Viral Video: ಈ ಆಮೆಗಳ ವಿಡಿಯೋ 8 ಮಿಲಿಯನ್ ಜನ ನೋಡಿದ್ದಾರೆ! ನೀವಿನ್ನೂ ನೋಡಿಲ್ವಾ?

ಈ ವಿಡಿಯೋ ಏನಿಲ್ಲವೆಂದರೂ ಎಂಟು ಮಿಲಿಯನ್ ಗಿಂತಲೂ ಅಂದರೆ ಎಂಭತ್ತು ಲಕ್ಷಕ್ಕಿಂತಲೂ ಅಧಿಕ ಜನರು ಇದನ್ನು ವೀಕ್ಷಿಸಿದ್ದಾರೆ. ಅಷ್ಟಕ್ಕೂ ಈ ಪಾಟಿ ವೀಕ್ಷಣೆ ಪಡೆದಿರುವ ಈ ವಿಡಿಯೋದಲ್ಲಿರುವ ಕಂಟೆಂಟ್ ಆದರೂ ಏನು ಎಂಬ ಕುತೂಹಲ, ಪ್ರಶ್ನೆ ನಿಮ್ಮಲ್ಲೆ ಮೂಡೇ ಮೂಡಿರುತ್ತದೆ. ಸರಳವಾಗಿ ಹೇಳಬೇಕೆಂದರೆ ಈ ವಿಡಿಯೋದಲ್ಲಿ ನೀವು ಏಳು ಆಮೆಗಳು ಕಟ್ಟಿಗೆಯ ತುಂಡೊಂದರ ಮೇಲೆ ನಿಂತಿರುವುದನ್ನು ನೋಡುತ್ತೀರಿ.

ಆಮೆಗಳು

ಆಮೆಗಳು

  • Share this:
ಈಗೀಗ ಸಮಾಜಿಕ ಮಾಧ್ಯಮಗಳಲ್ಲಿ (Social Media) ದಿನಕ್ಕೊಂದರಂತೆ ತರಾವರಿ ವಿಡಿಯೋಗಳು ಅಪ್ಲೋಡ್ (Upload) ಆಗುತ್ತಿವೆ. ಅವುಗಳಲ್ಲಿ ಹಲವು ವಿಡಿಯೋಗಳು ತಮ್ಮ ಅದ್ಭುತ ಪ್ರದರ್ಶನ ಇರುವ ಕಂಟೆಂಟ್ ಗಳಿಂದಾಗಿ ಆನ್ಲೈನ್ ಜನರ ಗಮನ ಸೆಳೆದು ಸಖತ್ ವೈರಲ್ (Viral) ಆಗಿ ಬಿಡುತ್ತವೆ. ಅದರಲ್ಲೂ ವಿಶೇಷವಾಗಿ ವಿಚಿತ್ರ ಖಾದ್ಯಗಳ ತಯಾರಿಯ ವಿಡಿಯೊ, ಚಿಕ್ಕ ಮಕ್ಕಳನ್ನೊಳಗೊಂಡಿರುವ ವಿಡಿಯೋಗಳು, ಪ್ರಾಣಿ-ಪಕ್ಷಿಗಳ (Animal and Bird) ಮುದ್ದಾದ ಅಭಿವ್ಯಕ್ತಿಪಡಿಸುವಿಕೆಯಂತಹ ವಿಡಿಯೋಗಳು (Video) ಕ್ಷಣ ಮಾತ್ರದಲ್ಲೇ ನೆಟ್ಟಿಗರನ್ನು ಆಕರ್ಷಿಸಿ ಬಿಡುತ್ತವೆ. ಇತ್ತೀಚಿಗಷ್ಟೆ ನಾವು ಆನೆಯೊಂದು (Elephant) ತನ್ನ ಮಾವುತನು ಮಲಗಿರುವ ಹಾಸಿಗೆಯ ಪಕ್ಕ ಹೋಗಿ ತನಗೂ ಸ್ಥಳ ನೀಡೆಂಬ ದೃಷ್ಟಿಯಿಂದ ಅವನೊಡನೆ ತಮಾಷೆಪೂರ್ವಕ ಕಾದಾಡಿ ಸ್ಥಳ ಪಡೆದುಕೊಂಡಿದ್ದನ್ನು ನೋಡಿದ್ದೇವೆ.

ಅಲ್ಲದೆ, ಮಾವುತನೊಬ್ಬ ಆನೆಯೊಂದಕ್ಕೆ ಸ್ನಾನ ಮಾಡಿಸುವಾಗ ಆ ಆನೆ ತಲೆ ಕೆಳಗೆ ಮಾಡಿ ಮಿಕ್ಕ ದೇಹ ಮೇಲಕ್ಕೆತ್ತಿ ಸರ್ಕಸ್ ರೀತಿಯ ಸಾಹಸ ಮಾಡಿರುವುದನ್ನು ಸಹ ಗಮನಿಸಿದ್ದೇವೆ. ಈಗ ಮಗದೊಂದು ವಿಡಿಯೋದಲ್ಲಿ ನೀವು ಆಮೆಗಳ ಒಂದು ಕರಾಮತ್ತನ್ನು ಕಾಣಬಹುದು.

ಎಂಭತ್ತು ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಿಸಿದ ವಿಡಿಯೋ
ಈಗ ಸದ್ಯ ಇಲ್ಲಿ ಹೇಳಲಾಗಿರುವ ವಿಡಿಯೋ ಬಗ್ಗೆ ಗಮನಿಸಿ. ಈ ವಿಡಿಯೋ ಏನಿಲ್ಲವೆಂದರೂ ಎಂಟು ಮಿಲಿಯನ್ ಗಿಂತಲೂ ಅಂದರೆ ಎಂಭತ್ತು ಲಕ್ಷಕ್ಕಿಂತಲೂ ಅಧಿಕ ಜನರು ಇದನ್ನು ವೀಕ್ಷಿಸಿದ್ದಾರೆ. ಅಷ್ಟಕ್ಕೂ ಈ ಪಾಟಿ ವೀಕ್ಷಣೆ ಪಡೆದಿರುವ ಈ ವಿಡಿಯೋದಲ್ಲಿರುವ ಕಂಟೆಂಟ್ ಆದರೂ ಏನು ಎಂಬ ಕುತೂಹಲ, ಪ್ರಶ್ನೆ ನಿಮ್ಮಲ್ಲೆ ಮೂಡೇ ಮೂಡಿರುತ್ತದೆ. ಸರಳವಾಗಿ ಹೇಳಬೇಕೆಂದರೆ ಈ ವಿಡಿಯೋದಲ್ಲಿ ನೀವು ಏಳು ಆಮೆಗಳು ಕಟ್ಟಿಗೆಯ ತುಂಡೊಂದರ ಮೇಲೆ ನಿಂತಿರುವುದನ್ನು ನೋಡುತ್ತೀರಿ.

ಇದನ್ನೂ ಓದಿ: Deep Sea Fish: ಆಳ ಸಮುದ್ರದ ಮೀನಿನ ಫೋಟೋ ವೈರಲ್! ನೋಡಿ ನೆಟ್ಟಿಗರು ಹೆದರಿಕೊಂಡಿದ್ದೇಕೆ?

ಮೂಲದಲ್ಲಿ Buitengebieden ಎಂಬ ಖಾತೆಯಿಂದ ಈ ಅದ್ಭುತ ವಿಡಿಯೋ ಕ್ಲಿಪ್ಪನ್ನು ಹಂಚಿಕೊಳ್ಳಲಾಗಿದ್ದು ಅದೀಗ 8.4 ಮಿಲಿಯನ್ ಬಾರಿ ವೀಕ್ಷಿಸಲ್ಪಟ್ಟಿದೆ ಎಂದರೆ ನೀವು ನಂಬಲೇ ಬೇಕು. ಅರೇ...ಇದೇನಿದು ಆಮೆಗಳು ಕಟ್ಟಿಗೆಯ ತುಂಡೊಂದರ ಮೇಲೆ ನಿಂತಿದ್ದು ಅಪರೂಪ ಎಂದು ಹೇಳಬಹುದಾಗಿದ್ದರೂ ಇಷ್ಟೊಂದು ವೀಕ್ಷಣೆ ಬರುವಂತಹ ಅಂಶ ಇದರಲ್ಲೇನಿದೆ ಎಂದು ನಿಮಗನಿಸಬಹುದು. ಅದಕ್ಕಾಗಿ ನೀವು ವಿಡಿಯೋ ಅನ್ನು ಸ್ವಲ್ಪ ಕಾಲ ನೋಡಬೇಕಷ್ಟೆ.

ವಿಡಿಯೋದಲ್ಲಿ ಏನಿದೆ?
ಅಷ್ಟಕ್ಕೂ ಈ ವಿಡಿಯೋದಲ್ಲಿ ಆ ಏಳು ಆಮೆಗಳು ಸಾಲಾಗಿ ಕಟ್ಟಿಗೆ ಮೇಲೆ ನಿಂತಿದ್ದು ಆ ಕಟ್ಟಿಗೆಯ ತುಂಡು ಬಹುತೇಕವಾಗಿ ಕೊಳದ ನೀರಿನಲ್ಲಿ ಮುಳುಗಿದೆ. ಆದಾಗ್ಯೂ ಆಮೆಗಳು ನೀರಿನಲ್ಲಿ ಬೀಳದ ಹಾಗೆ ತಮ್ಮನ್ನು ತಾವು ಸಮತೋಲನಗೊಳಿಸುವ ಸರ್ಕಸ್ ಮಾಡುತ್ತಿದ್ದು ನೋಡುಗರು ಒಂದು ಕ್ಷಣ ಕುತೂಹಲದಿಂದ ನೋಡುವಂತೆ ಮಾಡುತ್ತಿವೆ. ಏಕೆಂದರೆ ಇವು ಪಳಗಿದ ಪ್ರಾಣಿಗಳಲ್ಲ, ಯಾರೂ ಇವುಗಳಿಗೆ ಸಮತೋಲನ ಮಾಡುವ ಬಗ್ಗೆ ತರಬೇತಿ ನೀಡಿಲ್ಲ. ಸ್ವಾಭಾವಿಕವಾಗಿ ಈ ಆಮೆಗಳು ತಮಗೆ ತೋಚಿದ ಸಾಮರ್ಥ್ಯದಲ್ಲಿ ಬ್ಯಾಲೆನ್ಸಿಂಗ್ ಆಕ್ಟ್ ಮಾಡುತ್ತಿರುವುದೇ ಈ ವಿಡಿಯೋದ ಮೂಲ ತಿರುಳು ಎನ್ನಬಹುದು.ಆದಾಗ್ಯೂ, ಎರಡು ಆಮೆಗಳು ನೀರಿನಲ್ಲಿ ಬೀಳುವುದನ್ನು ಈ ವಿಡಿಯೋದಲ್ಲಿ ಗಮನಿಸಬಹುದಾಗಿದೆ. ತದನಂತರ ಮತ್ತಿನೆರಡು ಆಮೆಗಳು ತಾವಾಗಿಯೇ ನೀರಿನಲ್ಲಿ ಸೇರಿಕೊಂಡು ಬಿಡುತ್ತವೆ. ಒಟ್ಟಿನಲ್ಲಿ ಈ ವಿಡಿಯೋದಲ್ಲಿ ಆಮೆಗಳು ಸಹ ಮನುಷ್ಯರು ಕೋಲಂಬಸ್ ಎಂಬ ಕ್ರೀಡೆಯನ್ನು ಇಷ್ಟಪಡುವಂತೆ ತಾವು ಈ ಆಟವನ್ನು ಇಷ್ಟಪಡುವುದಾಗಿ ತೋರಿಸಿದಂತಿದೆ. ಹಾಗಾಗಿ ಇದು ಲಕ್ಷಾಂತರ ಜನರ ಗಮನಸೆಳೆದು ಸಾವಿರಾರು ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತೆ ಮಾಡಲು ಯಶಸ್ವಿಯಾಗಿದೆ.

ವೀಕ್ಷಕರ ಕಾಮೆಂಟ್ ಗಳು
ಈ ವಿಡಿಯೋ ಹಂಚಿಕೊಂಡ Buitengebieden, "ನಾನು ಈ ಆಟ ಇಷ್ಟಪಡುತ್ತೇನೆ" ಎಂಬ ಶಿರ್ಷಿಕೆ ಬರಹ ನೀಡಿದ್ದರೆ ಇದನ್ನು ವೀಕ್ಷಿಸಿರುವ ಒಬ್ಬ ಬಳಕೆದಾರರು "ಸೂರ್ಯಸ್ನಾನ ಒಂದು ತಿರುವಿನೊಂದಿಗೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Photo: ಬೆಕ್ಕಿಗೂ ಸಿಕ್ತು US ವಿಶ್ವವಿದ್ಯಾಲಯದಿಂದ ಅಭಿನಂದನೆ! ಅಷ್ಟಕ್ಕೂ ಬೆಕ್ಕು ಮಾಡಿದ್ದೇನು?

ಇನ್ನೊಬ್ಬ ಟಿಟ್ಟರ್ ಬಳಕೆದಾರರು "ಇದು ನನಗೆ ಚಲನೆಯ ಭ್ರಮೆ ಉಂಟು ಮಾಡುತ್ತಿದೆ, ಸರಿಯಾಗಿ ನೋಡಿ" ಎಂದು ಬರೆದುಕೊಂಡಿದ್ದರೆ ಮಗದೊಬ್ಬರು "ನೀವು ಸ್ಥಿರವಾಗಿ ನಿಲ್ಲುವಿರಾ" ಎಂದು ಪ್ರತಿಕ್ರಿಯಿಸಿ ನಗೆಯ ಇಮೋಜಿ ಹಾಕಿದ್ದಾರೆ.
Published by:Ashwini Prabhu
First published: