Jog Falls Viral Video: ಇದು ನಯಾಗರ ಅಲ್ಲ, ಜೋಗ! ಅದ್ಭುತ ವೈರಲ್ ವಿಡಿಯೋ ನೋಡಿ

ಜೋಗ ಜಲಪಾತದಲ್ಲಿ ಧುಮ್ಮುಕ್ಕಿ ಹರಿಯುತ್ತಿರುವ ದೃಶ್ಯವು ತುಂಬಾನೇ ವೈರಲ್ ಆಗುತ್ತಿದ್ದು. ಟ್ವಿಟ್ಟರ್​ನಲ್ಲಿ 10 ಮಿಲಿಯನ್ ಗಿಂತಲೂ ಅಧಿಕ ವೀಕ್ಷಣೆ ಪಡೆದಿದೆ.

ಜೋಗ ಜಲಪಾತ

ಜೋಗ ಜಲಪಾತ

  • Share this:
ಮಳೆಗಾಲ ಬಂದಾಗ ಪ್ರಕೃತಿ ಮದುಮಗಳಂತೆ ಸುಂದರವಾಗುತ್ತದೆ. ಎಲ್ಲಿ ನೋಡಿದರೂ ಭೂಮಿಯಲ್ಲಿ ನೀರು ಹರಿಯುತ್ತಲೇ ಇರುತ್ತದೆ. ಅದರಲ್ಲೂ ಈ ಬಾರಿಯಂತು ಮಳೆಯ (Karnataka Rains) ಪ್ರಮಾಣ ಭಾರಿ ಅಧಿಕವಾಗಿದ್ದು ಸಣ್ಣ ಸಣ್ಣ ತೊರೆಗಳು ಕೂಡ ಕಡಲಿನಂತೆ ಆಗಿದೆ. ಕರ್ನಾಟಕದ ಎಲ್ಲಾ ಭಾಗಗದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗಿದ್ದು, ಪ್ರಕೃತಿಯನ್ನು ಇನ್ನಷ್ಟು ಸುಂದರಗೊಳಿಸುವಂತೆ ಮಾಡುವ ಸನ್ನಿವೇಶಗಳು ನಡೆಯುತ್ತಿದೆ. ಕರ್ನಾಟಕದ (Karnataka) ಪ್ರಕೃತಿ ಸೌಂದರ್ಯವನ್ನು ವಿವರಿಸುವಾಗ ಬರುವ ಹಲವಾರು ವಿಷಯಗಳಲ್ಲಿ ಒಂದು ಇಲ್ಲಿನ ಪ್ರಸಿದ್ಧ ಜೋಗ ಜಲಪಾತ (Jog Falls). ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಜೋಗ ಜಲಪಾತಕ್ಕೆ ಸಂಬಂಧಪಟ್ಟ ವೀಡಿಯೋ ಒಂದು ಬಾರಿ ವೈರಲ್ (Viral Video) ಆಗುತ್ತಿದ್ದು ಕೆಲವರು ಇದನ್ನು ನಯಾನಗರ ಫಾಲ್ಸ್  (Niagara Falls) ಎಂದು ಗೊಂದಲ ಮಾಡಿಕೊಂಡಿದ್ದಾರೆ. ಈ ವೀಡಿಯೋವನ್ನು ಕಂಡು ಜನ ಬೆರಗುಗೊಂಡಿದ್ಧಾರೆ.

ನೀರಿನ ಮಟ್ಟದಲ್ಲಿ ಏರಿಕೆ
ಕರ್ನಾಟಕದಲ್ಲಿ ಈ ಭಾರಿ ಮಳೆಯ ಪ್ರಮಾಣ ಅಧಿಕವಾಗಿದ್ದು. ಅಣೆಕಟ್ಟುಗಳು, ಜಲಾಶಯಗಳು, ನದಿಗಳು, ಕೆರೆಗಳು ಮತ್ತು ಕಡಲು ಸಮುದ್ರದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಸುಂದರವಾದ ಜೋಗ ಜಲಪಾತದಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ. ನೀರು ಧುಮ್ಮುಕ್ಕಿ ಹರಿದು ಬರುತ್ತಿದೆ. ಇಲ್ಲಿನ ಸುಂದರ ದೃಶ್ಯಗಳು ಸಾಮಾಜಿಕ ಜಲತಾಣದಲ್ಲಿ ಹರಿದಾಡುತ್ತಿದ್ದು ಇದನ್ನು ಕಂಡ ಜನ ಬೆರಗುಗೊಂಡಿದ್ದಾರೆ.

ಇದನ್ನೂ ಓದಿ: Naneghat Reverse Fall: ಭಾರತದಲ್ಲಿದೆ ಹಿಮ್ಮುಖವಾಗಿ ಚಲಿಸುವ ಜಲಪಾತ! ವಿಡಿಯೋ ನೋಡಿ

ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡ ಜೋಗ ಜಲಪಾತ
ಭಾರತದ ಪ್ರಸಿದ್ಧ ಜಲಪಾತಗಳಲ್ಲಿ ಒಂದು ಜೋಗ ಜಲಪಾತ. ಕನ್ನಡದ ಹಲವಾರು ಚಲನಚಿತ್ರಗಳಲ್ಲಿ, ಧಾರವಾಹಿಗಳಲ್ಲಿ ಈ ಜೋಗ ಜಲಪಾತವು ಕಾಣಿಸಿಕೊಂಡಿದೆ. ಜನರು ಈ ಜಲಪಾತದ ದೃಶ್ಯವನ್ನು ನೋಡಲು ಎಲ್ಲೆಲ್ಲಿಂದಲೂ ಬರುತ್ತಾರೆ. ಪ್ರಮುಖವಾಗಿ ಈ ಜಲಪಾತದಲ್ಲಿ ಹರಿಯುವ ನೀರು ರಾಜ, ರಾಣಿ, ರೋರರ್, ರಾಕೆಟ್ ಎಂದು ನಾಲ್ಕು ಹೊಳೆಗಳಾಗಿ ಒಡೆಯುತ್ತದೆ. ಇಲ್ಲಿ ನೀರು ಮೇಲಿಂದ ಕೆಳಕ್ಕೆ ನಾಲ್ಕು ಸಾಲುಗಳನ್ನು ಹರಿಯುವುದನ್ನು ಜನ ಮೈ ಮರೆಯುವಂತೆ ನೋಡುತ್ತಾರೆ.

ನಯಾಗರ ಫಾಲ್ಸ್ ಎಂದು ಕನ್ಫೂಸ್ ಆದ ಜನ
ಜೋಗ ಜಲಪಾತದಲ್ಲಿ ಧುಮ್ಮುಕ್ಕಿ ಹರಿಯುತ್ತಿರುವ ದೃಶ್ಯವು ತುಂಬಾನೇ ವೈರಲ್ ಆಗುತ್ತಿದ್ದು. ಟ್ವಿಟ್ಟರ್​ನಲ್ಲಿ 10 ಮಿಲಿಯನ್ ಗಿಂತಲೂ ಅಧಿಕ ವೀಕ್ಷಣೆ ಪಡೆದಿದೆ. ಇದನ್ನು ಕಂಡ ಜನರು ಇದನ್ನು ಯುಎಸ್​ನ ನಯಾಗರ ಫಾಲ್ಸ್ ಎಂದು ಗೊಂದಲ ಉಂಟಾಗಿದೆ. ಆದರೆ ಇದು ನಯಾಗರ ಜಲಪಾತದ ದೃಶ್ಯವಲ್ಲ, ಕರ್ನಾಟಕದ ಜೋಗ ಜಲಪಾತವಾಗಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಗ್ರೀನ್ ಬೆಲ್ಟ್ ಮತ್ತು ರೋಡ್ ಸಂಸ್ಥೆಯ ಅಧ್ಯಕ್ಷ ಎರಿಕ್ ಸೋಲ್ಹೀಮ್ ಜೋಗ್ ಜಲಪಾತದ ವೀಡಿಯೋವನ್ನು ತಮ್ಮ ಟ್ವಿಟ್ಟರ್  ಖಾತೆಯಲ್ಲಿ ಹಂಚಿಕೊಂಡಿದ್ದು, "ಇದು ನಯಾಗರ ಜಲಪಾತವಲ್ಲ, ಇದು ಜೋಗ ಜಲಪಾತ, ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿದೆ" ಎಂದು ಅವರು ಬರೆದುಕೊಂಡಿದ್ದಾರೆ.

ಕರ್ನಾಟಕದ ಹೆಮ್ಮೆಯ ಜಲಪಾತ
ಜೋಗ ಜಲಪಾತವು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇಲ್ಲಿ ಶರಾವತಿ ನದಿಯು 810 ಅಡಿ ಎತ್ತರದಿಂದ ಧುಮ್ಮುಕುತ್ತದೆ. ಈ ದೃಶ್ಯ ನೋಡಲು ಅತ್ಯಂತ ಮನಮೋಹಕವಾಗಿರುತ್ತದೆ. ಇಲ್ಲಿನ ಸುಂದರ ದೃಶ್ಯಗಳು ಕರ್ನಾಟಕದ ಪ್ರಕೃತಿಯ ಸೊಬಗನ್ನು ಇನ್ನಷ್ಟು ಹೆಚ್ಚಿಸಿದೆ. ಚಳಿಗಾಲವು ಜೋಗಕ್ಕೆ ಭೇಟಿ ನೀಡಲು ಉತ್ತಮವಾದ ಸಮಯವಾಗಿದೆ.

ಇದನ್ನೂ ಓದಿ: Tourist Places: ಕೊಡಗಿನಲ್ಲಿ ನೀವು ನೋಡಬಹುದಂತಹ ಅದ್ಭುತ ಪ್ರವಾಸಿ ತಾಣಗಳಿವು

ಜೋಗ ಜಲಪಾತವನ್ನು ಗೇರುಸೊಪ್ಪೆ ಜಲಪಾತ ಎಂದು ಸಹ ಕರೆಯುವವರು. ಪ್ರಕೃತಿಯ ಮಡಿಲಲ್ಲಿ ಸಮಯ ಕಳೆಯಲು ಬಯಸುವವರಿಗೆ ಈ ಜಾಗವು ಅತಿ ಉತ್ತಮವಾದುದಾಗಿದೆ. ತಣ್ಣನೆಯ ಗಾಳಿಯೊಂದಿಗೆ ಧುಮ್ಮುಕ್ಕಿ ಹರಿಯುವ ನೀರನ್ನು ನೋಡುವುದೇ ಬಹಳ ಸುಂದರ ಅನುಭವ.
Published by:Nalini Nalini
First published: