Viral Post - ಬೆಳ್ಳಿ ಪದಕ ಗೆದ್ದ ಚಾನು ಅವರವನ್ನು ಅನುಕರಿಸಿ ಭೇಷ್ ಎನಿಸಿಕೊಂಡ ಪುಟಾಣಿ

ಒಲಿಂಪಿಕ್ಸ್ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಅವರಿಗೆ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ. ಪುಟ್ಟ ಹುಡುಗಿಯೊಬ್ಬಳು ಚಾನು ಅವರಂತೆಯೇ ಅನುಕರಿಸುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾಳೆ.

ಮೀರಾಬಾಯಿರನ್ನ ಅನುಕರಿಸಿದ ಮಗು

ಮೀರಾಬಾಯಿರನ್ನ ಅನುಕರಿಸಿದ ಮಗು

  • Share this:
ಟೋಕಿಯೋ ಒಲಿಂಪಿಕ್ಸ್ ನಲ್ಲಿ  ಬೆಳ್ಳಿ ಪದಕ ವನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿರುವ ಮತ್ತು ಇಡೀ ಭಾರತ ದೇಶಕ್ಕೆ ಕೀರ್ತಿ ತಂದಂತಹ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರ ಬಗ್ಗೆ ನಮಗೆಲ್ಲಾ ತಿಳಿದೇ ಇದೆ. ಆದರೆ ಇಲ್ಲೊಬ್ಬ ಪುಟ್ಟ ಹುಡುಗಿ ಮೀರಾಬಾಯಿ ಚಾನು ಅವರು ಹೇಗೆ ಬೆಳ್ಳಿ ಪದಕವನ್ನು ಟೋಕಿಯೋ ದಲ್ಲಿ ಗೆದ್ದರು ಎಂದು ಅವರಂತೆಯೇ ಅನುಕರಣೆ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರ ಮನಸ್ಸನ್ನು ಗೆದ್ದಿದ್ದಾರೆ.

ಮಣಿಪುರದ ಕ್ರೀಡಾಪಟು ಆಗಿರುವ ಚಾನು ಅವರು ಸಾಮಾಜಿಕ ಮಾಧ್ಯಮಗಳಲ್ಲಿ  ಪ್ರಶಂಸೆಯನ್ನು ಗಳಿಸಿದ್ದಲ್ಲದೆ, ದೇಶಾದ್ಯಂತ ಸಾವಿರಾರು ಹುಡುಗಿಯರಿಗೆ ಸ್ಫೂರ್ತಿ ಆಗಿದ್ದಾರೆ.  ಈಗ, ಚಾನು ಅವರ ಗೆಲುವಿನ ಕ್ಷಣವನ್ನು ಅನುಕರಿಸುವ ಪುಟ್ಟ ಹುಡುಗಿಯ ಒಂದು ಮುದ್ದಾದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗುತ್ತಿದೆ. ಈ ಪುಟ್ಟ ಹುಡುಗಿಯ ವಿಡಿಯೋ ಬೆಳ್ಳಿ ಪದಕ ವಿಜೇತೆಗೆ ಸಂತೋಷ ತಂದಿದೆ. ವೇಟ್‌ಲಿಫ್ಟಿಂಗ್ ಚಾಂಪಿಯನ್ ಸತೀಶ್ ಶಿವಲಿಂಗಂ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, 49 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದ 26 ವರ್ಷದ ಕ್ರೀಡಾಪಟು ಚಾನು ಅವರು ಮಾಡಿದ ಪ್ರತಿಯೊಂದು ನಡೆಯನ್ನೂ ಪುಟ್ಟ ಹುಡುಗಿ ಮರುಸೃಷ್ಟಿಸುತ್ತಿರುವುದು ಕಂಡುಬರುತ್ತದೆ.

"ಜೂನಿಯರ್ ಮಿರಾಬಾಯಿ ಚಾನು, ಇದನ್ನು ಸ್ಫೂರ್ತಿ ಎಂದು ಕರೆಯಲಾಗುತ್ತದೆ" ಎಂದು ಶಿವಲಿಂಗಂ ಬರೆದಿದ್ದಾರೆ. ಚಾನು ಅವರು ಅದನ್ನು ಎತ್ತುವ ಮುಂಚೆ ಅವಳ ಅಂಗೈಗಳನ್ನು ಟಾಲ್ಕಮ್ ಪುಡಿಯಿಂದ ಉಜ್ಜುವುದು, ತೂಕವನ್ನು ಎತ್ತುವ ಮೊದಲು ಪ್ರಾರ್ಥಿಸುವುದು ಮತ್ತು ಚಾನು ಮಾಡಿದಂತೆಯೇ ಅನುಕರಣೆಯನ್ನು ಮಾಡಿದ್ದು, ಮಗು ತನ್ನ ಹಿಂದೆ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳುವ ಕ್ರೀಡಾಪಟುವನ್ನು ನೋಡಿ ನಕಲು ಮಾಡುತ್ತಾಳೆ. ಚಾನು ಜಪಾನ್‌ನಿಂದ ಪ್ರೇಕ್ಷಕರಿಗೆ ಹೇಗೆ ತನ್ನ ಕೈ ಬೀಸಿ ಅಭಿನಂದಿಸುತ್ತಾರೆ ಮತ್ತು ಬೆಳ್ಳಿ ಪದಕವನ್ನು ಗೆದ್ದಾಗ ಸಹ ಅವರಿಗೆ ಬಗ್ಗಿ ನಮಸ್ಕರಿಸುತ್ತಾರೆ. ಅದನ್ನು ಸಹ ಪುಟ್ಟ ಬಾಲಕಿ ಚಾಚು ತಪ್ಪದೆ ಅನುಕರಣೆ ಮಾಡಿದ್ದಾಳೆ.



ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಕೂಡಲೇ, ಅದು ಪದಕ ವಿಜೇತರ ಗಮನವನ್ನು ಸೆಳೆಯಿತು. ಅವರು ಈ ಪುಟ್ಟ ಬಾಲಕಿಯ ಅನುಕರಣೆಗೆ ತುಂಬಾ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. “ತುಂಬಾ ಕ್ಯೂಟ್ ಆಗಿದೆ, ಇದರ ಜೊತೆಗೆ ನನಗೆ ಪ್ರೀತಿಯಾಗಿದೆ, ” ಎಂದು ಪ್ರತಿಕ್ರಿಯಿಸಿ ಅವರು ಟ್ವೀಟ್ ಮಾಡಿದ್ದಾರೆ. ಸ್ಪೋರ್ಟ್ಸ್ ಅಕಾಡೆಮಿ ಆಫ್ ಇಂಡಿಯಾದವರು ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಈ ವಿಡಿಯೋಗೆ ಮರು ಟ್ವೀಟ್ ಮಾಡಿ, “ಭಾರತದ ಕ್ರೀಡಾ ಭವಿಷ್ಯವು ಉಜ್ವಲವಾಗಿದೆ!” ಎಂದು ಬರೆದಿದ್ದಾರೆ.

ಇದನ್ನೂ ಓದಿ: Olympics - ನಂ. 1 ಬಾಕ್ಸರ್ ಎದುರು ಸಿಂಹದಂತೆ ಹೋರಾಡಿ ವೀರೋಚಿತ ಸೋಲುಂಡ ಸತೀಶ್ ಕುಮಾರ್

ಟೋಕಿಯೋದಿಂದ ಮಣಿಪುರಕ್ಕೆ ಹೋಗುವಾಗ ಸೋಮವಾರ ನವದೆಹಲಿಗೆ ಆಗಮಿಸುತ್ತಿದ್ದಾಗ  ಈ ವಿಡಿಯೋ ಚಾನು ಅವರ  ಗಮನ ಸೆಳೆಯಿತು. ರಾಷ್ಟ್ರ ರಾಜಧಾನಿಯಲ್ಲಿ ಕ್ರೀಡಾ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಾನು ಅವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದ ನಂತರ ಪಿಜಾ ತಿನ್ನಬೇಕೆಂಬ ಬಯಕೆಯನ್ನು ಅವಳು ವ್ಯಕ್ತಪಡಿಸಿದ್ದರಿಂದ, ಚಾನುಗೆ ಇಟಾಲಿಯನ್ ಖಾದ್ಯವನ್ನು ತರಿಸಿಕೊಡಲಾಯಿತು. ಅವರು ಕೇಂದ್ರ ಸಚಿವ ಕಿರಣ್ ರಿಜಿಜು ಅವರೊಂದಿಗೆ ಸೇರಿ ಪಿಜಾವನ್ನು ತಿಂದರು.  “ಒಲಿಂಪಿಕ್ಸ್‌ಗಾಗಿ 49 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ತನ್ನ ತೂಕವನ್ನು ಕಾಯ್ದುಕೊಳ್ಳಲು ಪಿಜಾ ತಿನ್ನುವ ಬಯಕೆಯನ್ನು ಅವಳು ತಡೆಹಿಡಿದಿದ್ದಳು! ಈಗ, ಮಿರಾಬಾಯಿ ಚಾನು ಅವರು ಮುಂದಿನ ಚಾಂಪಿಯನ್‌ಶಿಪ್‌ಗಾಗಿ ತನ್ನ ತರಬೇತಿಯನ್ನು ಪ್ರಾರಂಭಿಸುವವರೆಗೆ ಪಿಜಾವನ್ನು ಸಂಪೂರ್ಣವಾಗಿ ಆನಂದಿಸಲು ಸ್ವಾತಂತ್ರ್ಯ ಹೊಂದಿದ್ದಾರೆ ” ಎಂದು ಅರುಣಾಚಲ ಪ್ರದೇಶದ ಸಂಸದ ಟ್ವೀಟ್ ಮಾಡಿದ್ದಾರೆ.

- ಏಜೆನ್ಸಿ
Published by:Vijayasarthy SN
First published: