Viral Video: ವೀರಯೋಧನ ಪಾದಗಳನ್ನು ಸ್ಪರ್ಶಿಸಿದ ಪುಟ್ಟ ಬಾಲಕಿ! ವಿಡಿಯೋ ವೈರಲ್

ಪುಟ್ಟ ಬಾಲಕಿಯೊಬ್ಬಳು ಮೆಟ್ರೋ ನಿಲ್ದಾಣದಲ್ಲಿ ನಿಂತಿದ್ದ ಸೇನಾ ಸಿಬ್ಬಂದಿಯ ಪಾದಗಳನ್ನು  ಸ್ಪರ್ಶಿಸಿದ್ದಾಳೆ. ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾಳೆ. ಆ ದೃಶ್ಯ ಈಗ ಎಲ್ಲೆಡೆ ವೈರಲ್ ಆಗಿದ್ದು, 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಯೋಧನ ಪಾದ ಸ್ಪರ್ಶಿಸಿದ ಬಾಲಕಿ

ಯೋಧನ ಪಾದ ಸ್ಪರ್ಶಿಸಿದ ಬಾಲಕಿ

  • Share this:
    ಯೋಧರು ಎಂದರೆ ಎಲ್ಲಾರಿಗೂ ಗೌರವ. ಹಗಲು, ರಾತ್ರಿ, ಚಳಿ, ಮಳೆ ನೋಡದೇ ನಮ್ಮನ್ನು, ದೇಶವನ್ನು ಕಾಯುತ್ತಾರೆ ಎನ್ನೋ ಹೆಮ್ಮೆ. ದೇಶದ ಸುರಕ್ಷತೆಗಾಗಿ ಜೀವನ ಮೂಡಿಪಿಟ್ಟಿರುತ್ತಾರೆ ನಮ್ಮ ಭಾರತೀಯ ಯೋಧರು. ಗಡಿಯಲ್ಲಿ ನಿಂತುಕೊಂಡು ಶತ್ರು ರಾಷ್ಟ್ರಗಳು ಒಳ ನುಸುಳದಂತೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನಮಗಾಗಿ ಕೆಲಸ ಮಾಡುತ್ತಿದ್ದಾರೆ. ಸೈನಿಕರು ಅಂದ್ರೆ ಅದೇನೋ ಪ್ರೀತಿ, ಗೌರವ ಪ್ರತಿಯೊಬ್ಬ ಭಾರತೀಯನಿಗೂ ಇರುತ್ತೆ. ಪುಟ್ಟ ಬಾಲಕಿಯೊಬ್ಬಳು (Little Girl) ಮೆಟ್ರೋ ನಿಲ್ದಾಣದಲ್ಲಿ ನಿಂತಿದ್ದ ಸೇನಾ ಸಿಬ್ಬಂದಿಯ (Army Personnel) ಪಾದಗಳನ್ನು  ಸ್ಪರ್ಶಿಸಿದ್ದಾಳೆ. ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾಳೆ. ಆ ದೃಶ್ಯ ಈಗ ಎಲ್ಲೆಡೆ ವೈರಲ್ (Viral Video) ಆಗಿದ್ದು, 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

    ಸೇನಾ ಸಿಬ್ಬಂದಿ ಕಾಲಿಗೆ ನಮಸ್ಕರಿಸಿದ ಪುಟಾಣಿ
    ಮೆಟ್ರೋ ನಿಲ್ದಾಣದಲ್ಲಿ ಮಾವರು ಸೇನಾ ಸಿಬ್ಬಂದಿ ನಿಂತಿರುತ್ತಾರೆ. ಆಗ ಪುಟಾಣಿ ಬಾಲಕಿಯೊಬ್ಬಳು ಅವರತ್ತ ಓಡಿ ಹೋಗುತ್ತಾಳೆ. ಆಗ ಓರ್ವ ಸಿಬ್ಬಂದಿ ಆ ಮಗುವನ್ನು ಮಾತನಾಡಿಸುತ್ತಾ ಇರುತ್ತಾನೆ. ತಕ್ಷಣವೇ ಆಕೆ ಆತನ ಪಾದಗಳನ್ನು ಸ್ಪರ್ಶಿಸುತ್ತಾಳೆ. ಆಗ ಸಿಬ್ಬಂದಿಗೆ ಏನೂ ತೋಚದೆ ಪ್ರೀತಿಯಿಂದ ಮಗುವಿನ ಕೆನ್ನೆ ಮುಟ್ಟಿ ನಗುತ್ತಾನೆ.

    ದೇಶಭಕ್ತ ಯುವ ಮನಸ್ಸುಗಳನ್ನು ಬೆಳೆಸೋದು ಪೋಷಕರ ಕರ್ತವ್ಯ
    ಪುಟ್ಟ ಮಗುವೊಂದು ಸೇನಾ ಸಿಬ್ಬಂದಿ ಕಾಲಿಗೆ ಬೀಳುತ್ತಿರುವ ವಿಡಿಯೋವನ್ನು ಸಂಸದ ಪಿ.ಸಿ ಮೋಹನ್ ಅವರು ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. "ಈ ಮಹಾನ್ ರಾಷ್ಟ್ರಕ್ಕೆ ದೇಶಭಕ್ತ ಯುವ ಮನಸ್ಸುಗಳನ್ನು ಬೆಳೆಸುವುದು, ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ" ಎಂದು ಪಿಸಿ ಮೋಹನ್ ಅವರು ಶೀರ್ಷಿಕೆ ನೀಡಿದ್ದಾರೆ.

    ಇದನ್ನೂ ಓದಿ: Commitment Rings: ಪುಣೆಯ ಆಭರಣ ಕಂಪನಿಯಿಂದ ಭಾರತೀಯ ವೀರ ಯೋಧರಿಗೆ ಸ್ಪೆಷಲ್​ ಗಿಫ್ಟ್​​

    10 ಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ
    ಸಂಸದ ಪಿ.ಸಿ ಮೋಹನ್ ಅವರು ಟ್ವಿಟರ್ ನಲ್ಲಿ ಮುದ್ದು ಬಾಲಕಿಯ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಟ್ವಿಟರ್ ನಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ನೋಡಿ ಖುಷಿ ಪಟ್ಟಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ದೇಶದ ಬಗ್ಗೆ ಎಷ್ಟೊಂದು ಗೌರವ. ವಿಡಿಯೋ ನೋಡುತ್ತಿದ್ರೆ ಗೂಸ್ಬಂಪ್ಸ್ ಬಂತು. ಅವರ ತಂದೆ-ತಾಯಿ ನಿಜಕ್ಕೂ ಪುಣ್ಯವಂತರು. ನಮಗೂ ರೀತಿಯ ಮಗು ಹುಟ್ಟಲಿ, ಇದು ಹೃದಯ ಸ್ಪರ್ಶಿ ವಿಡಿಯೋ, ಕಣ್ಣುಗಳಲ್ಲಿ ಸಂತೋಷದ ಕಣ್ಣೀರು ಬಂತು. ಸೈನಿಕರ ಬಗ್ಗೆ ಇಷ್ಟೊಂದು ಗೌರವ ಇಟ್ಟುಕೊಂಡಿರುವ ಮಗುವಿದೆ ದೇವರು ಒಳ್ಳೆಯದು ಮಾಡಲಿ ಎಂದು ಕಾಮೆಂಟ್‍ಗಳನ್ನು ಹಾಕಿದ್ದಾರೆ.

    ಬೆಳೆಯುವ ಸಿರಿ ಮೊಳಕೆಯಲ್ಲೇ!
    ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನೋ ಮಾತನ್ನು ಎಲ್ಲರೂ ಕೇಳೇ ಇರ್ತಾರೆ. ನಾವು ಮಕ್ಕಳನ್ನು ಹೇಗೆ ಬೆಳೆಸುತ್ತೇವೋ ಹಾಗೆ ಅವು ಬೆಳೆಯುತ್ತವೆ. ಚಿಕ್ಕಂದಿನಿಂದಲೇ ಪೋಷಕರು ಒಳ್ಳೆಯ ನಡೆ, ನುಡಿ, ಸಂಸ್ಕೃತಿ ಕಲಿಸಿದ್ರೆ, ಅವರು ಮುಂದೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕುತ್ತಾರೆ. ನಾವು ಕೆಟ್ಟದ್ದು ಕಲಿಸಿದ್ರೆ, ಅವರು ಕೆಟ್ಟ ವ್ಯಕ್ತಿಗಳಾಗುತ್ತಾರೆ. ತಮ್ಮ ಮಕ್ಕಳಿಗೆ ಇದೇ ರೀತಿಯ ಸಂಸ್ಕಾರವನ್ನು ಹೇಳಿಕೊಡಬೇಕು. ಆಗ  ನಮ್ಮ ಪರಂಪರೆ ಸಂಪ್ರದಾಯ ಉಳಿಯುತ್ತದೆ.

    ಇದನ್ನೂ ಓದಿ: Agniveer Recruitment: ಸೇನೆಯಲ್ಲಿ ಅಗ್ನಿವೀರರ ನೇಮಕಾತಿ; ಇಲ್ಲಿದೆ ಹುದ್ದೆಯ ಸಂಪೂರ್ಣ ವಿವರ

    2 ಗಿಳಿಗಳ ಪಾಠ ನೆನಪಾಯ್ತಾ?
    ನಾವು ಮಕ್ಕಳನ್ನು ಹೇಗೆ ಬೆಳೆಸುತ್ತೇವೋ ಅಂದಾಕ್ಷಣ ಗಿಳಿಗಳ ಪಾಠ ನೆನಪಿಗೆ ಬರುತ್ತದೆ. 2 ಗಿಳಿಗಳು ಕಾಡಿನಲ್ಲಿ ಇರುತ್ತವೆ. ಒಂದು ಹತ್ತಿರವಿದ್ದ ಆಶ್ರಮದ ಗುರುಗಳ ಕೈಗೆ ಸಿಗುತ್ತೆ. ಇನ್ನೊಂದು ಕಟುಕನ ಕೈಗೆ ಸಿಗುತ್ತೆ. ಒಂದು ಗಿಳಿ ಆಶ್ರಮದಲ್ಲಿ ಬೆಳೆದ ಕಾರಣ ಒಳ್ಳೆಯ ನಡೆ, ನುಡಿ ಕಲಿತು ಕೊಂಡಿರುತ್ತೆ. ಬಂದವರಿಗೆ ಬನ್ನಿ, ಹೋಗಿ, ನಮಸ್ಕಾರ ಎಂದು ಹೇಳುತ್ತೆ. ಇನ್ನೊಂದು ಕಟುಕನ ಕೈಯಲ್ಲಿ ಬೆಳೆದ ಕಾರಣ ಹೊಡಿ, ಬಡಿ ಎಂದು ಹೇಳುತ್ತೆ. ನೀತಿ ಅಷ್ಟೆ ನಾವು ಮಕ್ಕಳನ್ನು ಹೇಗೆ ಬೆಳೆಸುತ್ತೇವೋ ಹಾಗೆ ಅವು ಬೆಳೆಯುತ್ತವೆ.
    Published by:Savitha Savitha
    First published: