Viral- ರೇಸ್ ಕಾರ್ ಬಗ್ಗೆ ಪಾಕಿಸ್ತಾನದ ಲೇಡಿ ಟಿವಿ ಆ್ಯಂಕರ್ ಕೇಳಿದ ಪ್ರಶ್ನೆ ಭಾರೀ ವೈರಲ್

Pak TV Anchor on F1 Race Car- ಫಾರ್ಮುಲಾ ಒನ್ ಕಾರ್​ನಲ್ಲಿ ಎಷ್ಟು ಮಂದಿ ಕೂರಬಹುದು? ಯಾಕೆ ಇನ್ನೂ ಫಾರ್ಮುಲಾ ಹಂತದಲ್ಲಿದೆ, ಪ್ರಯೋಗ ನಡೆದಿಲ್ಲವಾ ಎಂಬಿತ್ಯಾದಿ ಅಮಾಯಕ ಪ್ರಶ್ನೆಗಳನ್ನ ಪಾಕಿಸ್ತಾನದ ಟಿವಿ ನಿರೂಪಕಿಯೊಬ್ಬಳು ಕೇಳಿ ಲೇವಡಿಗೆ ಒಳಗಾಗಿದ್ದಾಳೆ.

ಪಾಕ್ ಟಿವಿ ನಿರೂಪಕಿ ನಿದಾ ಯಾಸಿರ್

ಪಾಕ್ ಟಿವಿ ನಿರೂಪಕಿ ನಿದಾ ಯಾಸಿರ್

 • News18
 • Last Updated :
 • Share this:
  ಸೆಲಬ್ರಿಟಿಯಾಗಿರುವವರು ಸಾರ್ವಜನಿಕವಾಗಿ ಮಾತನಾಡುವಾಗ ಬಹಳ ಎಚ್ಚರಿಕೆಯಿಂದಿರಬೇಕು. ಬಹಳ ಯಡವಟ್ಟಿನ ಪ್ರಸಂಗಗಳಿಗೆ ಎಡೆ ಮಾಡಿಕೊಡಬಹುದು. ಗೊತ್ತಿಲ್ಲದ ವಿಷಯಗಳ ಬಗ್ಗೆ ಮಾತನಾಡಲು ಹೋಗಿ ಪೇಚಿಗೆ ಸಿಲುಕಬಹುದು. ಸೋಷಿಯಲ್ ಮೀಡಿಯಾದಲ್ಲಿ ಇಂಥ ಮುಜುಗರದ ಘಟನೆಗಳನ್ನ ಅಪಹಾಸ್ಯ ಮಾಡಿ ವೈರಲ್ ಮಾಡಿಬಿಡುತ್ತಾರೆ. ಇಂಥ ಲಕ್ಷಾಂತರ ವೈರಲ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಇವೆ. ಪಾಕಿಸ್ತಾನದ ಅನೇಕ ವಿಡಿಯೋಗಳು ನಗೆಯ ಬುಗ್ಗೆ ಹರಿಸುವಂತಿರುತ್ತವೆ. ಪಾಕ್ ಕ್ರಿಕೆಟಿಗರು ಇಂಗ್ಲೀಷ್ ಮಾತನಾಡುತ್ತಿರುವ ದೃಶ್ಯಗಳು ಬಹಳ ಫೇಮಸ್ ಆಗಿವೆ. ಇದೀಗ ಪಾಕಿಸ್ತಾನದ ಟಿವಿ ನಿರೂಪಕಿಯೊಬ್ಬಳ ಐದು ವರ್ಷದ ಹಳೆಯ ವಿಡಿಯೋವೊಂದು ಈಗ ವೈರಲ್ ಆಗಿದೆ. ನಿದಾ ಯಾಸಿರ್ ಎಂಬ ಈ ಮಹಿಳಾ ಆ್ಯಂಕರ್ ಫಾರ್ಮುಲಾ ಒನ್ ಕಾರಿನ ಬಗ್ಗೆ ಮಾತನಾಡಿರುವುದು ಥರಹಾವೇರಿ ಮೀಮ್ಸ್​ಗೆ ಕಾರಣವಾಗಿದೆ.

  ಗುಡ್ ಮಾರ್ನಿಂಗ್ ಪಾಕಿಸ್ತಾನ ಎಂಬ ಕಾರ್ಯಕ್ರಮದಲ್ಲಿ ಈಕೆ ಅತಿಥಿಯೊಬ್ಬರೊಂದಿಗೆ ಮಾತನಾಡುವಾಗ ಫಾರ್ಮುಲಾ ಒನ್ ಬಗ್ಗೆ ಕೆಲ ಪ್ರಶ್ನೆಗಳನ್ನ ಕೇಳಿದ್ಧಾಳೆ. ಫಾರ್ಮುಲಾ ಒನ್ ಕಾರಿನಲ್ಲಿ ಎಷ್ಟು ಜನರು ಕುಳಿತುಕೊಳ್ಳುತ್ತಾರೆ ಎಂದು ಈ ಟಿವಿ ಶೋನಲ್ಲಿ ಅತಿಥಿಯನ್ನು ಕೇಳಿದ್ದಾಳೆ. ಇದು ಸ್ಪೋರ್ಟ್ ಕಾರ್ ಮೇಡಮ್. ಕೇವಲ ಚಾಲಕ ಮಾತ್ರ ಈ ಕಾರಿನಲ್ಲಿ ಕೂರಬಹುದು ಎಂದು ಆ ಅತಿಥಿ ಬಹಳ ಸಂಯಮದಿಂದ ಹಾಗೂ ಸ್ಪಷ್ಟತೆಯಿಂದ ಉತ್ತರಿಸಿದ್ದಾನೆ.


  ಮಜಾ ಅಂದರೆ ಈ ನಿದಾ ಅಷ್ಟಕ್ಕೇ ತೃಪ್ತಳಾಗುವುದಿಲ್ಲ. ನೀವು ಸಣ್ಣ ಕಾರಿನಿಂದ ಆರಂಭಿಸಿದ್ದೀರಿ ಅನ್ಸುತ್ತೆ ಎಂದು ಹೇಳುತ್ತಾಳೆ. ಅದಕ್ಕೆ ಒಬ್ಬ ಅತಿಥಿ ಫಾರ್ಮುಲಾ ರೇಸ್ ಕಾರ್ ಬಗ್ಗೆ ವಿವರಣೆ ಕೊಡಲು ಮುಂದಾಗುತ್ತಾನೆ. ಮಜಾ ಇರುವುದು ಅಕೆಯ ಮುಂದಿನ ಮಾತುಗಳಲ್ಲಿ. ಅತಿಥಿಯಿಂದ ಫಾರ್ಮುಲಾ ಪದ ಬರುತ್ತಿದ್ದಂತೆಯೇ ಮಧ್ಯ ಪ್ರವೇಶಿಸುವ ಈಕೆ, ಹಾಗಾದರೆ ಈ ಕಾರು ಇನ್ನೂ ಫಾರ್ಮುಲಾ ಹಂತದಲ್ಲಿ ಇದೆ ಅಲ್ಲವಾ? ಇನ್ನೂ ಪ್ರಯೋಗ ಮಾಡಿದ್ದೀರಾ ಇಲ್ಲವಾ? ಎಂದು ಕೇಳುತ್ತಾಳೆ. ಟಿವಿ ನಿರೂಪಕಿಯಿಂದ ಇಂಥ ಅಸಂಬದ್ಧ ಪ್ರಶ್ನೆಗಳನ್ನ ನಿರೀಕ್ಷಿಸದ ಇಬ್ಬರು ಅತಿಥಿಗಳು ಏನೆಂದು ಉತ್ತರಿಸಲು ಗೊತ್ತಾಗದೇ ಹಲ್ಲು ಕಿಸಿಯುವುದೊಂದೇ ಬಾಕಿ.
  ಫಾರ್ಮುಲಾ ಒನ್ ರೇಸ್ ಎನ್ನುವುದು ಕಾರ್ ರೇಸ್​ಗಳಲ್ಲೇ ಅತ್ಯುಚ್ಚವಾದುದು. ಇಲ್ಲಿ ಕಾರುಗಳು ಗರಿಷ್ಠ ವೇಗದಲ್ಲಿ ಓಡುವಂತೆ ಡಿಸೈನ್ ಮಾಡಿರಲಾಗುತ್ತದೆ. ಹೀಗಾಗಿ, ಇದಕ್ಕೆ ಒಂದೇ ಸೀಟರ್ ಇರುತ್ತದೆ. ಅಲ್ಲದೇ, ರೇಸ್ ಕಾರ್ ವೇಗ ಇತ್ಯಾದಿ ಅಂಶಗಳಿಗೆ ಪೂರ್ವನಿಶ್ಚಿತವಾಗಿ ನಿರ್ದಿಷ್ಟ ಮಾನದಂಡಗಳನ್ನ ತಿಳಿಸಲಾಗಿರುತ್ತದೆ. ಅದೇ ಫಾರ್ಮುಲಾ. ಆ ಫಾರ್ಮುಲಾ ಅಡಿಯಲ್ಲಿ ಕಾರಿನ ವಿನ್ಯಾಸ ಇತ್ಯಾದಿ ಮಾಡಲಾಗಿರುತ್ತದೆ.

  ಇದನ್ನೂ ಓದಿ: Neeraj Chopra: ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ ರಾಜೀವ್ ಸೇಥಿ ಕೇಳಿದ ಪ್ರಶ್ನೆಗೆ ಟ್ವಿಟ್ಟರ್‌ನಲ್ಲಿ ಕಟು ಟೀಕೆ!

  ಪಾಕ್ ಆ್ಯಂಕರ್ ಅವರು ಈ ಕಾರಿನ ಬಗ್ಗೆ ಪ್ರಶ್ನೆ ಕೇಳಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಈಗ ಬಾರಿ ವೈರಲ್ ಆಗುತ್ತಿದೆ. ಫಾರ್ಮುಲಾ ಒನ್ ಬಗ್ಗೆ ಈಕೆ ಗೂಗಲ್​ನಲ್ಲಿ ಸರ್ಚ್ ಮಾಡಿ ತಿಳಿದುಕೊಂಡು ಕಾರ್ಯಕ್ರಮಕ್ಕೆ ಬರಬೇಕಿತ್ತು ಎಂದು ಒಬ್ಬರು ಹೇಳಿದರೆ, ಈಕೆ ಹೇಳಿದಂತೆ ಫಾರ್ಮುಲಾ ಕಾರ್ ಕಂಪನಿಗಳು ಥ್ರೀ ಸೀಟರ್ ಫಾರ್ಮುಲಾ ಕಾರನ್ನು ಮಾಡಬಲ್ಲ ಫಾರ್ಮುಲಾ ಕಂಡುಹಿಡಿಯಲು ಪ್ರಯತ್ನಿಸುತ್ತಿವೆ ಎಂದು ಲೇವಡಿ ಮಾಡಿದ್ದಾರೆ.  ಇನ್ನೊಂದು ವೈರಲ್ ವಿಡಿಯೋದಲ್ಲಿ ಅಮೆರಿಕದ ಮಹಿಳೆಯೊಬ್ಬಳು ಬಿಂದಾಸ್ ಆಗಿ ಮೈಮೇಲೆ ಕಡಿಮೆ ಅರಿವೆಯೊಂದಿಗೆ ಏರ್​ಪೋರ್ಟ್​ನಲ್ಲಿ ಅಡ್ಡಾಡಿದ ದೃಶ್ಯ ಕಾಣಿಸಿದೆ. ಈಕೆ ಬಿಕನಿ ಹಾಗೂ ಮುಖಕ್ಕೆ ಮಾಸ್ಕ್ ತೊಟ್ಟು ಅಮೆರಿಕದ ಮಿಯಾಮಿ ಏರ್​ಪೋರ್ಟ್​ನಲ್ಲಿ ಹೋಗುತ್ತಿದ್ದುದು ಕೆಮರಾದಲ್ಲಿ ಸೆರೆಯಾಗಿದೆ. ಈಕೆಯ ಸಣ್ಣುಡುಗೆ ಕಂಡು ಅಲ್ಲಿನ ಭದ್ರತಾ ಸಿಬ್ಬಂದಿ ಕಕ್ಕಾಬಿಕ್ಕಿಯಾಗುವುದೊಂದೇ ಬಾಕಿ.
  Published by:Vijayasarthy SN
  First published: