ಹಾವುಗಳು (Snake) ಎಂದರೆ ಕೆಲವರು ಬೆಚ್ಚಿಯೇ ಬೀಳುತ್ತಾರೆ. ಅಷ್ಟೊಂದು ವಿಷಕಾರ (poisonous) ಪ್ರಾಣಿಗಳು ಅವು. ಹಾವು ಒಂದು ಉರಗ ಪ್ರಾಣಿ. ಪ್ರಪಂಚದಲ್ಲಿ 3000ಕ್ಕೂ ಹೆಚ್ಚು ಜಾತಿಯ ಹಾವುಗಳಿವೆ. ಇವುಗಳಲ್ಲಿ ರಾಜ ನಾಗರಹಾವು ಅಥವಾ ಕಿಂಗ್ ಕೋಬ್ರಾ (King Cobra) ಎಂದು ಕರೆಯುತ್ತಾರೆ. ಈ ಜಾತಿಯ ಹಾವು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಅಂತೆಯೇ ರ‍್ಯಾಟಲ್ ಹಾವುಗಳು ಕೂಡ ಅಷ್ಟೆ ವಿಷಕಾರಿ. ವಿಶ್ವ ಆರೋಗ್ಯ ಸಂಸ್ಥೆಯ (WHO) ವರದಿಯು ಹೇಳುವ ಪ್ರಕಾರ “ಪ್ರತಿ ವರ್ಷವೂ ಸುಮಾರು 81,000 ರಿಂದ 1,38,000 ಜನರು ಹಾವು ಕಡಿತದಿಂದ (Snake Bite) ಸಾಯುತ್ತಾರೆ” ಎಂದು ಬಹಿರಂಗಪಡಿಸಿದೆ. ಬಹಳಷ್ಟು ಜನರು ಈ ಹಾವುಗಳಿಗೆ ತುಂಬಾ ಹೆದರುತ್ತಾರೆ.
ವಿಷಕಾರಿ ಹಾವಿಗೆ ಬರಿಗೈಯಲ್ಲಿಯೇ ಸ್ನಾನ ಮಾಡಿಸುವ ವ್ಯಕ್ತಿ
ಈ ಹಾವುಗಳೆಂದರೆ ಎಲ್ಲರೂ ಒಂದು ವಿಧದಲ್ಲಿ ಅಂತರವನ್ನು ಕಾಯ್ದುಕೊಂಡೆ ಇರುತ್ತಾರೆ. ಅಂತಹವರ ಮಧ್ಯೆ ಈ ಹಾವುಗಳ ಜೊತೆ ಆಟವಾಡುವವರು ಇದ್ದಾರೆ. ಅಯ್ಯೋ ಯಾರಪ್ಪ ಆ ಧೈರ್ಯವಂತರು ಎಂದು ನಿಮಗೆ ಅನಿಸ್ತಾ ಇರುತ್ತದೆ. ಹಾವುಗಳ ಜೊತೆ ಆಟವಾಡುವುದು ಎಂದರೆ ಒಂದು ದೊಡ್ಡ ಸಾಹಸವನ್ನು ಮಾಡಿದ ಹಾಗೆ ಹೌದು ತಾನೇ..! ಆದರೆ ಇಲ್ಲೊಬ್ಬ ಭೂಪ ಹಾವಿನ ಜೊತೆ ಆಟವಾಡುವುದು ಇರಲಿ ಅದಕ್ಕೆ ತನ್ನ ಬರಿಗೈ ಅಲ್ಲಿಯೇ ಸ್ನಾನ ಮಾಡಿಸುವ ಭಯದಿಂದ ಮೈಜುಮ್ಮೆನುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ವಿಡಿಯೋ
ವಿಷಕಾರಿ ಕಿಂಗ್ ಕೋಬ್ರಾಕ್ಕೆ ಬರಿಗೈ ಅಲ್ಲಿಯೇ ಸ್ನಾನ ಮಾಡಿಸುವ ವಿಡಿಯೋವನ್ನು ಈ ಹಿಂದೆ ಜುಲೈ 11, 2019 ರಂದು ಚಾಂಡ್ಲರ್ಸ್ ವೈಲ್ಡ್ ಲೈಫ್ ಹೆಸರಿನ ಯೂಟ್ಯೂಬ್ ಪುಟದಲ್ಲಿ ಪೋಸ್ಟ್ ಮಾಡಲಾಗಿತ್ತು. ಅದೇ ವಿಡಿಯೋ ಈಗ ಮತ್ತೊಮ್ಮೆ ಇಂಟರ್‌ನೆಟ್ ಅಲ್ಲಿ ಸಕತ್ ಸದ್ದು ಮಾಡ್ತಿದೆ. ಈ ವಿಡಿಯೋ ಇದುವರೆಗೆ 13,610,261 ವೀಕ್ಷಕರನ್ನು ಪಡೆದುಕೊಂಡಿದೆ.
ಇದನ್ನೂ ಓದಿ: Viral Video: ಬರೋಬ್ಬರಿ 14 ಸಿಂಹಗಳ ಬಾಯಿಯಿಂದ ತಪ್ಪಿಸಿಕೊಂಡ ಆನೆ! ಸಾವು ಗೆದ್ದ ಗಜರಾಜನ ವಿಡಿಯೋ ಇಲ್ಲಿದೆ ನೋಡಿ
ಅಂತೆಯೇ, 180 ಸಾವಿರ ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ, ಅವರಲ್ಲಿ 28,320 ಜನರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. 18.53 ನಿಮಿಷಗಳ ಸುದೀರ್ಘ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕಿಂಗ್ ಕೋಬ್ರಾ ಅಥವಾ ರಾಜ ನಾಗರಹಾವು ಮತ್ತು ಕಾಳಿಂಗ ಸರ್ಪವನ್ನು ಬರಿಗೈಯಲ್ಲಿ ಸ್ನಾನ ಮಾಡಿಸುವ ಮೂಲಕ ಡೇರ್‌ಡೆವಿಲ್ ಸ್ಟಂಟ್ ಮಾಡುವುದನ್ನು ಈ ವಿಡಿಯೋದಲ್ಲಿ ನಾವು ವೀಕ್ಷಿಸಬಹುದು.
[embed]https://youtu.be/_EYuM3LX2qE[/embed]
ಈಗ ಕಿಂಗ್ ಕೋಬ್ರಾ ಬಗ್ಗೆ ಕೆಲವು ಕುತುಹಲಕಾರಿ ವಿಷಯಗಳು ಇಲ್ಲಿವೆ:
ಹಾವುಗಳು ಪ್ರಪಂಚದ ಕೆಲವು ವಿಷಕಾರಿ ಪ್ರಾಣಿಗಳಲ್ಲಿ ಒಂದಾಗಿವೆ. ಅವುಗಳ ಬಗ್ಗೆ ಜನರು ಮಿಶ್ರ ಭಾವನೆಗಳನ್ನು ಹೊಂದಿರುತ್ತಾರೆ. ಕೆಲವರು ಹಾವುಗಳನ್ನು ಪ್ರೀತಿಸುತ್ತಾರೆ ಮತ್ತು ಅವುಗಳನ್ನು ಸಾಕುಪ್ರಾಣಿಗಳಾಗಿ ಸಾಕುತ್ತಾರೆ, ಇನ್ನು ಕೆಲವರು ಹಾವು ಎಂದರೆ ಸಾಕು ಮಾರು ದೂರ ಓಡುತ್ತಾರೆ. ಇಲ್ಲಿ ಹಾವುಗಳ ಬಗ್ಗೆ ಅದರಲ್ಲೂ ರಾಜ ನಾಗರಹಾವು ಬಗ್ಗೆ ಕೆಲವೊಂದಿಷ್ಟು ಕುತುಹಲಕಾರಿ ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳುತ್ತೆನೆ.
ಇದನ್ನೂ ಓದಿ: King Cobra: ಅಬ್ಬಬ್ಬಾ! 1 ವಾರ ಕಾರಿನಲ್ಲಿಯೇ ಅಡಗಿ ಕುಳಿತಿತ್ತಂತೆ ಈ ಕಾಳಿಂಗ ಸರ್ಪ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ