ಮನುಷ್ಯನಿಗೂ ಮತ್ತು ಕೆಲವು ಪ್ರಾಣಿಗಳಿಗೂ ಒಂದು ಭಾವನಾತ್ಮಕ ಸಂಬಂಧವಿರುವುದನ್ನು ತೋರಿಸುವ ಅನೇಕ ವೀಡಿಯೋಗಳು ಮತ್ತು ಉದಾಹರಣೆಗಳನ್ನು ನಾವು ಸಾಮಾಜಿಕ ಮಾಧ್ಯಮದಲ್ಲಿ (Social Media) ಮತ್ತು ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಸಹ ಅನೇಕ ಬಾರಿ ನೋಡಿರುತ್ತೇವೆ. ಅದರಲ್ಲೂ ಈ ಸಾಕುಪ್ರಾಣಿಗಳಾದ ನಾಯಿ, ಬೆಕ್ಕು, ಹಸು, ಆಡುಗಳು ಮತ್ತು ಕುದುರೆಗಳು ಮನುಷ್ಯರನ್ನ ತುಂಬಾನೇ ಹಚ್ಚಿಕೊಂಡಿರುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹಸುವೊಂದು (Cow Viral Video) ತನ್ನ ಮಾಲೀಕರಿಗಾಗಿ ತಾಳ್ಮೆಯಿಂದ ಕಾಯುವ ವಿಡಿಯೋವೊಂದು ತುಂಬಾನೇ ವೈರಲ್ (Viral Video) ಆಗಿದೆ ನೋಡಿ.
ಒಟ್ಟಿನಲ್ಲಿ ಹೇಳುವುದಾದರೆ ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಸಂಬಂಧ ತುಂಬಾನೇ ಬಲವಾಗಿರುತ್ತದೆ ಅಂತ ಹೇಳಬಹುದು. ಈ ಸಾಕುಪ್ರಾಣಿಗಳು ತಮ್ಮ ಮನೆಯ ಒಡೆಯನ ಜೊತೆಯೆ ಇರುತ್ತವೆ. ಮನೆಯ ಒಡೆಯ ಎಲ್ಲಾದರೂ ಹೊರಗೆ ಹೋಗುವುದಕ್ಕೆ ತಯಾರಾದರೆ ಸಾಕು, ಒಳ್ಳೆ ಚಿಕ್ಕ ಮಕ್ಕಳ ಹಾಗೆ ನಾವು ಬರ್ತೀವಿ ಎಂಬಂತೆ ಈ ಸಾಕು ಪ್ರಾಣಿಗಳು ಒಡೆಯನನ್ನು ಹಿಂಬಾಲಿಸಿಕೊಂಡು ಹೋಗುತ್ತವೆ.
ಪ್ರಾಣಿಗಳಿಗಿಂತ ಉತ್ತಮ ಸಂಬಂಧ ಬೇಕೆ?
ಈ ಬಂಧಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಸಂಜೆ ಹೊತ್ತಿನಲ್ಲಿ ಹೊಲದಿಂದ ಮನೆಗೆ ಬರುವಾಗ ತನ್ನ ಒಡೆಯ ಅವುಗಳಿಗೆ ಏನು ಹೇಳದೇ ಇದ್ದರೂ ಸಹ ಅವನ ಜೊತೆಯಲ್ಲಿಯೇ ಹಸುಗಳು, ಎಮ್ಮೆಗಳು ಮನೆಗೆ ಬರುತ್ತವೆ.
ಎಷ್ಟೋ ಹಸುಗಳು ಯಾರೂ ಹೇಳೋರು ಕೇಳೋರು ಇಲ್ಲದೆ ರಸ್ತೆಯ ಮೇಲೆ, ಫುಟ್ಪಾತ್ ಮೇಲೆ ನಡೆದುಕೊಂಡು ಹೋಗುವುದು ಅಥವಾ ಅಲ್ಲಿಯೇ ಕುಳಿತುಕೊಂಡಿರುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ. ಇವತ್ತೇಕೆ ಹಸುಗಳ ಬಗ್ಗೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಆಶ್ಚರ್ಯವಾಗಬಹುದಲ್ಲವೇ? ವಿಷಯ ಇಲ್ಲಿದೆ ನೋಡಿ.
ಹಸುವೊಂದು ತಾಳ್ಮೆಯಿಂದ ತನ್ನ ಮಾಲೀಕರಿಗಾಗಿ ಕಾಯುತ್ತಿದೆ!
ಈ ವಿಡಿಯೋವು ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಇರುವ ನಂಬಿಕೆಯ ಬಲವಾದ ಸಂಬಂಧದ ಮತ್ತೊಂದು ಪುರಾವೆಯಾಗಿದೆ. ಜೀಬ್ರಾ ಕ್ರಾಸಿಂಗ್ ನ ಇನ್ನೊಂದು ಬದಿಯಲ್ಲಿ ರಸ್ತೆ ದಾಟಲು ಹಸು ಕಾಯುತ್ತಿರುವುದನ್ನು ವೀಡಿಯೋದಲ್ಲಿ ತೋರಿಸಲಾಗಿದೆ, ರಸ್ತೆಯ ಮೇಲೆ ಅಷ್ಟೊಂದು ವಾಹನಗಳ ಸಂಚಾರವಿಲ್ಲದಿದ್ದರೂ, ಅದು ತನ್ನ ಮಾಲೀಕರು ಬಂದು ಅದಕ್ಕೆ ದಾರಿ ತೋರಿಸಲಿ ಅಂತ ತಾಳ್ಮೆಯಿಂದ ಕಾಯುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ: Supreme Court: ನ್ಯಾಯಮೂರ್ತಿಗಳನ್ನೇ "ಆತಂಕವಾದಿ" ಎಂದ ವ್ಯಕ್ತಿ! ಬೇಷರತ್ ಕ್ಷಮೆಯಾಚನೆಗೆ ಕೋರ್ಟ್ ಆದೇಶ
ಹಲವಾರು ಚಾಲಕರು ಆ ಹಸುವಿಗೆ ಹೋಗಲು ತುಂಬಾ ಸ್ಥಳಾವಕಾಶ ಕಲ್ಪಿಸಲು ತಮ್ಮ ಕಾರುಗಳನ್ನು ನಿಧಾನಗೊಳಿಸಿದರೂ, ಆ ಹಸು ಮಾತ್ರ ತನ್ನ ಮಾಲೀಕ ಬಂದು ಪಾದಚಾರಿ ಕ್ರಾಸಿಂಗ್ ಮೂಲಕ ಮನೆಗೆ ಕರೆದೊಯ್ಯಲು ಕಾಯುತ್ತಿತ್ತು. ಈ ವಿಡಿಯೋವನ್ನು ರೆಡ್ಡಿಟ್ನಲ್ಲಿ ಹಂಚಿಕೊಳ್ಳಲಾಗಿತ್ತು.
ಈ ಅದ್ಭುತವಾದ ವಿಡಿಯೋಗೆ ಅನೇಕ ಕಾಮೆಂಟ್!
“ಪ್ರತಿದಿನ ಅಜ್ಜಿ ಈ ಹಸುವನ್ನು ಹುಲ್ಲುಹಾಸಿನ ಮೇಲೆ ನಡೆಸುತ್ತಾರೆ. ಹಸು ದಿನವಿಡೀ ಮೇಯ್ದು ದಿನದ ಕೊನೆಗೆ ಮನೆಗೆ ಹಿಂತಿರುಗಲು ಬಯಸಿದಾಗ, ಅದು ಕ್ರಾಸಿಂಗ್ಗೆ ಬರುತ್ತದೆ ಮತ್ತು ಮಾಲೀಕರಿಗಾಗಿ ತಾಳ್ಮೆಯಿಂದ ಕಾಯುತ್ತದೆ. ವಿಡಿಯೋದ ಕೊನೆಯಲ್ಲಿ, ಅಜ್ಜಿ ತನ್ನ ಹಸುವನ್ನು ಮನೆಗೆ ಕರೆದೊಯ್ಯಲು ಬರುತ್ತಾರೆ” ಅಂತ ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ತಂಗಿಗೆ ಅಣ್ಣ ಕೊಟ್ಟ ಸರ್ಪ್ರೈಸ್ ಗಿಫ್ಟ್! ವಿಡಿಯೋ ನೋಡಿ ನೆಟ್ಟಿಗರು ಸಹ ಭಾವುಕ
"ಜನರು ಅದನ್ನು ಹೇಗೆ ಸಮರ್ಥಿಸಿಕೊಳ್ಳಬಹುದು ಎಂದು ನನಗೆ ಅರ್ಥವಾಗುತ್ತಿಲ್ಲ. ನನ್ನ ಚಿಕ್ಕಮ್ಮ ಕೆನಡಾದಲ್ಲಿ ಕೆಲವು ಪ್ರಾಣಿಗಳನ್ನು ಸಾಕಿಕೊಂಡಿದ್ದಾರೆ. ಅಲ್ಲಿರುವ ಪ್ರತಿಯೊಂದು ಪ್ರಾಣಿಗಳು ಆಕೆಗೆ ಮಗುವಿನಂತೆ. ಅವಳು ಹಂದಿಗಳನ್ನು ಸಾಕುವುದನ್ನು ನಿಲ್ಲಿಸಿದಳು, ಏಕೆಂದರೆ ಅವಳು ಅವುಗಳನ್ನು ಮಾಂಸಕ್ಕಾಗಿ ಕೊಲ್ಲಬೇಕಾಗಿ ಬಂದಾಗಲೆಲ್ಲಾ, ಅದು ನಿಜವಾಗಿಯೂ ಅವಳನ್ನು ನೋಯಿಸಿತು. ಈಗ ಅವಳು ಡೈರಿ ಹಸುಗಳನ್ನು ಸಾಕುತ್ತಾಳೆ. ಅವಳು ಅವುಗಳನ್ನು ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಾಳೆ" ಎಂದು ಇನ್ನೊಬ್ಬ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ