ಚಲಿಸುತ್ತಿರುವ ರೈಲಿನಿಂದ ಇಳಿಯಲು ಹೋಗಿ ಅಥವಾ ಹತ್ತುವ ವೇಳೆ ಪ್ರಯಾಣಿಕರು ಅವಘಡಕ್ಕೆ ಒಳಗಾಗಿರುವ ಹಲವಾರು ಘಟನೆಗಳು ಕಣ್ಣಮುಂದೆಯೇ ಇದೆ. ಆದರೂ ಪ್ರಯಾಣಿಕರು ಮಾತ್ರ ಚಲಿಸುವ ರೈಲು ನಿಲ್ಲುವವರೆಗೆ ಕಾಯುವ ತಾಳ್ಮೆ ಮಾತ್ರ ಬೆಳೆಸಿಕೊಂಡಿಲ್ಲ. ಪ್ರಯಾಣಿಕರು ರೈಲಿನ ಅವಘಡಕ್ಕೆ ತುತ್ತಾಗಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೀಗ ಇದೇ ರೀತಿಯ ಘಟನೆ ಮಧ್ಯಪ್ರದೇಶದ ಇಂದೋರ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮಹಿಳಾ ಪ್ರಯಾಣಿಕರೊಬ್ಬರು ರೈಲು ಹತ್ತಲು ಹೋಗಿ ರೈಲಿನಿಂದ ಬಿದ್ದ ಘಟನೆಯೊಂದು, ತಡವಾಗಿ ಬೆಳಕಿಗೆ ಬಂದಿದೆ. ಆದರೆ ಸಹಪ್ರಯಾಣಿಕರ ಸಹಾಯದಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರೈಲಿನಲ್ಲಿದ್ದ ಸಹ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಸಹಾಯ ಮಾಡಿದ್ದರಿಂದ ಮಹಿಳೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅಧಿಕಾರಿಗಳು ಬಹಿರಂಗಪಡಿಸಿದರು.ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಮಹಿಳೆಯು ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸುತ್ತಿರುವುದು ಮತ್ತು ನೆಲದ ಮೇಲೆ ಬೀಳುವುದು, ರೈಲು ವೇಗಕ್ಕೆ ಅನುಗುಣವಾಗಿ ಹತ್ತಲು ಸಾಧ್ಯವಾಗದಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ರೈಲ್ವೆ ರಕ್ಷಣಾ ದಳದ ಮೂಲದಿಂದ ಪಡೆಯಲಾಗಿದೆ ಎಂದು ಎಎನ್‍ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.
"ಮಹಿಳಾ ಪ್ರಯಾಣಿಕರು ಒಬ್ಬ ಪುರುಷ ಮತ್ತು ಮಗುವಿನೊಂದಿಗೆ ರೈಲನ್ನು ಹತ್ತುತ್ತಿದ್ದರು. ಲಗೇಜನ್ನು ರೈಲಿನೊಳಗೆ ಇರಿಸಿದ ನಂತರ, ಆ ವ್ಯಕ್ತಿ ಮತ್ತು ಮಗು ರೈಲು ಹತ್ತಿದರು. ಚಲಿಸುತ್ತಿದ್ದ ರೈಲಿನಿಂದ ಮಹಿಳೆ ಜಾರಿ ಬಿದ್ದು ನಿಲ್ದಾಣ ಮತ್ತು ಪ್ಲಾಟ್‍ಫಾರ್ಮ್ ನಡುವೆ ಸಿಲುಕಿಕೊಂಡರು” ಎಂದು ಮೀನಾ ಹೇಳಿದರು.
"ಸಹ ಪ್ರಯಾಣಿಕರ ಜಾಗರೂಕತೆಯಿಂದಾಗಿ, ಅವರು ಸಮಯಕ್ಕೆ ಸರಿಯಾಗಿ ಆಕೆಯನ್ನು ಎಳೆದರು. ಬಿದ್ದ ತಕ್ಷಣ ರೈಲು ನಿಂತಿತು, ಮಹಿಳೆಯನ್ನು ರಕ್ಷಿಸಲಾಯಿತು" ಎಂದು ಅವರು ಹೇಳಿದರು.
#WATCH | Madhya Pradesh: Fellow passengers saved the life of a woman in Indore who was trying to board a moving train, yesterday.
(Video source: Railway Protection Force, Indore) pic.twitter.com/0HgbYLrnwq
— ANI (@ANI) August 19, 2021
ಉದಯಪುರಕ್ಕೆ ಹೊರಟಿದ್ದ ರೈಲು ಮಂಗಳವಾರ ಇಂದೋರ್ ನಿಲ್ದಾಣದ ಪ್ಲಾಟ್‍ಫಾರ್ಮ್‍ನಿಂದ ಹೊರಡುತ್ತಿದ್ದಾಗ, ಮಹಿಳೆ ಅದನ್ನು ತರಾತುರಿಯಲ್ಲಿ ಹತ್ತಲು ಪ್ರಯತ್ನಿಸಿದಳು. ಈಗಾಗಲೇ ಆಕೆ ರೈಲಿನೊಳಗೆ ತಮ್ಮ ಲಗೇಜ್ ಅನ್ನು ಇರಿಸಿದ್ದಳು. ಆದ ಕಾರಣ ವೇಗವಾಗಿ ಹತ್ತಲು ಹೋದಾಗ ಆಕೆ ಬ್ಯಾಲೆನ್ಸ್ ಕಳೆದುಕೊಂಡಳು ಮತ್ತು ಪ್ಲಾಟ್‍ಫಾರ್ಮ್ ಮತ್ತು ರೈಲಿನ ನಡುವಿನ ಅಂತರದಲ್ಲಿ ಸಿಲುಕಿಕೊಂಡಳು. ಆದರೆ ಅಲ್ಲೇ ಇದ್ದ ಪ್ರಯಾಣಿಕರ ಸಹಾಯದಿಂದ ಯಾವುದೇ ಅನಾಹುತ ಸಂಭವಿಸಿಲ್ಲ "ಎಂದು ಪಶ್ಚಿಮ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಖೇಮರಾಜ್ ಮೀನಾ ಪಿಟಿಐಗೆ ತಿಳಿಸಿದರು.
ಸರ್ಕಾರಿ ರೈಲ್ವೆ ಪೊಲೀಸಿನ ಇಬ್ಬರು ಮಹಿಳಾ ಸಿಬ್ಬಂದಿ ಕೂಡ ತಕ್ಷಣ ಸ್ಥಳಕ್ಕೆ ಬಂದರು ಎಂದು ಅವರು ಹೇಳಿದರು. ಈ ಘಟನೆಯಿಂದ ಪ್ರಯಾಣಿಕರು ಪಾಠ ಕಲಿಯಬೇಕು ಮತ್ತು ಚಲಿಸುವ ರೈಲು ಹತ್ತುವ ಅಭ್ಯಾಸವನ್ನು ಬಿಡಬೇಕು ಎಂದು ಮೀನಾ ಹೇಳಿದರು.
ಕೆಲವು ತಿಂಗಳುಗಳ ಹಿಂದೆ ರೈಲ್ವೆ ಹಳಿಯ ಮೇಲೆ ಪ್ರಯಾಣಿಕರೊಬ್ಬರು ಬಿದ್ದಿದ್ದರು. ಆಗ ಅಲ್ಲೇ ಕೆಲಸ ಮಾಡುತ್ತಿದ್ದ ರೈಲ್ವೇ ಸಿಬ್ಬಂದಿಯೊಬ್ಬರು ಅವರನ್ನು ರಕ್ಷಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ