• Home
  • »
  • News
  • »
  • trend
  • »
  • Viral Video: ಮಗಳಿಗಾಗಿ ತಂದೆ ಮಾಡಿದ ಕೆಲಸ ನೋಡಿ ʼಸೋ ಕ್ಯೂಟ್‌ʼ ಎಂದ ನೆಟ್ಟಿಗರು!

Viral Video: ಮಗಳಿಗಾಗಿ ತಂದೆ ಮಾಡಿದ ಕೆಲಸ ನೋಡಿ ʼಸೋ ಕ್ಯೂಟ್‌ʼ ಎಂದ ನೆಟ್ಟಿಗರು!

ವೈರಲ್ ವಿಡಿಯೋ ದೃಶ್ಯ

ವೈರಲ್ ವಿಡಿಯೋ ದೃಶ್ಯ

ಮಗಳ ಗೊಂಬೆಗಳ ಬಟ್ಟೆಗಳನ್ನು ಇಸ್ತ್ರಿ ಮಾಡುವ ತಂದೆಯ ವೀಡಿಯೊ ಇದೀಗ ಇಂಟರ್​ನೆಟ್​ನಲ್ಲಿ ವೈರಲ್‌ ಆಗಿದೆ.

  • Share this:

ಮಕ್ಕಳು ಹುಟ್ಟಿದ ಬಳಿಕ ಪ್ರತಿಯೊಬ್ಬರ ಬದುಕೂ ಬದಲಾಗುತ್ತದೆ. ಜೀವನದಲ್ಲಿ ಎಲ್ಲದಕ್ಕಿಂತ ಹೆಚ್ಚು ಪ್ರಾಮುಖ್ಯತೆ ಸಿಗೋದು ಮಕ್ಕಳಿಗೇ. ಅದೇ ನೋಡಿ ಬಾಂಧವ್ಯ. ಅದರಲ್ಲೂ ತಂದೆ - ಮಗಳ (Father Daughter) ಹಾಗೂ ತಾಯಿ - ಮಗನ ಬಾಂಧವ್ಯ ಇನ್ನಷ್ಟು ವಿಶೇಷವಾಗಿರುತ್ತೆ ಅಂತಾರೆ ತಿಳಿದವರು. ಇಲ್ಲೊಬ್ಬ ತಂದೆ ಮಗಳಿಗಾಗಿ ಮಾಡಿರೋ ಕೆಲಸವೊಂದು ನೆಟ್ಟಿಗರ (Internet Viral Video) ಮನ ಗೆದ್ದಿದೆ. ಹೌದು, ತಂದೆ-ಮಗಳ ಬಾಂಧವ್ಯ ಬಹಳ ವಿಶೇಷವಾದದ್ದು. ಅದು ಮತ್ತೊಂದಿಷ್ಟು ಪ್ರೀತಿ, ವಿನೋದ ಮತ್ತು ವಿಶೇಷ ಭಾವದಿಂದ ಕೂಡಿರುತ್ತದೆ. ಮಕ್ಕಳಿಗಾಗಿ ತಂದೆ ತಾಯಿ (Parents) ಮಾಡದಿರೋ ಕೆಲಸ ಇರೋದಿಲ್ಲ. ಚಿಕ್ಕ ಪುಟ್ಟ ಕೆಲಸದಿಂದ ಹಿಡಿದು ದೊಡ್ಡ ದೊಡ್ಡ ಕೆಲಸದವರೆಗೂ ಎಲ್ಲವನ್ನೂ ಮಕ್ಕಳಿಗಾಗಿ ಪ್ರೀತಿಯಿಂದಲೇ ಮಾಡುತ್ತಾರೆ.


ಇಲ್ಲೊಬ್ಬ ತಂದೆ-ಮಗಳ ಜೋಡಿಯ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉಲ್ಲಾಸದ ಪ್ರತಿಕ್ರಿಯೆಗಳಿಗೆ ಇಂಟರ್​ನೆಟ್‌ ಸಾಕ್ಷಿಯಾಗಿದೆ.


ಮಗಳಿಗಾಗಿ ಗೊಂಬೆಗಳ ಬಟ್ಟೆ ಇಸ್ತ್ರಿ ಮಾಡಿದ ತಂದೆ!
ಮಗಳ ಗೊಂಬೆಗಳ ಬಟ್ಟೆಗಳನ್ನು ಇಸ್ತ್ರಿ ಮಾಡುವ ತಂದೆಯ ವೀಡಿಯೊ ಇದೀಗ ಇಂಟರ್​ನೆಟ್​ನಲ್ಲಿ ವೈರಲ್‌ ಆಗಿದೆ. ಅನೇಕ ಇಂಟರ್​ನೆಟ್‌ ಬಳಕೆದಾರರು ಮಗಳಿಗಾಗಿ ತಂದೆ ಮಾಡಿರೋ ಈ ಕೆಲಸವನ್ನು ಸೋ ಕ್ಯೂಟ್‌ ಎನ್ನುತ್ತಿದ್ದಾರೆ.


ಈ ವಿಡಿಯೋದಲ್ಲಿ ತಂದೆ ತನ್ನ ಮಗಳ ಗೊಂಬೆಗಳ ಬಟ್ಟೆಗಳನ್ನು ಇಸ್ತ್ರಿ ಮಾಡುವುದನ್ನು ನೋಡಬಹುದಾಗಿದೆ. ಪಕ್ಕದಲ್ಲಿಯೇ ಇರುವ ಮಗಳು ಬೆಡ್‌ ಮೇಲೆ ಆಟವಾಡುತ್ತಿರುತ್ತಾಳೆ. ವಿಡಿಯೋ ಮಾಡುವ ತಾಯಿ ರೂಂ ಗೆ ಬಂದು ಸಹಾಯಕ್ಕಾಗಿ ತನ್ನ ಪತಿಯನ್ನು ಕೇಳುವುದರೊಂದಿಗೆ ವಿಡಿಯೋ ಆರಂಭವಾಗುತ್ತೆ.




ಮಗಳೇ ಈ ಕೆಲಸ ಮಾಡಲು ಹೇಳಿದ್ದಂತೆ!
ನೋಡಿದ್ರೆ ಆತ ಪುಟ್ಟ ಪುಟ್ಟ ಬಟ್ಟೆಗಳಿಗೆ ಐರನ್‌ ಮಾಡ್ತಾ ಇರೋದು ಕಾಣಿಸುತ್ತೆ. ಪಕ್ಕದಲ್ಲೇ ಒಂದಷ್ಟು ಗೊಂಬೆಗಳಿರುತ್ತವೆ. ಆಕೆ ಇದೇನಪ್ಪಾ ಅಂತ ಕೇಳೋವಾಗ, ಮಗಳೇ ತನಗೆ ಈ ಕೆಲಸ ಮಾಡುವಂತೆ ಹೇಳಿದ್ದು ಅನ್ನೋ ಥರದಲ್ಲಿ ಹಿಂಬದಿಯಲ್ಲಿರೋ ಮಗಳತ್ತ ನೋಡುತ್ತಾನೆ.


ಆಗ ಪಕ್ಕದಲ್ಲಿ ಬೆಡ್‌ ಮೇಲೆ ಆಟವಾಡುತ್ತಿರುವ ಮಗಳು ಇತ್ತ ತಿರುಗಿ ನಗುತ್ತಾಳೆ. ಇದನ್ನು ನೋಡಿ ನಗುವ ಅಮ್ಮ ತನಗೆ ಬಟ್ಟೆ ಒಗೆಯಲು ಸಹಾಯ ಮಾಡುವಂತೆ ಹೇಳುತ್ತಾಳೆ. ಅದಕ್ಕೆ ಆಕೆಯ ಪತಿ ಮೊದಲು ಇಸ್ತ್ರಿ ಮಾಡುವುದನ್ನು ಮುಗಿಸಬೇಕು. ಆಮೆಲೆ ಬರುವುದಾಗಿ ಹೇಳುತ್ತಾನೆ. ವಿಡಿಯೋದಲ್ಲಿ ತಂದೆ ಪುಟ್ಟದಾದ ಪಿಂಕ್‌ ಕಲರ್‌ ಖುರ್ಚಿಯ ಮೇಲೆ ಕುಳಿತು ಇಸ್ತ್ರಿ ಮಾಡುತ್ತಿರುವುದು ಗಮನ ಸೆಳೆಯುತ್ತದೆ.


ಇದನ್ನೂ ಓದಿ: Positive Story: ಸರ್ಕಾರಿ ಶಾಲೆ ಕಟ್ಟಲು 21 ದಿನಗಳಲ್ಲಿ 60 ಲಕ್ಷ ಸಂಗ್ರಹಿಸಿದ ಸ್ವಾಮೀಜಿ


ಈ ಕಿರು ವಿಡಿಯೋ ಕ್ಲಿಪ್ ಅನ್ನು ಇಂಟರ್ನೆಟ್ ಬಳಕೆದಾರರಾದ ಕ್ಯಾಟ್ ಮತ್ತು ಆಸ್ಕರ್ ಓಟಿಜ್ ಎಂಬುವವರು ಇನ್‌ ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಮಾಡಿದ್ದಾರೆ. "ಈ ಪುಟ್ಟ ಹುಡುಗಿ ಪ್ರತಿ ನಡೆಯನ್ನೂ ನಿಯಂತ್ರಿಸುತ್ತಿದ್ದಾಳೆ” #girldad #daddysgirl ಎಂಬುದಾಗಿ ಶೀರ್ಷಿಕೆ ನೀಡಿದ್ದಾರೆ. ಈ ವೀಡಿಯೊವನ್ನು ಅಕ್ಟೋಬರ್ 20 ರಂದು ಹಂಚಿಕೊಳ್ಳಲಾಗಿದೆ ಮತ್ತು ಇದುವರೆಗೂ 14 ಲಕ್ಷ ವೀಕ್ಷಣೆಗಳನ್ನು ಪಡೆದಿದೆ.


ಅನೇಕ ಇಂಟರ್ನೆಟ್ ಬಳಕೆದಾರರು ಈ ವೀಡಿಯೊಗೆ ಉಲ್ಲಾಸದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕಾಮೆಂಟ್‌ಗಳ ವಿಭಾಗದಲ್ಲಿ ಹಲವರು ನಗುವ ಎಮೋಜಿಗಳನ್ನು ಹಾಕಿದ್ದಾರೆ. ಅದರಲ್ಲಿ ಒಬ್ಬ ಬಳಕೆದಾರ "ಹೆಣ್ಣು ಮಗು ನಿಜವಾಗಿಯೂ ಉಸ್ತುವಾರಿ ವಹಿಸುತ್ತದೆ ಎಂದು ನನಗೆ ಮನವರಿಕೆಯಾಗಿದೆ." ಎಂದಿದ್ದಾರೆ.


ಇದನ್ನೂ ಓದಿ: Positive Story: ಸರ್ಕಾರಿ ಶಾಲೆ ಕಟ್ಟಲು 21 ದಿನಗಳಲ್ಲಿ 60 ಲಕ್ಷ ಸಂಗ್ರಹಿಸಿದ ಸ್ವಾಮೀಜಿ


"ಬೆಡ್‌ ಮೇಲೆ ಇರುವ ಆ ಹುಡುಗಿಯ ಮುಖದ ಮೇಲಿರುವ ನಗು ನಾನು ಅವನಿಗೆ ಏನು ಮಾಡಬೇಕೆಂದು ಹೇಳಿದ್ದೇನೆಂಬುದು ಅವನಿಗೆ ತಿಳಿದಿದೆ ಎಂಬ ಹಾಗಿದೆ" ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.  ಮತ್ತೊಬ್ಬರು, ಮುದ್ದಾದ ತಂದೆ ಮತ್ತು ನಿಯಂತ್ರಿಸುವ ಮಗಳು ಎಂದು ಕಾಮೆಂಟ್‌ ಮಾಡಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: