟ್‌ನ ಈ ಅಪಾಯಕಾರಿ ವೀಡಿಯೊವನ್ನು ಹಲವು ಕೋನಗಳಿಂದ ಸೆರೆಹಿಡಿಯಲಾಗಿದೆ. ಒಂದು ಕ್ಲಿಪ್‌ನಲ್ಲಿ, ವ್ಯಕ್ತಿ ಬೈಕ್‌ನ ಹಿಂಭಾಗದಲ್ಲಿ ನಿಂತು ಸಾಹಸ ಮಾಡುತ್ತಿದ್ದಾನೆ. ಅದೇ ಸಮಯದಲ್ಲಿ, ಎರಡನೇ ಕ್ಲಿಪ್ನಲ್ಲಿ, ಅವನು ಬೈಕ್ ಸೀಟಿನ ಹಿಂಭಾಗದಲ್ಲಿ ಕುಳಿತು ತನ್ನ ಕಾಲುಗಳನ್ನು ಮೇಲಕ್ಕೆತ್ತಿ ಬೈಕ್ ಓಡಿಸುತ್ತಾನೆ.
ಇದನ್ನೂ ಓದಿ: Viral Video: ಚಲಿಸುತ್ತಿರುವ ಬೈಕ್ ಮೇಲೆಯೇ ರೊಮ್ಯಾನ್ಸ್! ಪ್ರೇಮಿಗಳ ಹುಚ್ಚಾಟಕ್ಕೆ ಛೀ, ಥೂ ಎಂದ ಜನರು
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ವೃದ್ಧನ ಈ ಬೈಕ್ ಸಾಹಸದ ದೃಶ್ಯಗಳನ್ನು ಯಾರೋ ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋಗಳು ಟ್ವಿಟ್ಟರ್ ಸೇರಿದಂತೆ ವಿವಿಧ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಕೆಲವರು ವೃದ್ಧನ ಸಾಹಸಕ್ಕೆ ಹುಬ್ಬೇರಿಸಿದರೆ, ಮತ್ತೆ ಕೆಲವರು ಈ ವಯಸ್ಸಲ್ಲಿ ನಿಂಗೆ ಇವೆಲ್ಲ ಬೇಕಿತ್ತಾ ಅಂತ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
"पॉपुलर होने के लिए बुजुर्ग ने बनाया स्टंट करता हुआ वीडियो, पुलिस ने ठोका हजारों का चालान"
मामला गाजियाबाद के वेब सिटी इलाके का है, बुजुर्ग को बाइक पर खड़े होकर स्टंट करते हुए देखा जा रहा है pic.twitter.com/XaqZMOthJy
— आदित्य तिवारी / Aditya Tiwari (@aditytiwarilive) April 28, 2022
ಸೋಶಿಯಲ್ ಮೀಡಿಯಾಗಳಲ್ಲಿ ವೃದ್ಧನ ಬೈಕ್ ಸಾಹಸದ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಸಂಚಾರ ಪೊಲೀಸರು ಎಚ್ಚೆತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕ್ರಮ ಕೈಗೊಂಡಿರುವ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ಕೂಡಾ ವಿಧಿಸಿದ್ದಾರೆ.
ಇದನ್ನೂ ಓದಿ: Vijayapura: ಈ ವಿಡಿಯೋ ನಿಮ್ಮ ಮೊಬೈಲ್ ಗೆ ಬಂದಿದೆಯಾ? ಶೇರ್ ಮಾಡುವ ಮುನ್ನ ಈ ಸುದ್ದಿ ಓದಿ
ಇಂತಹ ಹುಚ್ಚಾಟ ನಡೆಸದಂತೆ ಟ್ರಾಫಿಕ್ ಪೊಲೀಸರ ಮನವಿ
ಇನ್ನು ಈ ಚಲನ್‌ನ ಫೋಟೋವನ್ನು ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಇಂತಹ ದುಸ್ಸಾಹಸ ಮಾಡಲು ಹೋಗಬೇಡಿ ಎಂದೂ ಕಿವಿಮಾತು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ