• Home
  • »
  • News
  • »
  • trend
  • »
  • Viral Video: ಈ ಅಜ್ಜಿ ಮಾತಾಡೋ ಇಂಗ್ಲೀಷ್​​ ಕೇಳಿ ಫಿದಾ ಆದ ನೆಟ್ಟಿಗರು, ನೀವೂ ಒಮ್ಮೆ ನೋಡಿ

Viral Video: ಈ ಅಜ್ಜಿ ಮಾತಾಡೋ ಇಂಗ್ಲೀಷ್​​ ಕೇಳಿ ಫಿದಾ ಆದ ನೆಟ್ಟಿಗರು, ನೀವೂ ಒಮ್ಮೆ ನೋಡಿ

ವೈರಲ್ ವಿಡಿಯೋದ ದೃಶ್ಯ

ವೈರಲ್ ವಿಡಿಯೋದ ದೃಶ್ಯ

Viral Grandma Video: ಇನ್ನೊಬ್ಬ ಟ್ವಿಟ್ಟರ್‌ ಬಳಕೆದಾರರು ಈ ವಿಡಿಯೋ ನೋಡಿ ಸಂತಸದಿಂದ "ಅವರು ತುಂಬ ಮುದ್ದಾಗಿದ್ದಾರೆ, ಪ್ರೀತಿ ಹಾಗೂ ಮುಗ್ಧತೆಯ ಕೇಂದ್ರವಾಗಿದ್ದಾರೆ" ಎಂದು ಪ್ರತಿಕ್ರಿಯೆ ನೀಡಿದ್ದರೆ, ಮಗದೊಬ್ಬ ಬಳಕೆದಾರರು, ಹೌದು, ನಾನು ಇದನ್ನು ಇಷ್ಟಪಡುತ್ತಿದ್ದೇನೆ. ವಿಶೇಷವಾಗಿ ಅವರು ಕ್ಯಾಟ್ ಎಂದು ಉಚ್ಛರಿಸುವುದು, ಇದು ನಿಜಕ್ಕೂ ಇದರಲ್ಲಿ ಕಾಶ್ಮೀರಿ ಉಚ್ಛಾರದ ಪ್ರಭಾವವಿದ್ದು ಕೇಳಲು ಸೊಗಸಾಗಿದೆ" ಎಂದಿದ್ದಾರೆ.

ಮುಂದೆ ಓದಿ ...
  • Share this:

ಭಾರತದ (India) ಮುಕುಟ ಎಂದೇ ಕರೆಯಲಾಗುವ ಜಮ್ಮು ಕಾಶ್ಮೀರ (Kashmir) ದಶಕಗಳಿಂದ ಭಾರತದ ಇತರೆ ರಾಜ್ಯಗಳಂತೆ ಅಷ್ಟೊಂದು ಪ್ರಗತಿ ಕಂಡಿಲ್ಲ. ಕಾರಣ ಈ ಪ್ರದೇಶ ಕಂಡ ಅನೇಕ ಆತಂಕವಾದಿಗಳ ಉಪಟಳ ಹಾಗೂ ಘರ್ಷಣೆ. ಶಿಕ್ಷಣವಂತೂ ಕಾಶ್ಮೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿಲ್ಲ. ಆದರೆ, ಕಳೆದ ಕೆಲವು ವರ್ಷಗಳಿಂದ ಕಾಶ್ಮೀರದಲ್ಲಿ ಅಭಿವೃದ್ಧಿ (Development) ಕಾರ್ಯಗಳು ಸತತವಾಗಿ ನಡೆಯುತ್ತಿವೆ. ಶಿಕ್ಷಣದ (Education) ಮಹತ್ವದ ಕುರಿತೂ ಇಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅದರ ಪರಿಣಾಮ, ಈಗ ಕಾಶ್ಮೀರಿ ಜನರೂ ಸಹ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಶಿಕ್ಷಣ ಕಲಿಯಲು ವಯೋಮಾನ ಎಂಬುದು ಅಡ್ಡಿಯಲ್ಲ ಎಂಬುದನ್ನು ಈಗ ಕಾಶ್ಮೀರಿ ಅಜ್ಜಿಯೊಬ್ಬರು ಸಾಬೀತು ಪಡಿಸಿದ್ದಾರೆ.


80ರ ಹರೆಯದಲ್ಲಿರುವಂತೆ ಕಾಣುವ ಅಜ್ಜಿಯೊಬ್ಬರು ತಮ್ಮ ಕಾಶ್ಮೀರಿ ಉಚ್ಛಾರದ ಪ್ರಭಾವವಿರುವ ಶೈಲಿಯಲ್ಲೇ ಇಂಗ್ಲೀಷ್ ಪದಗಳನ್ನು ಉಚ್ಛರಿಸಿರುವ ಚಿಕ್ಕ ವಿಡಿಯೋ ತುಣುಕೊಂದು ಈಗ ಅಂತರ್ಜಾಲದಲ್ಲಿ ಧೂಳೆಬ್ಬಿಸಿದೆ. ಮೂಲವಾಗಿ ಇದನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಳ್ಳಲಾಗಿತ್ತು. ತದನಂತರ ಇದು ಟ್ವಿಟ್ಟರ್‌ನಿಂದ ಫೇಸ್‍ಬುಕ್ ಹಾಗೂ ವಾಟ್ಸ್‌ಆ್ಯಪ್‌ಗಳಲ್ಲೂ ಸಖತ್ ವೈರಲ್ ಆಗುತ್ತಿದೆ. ಇದನ್ನು ಮೊದಲು ಸೈಯದ್ ಸ್ಲೀತ್ ಶಾ ಎಂಬುವವರು ಹಂಚಿಕೊಂಡಿದ್ದರು.ಈ ಪೋಸ್ಟ್ ಹಂಚಿಕೊಳ್ಳುತ್ತ 'ದಿ ಸರ್ಕಲ್ ಆಫ್ ಲೈಫ್' ಎಂಬ ಶೀರ್ಷಿಕೆಯಡಿಯಲ್ಲಿ ಅವರು, "ನಾವು ಚಿಕ್ಕವರಾಗಿದ್ದಾಗ ನಮಗೆ ಅವರು ಮಾತನಾಡಲು ಕಲಿಸಿದ್ದರು. ಈಗ ನಮ್ಮ ಸರದಿ! ಇದಕ್ಕೂ ಮಿಗಿಲಾದ ಅದ್ಭುತ ವಿಷಯವೆಂದರೆ ಕಲಿಯುವಿಕೆ ಎಂಬುದು ಜೀವನದಲ್ಲಿ ನಿರಂತರವಾಗಿರುವ ಪ್ರಕ್ರಿಯೆ" ಎಂದು ವಿವರಣೆ ನೀಡಿದ್ದರು.


ಇದನ್ನೂ ಓದಿ: ಈ ಕಾರಣಕ್ಕೆ Biscuit​ನಲ್ಲಿ ಈ ರೀತಿ ಚುಕ್ಕಿ ಚುಕ್ಕಿ ರಂಧ್ರ ಇರತ್ತಂತೆ!


ಈ ವಿಡಿಯೋದಲ್ಲಿ ತರುಣನೊಬ್ಬ ಕೆಲವು ಹಣ್ಣುಗಳು, ಪ್ರಾಣಿಗಳು ಹಾಗೂ ತರಕಾರಿಗಳನ್ನು ಕಾಶ್ಮೀರಿ ಭಾಷೆಯಲ್ಲಿ ಹೇಳಿ ಅವುಗಳ ಇಂಗ್ಲೀಷ್ ಪದಗಳನ್ನು ಗುರುತಿಸಲು ಅಜ್ಜಿಯನ್ನು ಕೇಳಿಕೊಳ್ಳುತ್ತಾನೆ. ಮೊದಲ ಬಾರಿಗೆ ತಬ್ಬಿಬ್ಬಾದ ಅಜ್ಜಿಯು ತದನಂತರ ಆ ಪದಗಳ ಇಂಗ್ಲೀಷ್ ಪದಗಳನ್ನು ಹೇಳುತ್ತಾಳೆ. ಅವಳು ಬೆಕ್ಕನ್ನು ಕ್ಯಾಟ್ ಎಂದು ಹೇಳುವಲ್ಲಿ ತನ್ನ ಉಚ್ಛಾರಣೆಯ ಪ್ರಭಾವದಿಂದ ಕೈಯೇಟ್ ಎಂದು ಮುಗ್ಧವಾಗಿ ಹೇಳುವುದು ನೆಟ್ಟಿಗರ ಹೃದಯ ಗೆದ್ದಿದೆ.


ತದನಂತರ ಅಜ್ಜಿಯು ಆನಿಯನ್, ಆ್ಯಪಲ್, ಗಾರ್ಲಿಕ್ ಹಾಗೂ ಡಾಗ್ ಪದಗಳನ್ನು ತನ್ನದೇ ಆದ ಅನನ್ಯ ಉಚ್ಛಾರಣೆಯಲ್ಲಿ ಹೇಳಿರುವುದು ಈಗ ಸಿಕ್ಕಾಪಟ್ಟೆ ಮೆಚ್ಚುಗೆಗಳಿಸುತ್ತಿದ್ದು ಸಖತ್ ಆಗಿ ವೈರಲ್ ಆಗುತ್ತಿದೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಇದು ಹಿಟ್ ಎನ್ನುವ ಮಟ್ಟಿಗೆ ಧೂಳೆಬ್ಬಿಸಿದೆ.


ಈ ಕಾಶ್ಮೀರಿ ಅಜ್ಜಿಯು ಕಾಶ್ಮೀರದ ಯಾವ ಭಾಗದವರು ಎಂಬುದು ತಿಳಿದುಬಂದಿಲ್ಲವಾದರೂ ಅದನ್ನು ರೆಕಾರ್ಡ್ ಮಾಡುತ್ತಿದ್ದ ತರುಣನ ಉಚ್ಛಾರಣೆಯಿಂದ ಇದು ಕಣಿವೆ ಪ್ರದೇಶದ ಯಾವುದಾದರೂ ಗ್ರಾಮದ್ದಾಗಿರಬಹುದೆಂದು ಹೇಳಲಾಗುತ್ತಿದೆ. ಈ ಪೋಸ್ಟ್‌ಗೆ ಸಾಕಷ್ಟು ಮೆಚ್ಚುಗೆ ನೀಡುತ್ತಿರುವ ಟ್ವಿಟ್ಟರ್‌ ಬಳಕೆದಾರರು ಮೆಚ್ಚುಗೆಯ ಪ್ರತಿಕ್ರಿಯೆಗಳನ್ನೂ ಸಹ ನೀಡುತ್ತಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಒಬ್ಬ ಟ್ವಿಟ್ಟರ್‌ ಬಳಕೆದಾರರು ಹೀಗೆ ನುಡಿಯುತ್ತಾರೆ, "ಕಾಶ್ಮೀರಿಗಳ ಇಂಗ್ಲೀಷ್‌ನಲ್ಲಿರುವ ನಿಖರತೆ - 80ರ ವಯೋಮಾನದಲ್ಲಿರುವ ವ್ಯಕ್ತಿಗಳಲ್ಲಿರುವ ಕೌಶಲ್ಯವೂ ಸಹ ಆಕರ್ಷಣೀಯವಾಗಿರುತ್ತದೆ. ಏಕೆಂದರೆ ಭಾಷೆಗಳಿಗೆ ಮಾತೃತ್ವದ ಪ್ರಭಾವವಿರುತ್ತದೆ" ಎಂದು.


ಇನ್ನೊಬ್ಬ ಟ್ವಿಟ್ಟರ್‌ ಬಳಕೆದಾರರು ಈ ವಿಡಿಯೋ ನೋಡಿ ಸಂತಸದಿಂದ "ಅವರು ತುಂಬ ಮುದ್ದಾಗಿದ್ದಾರೆ, ಪ್ರೀತಿ ಹಾಗೂ ಮುಗ್ಧತೆಯ ಕೇಂದ್ರವಾಗಿದ್ದಾರೆ" ಎಂದು ಪ್ರತಿಕ್ರಿಯೆ ನೀಡಿದ್ದರೆ, ಮಗದೊಬ್ಬ ಬಳಕೆದಾರರು, ಹೌದು, ನಾನು ಇದನ್ನು ಇಷ್ಟಪಡುತ್ತಿದ್ದೇನೆ. ವಿಶೇಷವಾಗಿ ಅವರು ಕ್ಯಾಟ್ ಎಂದು ಉಚ್ಛರಿಸುವುದು, ಇದು ನಿಜಕ್ಕೂ ಇದರಲ್ಲಿ ಕಾಶ್ಮೀರಿ ಉಚ್ಛಾರದ ಪ್ರಭಾವವಿದ್ದು ಕೇಳಲು ಸೊಗಸಾಗಿದೆ" ಎಂದಿದ್ದಾರೆ.


ಇದನ್ನೂ ಓದಿ: ಯುರೇಕಾ ಯುರೇಕಾ.. ಸೂರ್ಯನ ಸಮೀಪವೇ ಪತ್ತೆಯಾಯ್ತು ಹೊಸ Planet! ಕೌತುಕಗಳ ಕಣಜವಿದೆಯಾ ಅದರಲ್ಲಿ?


ಹೀಗೆ ಅನೇಕ ಟ್ವಿಟ್ಟರ್‌ ಬಳಕೆದಾರರು ಈ ವಿಡಿಯೋಗೆ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು ಇಂತಹ ಇಳಿ ವಯಸ್ಸಿನಲ್ಲೂ ಅಜ್ಜಿಯು ಕಲಿಯುವಿಕೆಗೆ ತೋರಿಸಿರುವ ಆಸಕ್ತಿಯನ್ನು ಕೊಂಡಾಡುತ್ತಿದ್ದಾರೆ.

Published by:Sandhya M
First published: