ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರ ಮತ್ತು ವಿಭಿನ್ನವಾದ ಫೋಟೋ ಮತ್ತು ವಿಡಿಯೋಗಳು ನಮಗೆ ಸಿಗುತ್ತವೆ. ಕೆಲವೊಮ್ಮೆ ಆ ವಿಡಿಯೋ ಮತ್ತು ಫೋಟೋಗಳನ್ನು ನಂಬುವುದು ಸಾಧ್ಯವಾಗುವುದಿಲ್ಲ, ಅಷ್ಟು ವಿಚಿತ್ರವಾಗಿರುತ್ತದೆ. ಇತ್ತೀಚೆಗಷ್ಟೆ ಗಿಳಿಯೊಂದು ಯುವಕನ ಮೊಬೈಲ್ ತೆಗೆದುಕೊಂಡು ಹಾರಿದ ವಿಡಿಯೋ ವೈರಲ್ ಆಗಿತ್ತು, ಇದೀಗ ಟ್ರಕ್ ಮತ್ತು ರೈಲಿನ ನಡುವಿನ ಅಪಘಾತದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಆ 18 ಚಕ್ರಗಳ ಟ್ರಕ್ ಒಂದು ವಿಂಡ್ ಟರ್ಬೈನ್ ಬ್ಲೇಡ್ ಅನ್ನು ಹೊತ್ತು ತರುತಿತ್ತು, ಆದರೆ, ಟ್ರಕ್ ಬರುವ ದಾರಿಯಲ್ಲಿಯೇ ಟ್ರಕ್ ಅಪಘಾತಕ್ಕೀಡಾಗಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ರೈಲು ಡಿಕ್ಕಿಯಾಗಿ ಟ್ರಕ್ ಉರುಳಿ ಬಿದ್ದಿದ್ದು, ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗುತ್ತಿದ್ದು, ಈ ಘಟನೆಯ ದೃಶ್ಯ ಒಂದು ಕ್ಷಣ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ. ನಾವು ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಭಯಂಕರ ಅಪಘಾತಗಳ ವಿಡಿಯೋ ನೋಡಿರುತ್ತೇವೆ, ಅದೃಷ್ಟದಿಂದ ಜನರು ಅಪಾಯದಿಂದ ತಪ್ಪಿಸಿಕೊಂಡಿರುವುದನ್ನ ನೋಡಿ, ನಿಟ್ಟುಸಿರು ಬಿಟ್ಟಿದ್ದೇವೆ, ಆದರೆ ಕೆಲವೊಂದು ದೃಶ್ಯಗಳು ನಿಜಕ್ಕೂ ಅಚ್ಚರಿ ಮತ್ತು ಆಘಾತಕ್ಕೆ ಕಾರಣವಾಗುತ್ತದೆ. ಇಂಥಹ ಒಂದು ಘಟನೆ ಟೆಕ್ಸಾಸ್‌ನ ಲುಲ್ಲಿಂಗ್ ನಗರದಲ್ಲಿ ನಡೆದಿದೆ.
ಟೆಕ್ಸಾಸ್‌ನ ಲುಲ್ಲಿಂಗ್ ನಗರದ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಈ ದುರ್ಘಟನೆ ಸಂಭವಿಸಿದೆ. ವಿಂಡ್ ಟರ್ಬೈನ್ ಬ್ಲೇಡ್ ಹೊತ್ತು ಸಾಗುತ್ತಿದ್ದ ಈ ಬೃಹತ್ ಗಾತ್ರದ ಟ್ರಕ್ ರೈಲ್ವೇ ಗೇಟ್ ಅನ್ನು ನಿಧಾನಕ್ಕೆ ದಾಟುವುದಕ್ಕೂ ಹಾಗೂ ರೈಲು ಬರುವ ಸಮಯವೂ ಒಂದೇ ಆಗಿತ್ತು. ಬೃಹತ್ ಟ್ರಕ್ ಹಳಿ ದಾಟುತ್ತಿದ್ದಂತೆಯೇ ರೈಲ್ವೆ ಗೇಟ್ ಕೂಡ ಹಾಕಲಾಯಿತು. ಸಮಸ್ಯೆಯಾಗಿದ್ದೇ ಅಲ್ಲಿ. ಆದರೆ, ಟ್ರಕ್ ಚಾಲಕನಿಗೆ ನಿರೀಕ್ಷೆ ಮಾಡಿದಷ್ಟು ವೇಗದಲ್ಲಿ ಹಳಿ ದಾಟಲು ಸಾಧ್ಯವಾಗಲಿಲ್ಲ. ಹೀಗಾಗಿ, ರೈಲು ಬಂದು ಟ್ರಕ್‌ಗೆ ಡಿಕ್ಕಿ ಹೊಡೆದು ವಿಂಡ್ ಟರ್ಬ್ರೈನ್ ಬ್ಲೇಡ್ ತುಂಡಾಗಿ ಹೋಗಿತ್ತು. ಟ್ರಕ್ ಕೂಡಾ ರೈಲಿನ ಹೊಡೆತದಿಂದಾಗಿ ಉರುಳಿ ಬಿದ್ದಿತ್ತು. ಈ ಭಯಾನಕ ದೃಶ್ಯ ಅಲ್ಲಿದ್ದವರನ್ನು ಒಂದು ಕ್ಷಣ ಬೆಚ್ಚಿ ಬೀಳಿಸಿದ್ದಂತು ಸತ್ಯ. ಕೆಲವರಂತೂ ಕೂಗಿಕೊಂಡರೆ, ಇನ್ನು ಕೆಲವರು ಕಣ್ಣು ಮಿಟುಕಿಸದೆ ದೃಶ್ಯವನ್ನು ನೋಡುತ್ತಿದ್ದರು. . ಈ ದೃಶ್ಯ ಕಂಡು ಅಲ್ಲಿದ್ದವರು ಅಕ್ಷರಶಃ ನಡುಗಿ ಹೋಗಿದ್ದರು.
ಆ ವಿಡಿಯೋ ದೃಶ್ಯವನ್ನು ನೀವೇ ನೋಡಿ
What in the hell were these people thinking? Happened in Luling, Texas. pic.twitter.com/hSrN3LnO7v
— PermianLandman (@PermianLandman) August 30, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ